ScienceSpardha Times

ಜೀವಸತ್ವಗಳ ( ವಿಟಮಿನ್‍ಗಳು) ಬಗ್ಗೆ ತಿಳಿಯಿರಿ

Share With Friends

ದೇಹಕ್ಕೆ ಅತ್ಯಂತ ಕನಿಷ್ಟ ಪ್ರಮಾಣದಲ್ಲಿ ಬೇಕಾಗಿರುವಂತಹ ಕಾರ್ಬಾನಿಕ್ ಸಂಯುಕ್ತಗಳು. ಇವು ದೇಹದ ಕ್ರಮಬದ್ದವಾದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ ಜೀವಾಳವಾಗಿದೆ. ಅನೇಕ ಜೀವಸತ್ವಗಳು ದೇಹದಲ್ಲಿ ತಯಾರಾಗುವುದಿಲ್ಲ. ಹೀಗಾಗಿ ಅವು ನಮ್ಮ ಆಹಾರದ ಮೂಲಕವೇ ಪೂರೈಸಿಕೊಳ್ಳಬೇಕು. ಯಾವುದೇ ಜೀವಸತ್ವ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ದೊರೆಯದಿದ್ದಲ್ಲಿ ನ್ಯೂನತಾ ಕಾಯಿಲೆಗಳು ಉಂಟಾಗುತ್ತವೆ.

ಜೀವಸತ್ವಗಳನ್ನು ಅವುಗಳ ವಿಲೀನತೆಗೆ ( ಕರಗುವಿಕೆ) ಗೆ ಅನುಗುಣವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

1. ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು – ಎ , ಡಿ, ಇ , ಕೆ

2. ನೀರಿನಲ್ಲಿ ಕರಗುವ ಜೀವಸತ್ವಗಳು _ ಬಿ ಮತ್ತು ಸಿ

 

*ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು

1. ಜೀವಸತ್ವ ಎ

• ಜೀವಸತ್ವದ ಹೆಸರು : ಎಕ್ಸರೊಪ್ರೋಲ್/ ರೆಟಿನಾಲ್
•  ಮೂಲ ಆಕರಗಳು : ಹಾಲು, ಮೊಟ್ಟೆ, ಬೆಣ್ಣೆ, ಮೀನು , ಗಿಣ್ಣು, ಹಸಿರು ಎಲೆ, ತರಕಾರಿಗಳು, ಕ್ಯಾರೆಟ್, ಮೀನಿನ ಎಣ್ಣೆ
• ಪ್ರಾಮುಖ್ಯತೆ : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಣ್ಣುಗಳ ರಕ್ಷಣೆ ಮತ್ತು ಮಂದ ಬೆಳಕಿನಲ್ಲಿ ನೋಡಲು ಸಹಾಯ ಮಾಡುತ್ತದೆ. ರೊಡಾಸಿನ್ ತಯಾರಿಕೆಗೆ ಅಗತ್ಯ.
• ನ್ಯೂನತಾ ಕಾಯಿಲೆಗಳು : ನಿಶಾಂಧತೆ ( ಇರುಳು ಕುರುಡು) – ಕ್ಸಿರಾಪ್ಥಾಲ್ಮಿಯಾ , ಡರ್ಮಾಟೋಸಿಸ್ ( ಚರ್ಮದ ಕಾಯಿಲೆ)

2. ಜೀವಸತ್ವ ಡಿ

•  ಜೀವಸತ್ವದ ಹೆಸರು : ಕ್ಯಾಲಿಫೆರಾಲ್/ ಆಂಟಿರೇಬಿಟಿಕ್
• ಮೂಲ ಆಕರಗಳು : ಸೂರ್ಯನ ಬೆಳಕಿನಲ್ಲಿರುವ ಅತಿ ನೇರಳೆ ವಿಕಿರಣಗಳು ಮೈ ಮೇಲೆ ಬಿದ್ದಾಗ ಉತ್ಪತ್ತಿಯಾಗುತ್ತದೆ. ಸೂರ್ಯನ ಹೊಳಪಿನ ಜೀವಸತ್ವ. ಮೀನಿನ ಪಿತ್ತಕೋಶದ ಎಣ್ಣೆ, ಹಾಲು, ಹಾಲಿನ ಉತ್ಪನ್ನಗಳು ಮತ್ತು ಮೊಟ್ಟೆ
•  ಪ್ರಾಮುಖ್ಯತೆ : ಆಹಾರದಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಲು ಸಹಾಯ ಮಾಡುವುದು.
• ನ್ಯೂನತಾ ರೋಗಳು : ಮಕ್ಕಳಲ್ಲಿ – ರಿಕೆಟ್ಸ್, ವಯಸ್ಕರಲ್ಲಿ ಆಸ್ಟಿಯೋ ಮಲಾಸಿಯಾ ( ಮೂಳೆಗಳ ದುರ್ಬಲತೆ)

3. ಜೀವಸತ್ವ ಇ

•  ಜೀವಸತ್ವದ ಹೆಸರು : ಟೊಕೊಫೆರಾಲ್
• ಮೂಲ ಆಕರಗಳು : ಹಾಲು, ಹಾಲಿನ ಉತ್ಪನ್ನ, ಮೊಟ್ಟೆ, ಮಾಂಸ, ಧಾನ್ಯ ಎಣ್ಣೆಕಾಳುಗಳು, ಬಾದಾಮಿ, ಸೊಯಾಬೀನ್, ಹಸಿರು ತರಕಾರಿ, ಟೊಮೆಟೊ
• ಪ್ರಾಮುಖ್ಯತೆ : ಉತ್ಕರ್ಷಣ ನಿರೋಧಿ, ಎ, ಸಿ, ಡಿ ಮತ್ತು ಕೆ ಜೀವಸತ್ವಗಳನ್ನು ರಕ್ಷಿಸುತ್ತದೆ.
• ನ್ಯೂನತಾ ಕಾಯಿಲೆಗಳು : ಸ್ನಾಯು ಕ್ಷೀಣಿಕೆ, ಬಂಜೆತನ

4.   ಜೀವಸತ್ವ ಕೆ

•  ಜೀವಸತ್ವದ ಹೆಸರು : ಆಂಟಿಡೀಮೋ ರೇಜಿಕ್
•   ಮೂಲ ಆಕರಗಳು : ಮಾಂಸ, ಮೀನು, ಎಣ್ಣೆ, ಮೊಟ್ಟೆ, ಗಿಣ್ಣು, ಹಸಿರು ಎಲೆ, ತರಕಾರಿಗಳು, ಸೋಯಾಬೀನ್, ಕೋಸು, ಹೂಕೋಸು, ಟೋಮೆಟೊ
• ಪ್ರಾಮುಖ್ಯತೆ : ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.
• ನ್ಯೂನತಾ ಕಾಯಿಲೆಗಳು : ರಕ್ತ ಹೆಪ್ಪುಗಟ್ಟುವುದು ನಿಧಾನವಾಗುವುದರಿಂದ ಗಾಯಗಳಿಂದ ಅಧಿಕ ರಕ್ತಸ್ರಾವವಾಗುತ್ತದೆ.

* ನೀರಿನಲ್ಲಿ ವಿಲೀನವಾಗುವ ಜೀವಸತ್ವಗಳು

1. ಜೀವಸತ್ವ ಬಿ1

• ಜೀವಸತ್ವದ ಹೆಸರು : ಥಯಾಮಿನ್ / ಎನ್ಯುರಿನ್/ ಆಚಿಟಿನ್ಯೂರಿಟಿಕ್
• ಮೂಲ ಆಕರಗಳು : ಹಾಲು, ಸಮುದ್ರ ಆಹಾರ, ಮಾಂಸ, ಮೀನು, ಮೊಟ್ಟೆ, ಪಾಲಿಷ್ ಮಾಡದಿರುವ ಅಕ್ಕಿ, ಕಾಯಿಗಳು, ಬೀಟ್‍ರೂಟ್, ಧಾನ್ಯಗಳು, ಹಸಿರು ತರಕಾರಿಗಳು
• ಪ್ರಾಮುಖ್ಯತೆ : ಆಹಾರದ ಉತ್ಕರ್ಷಣೆ ಹಾಗೂ ಶಕ್ತಿ ಬಿಡುಗಡೆಗೆ ಸಹಾಯ ಮಾಡುತ್ತದೆ.
• ನ್ಯೂನತಾ ಕಾಯಿಲೆಗಳು : ಬೆರಿ-ಬೆರಿ, ಪಾಲಿನ್ಯೂಟ್ರಿಟಿಸ್, ಜೀರ್ಣನಾಳ ನ್ಯೂನತೆಗಳು

2. ಜೀವಸತ್ವ ಬಿ2

• ಜೀವಸತ್ವದ ಹೆಸರು : ರೈಬೋಪ್ಲೇವಿನ್
• ಮೂಲ ಆಕರಗಳು : ಯಕ್ರತ್ತು, ಮೊಟ್ಟೆ, ಮಾಂಸ, ಗಿಣ್ಣು ಯೀಸ್ಟ್, ಹಸಿರು ಎಲೆ, ತರಕಾರಿಗಳು, ಹುರುಳಿ
• ಪ್ರಾಮುಖ್ಯತೆ : ಕಣ್ಣು, ಚರ್ಮ, ನರಗಳ ಆರೋಗ್ಯಕ್ಕೆ ಅಗತ್ಯ.
• ನ್ಯೂನತಾ ಕಾಯಿಲೆ : ಪೋಟೋ ಫೋಬಿಯಾ ( ಕಣ್ಣು ಬೆಳಕು ಸಹಿಸಲಾರದಷ್ಟು ಸೂಕ್ಷ್ಮ ಗ್ರಾಹಿಯಾಗುತ್ತದೆ)
ಚ್ಲಿಯೋಸಿಸ್ – ಬಾಯಿಯ ಮೂಲೆಗಳಲ್ಲಿ ಚರ್ಮ ಬಿರಿತ

3. ಜೀವಸತ್ವ ಬಿ3

• ಜೀವಸತ್ವದ ಹೆಸರು : ಪ್ರಾಂಥೊಥೆನಿಕ್ ಆಸಿಡ್
• ಮೂಲ ಆಕರಗಳು : ಪಿತ್ತಕೋಶ, ಹಾಲು, ಮೊಟ್ಟೆ, ಯೀಸ್ಟ್, ಶೇಂಗಾ, ಕಾಕಂಬಿ, ಗೆಣಸು, ಗೋಧಿ
• ಪ್ರಾಮುಖ್ಯತೆ : ಕಿಣ್ವಗಳು ಕಾರ್ಯ ನಿರ್ವಹಿಸಲು ಅಗತ್ಯ.
• ನ್ಯೂನತಾ ಕಾಯಿಲೆಗಳು : ಪೆಲಾಗ್ರ( ಚರ್ಮದ ವ್ಯಾಧಿ), ಡಯೇರಿಯಾ ( ಅತಿಸಾರ ಬೇಧಿ)

4. ಜೀವಸತ್ವ ಬಿ5

• ಜೀವಸತ್ವದ ಹೆಸರು : ನಿಕೊಟಿನ್ ಆಮ್ಲ/ ನಿಯಾಸಿನ್
• ಮೂಲ ಆಕರಗಳು : ಯಕೃತ್ತು, ಮೀನು, ಮೊಟ್ಟೆ, ಹಾಲು, ಗೋಧಿ, ಏಕದಳಗಳ ಸಿಪ್ಪೆ, ಟೊಮೆಟೊ
• ಪ್ರಾಮುಖ್ಯತೆ : ಮೇದಸ್ಸು, ಕಾರ್ಬೋಹೈಡ್ರೇಟ್ ಮತ್ತು ಪ್ರೋಟಿನ್ ಚಯಾಪಚಯ ಕ್ರಿಯೆಗೆ ಅವಶ್ಯಕ. ಚರ್ಮದ ಆರೋಗ್ಯಕ್ಕೆ ಅಗತ್ಯ.
• ನ್ಯೂನತಾ ಕಾಯಿಲೆಗಳು : ಪಾಲಿನ್ಯೂರಿಟಿಸ್ ( ಮಾನಸಿಕ ಅಸ್ವಸ್ಥತೆ), ಜೀರ್ಣನಾಳ ನ್ಯೂನತೆಗಳು

5. ಜೀವಸತ್ವ ಬಿ6

• ಜೀವಸತ್ವದ ಹೆಸರು : ಪಿರಿಡಾಕ್ಸಿನ್
• ಮೂಲ ಆಕರಗಳು : ಮಾಂಸ, ಮೊಟ್ಟೆ, ಹಾಲು ಹಸಿರು ತರಕಾರಿ, ಕಡಲೇಕಾಯಿ, ಟೊಮೆಟೊ, ಆಲೂಗಡ್ಡೆ, ಕಾಳುಗಳು, ಯಿಸ್ಟ್
• ಪ್ರಾಮುಖ್ಯತೆ : ಅಮೈನೋ ಆಮ್ಲ ಮತ್ತು ಕೊಬ್ಬಿನ ಆಮ್ಲ ಚಯಾಪಚಯ ಕ್ರಿಯೆಯಲ್ಲಿ ಅಗತ್ಯ.
• ನ್ಯೂನತಾ ಕಾಯಿಲೆಗಳು : ಡರ್ಮಟೈಟಿಸ್, ರಕ್ತಹೀನತೆ, ಡಯೇರಿಯಾ, ಕೂದಲು ಉದುರುವಿಕೆ, ಡಿಮೆನ್ಷಿಯಾ

6. ಜೀವಸತ್ವ ಬಿ7

• ಜೀವಸತ್ವದ ಹೆಸರು : ಬಯೋಟಿನ್
• ಮೂಲ ಆಕರಗಳು : ಮಾಂಸ, ಮೊಟ್ಟೆ, ಯಿಸ್ಟ್, ಏಕದಳ ಧಾನ್ಯಗಳು, ಹಣ್ಣುಗಳು ಹಸಿರು ತರಕಾರಿಗಳು ಇತ್ಯಾದಿ.
• ಪ್ರಾಮುಖ್ಯತೆ : ಬೆಳವಣಿಗೆ ಮತ್ತು ಕಾಬೋಹೈಡ್ರೇಟ್ ಉಪಾಪಚಯ ಕ್ರಿಯೆಗೆ ಅಗತ್ಯ.
• ನ್ಯೂನತಾ ಕಾಯಿಲೆಗಳು : ಡರ್ಮಟೈಟಿಸ್ ಮತ್ತು ದಪ್ಪ ಚರ್ಮ

7. ಜೀವಸತ್ವ ಬಿ9

• ಜೀವಸತ್ವದ ಹೆಸರು : ಫೋಲಿಕ್ ಆಮ್ಲ
• ಮೂಲ ಆಕರಗಳು : ದನದ ಮಾಂಸ, ಮೊಟ್ಟೆ, ಅಣಬೆ, ಸೊಯಾಬೀನ್, ಮೊಳಕೆ ಕಾಳುಗಳು, ಹಸಿರು ತರಕಾರಿಗಳು, ಈಸ್ಟ್
• ಪ್ರಾಮುಖ್ಯತೆ : ಕೆಂಪುರಕ್ತಕಣಗಳ ತಯಾರಿಕೆ, ನ್ಯೂಕ್ಲಯೋ ಪ್ರೋಟಿನ್‍ಗಳ ಸಂಶ್ಲೇಷಣೆಗೆ ಅಗತ್ಯ.
• ನ್ಯೂನತಾ ಕಾಯಿಲೆಗಳು : ರಕ್ತಹೀನತೆ, ಪೋಷಣಾ ನ್ಯೂನತೆ, ಕುಂಠಿತ ಬೆಳವಣಿಗೆ

8. ಜೀವಸತ್ವ ಬಿ12

• ಜೀವಸತ್ವದ ಹೆಸರು : ಸಯನೊಕೊಬಲನೈನ್/ ಕೊಬಲಮೈನ್
• ಮೂಲ ಆಕರಗಳು : ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೊಟ್ಟೆ, ಮೀನು, ಪಿತ್ತಕೋಶ
• ಪ್ರಾಮುಖ್ಯತೆ : ರಕ್ತಹೀನತೆಯನ್ನು ತಡೆಗಟ್ಟುವುದು
• ನ್ಯೂನತಾ ಕಾಯಿಲೆಗಳು : ಹಾನಿಕರ ರಕ್ತಹೀನತೆ

9. ಜೀವಸತ್ವ ಸಿ

• ಜೀವಸತ್ವದ ಹೆಸರು : ಆಸ್ಕಾರ್ಬಿಕ್ ಆಮ್ಲ
• ಮೂಲ ಆಕರಗಳು : ಸಿಟ್ರಸ್ ಹಣ್ಣುಗಳು, ಹಸಿ ತರಕಾರಿಗಳು, ಆಲೂಗಡ್ಡೆ, ಟೊಮೆಟೊ, ನೆಲ್ಲಿಕಾಯಿ, ಸೀಬೆಹಣ್ಣು
• ಪ್ರಾಮುಖ್ಯತೆ : ಶಕ್ತಿಯುತವಾದ ಚರ್ಮದ ತಯಾರಿಕೆಗೆ, ಕೋಲಾಜನ್ ಸಂಶ್ಲೇಷಣೆಗೆ ಅಗತ್ಯ.
• ನ್ಯೂನತಾ ಕಾಯಿಲೆಗಳು : ಸ್ಕರ್ವಿ, ರಕ್ತಹೀನತೆ, ದಂತ ಮೂಳೆ ಮತ್ತು ವಸಡುಗಳ ನ್ಯೂನ ರಚನೆ, ಊದಿದ ಕಾಲುಗಳು.

 

 

 

 

error: Content Copyright protected !!