Educational PsychologySpardha TimesTET - CET

ಶೈಕ್ಷಣಿಕ ಮನೋವಿಜ್ಞಾನ ಕುರಿತ 20 ಪ್ರಮುಖ ಪ್ರಶ್ನೆಗಳು

Share With Friends

1.ಮನೋವಿಜ್ಞಾನವು ಯಾವ ಮೂಲದಿಂದ ಬಂದಿದೆ?
•ಗ್ರೀಕ್ ತತ್ವಶಾಸ್ತ್ರ

2.ಮನೋವಿಜ್ಞಾನ ಪದವು ಯಾವ ಗ್ರೀಕ್ ಪದಗಳಿಂದ ಉಗಮವಾಗಿದೆ?
•Psyche ಮತ್ತು Logos

3.ಮನೋವಿಜ್ಞಾನವನ್ನು ಇದರ ಬೆಳವಣಿಗೆಯ ಆರಂಭದ ದಿನಗಳಲ್ಲಿ ಯಾವ ಶಾಖೆಯ ಒಂದು ಭಾಗವನ್ನಾಗಿ ಅಧ್ಯಯನ ಮಾಡಲಾಗುತ್ತಿತ್ತು?
•ತತ್ವಶಾಸ್ತ್ರ

4.ಶೈಕ್ಷಣಿಕ ಮನೋವಿಜ್ಞಾನವು ಏನನ್ನು ಅಧ್ಯಯನ ಮಾಡುತ್ತದೆ?
•ವರ್ತನೆ

5.ಮನೋವಿಜ್ಞಾನದ ಜ್ಞಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಅನ್ವಯಿಸಿಕೊಳ್ಳುವ ಶಾಖೆ ಯಾವುದು?
•ಶೈಕ್ಷಣಿಕ ಮನೋವಿಜ್ಞಾನ

6.ಶೈಕ್ಷಣಿಕ ಮನೋವಿಜ್ಞಾನವನ್ನು ಹೀಗೂ ಕರೆಯಬಹುದು?
•ಅನ್ವಯಿಕ ಮನೋವಿಜ್ಞಾನ

7.ಶೈಕ್ಷಣಿಕ ಮನೋವಿಜ್ಞಾನದ ಪ್ರಭಾವದಿಂದ ಶಿಕ್ಷಣದಲ್ಲಿ ಬಂದ ಅತ್ಯಂತ ಪ್ರಮುಖ ಬದಲಾವಣೆ ಯಾವುದು?
•ಶಿಶು ಕೇಂದ್ರಿತ ಶಿಕ್ಷಣ

8.ಒಬ್ಬ ವಿದ್ಯಾರ್ಥಿ ತನ್ನ ಮಾನಸಿಕ ಚಟುವಟಿಕೆಗಳನ್ನು ಮತ್ತು ಭಾವನೆಗಳನ್ನು ಸ್ವತಃ ತಾನೇ ಮಾನಸಿಕವಾಗಿ ಅಧ್ಯಯನ ಮಾಡುವುದನ್ನು ಎನೆಂದು ಕರೆಯುತ್ತಾರೆ/
•ಅಂತರಾವಲೋಕನ

9.ಮೊದಲ ಮನೋವಿಜ್ಞಾನದ ಪ್ರಯೋಗಾಲಯವನ್ನು ಸ್ಥಾಪಿಸಿದವರು ಯಾರು?
•ವಿಲ್ಹೆಲ್ಮೆ ವೂಂಟ್

10.ಶೈಕ್ಷಣಿಕ ಮನೋವಿಜ್ಞಾನದ ಯಾವ ವಿಧಾನವು ಅದಕ್ಕೆ ವಿಜ್ಞಾನದ ಮಹತ್ವವನ್ನು ತಂದುಕೊಟ್ಟಿದೆ?
•ಪ್ರಾಯೋಗಿಕ ವಿಧಾನ

11.ವಿದ್ಯಾರ್ಥಿ ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರೋಪಾಯಗಳನ್ನು ನೀಡಲು ಶಿಕ್ಷಕನಿಗೆ ಸಹಾಯವಾದ ವಿಧಾನ ಯಾವುದು?
•ವ್ಯಕ್ತಿ ಅಧ್ಯಯನ ವಿಧಾನ

12.“ ದಿ ಪ್ರಿನ್ಸಿಪಲ್ ಆಫ್ ಸೈಕಾಲಜಿ”(1890) ಎಂಬ ಗ್ರಂಥದ ಕರ್ತೃ ಯಾರು?
•ವಿಲಿಯಂ ಜೇಮ್ಸ್

13.ಅಮೇರಿಕನ್ ಮನೋವಿಜ್ಞಾನದ ಪಿತಾಮಹಾ ಯಾರು?
•ವಾಟ್ಸನ್

14.“ಎಜುಕೇಶನ್ ಸೈಕಾಲಜಿ” ಎಂಬ ಗ್ರಂಥ ಬರೆದವರು ಯಾರು?
•ಥಾರ್ನ್ಡೈಕ್( 1903)

15.‘ಕಿಂಡರ್ ಗಾರ್ಡ್ನ್’ ವಿಧಾನದ ಶಿಕ್ಷಣವನ್ನು ಪರಿಚಯಿಸಿದ ವ್ಯಕ್ತಿ ಯಾರು?
•ಫ್ರೆಡೆರಿಕ್ ಫ್ರೋಬೆಲ್

16.ಶಿಕ್ಷಕರ ತರಬೇತಿಗಾಗಿ ಮೊದಲಿಗೆ ತರಬೇತಿ ಶಾಲೆಯನ್ನು ಆರಂಭಿಸಿದವರು ಯಾರು?
•ಜಾನ್ ಹೆನ್ರಿ ಪೆಸ್ಟಾಲಜಿ

17.ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಮನೋವಿಜ್ಞಾನವನ್ನು ಮೊದಲ ಬಾರಿಗೆ ಪರಿಚಯಿಸಿದವರು ಯಾರು?
ವಿಲ್ಹೆಲ್ಮ್ವೂಂಟ್

18.ಮನೋವಿಜ್ಞಾನದ ಆಧಾರದಲ್ಲಿ ಶಿಕ್ಷಣವನ್ನು ಜಾರಿಗೆ ತಂದ ಮೊದಲ ವ್ಯಕ್ತಿ ಯಾರು?
•ಜಾಣ್ ಹೆನ್ರಿ ಪೆಸ್ಟಾಲಜಿ

19.ಗುಂಪಿನಲ್ಲಿ ವ್ಯಕ್ತಿಯ ವರ್ತನೆಯನ್ನು ಅಧ್ಯಯನ ಮಾಡುವ ಮನೋವಿಜ್ಞಾನದ ಶಾಖೆಯನ್ನು ಏನೆಂದು ಕರೆಯುತ್ತಾರೆ?
•ಸಾಮಾಜಿಕ ಮನೋವಿಜ್ಞಾನ

20.ವಾಟ್ಸನ್ರವರ ಹೇಳುವಂತೆ ಮನೋವಿಜ್ಞಾನವು ಯಾವುದರ ಅಧ್ಯಯನವಾಗಿದೆ?
•ವರ್ತನೆಯ ಅಧ್ಯಯನ

Leave a Reply

Your email address will not be published. Required fields are marked *

error: Content Copyright protected !!