ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸರಣಿ
1. ಸಮಭಾಜಕ ವೃತ್ತದ ಪ್ರತಿಪ್ರವಾಹವು ಸಾಮಾನ್ಯವಾಗಿ…
ಎ. ಪೂರ್ವದಿಂದ ಪಶ್ಚಿಮದ ಕಡೆಗೆ ಹರಿಯುವುದು
ಬಿ. ಉತ್ತರದಿ0ದ ದಕ್ಷಿಣದ ಕಡೆಗೆ ಹರಿಯುವುದು
ಸಿ. ಪಶ್ಚಿಮದಿಂದ ಪೂರ್ವದ ಕಡೆಗೆ ಹರಿಯುವುದು ****
ಡಿ. ದಕ್ಷಿಣದಿಂದ ಉತ್ತರದ ಕಡೆಗೆ ಹರಿಯುವುದು
2. ಶಿಲಾಗೊಳ ಎಂದರೆ?
ಎ. ಭೂಮಿಯ ಅಂತರಾಳ
ಬಿ. ಭೂ ಮೇಲ್ಪದರ ***
ಸಿ. ಪ್ರಾಣಿಗಳು ಮತ್ತು ಸಸ್ಯಗಳು
ಡಿ. ಭೂಮಿಯ ಮಧ್ಯಮ ಪದರ
3. ಭೂಮಿಯ ಅತಿ ಮೇಲ್ಪದರ..
ಎ. ಸಿಮಾ
ಬಿ. ನೈಫ್
ಸಿ. ಸಿಯಾಲ್ ***
ಡಿ. ಯಾವುದೂ ಅಲ್ಲ
4. ನೈಫ್ ಎಂದರೆ..
ಎ. ಭೂ ಅಂತರಾಳ ***
ಬಿ. ಸಾಗರ ಮೇಲ್ಮೈ
ಸಿ. ಭೂ ಮೇಲ್ಪದರ
ಡಿ. ಮಾಹೋ
5. ‘ಸಿಮಾ’ ಎಂದರೆ…
ಎ. ಭೂ ಅಂತರಾಳ
ಬಿ. ಭೂ ಮಾಧ್ಯಮ ಪದರ ***
ಸಿ. ಭೂ ಮೇಲ್ಪದರ
ಡಿ. ಭೂಕಂಪ
6. ಭೂಮಿಯಲ್ಲಿ ಅತಿ ಹೆಚ್ಚು ಕಂಡುಬರುವ ಶಿಲೆ ಯಾವುದು?
ಎ. ರೂಪಾಂತರ ಶಿಲೆ
ಬಿ. ಅಗ್ನಿಶಿಲೆ
ಸಿ. ಅಂತರಾಗ್ನಿ ಶಿಲೆ
ಡಿ. ಪದರುಶಿಲೆ ***
7. ಅಗ್ನಿಶಿಲೆಗಳು ನಿರ್ಮಿತವಾಗಿರುವುದು..
ಎ. ರೂಪಾಂತರ ಶಿಲೆಗಳಿಂದ
ಬಿ. ಲಾವರಸ ತಂಪಾಗುವುದರಿಂದ ***
ಸಿ. ಭೂ ಅಂತರಾಳದ ಒತ್ತಡದಿಂದ
ಡಿ. ಪದರ ಶಿಲೆಗಳಿಂದ
8. ರೂಪಾಂತರ ಶಿಲೆಗಳು ಯಾವುದರಿಂದ ಉಂಟಾಗುತ್ತದೆ?
ಎ. ಅಗ್ನಿಶಿಲೆ
ಬಿ. ಅಂತರಾಗ್ನಿಶಿಲೆ
ಸಿ. ಅಗ್ನಿಶಿಲೆ ಮತ್ತು ಪದರುಶಿಲೆ ***
ಡಿ. ಯಾವುದೂ ಅಲ್ಲ
9. ಜೀವಾವಶೇಷ ಶಿಲೆಗಳಿಗೆ ಒಂದು ಉತ್ತಮ ಉದಾಹರಣೆ?
ಎ. ಬೆಣಚುಕಲ್ಲು
ಬಿ. ಸ್ಲೇಟು
ಸಿ. ಕಲ್ಲಿದ್ದಲು ***
ಡಿ. ಅಮೃತಶಿಲೆ
10. ಯಾವ ಶಿಲೆಗಳಲ್ಲಿ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ದೊರೆಯುತ್ತದೆ?
ಎ. ಅಗ್ನಿಶಿಲೆ
ಬಿ. ರೂಪಾಂತರ ಶಿಲೆ
ಸಿ. ಪದರುಶಿಲೆ ***
ಡಿ. ಗ್ರಾನೈಟ್
11. ಮಣ್ಣಿನ ಪದರುಗಳನ್ನು ಗುರುತಿಸಲು ಬಳಸುವ ಹೆಸರು..
ಎ. ಕ್ಷಿತಿಜ
ಬಿ. ಪಾಶ್ರ್ವಚಿತ್ರ ***
ಸಿ. ಮಣ್ಣಿನ ಪದರ
ಡಿ. ಮಿಶ್ರಣವಲಯ
12. ‘ಎಪಿಸೆಂಟರ್’ ಯಾವುದಕ್ಕೆ ಬಳಸುವ ಪದರ?
ಎ. ಭೂಕಂಪನ ***
ಬಿ. ಗುಡುಗು
ಸಿ. ಸಿಡಿಲು
ಡಿ. ಭೂಮಡಿಕೆ
13. ಸುತ್ತಲೂ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿರುವ ಪ್ರಸ್ಥಭೂಮಿಯನ್ನು ಏನೆಂದು ಕರೆಯುತ್ತಾರೆ?
ಎ. ಪರ್ವತ ಪಾದಪ್ರಸ್ಥಭೂಮಿ
ಬಿ. ಖಂಡಾತರ ಪ್ರಸ್ಥಭೂಮಿ
ಸಿ. ಅಂತರಪರ್ವತ ಪ್ರಸ್ಥಭೂಮಿ ***
ಡಿ. ಯಾವುದೂ ಅಲ್ಲ
14.ಅಂತರ್ ಪರ್ವತ ಪ್ರಸ್ಥಭೂಮಿಗೆ ಉತ್ತಮ ಉದಾಹರಣೆ?
ಎ. ಟಿಬೆಟ್ ಪ್ರಸ್ಥಭೂಮಿ ***
ಬಿ. ಗ್ರೀನ್ಲ್ಯಾಂಡ್ನ ಪ್ರಸ್ಥಭೂಮಿ
ಸಿ. ಡೆಕ್ಕನ್ ಪ್ರಸ್ಥಭೂಮಿ
ಡಿ. ಎಲ್ಲವೂ ಸರಿ
15. ಅತ್ಯಂತ ಒಣ ಮರುಭೂಮಿ ಯಾವುದು?
ಎ. ಅರಿಜೂನಾ
ಬಿ. ಅಟಕಾಮ ***
ಸಿ. ಜ್ಹಾರ್
ಡಿ. ಮಂಗೋಲಿಯಾ