Thursday, January 9, 2025
Latest:
ScienceSpardha TimesTET - CET

ಪ್ರಾಣಿ ಸಾಮ್ರಾಜ್ಯದ ಬಗ್ಗೆ ಮಾಹಿತಿ

Share With Friends

ಭೂಮಿಯ ಮೇಲಿನ ಸಕಲ ಪ್ರಾಣಿಗಳು ಈ ಸಾಮ್ರಾಜ್ಯದಲ್ಲಿ ಸೇರಿವೆ.
ಬೆನ್ನುಮೂಳೆ ಇರುವಿಕೆಯ ಆಧಾರದ ಮೇಲೆ ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
      1. ಕಶೇರುಕಗಳು       

     2. ಅಕಶೇರುಕಗಳು 

*    ಕಶೇರುಕಗಳು : ಬೆನ್ನುಮೂಳೆಯನ್ನು ಹೊಂದಿರುವ ಜೀವಿಗಳನ್ನು “ಕಶೇರುಕಗಳು “ ಎನ್ನುವರು.

  ಕಶೇರುಕಗಳು ಕೇವಲ ಒಂದು ವಂಶವನ್ನು ಮಾತ್ರ ಒಳಗೊಂಡಿದೆ. ಅದೇ “ ಕಾರ್ಡೇಟಾ ವಂಶ”.
  ಕಾರ್ಡೇಟಾ ವಂಶವನ್ನು ಐದು ವರ್ಗಗಗಾಳಗಿ ವಿಂಗಡಿಸಲಾಗಿದೆ.

1.   ಮೀನುಗಳು
• ಇವು ಜಲವಾಸಿಗಳು
• ಉದಾ- ಶಾರ್ಕ್‍ಗಳು, ಗರಗಸದ ಮೀನು, ಕಡಲ ಕುದುರೆ ಇತ್ಯಾದಿ.
• ಉದ್ದನೆಯ ಕದುರಿನಾಕಾರದ ದೇಹವನ್ನು ಹೊಂದಿವೆ.
• ಮುಂಗಾಲು ಮತ್ತು ಹಿಂಗಾಲುಗಳು ಈಜುರೆಕ್ಕೆಗಳಾಗಿ ಮಾರ್ಪಾಡು ಹೊಂದಿವೆ.
• ಚರ್ಮದ ಮೇಲೆ ಶಲ್ಕಗಳಿವೆ. ಮತ್ತು ಶ್ಲೇಷ್ಮಗ್ರಂಥಿಗಳಿವೆ.
• ಇವು “ಕಿವಿರುಗಳ” ಮುಲಕ ಉಸಿರಾಡುತ್ತವೆ.
• ಇವು ಶಿತರಕ್ತಪ್ರಾಣಿಗಳು ಹಾಗೂ 2 ಕೋಣೆಗಳ ಹೃದಯವನ್ನು ಹೊಂದಿದೆ.
• ಇವು ಏಕಲಿಂಗಗಳು ಮತ್ತು ಲೈಂಗಿಕ ರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ.

2.   ಉಭಯವಾಸಿಗಳು
• ನೆಲ ಮತ್ತು ಜಲ ಎರಡೂಕಡೆ ವಾಸಿಸುತ್ತದೆ.
• ದೇಹವನ್ನು ರುಂಡ, ಮುಂಡ ಕಾಲುಗಳಾಗಿ ವಿಂಗಡಿಸಲಾಗಿದೆ. ಕೆಲವು ಉದ್ದನೆಯ ದೇಹವನ್ನು ಹೊಂದಿವೆ. ಉದಾ- ಇಕ್ತಿಯೋಫಿಸ್,ಸಾಲಮ್ಯಾಂಡರ್
• ಕಾಲುಗಳಿಲ್ಲದ ಉಭಯವಾಸಿ- ಇಕ್ತಿಯೋಫಿಸ್
• ಚರ್ಮವು ನಯವಾಗಿದ್ದು,ಗ್ರಂಥಿಗಳಿಂದ ಕೂಡಿದೆ.
• ಇವು ಕಿವಿರುಗಳು, ಶ್ವಾಸಕೋಶಗಳು, ಚರ್ಮ ಮತ್ತು ಬಾಯಿಂದ ಅಂಗಳದಿಂದ ಉಸಿರಾಡುತ್ತದೆ.
• ಇವು ಶೀತರಕ್ತ ಪ್ರಾಣಿಗಳು, ಇವು 3 ಕೋಣೆಗಳ ಹೃದಯವನ್ನು ಹೊಂದಿವೆ.
• ಇವು ಏಕಲಿಂಗಗಳು, ‘ಬಾಹ್ಯ ಗರ್ಭಧಾರಣೆ(ನಿಶೇಚನ)’ ,‘ರೂಪ ಪರಿವರ್ತನೆಯ’ ಮೂಲಕ ಪ್ರಜನನ ನಡೆಸುತ್ತವೆ.
• ಉಭಯವಾಸಿಗಳಲ್ಲಿ ಲಾರ್ವ ಅವಸ್ಥೆಯಿಂದ ಪ್ರಾರಂಭವಾಗಿ ಪ್ರೌಢವಸ್ಥೆ ತಲುಪುವವರೆಗಿನ ಬದಲಾವಣೆಗಳಿಗೆ ಒಟ್ಟಾಗಿ “ರೂಪ ಪರಿವರ್ತನೆ” ಎಂದು ಹೆಸರು. ರೂಪ ಪರಿವರ್ತನೆ ಉಭಯವಾಸಿಗಳ ವೀಶೆಷತೆ ಆಗಿದೆ.
• ಗರ್ಭಧಾರಣೆಯು ಹೆಣ್ಣಿನ ದೇಹದ ಹೊರಗೆ ಅಂದರೆ ಬಾಹ್ಯ ಮಾಧ್ಯಮದಲ್ಲಿ ನಡೆದರೆ ಅದನ್ನು “ಬಾಹ್ಯ ನಿಶೇಚನ” ಎನ್ನುವರು. ಇದು ಕೂಡ ಉಭಯವಾಸಿಗಳ ವಿಶೇಷತೆಯಾಗಿದೆ.
• ಉದಾ- ಕಪ್ಪೆ, ನೆಲಗಪ್ಪೆ, ಸಲಮಾಂಡರ್. ಹಿತ್ತಲುಮಂಡಲ

3.   ಸರೀಸೃಪಗಳು
• ಉದ್ದನೆಯ ದೇಹವನ್ನು ಹೊಂದಿದ್ದು, ಸರಿದಾಡುವ ಜೀವಿಗಳು
• ಸಂಪೂರ್ಣ ನೆಲವಾಸಿಗಳು
• ಕಾಲುಗಳಿಲ್ಲದ ಸರೀಸೃಪ – ಹಾವು
• ಒಣಚರ್ಮವನ್ನು ಹೊಂದಿದ್ದು, ಹುರುಪೆಗಳಿಂದ ಕೂಡಿದೆ.
• ಶ್ವಾಸಕೋಶಗಳ ಮೂಲಕ ಉಸಿರಾಡುತ್ತವೆ.
• 3 ಕೋಣೆಗಳ ಹೃದಯವನ್ನು ಹೊಮದಿವೆ.
• 12 ಜೊತೆ ಮಿದುಳು ನರಗಳನ್ನು ಹೊಂದಿವೆ.
• ಲೈಂಗೀಕ ರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ. ಎಲ್ಲವೂ ಮೊಟ್ಟೆ ಇಡುತ್ತವೆ.
• ಉದಾ- ಊಸರವಳ್ಳಿ, ಹಾವು, ಆಮೆ, ಮೊಸಳೆ ,ಹಲ್ಲಿ, ಡೈನೋಸಾರ್‍ಗಳು
• ಸಂಪೂರ್ಣವಾಗಿ ನೆಲದ ಮೇಲೆ ವಾಸಿಸಲು ತೊಡಗಿದ ಮೊದಲ ಕಶೇರುಕಗಳು “ಸರೀಸೃಪಗಳು.”

4.   ಪಕ್ಷಿಗಳು
• ಇವು ಹಾರುವ ಜೀವಿಗಳು
• ದೇಹವು ಗರಿಗಳಿಂದ ಆವೃತವಾಗಿವೆ.
• ಮುಂಗಾಲುಗಳು ರೆಕ್ಕೆಗಲಾಗಿ ಮಾರ್ಪಾಟಾಗಿವೆ. ಹಿಂಗಾಲುಗಳು ವಾಸಸ್ಥಾನಕ್ಕೆ ಅನುಗುಣವಾಗಿ ಓಡಲು ,ನಡೆಯಲು ಮತ್ತು ನೀರಿನಲ್ಲಿ ಈಜಲು ಸಹಾಯವಾಗಿವೆ.
• ಜೀರ್ಣಾಂಗವ್ಯೂಹ ಕ್ರಾಪ್, ಗಿಜರ್ಡ್ ಎಂಬ ವಿಶೇಷ ಅಂಗಗಳನ್ನು ಒಳಗೊಂಡಿದೆ.
• ವಿಶೇಷವಾಗಿ ವೃದ್ದೀ ಹೊಂದಿದ ಶ್ವಾಸಕೋಶಗಳನ್ನು ಹೊಂದಿವೆ. ಶ್ವಾಸನಾಳದಲ್ಲಿ”ಸಿರಿಂಕ್ಸ್” ಎಂಬ ದ್ವನಿಪೆಟ್ಟಿಗೆ ಹೊಂದಿವೆ.
• ಬಿಸಿರಕ್ತ ಪ್ರಾಣಿಗಳು, ನಾಲ್ಕು ಕೋಣೆಯ ಹೃದಯವನ್ನು ಹೊಂದಿವೆ. ಅತ್ಯಂತ ಹೆಚ್ಚಿನ ಹೃದಯ ಬಡಿತ ಹೊಂದಿವೆ.
• ಎಲ್ಲವೂ ಮೊಟ್ಟೆ ಇಡುತ್ತವೆ. ಮೊಟ್ಟೆಯು ಕ್ಯಾಲ್ಸಿಯಂ ಕಾರ್ಬೋನೇಟ್ ಚಿಪ್ಪಿನಿಂದಾಗಿದೆ.
• ಉದಾ -ಆಸ್ಟ್ರಿಚ್, ಕಿವಿ, ಏಮು, ಪೆಂಗ್ವಿನ್, ಪ್ಲೇಮಿಂಗೋ, ಪಾರಿವಾಳ
• ಹಾರಲಾರದ ಪಕ್ಷಿಗಳು- ಆಸ್ಟ್ರಿಚ್, ಕಿವಿ, ಏಮು

5.   ಸ್ತನಿಗಳು
• ಸ್ತನ್ಯ ಗ್ರಂಥಿಗಳನ್ನು ಹೊಂದಿರುವ ಜೀವಿಗಳು.
• ಎಲ್ಲಾ ಪರಿಸರಗಳಲ್ಲಿ ಕಂಡುಬರುತ್ತವೆ.
• ಪ್ರಾಣಿ ಸಾಮ್ರಾಜ್ಯದಲ್ಲಿಯೇ ಹೆಚ್ಚು ವಿಕಾಸ ಹೊಂದಿದೆ.
• ಚರ್ಮದ ಮೇಲೆ ರೋಮಗಳ ಹೊದಿಕೆ ಇದೆ.
• ಚತುಷ್ಪಾದಿಗಳು
• ಉಸಿರಾಟದ ಅಂಗಗಳಾಗಿ ಶ್ವಾಸಕೋಶಗಳಿವೆ.
• ಬಿಸಿರಕ್ತ ಪ್ರಾಣಿಗಳಾಗಿವೆ
• 4 ಕೋಣೆಗಳ ಹೃದಯವಿದೆ.
• 12 ಜೊತೆ ಮಿದುಳು ನರಗಳಿವೆ.
• ಲೈಂಗೀಕರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ. ಬಹುತೇಕ ಮರಿ ಹಾಕುತ್ತವೆ. ಮರಿಗಳಿಗೆ ಹಾಲುಣಿಸುತ್ತವೆ.
• ಉದಾ- ಮನುಷ್ಯ, ತಿಮಿಂಗಲ, ಬಾವಲಿ, ಜಿರಾಫೆ, ಆನೆ, ಕಾಂಗರೂ ಇತ್ಯಾದಿ.
• ಮೊಟ್ಟೆಯಿಡುವ ಸ್ತನಿಗಳು – ಪ್ಲಾಟಿಪಸ್, ಎಕಿಡ್ನಾ
• ಅತ್ಯಂತ ಚಿಕ್ಕ ಸ್ತನಿ-  ಪಿಗ್ಮಿಶ್ರೂ
• ಅತ್ಯಂತ ದೈತ್ಯ ಸ್ತನಿ-  ನೀಲಿ ತಿಮಿಂಗಲ
• ಅತ್ಯಂತ ದೊಡ್ಡ ಭೂಚರ ಸ್ತನಿ-  ಆನೆ
• ಅತ್ಯಂತ ಎತ್ತರ ಸ್ತನಿ-  ಜಿರಾಫೆ
• ಹಾರು ಸ್ತನಿ-  ಬಾವಲಿ
• ತಲೆಕೆಳಗಾಗಿ ನಡೆಯುವ, ನಿದ್ರಿಸುವ ಸ್ತನಿ – ಸ್ಲಾತ್

*ಅಕಶೇರುಕಗಳು     :  ಬೆನ್ನು ಮೂಳೆಯನ್ನು ಹೊಂದಿಲ್ಲದೆ ಇರುವ ಜೀವಿಗಳನ್ನು “ಅಕಶೇರುಕಗಳು” ಎನ್ನುವರು.

ಇವು ಪ್ರಾಣಿ ಸಾಮ್ರಾಜ್ಯದ ಕೆಳಮಟ್ಟದ ಜೀವಿಗಳಾಗಿವೆ. ಇವುಗಳಲ್ಲಿ ಬಹುತೇಕ ಎಲ್ಲವೂ ಬಹುಕೋಶಿಯ ಜೀವಿಗಳಾಗಿವೆ. ಇವುಗಳನ್ನು ಎಂಟು ವಂಶಗಳಾಗಿ ವಿಂಗಡಿಸಲಾಗಿದೆ.

1. ಸ್ಫಂಜು ಪ್ರಾಣಿಗಳು
• ದೇಹವು ರಂಧ್ರಮಯವಾಗಿದೆ.
• ಜಲವಾಸಿ,ಬೇರೆಯದಕ್ಕೆ ಅಂಟಿಕೊಂಡು ಬೆಳೆಯುತ್ತವೆ.
• ಇವು ಚಲಿಸುವದಿಲ್ಲ.
• ಉಸಿರಾಟ “ವಿಸರಣೆ “ ಮೂಲಕ ಆಗುತ್ತದೆ.
• ಇವುಗಳಿಗೆ ಉದಾ-ಸೈಕಾಸ್,ಯೂಪ್ಲೆಕ್ವೆಲ್ಲಾ,ಯೂಸ್ಪಾಂಜಿಯಾ,ಹಯಲೋನಿಮಾ

2. ಕುಟುಕು ಕಣವಂತಗಳು
• ದೇಹದ ಮೇಲೆ ಕುಟುಕು ಕೋಶಗಳಿವೆ. ಇವುಗಳನ್ನು “ ನೆಮೆಟೋಸಿಸ್ಟ್‍ಗಳು “ ಎನ್ನುವರು.
• ಇವು ಜಲವಾಸಿಗಳು
• ಇವು “ಕರಬಳ್ಳಿ”ಯ ಮೂಲಕ ಚಲಿಸುತ್ತವೆ.
• ಇವುಗಳಿಗೆ ಉದಾ-ಒಬೇಲಿಯಾ, ಅರೇಲಿಯಾ, ಫೈಸೇಲಿಯಾ, ಹೈಡ್ರಾ
• ಎರಡು ರೀತಿಯ ಜೀವಿಗಳಿವೆ- ಪಾಲಿಷ್ ಮತ್ತು ಮೆಡುಸ್ಸಾ

3. ಚಪ್ಪಟೆ ಹುಳುಗಳು
• ದೇಹವು ನೀಳವಾಗಿ ಚಪ್ಪಟೆಯಾಗಿದೆ.
• ಕೆಲವು ತೇವಾಂಶವುಳ್ಳ ಜಾಗದಲ್ಲಿ ಬೆಳೆಯುತ್ತವೆ.
• ಸ್ವತಂತ್ರ ಜೀವಿ – ಪ್ಲನೇರಿಯಾ
• ಪರಾವಲಂಬಿ ಜೀವಿ – ಕಾರಲುಹುಳು
• ಇವು ವಿಸರಣ, ಮತ್ತು ದೇಹದ ಭಿತ್ತಿಯ ಮೂಲಕ ಉಸಿರಾಡುತ್ತವೆ.
• ಇವುಗಳಿಗೆ ಉದಾ – ಪ್ಲನೇರಿಯಾ,ಲಾಡಿಹುಳ, ಕಾರಲುಹುಳ

4. ದುಂಡು ಹುಳುಗಳು
• ದೇಹವು ನೀಳವಾಗಿ ದುಂಡವಾಗಿದೆ.
• ಬಹುತೇಕ ಪರಾವಲಂಬಿಗಳು.
• ಇವು ದ್ವಿರೂಪತ್ವ ಸಂತಾನೋತ್ಪತ್ತಿ ಮಾಡುತ್ತವೆ.
• ಇವುಗಳಿಗೆ ಉದಾ – ಜಂತುಹುಳಗಳು, ಕೊಕ್ಕೆ ಹುಳುಗಳು, ಫೈಲೇರಿಯಾ ಹುಳು

5. ವಲಯವಂತುಗಳು
• ದೇಹವು ನೀಳವಾಗಿ ಅನೇಕ ವಲಯಗಳಿಂದ ಕೂಡಿದೆ.
• ತೇವವಾದ ಮಣ್ಣಿನಲ್ಲಿ ವಾಸ ಮಾಡುತ್ತವೆ
• ಬಿರುಗೂದಲು,(ಎರೆಹುಳ) ಪಾಶ್ರ್ವಪಾದ(ನೀರಿಸ್) ಇವುಗಳ ಚಲನಾಂಗಗಳು.
• ಚರ್ಮದ ಮೂಲಕ ಉಸಿರಾಡುತ್ತವೆ.
• ಇವು “ನೆಫ್ರೀಡಿಯಾ” ದ ಮೂಲಕ ವಿಸರ್ಜನೆ ಮಾಡುತ್ತವೆ.
• ಇವು ದ್ವಿಲಿಂಗಿಗಳು
• ಇವುಗಳಿಗೆ ಉದಾ- ಎರೆಹುಳ, ಜಿಗಣೆ, ನೀರಿಸ್
• ಇವುಗಳಲ್ಲಿ ಸ್ವತಂತ್ರ ಜೀವಿ- ಎರೆಹುಳ
• ಪರಾವಲಂಬಿ – ಜಿಗಣೆ

6. ಸಂಧಿಪದಿಗಳು
• ಕೀಲುಕಾಲುಗಳಿಂದ ಕೂಡಿದೆ. ಇವುಗಳಿಂದ ಅವು ಚಲಿಸುತ್ತವೆ.
• ಎಲ್ಲಾ ಪರಿಸರಗಳಲ್ಲೂ ವಾಸಿಸುತ್ತವೆ.
• ದೇಹದ ಪದರ ಮತ್ತು ಕಿವಿರುಗಳಿಂದ ಉಸಿರಾಡುತ್ತವೆ.
• ‘ಮಾಲ್ಫೀಜಿಯನ್ ನಾಳಗಳ “ಮೂಲಕ ವಿಸರ್ಜನೆ ಮಾಡುತ್ತವೆ.
• ಇವು ಏಕಲಿಂಗಗಳು
• ಇವುಗಳಿಗೆ ಉದಾ- ಸೀಗಡಿ, ಏಡಿ, ಕೀಟಗಳು, ಶತಪದಿ, ಸಹಸ್ರಪದಿ, ಚೇಳು,ಜೇನುಹುಳ, ರೇಷ್ಮೇಹುಳ
• ಇವುಗಳು ಅಕಶೇರುಕಗಳಲ್ಲಿ ಅತಿ ದೊಡ್ಡ ವಂಶವಾಗಿವೆ.

7. ಮೃದ್ವಂಗಿಗಳು
• ದೇಹವು ಮೃದುವಾಗಿದ್ದು, ಚಿಪ್ಪಿನಿಂದ ಆವೃತ್ತವಾಘಿದೆ
• ಜಲ ಮತ್ತು ನೆಲದಲ್ಲಿ ವಾಸಿಸುತ್ತದೆ.
• ಪಾದಗಳ ಮೂಲಕ ಚಲಿಸುತ್ತವೆ.
• ಇವುಗಳ ಬಾಯಿಯ ಭಾಗದಲ್ಲಿ ಆಹಾರವನ್ನು ಅಗಿಯುವ “ರ್ಯಾಡುಲಾ” ಎಂಬ ವಿಶೇಷ ರಚನೆ ಇದೆ.
• “ಟಿನೀಡಿಯಾ” ಇವುಗಳ ಉಸಿರಾಟದ ಅಂಗವಾಗಿದೆ
• ಬಹುತೇಕ ಏಕಲಿಂಗಗಳು, ಕೆಲವು ದ್ವಿಲಿಂಗಿಗಳು
• ಇವುಗಳಿಗೆ ಉದಾ – ಮುತ್ತಿನ ಪ್ರಾಣಿ, ಕಪ್ಪೆಚಿಪ್ಪಿನ ಪ್ರಾಣಿ, ಬಸವನ ಹುಳ
• ಇವು ಅಕಶೇರುಗಳ ಎರಡನೆಯ ದೊಡ್ಡ ವಂಶವಾಗಿದೆ.

8. ಕಂಟಕ ಚರ್ಮಿಗಳು
• ಚರ್ಮ ಮೇಲೆ ಸುಣ್ಣದಿಂದಾದ ಮುಳ್ಳುಗಳಿವೆ.
• ಇವು ಸಮುದ್ರವಾಸಿಗಳು
• “ಮ್ಯಾಂಟಲ್” ಇದು ಇವುಗಳ ಚಲಣಾಂಗವಾಗಿದೆ.
• ಇವು ಚಿಕ್ಕ ಕಿವಿರು ಮತ್ತು ನಳಿಕಾಪಾದಗಳ ಮೂಲಕ ಉಸಿರಾಡುತ್ತವೆ.
• ನಳಿಕಾಪಾದಗಳ ಮೂಲಕ ವಿಸರ್ಜನೆ ಕ್ರಿಯೆ ನಡೆಸುತ್ತವೆ.
• ಇವುಗಳಿಗೆ ಉದಾ- ನಕ್ಷತ್ರಮೀನು, ಕಡಲು ಸೌತೆ, ಕಡಲು ಕಮಲ, ಕಡಲು ಪೋರ
———————————

error: Content Copyright protected !!