ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
1. ಸಂವಿಧಾನ ಎಂದರೇನು..?
> ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು
2. ಸಂವಿಧಾನ ಎಂಬ ಪದದ ಮೂಲ ಯಾವುದು?
> ಕಾನಸ್ಯೂಟ್
3. ‘ಕಾನ್ಸ್ಯೂಟ್’ ಅರ್ಥವೇನು..?
> ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ
4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ಮೊದಲಿಗೆ ಯಾವ ರಾಷ್ಟ್ರದಲ್ಲಿ ಎಷ್ಟ್ರರಲ್ಲಿ ಜಾರಿಗೆ ಬಂದಿತು..?
> 1815 ರಲ್ಲಿ ಇಂಗ್ಲೆಂಡಿನಲ್ಲಿ( ಯು.ಕೆ)
5. ಸಂವಿಧಾನವಿಲ್ಲದ ರಾಷ್ಟ್ರ ರಾಷ್ಟ್ರವೇ ಅಲ್ಲ ಅದೊಂದು ಅರಾಜಕತೆಯ ಪ್ರಭುತ್ವವೆಂದು ಹೇಳಿದ ಮಹಾಶಯ ಯಾರು..?
> ಜೆನಿಲಿಕ್
6. ಸಂವಿಧಾನದ ರಕ್ಷಕ ಯಾರು..?
> ನ್ಯಾಯಾಂಗ
7. ಪ್ರಪಂಚದಲ್ಲಿಯೇ ಅತ್ಯಂತ ವಿಸ್ತಾರವಾದ ಬೃಹತ್ ಸಂವಿಧಾನ ಯಾವುದು..?
> ಭಾರತ ಸಂವಿಧಾನ
8. ಭಾರತದ ಸಂವಿಧಾನದ ರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರು ಯಾರು..?
> ಡಾ. ಸಚ್ಚಿದಾನಂದ ಸಿನ್ಹ
9. ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು..?
> ಡಾ. ಬಿ. ಆರ್. ಅಂಬೇಡ್ಕರ್
10. ಭಾರತದ ಸಂವಿಧಾನವನ್ನು ಯಾವಾಗ ಅಧಿಕೃತವಾಗಿ ಜಾರಿಗೆ ತರಲಾಯಿತು..?
> 1950 ಜನವರಿ 26
11. ಭಾರತದ ಸಂವಿಧಾನವನ್ನು ರಚಿಸಲು ಯಾವ ರಾಷ್ಟ್ರದ ಪದ್ಧತಿಯನ್ನು ಅನುಸರಿಸಲಾಯಿತು.?
> ಇಂಗ್ಲೆಂಡ್, ಅಮೇರಿಕಾ, ಕೆನಡಾ, ಐರ್ಲ್ಯಾಂಡ್
12. ಯಾವ ಕಾಯ್ದೆಯನ್ನು ಭಾರತ ಸಂವಿಧಾನದ ಅಡಿಗಲ್ಲು ಎಂದು ಕರೆಯಲಾಗಿದೆ..?
> 1935 ರ ಭಾರತ ಸರ್ಕಾರದ ಕಾಯ್ದೆ
13. ಭಾರತದ ಸಂವಿಧಾನದಲ್ಲಿರುವ 3 ಬಗೆಯ ತುರ್ತು ಪರಿಸ್ಥಿತಿಗಳು ಯಾವುವು..?
> ಎ. ರಾಷ್ಟ್ರೀಯ ತುರ್ತು ಪರಿಸ್ಥಿತಿ
ಬಿ. ರಾಜ್ಯ ತುರ್ತು ಪರಿಸ್ಥಿತಿ
ಸಿ. ಆರ್ಥಿಕ ತುರ್ತು ಪರಿಸ್ಥಿತಿ
14. ಸ್ವತಂತ್ರ್ತ ಭಾರತದಲ್ಲಿ ಸಂಸ್ಥಾನಗಳ ವಿಲೀನಿಕರಣ ಮಾಡಿದವರು ಯಾರು..?
> ಸರ್ದಾರ್ ವಲ್ಲಭಾಯ್ ಪಟೇಲ್
15. ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾದಾಗ ಆಳ್ವಿಕೆ ಮಾಡುತ್ತಿದ್ದ ಕಾಶ್ಮೀರದ ದೊರೆ ಯಾರು..?
> ರಾಜಹರಿಸಿಂಗ್
16. ಭಾರತ ಸಂವಿಧಾನದಲ್ಲಿ ಯಾವ ಮಸೂದೆ ಅತ್ಯಂತ ವ್ಯಾಪಕ ತಿದ್ದುಪಡಿಯೆಂದು ಖ್ಯಾತಿಗಳಿಸಿದೆ..?
> 42 ನೆ ತಿದ್ದುಪಡಿ
17. ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಎಂತಹ ಪೌರತ್ವ ನೀಡಿದೆ..?
> ಏಕಪೌರತ್ವ
18. ಸಂವಿಧಾನ ರಚನಾ ಸಭೆ ರಾಷ್ಟ್ರಧ್ವಜದ ವಿನ್ಯಾಸವನ್ನು ಯಾವಾಗ ಒಪ್ಪಿಕೊಂಡರು..?
> 1947 ಜುಲೈ 22
19. ರಾಷ್ಟ್ರಧ್ವಜದ ವಿನ್ಯಾಸವನ್ನು ಮಾಡಿದವರು ಯಾರು..?
> ಪಿಂಗಾಳಿ ವೆಂಕಯ್ಯ
20. ಪಾರ್ಲಿಮೆಂಟ್ನ ಮೂಲ ಪದ ಯಾವುದು..?
> ಫ್ರೆಂಚ್ ಭಾಷೆಯ ಪಾರ್ಲರ್ ಮತ್ತು ಲ್ಯಾಟಿನ್ ಭಾಷೆಯ ‘ ಪಾರ್ಲಿಮೆಂಟಮ್’
21. ಪ್ರಜಾಪ್ರಭುತ್ದ ಹೃದಯ ಅಥವಾ ರಕ್ಷಾಕವಚ ಯಾವುದು..?
> ಸಂಸತ್
22. ಅಮರಿಕಾದ ಸಂಸತ್ತನ್ನು ಏನೆಂದು ಕರೆಯುತ್ತಾರೆ..?
> ಕಾಂಗ್ರೆಸ್
23. ಅಮೇರಿಕಾದ ಕಾಂಗ್ರೆಸ್ನ ಮೇಲ್ಮನೆ ಯಾವುದು..?
> ಸೆನೆಟ್
24. ಇಂಗ್ಲೆಂಡ್ನ ಸಂಸತ್ತನ್ನು ಏನೆಂದು ಕರೆಯುತ್ತಾರೆ..?
> ಪಾರ್ಲಿಮೆಂಟ್
25. ಜಪಾನಿನ ಸಂಸತ್ತನ್ನು ಏನೆಂದು ಕರೆಯುತ್ತಾರೆ..?
> ಡಯಟ್
26. ಭಾರತದಲ್ಲಿ ಸೇನಾ ಪಡೆಗಳ ಮಹಾದಂಡನಾಯಕನಾರು..?
> ರಾಷ್ಟ್ರಪತಿಗಳು
27. ಭಾರತವು ಯಾವ ಮಾದರೀಯ ಕಾರ್ಯಾಂಗವನ್ನು ಹೊಂದಿದೆ..?
> ಸಂಸದೀಯ ಕಾರ್ಯಾಂಗ
28. ಭಾರತದಲ್ಲಿ ರಾಷ್ಟ್ರಪತಿಯಾದ ಕ್ಷಿಪಣಿ ತಂತ್ರಜ್ಞಾನದ ಪಿತಾಂಹಾ ಯಾರು..?
> ಎ. ಪಿ. ಜೆ. ಅಬ್ದುಲ್ ಕಲಾಮ್
29. ಭಾರತದಲ್ಲಿರುವ ರಾಷ್ಟ್ರಪತಿಯವರ ಅಧಿಕೃತ ನಿವಾಸ ಯಾವುದು..?
> ರಾಷ್ಟ್ರಪತಿ ಭವನ
30. ರಾಷ್ಟ್ರಪತಿ ಭವನವನ್ನು ನಿರ್ಮಿಸಿದವರು ಯಾರು..?
> ಬ್ರಿಟಿಷ್ ಅಧಿಕಾರಿ ಎಡ್ವಿನ್ ಲೂಬಿ ಎನ್ಸ್
31. ಅಮೇರಿಕಾದ ರಾಷ್ಟ್ರಾಧ್ಯಕ್ಷರ ನಿವಾಸವನ್ನು ಏನೆಂದು ಕರೆಯುತ್ತಾರೆ..?
> ಶ್ವೇತ ಭವನ
32. ಸಂವಿಧಾನದ 352 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ..?
> ರಾಷ್ಟ್ರೀಯ ತುರ್ತು ಪರಿಸ್ಥಿತಿ
33. ಸಂವಿಧಾನದ 356 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ..?
> ರಾಜ್ಯ ತುರ್ತು ಪರಿಸ್ಥಿತಿ
34. ಸಂವಿಧಾನದ 360 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ..?
> ಆರ್ಥಿಕ ತುರ್ತು ಪರಿಸ್ಥಿತಿ
35. ಯಾರನ್ನು ಭಾರತದ ದ್ವಿತೀಯ ಪ್ರಜೆ ಎಂದು ಕರೆಯಲಾಗುತ್ತದೆ..?
> ಉಪರಾಷ್ಟ್ರಪತಿ
36. ಸ್ವತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಮಂತ್ರಿ ಯಾರು..?
> ಮೌಲಾನ್ ಅಬ್ದಿಲ್ ಕಲಾಂ ಆಜಾದ್
37. ಭಾರತದಲ್ಲಿ ಯಾವ ಪ್ರಧಾನಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು..?
> ಇಂದಿರಾಗಾಂಧಿ
38. ರಾಮಜನ್ಮಭೂಮಿ ನ್ಯಾಸದ ನೂತನ ಅಧ್ಯಕ್ಷ ಯಾರು..?
> ಗೋಪಾಲ್ದಾಸ್
39. ರಾಜ್ಯದ ಪ್ರಥಮ ಪ್ರಜೆ ಯಾರು..?
> ರಾಜ್ಯಪಾಲರು
40. ರಾಜ್ಯಪಾಲರ ಹುದ್ದೆಯನ್ನು ಸೃಷ್ಟಿಸಿದ ರಾಷ್ಟ್ರ ಯಾವುದು..?
> ಇಂಗ್ಲೆಂಡ್
41. ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ..?
> ರಾಷ್ಟ್ರಪತಿಗಳು
42. ರಾಜ್ಯಪಾಲರಿಗೆ ಯಾರು ಪ್ರಮಾಣ ವಚನ ಬೋಧಿಸುತ್ತಾರೆ..?
> ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು
43. ಭಾರತದಲ್ಲಿ ಯಾವ ಪ್ರಧಾನಮಂತ್ರಿಯ ಅಧಿಕಾರಾವಧಿಯಲ್ಲಿ ಕಾರ್ಗಿಲ್ ಕದನ ಸಂಭವಿಸಿತು..?
> ಎ. ಬಿ. ವಾಜಪೇಯಿ
44. ಭಾರತ ಕಂಡ ಅತಿ ವೃಧ್ಧ ವಯಸ್ಸಿನ ಪ್ರಧಾನಿ ಯಾರು..?
> ಮುರಾರ್ಜಿ ದೇಸಾಯಿ (80 ವರ್ಷ)
45. ಸ್ನೇಹ ಸಂಬಂಧಕ್ಕಾಗಿ ಚೀನಾಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಯಾರು..?
> ಜವಹರಲಾಲ್ ನೆಹರು
46. ಭಾರತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು..?
> ಸುಚೇತಾ ಕೃಪಲಾನಿ
47. ಯಾವ ಮುಖ್ಯಮಂತ್ರಿಯ ಕಾಲದಲ್ಲಿ ಕರ್ನಾಟಕದಲ್ಲಿ ವಿಧಾನಸೌಧವನ್ನು ಕಟ್ಟಲಾಯಿತು..?
> ಕೆಂಗಲ್ ಹನುಮಂತಯ್ಯ
48. ಮೂಲಭೂತ ಹಕ್ಕುಗಳು ಅಥವಾ ಸಂವಿಧಾನದ ರಕ್ಷಕನಾರು..?
> ಸರ್ವೋಚ್ಛ ನ್ಯಾಯಾಲಯ
49. ಸರ್ವೋಚ್ಚ ನ್ಯಾಯಾಲಯ ಯಾವಾಗ ಅಸ್ತಿತ್ವಕ್ಕೆ ಬಂದಿತು..?
> 1950 ಜನವರಿ 26
50. ಭಾರತದಲ್ಲಿ ಸವೋಚ್ಛ ನ್ಯಾಯಾಲಯದ ನ್ಯಾಯಪೀಠ ಎಲ್ಲಿದೆ..?
> ನವದೆಹಲಿ
51. ಸಂವಿಧಾನದ ಅ0ತಿಮ ವ್ಯಾಖ್ಯಾನಕಾರರು ಯಾರು..?
> ಸುಪ್ರೀಂ ಕೋರ್ಟ್
52. ಭಾರತದ ಯಾವ 3 ರಾಜ್ಯಗಳಿಗೆ ಒಂದೇ ಹೈಕೋರ್ಟ್ಗಳಿವೆ..?
> ಪಂಜಾಬ್, ಹರಿಯಾಣ, ಚಂಡೀಗಢ
53. ಸುಪ್ರೀಂಕೋರ್ಟ್ನ ಪ್ರಥಮ ನ್ಯಾಯಾಧೀಶರು ಯಾರಾಗಿದ್ದರು..?
> ಹರಿಲಾಲ್- ಜೆ- ಕನಿಯಾ
54. ಸುಪ್ರೀಂಕೋರ್ಟ್ನ ನ್ಯಾಯಾಧೀಶರನ್ನು ಅಧಿಕಾರದಿಂದ ಪದಚ್ಯುತಗೊಳಿಸುವ ವಿಧಾನ ಯಾವುದು..?
> ಮಹಾಭಿಯೋಗ
55. ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು..?
> ಸರೋಜಿನಿ ನಾಯ್ಡು
56. ಸ್ವತಂತ್ರ ಭಾರತದ ಪ್ರಥಮ ವಿದೇಶಾಂಗ ಮಂತ್ರಿ ಯಾರು..?
> ಜವಹರಲಾಲ್ ನೆಹರು
57. ಯಾವ ಪ್ರಧಾನಮಂತ್ರಿಯ ನಾಯಕತ್ವದಲ್ಲಿ 1986 ರಲ್ಲಿ ಬೆಂಗಳೂರಿನಲ್ಲಿ 2 ನೇ ಸಾರ್ಕ್ ಸಮ್ಮೇಳನ ನಡೆಯಿತು?
> ರಾಜೀವ್ಗಾಂಧಿ
58. ಸ್ವತಂತ್ರ ಭಾರತದ ಪ್ರಥಮ ಹಣಕಾಸು ಸಚಿವರು ಯಾರು..?
> ಆರ್. ಕೆ. ಷಣ್ಮುಗಂ ಚಟ್ಟಿ
59. ಅಮೇರಿಕಾ ಯಾವ ಮಾದರಿಯ ಕಾರ್ಯಾಂಗವನ್ನು ಹೊಂದಿದೆ..?
> ಅಧ್ಯಕ್ಷೀಯ ಕಾರ್ಯಾಂಗ
60. ರಾಷ್ಟ್ರಪತಿ ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ನೀಡುತ್ತಾರೆ..?
> ಉಪರಾಷ್ಟ್ರಪತಿ
# ಇವುಗಳನ್ನೂ ಓದಿ…
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 3
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 4