GKPersons and PersonaltyScientistsSpardha Times

ವಿಜ್ಞಾನಿ ಪರಿಚಯ : ಅಲ್ಬರ್ಟ್ ಐನ್‍ಸ್ಟೈನ್

Share With Friends

ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ, ಪ್ರೀತಿಸುವ ಒಬ್ಬ ವಿಜ್ಞಾನಿ ಐನ್‌ಸ್ಟೈನ್.ಆಲ್ಬರ್ಟ್ ಐನ್‍ಸ್ಟೀನ್ 20ನೇ ಶತಮಾನದ ಜರ್ಮನಿ ಮೂಲದ ಭೌತವಿಜ್ಞಾನಿ. ಇವರು ಸಾಪೇಕ್ಷತ ಸಿದ್ಧಾಂತವನ್ನು (ಥಿಯರಿ ಆಫ್ ರಿಲೇಟಿವಿಟಿ) ಜಗತ್ತಿನ ಮುಂದಿಟ್ಟವರು. ಈತ ಹುಟ್ಟಿದ್ದು ಜರ್ಮನಿಯ ಉಲ್ಮ್ ನಲ್ಲಿ. ಇಸವಿ 1879, ಮಾರ್ಚ್ 14ನೇ ತಾರೀಖಿನಂದು ಹುಟ್ಟಿದ್ದ ಐನ್‌ಸ್ಟೈನ್ ಮಾರು 5 ವರ್ಷಗಳವರೆಗೆ ಮಾತನಾಡುತ್ತಿರಲಿಲ್ಲ. ಅಂದರೆ ಮೂಗನಾಗಿದ್ದ.! ನಿಧಾನವಾಗಿ ಮಾತು ಆರಂಭಿಸಿದ ಐನ್‌ಸ್ಟೈನ್ಗೆ ಮಾತಿನ ಸಮಸ್ಯೆ 9 ವರ್ಷಗಳವರೆಗೂ ಇತ್ತು.ಈ ಕಾರಣದಿಂದ ಐನ್‌ಸ್ಟೈನ್ ಹೆಚ್ಚು ಮೌನಿಯಾಗಿರುತ್ತಿದ್ದ, ಭಾವನೆಗಳನ್ನು ಹೊರ ಹಾಕಲು ಆತನ ಬಳಿ ದಾರಿಗಳಿರಲಿಲ್ಲ. ಈ ಕಾರಣಕ್ಕೆ ಆಲೋಚನೆ ಮಾಡುವ ಅಭ್ಯಾಸ ಐನ್‌ಸ್ಟೈನ್ಗೆ ಬೆಳೆದಿರಬಹುದು ಎಂಬ ಮಾತುಗಳಿವೆ. ಇಂತಹ ರೋಚಕ ವಿಷಯಗಳನ್ನು ಹೊಂದಿರುವ ಅಲ್ಬರ್ಟ್ ಐನ್ ಸ್ಟೈನ್ ಅವರ ಇವರ ಜೀವನಗಾಥೆ ಖಂಡಿತವಾಗಿಯೂ ಒಂದು ಕುತೂಹಲಕಾರಿಯಾದ ವಿಷಯ.

ಇಸಾಕ್ ನ್ಯೂಟನ್ ನ ಸಿದ್ಧಾಂತವನ್ನು ಮತ್ತಷ್ಟು ಉತ್ತಮಪಡಿಸಿ, ಭೌತಶಾಸ್ತ್ರೀಯ ಸಂಶೋಧನೆಯ ಜಗತ್ತಿನಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೌತಶಾಸ್ತ್ರದ ಕಡೆ, ಅವರ ಒಲವು ಅಪಾರ, ಬುದ್ಧಿಮತ್ತೆ, ಹಾಗೂ ಕಾರ್ಯತತ್ಪರತೆ, ಒಂದು ಹೊಸಲೋಕವನ್ನೇ ಅವರ ಮುಂದೆ ತೆರೆದಿಟ್ಟಿತು. ತೊದಲು ನುಡಿಯುತ್ತಿದ್ದ ಬಾಲಕ, ಸಂಶೋಧನಶೀಲತೆಯಂತಹ ಅದ್ವಿತೀಯ, ಗುಣಗಳಿಂದ , ಶ್ರೇಷ್ಠ ಪ್ರಾಧ್ಯಾಪಕನಾದದ್ದು, ಅಪೂರ್ವ ಸಂಶೋಧಕನಾದದ್ದೂ, ಚಾರಿತ್ರ್ಯಕ ಸತ್ಯ.

1915. ನೂರು ವರ್ಷಗಳ ಹಿಂದಿನ ಮಾತು. ಇದು ವಿಜ್ಞಾನಕ್ಕೇ ವಿಶೇಷವಾದ ವರ್ಷ. ಇಂತಹ ಪ್ರಖರ ಪ್ರತಿಭಾವಂತ ಇನ್ನೊಬ್ಬನಿಲ್ಲ ಎನಿಸಿದ್ದ ಯೂರೋಪಿನ ಪ್ರಸಿದ್ಧ ಭೌತವಿಜ್ಞಾನಿ ಆಲ್ಬರ್ಟ್‍ ಐನ್‌ಸ್ಟೈನ್ (1879 – 1955) ಜನರ ನಂಬಿಕೆಗಳನ್ನೇ ಅಲ್ಲಾಡಿಸಿದ್ದು ಇದೇ ವರ್ಷ. ಹಾಗಾಗಿ ಮಾನವಜನಾಂಗದ ಇತಿಹಾಸದಲ್ಲಿ ಈ ವರ್ಷಕ್ಕೆ ಬಹಳ ಮಹತ್ವವಿದೆ.

ಈ ಅತಿ ಮಹತ್ವದ ಅವರ ‘ವಿಶೇಷ ಸಾಪೇಕ್ಷ ಸಿದ್ಧಾಂತ’ 1905ರಲ್ಲಿಯೇ ಹೊರಬಂದಿತ್ತು. ಕೇವಲ ಒಂದು ವರ್ಷದಲ್ಲಿ ಐದು ಪೇಪರುಗಳನ್ನು ಪ್ರಕಟಿಸಿದ್ದರು. ಆಗ ಅವರ ವಯಸ್ಸು ಕೇವಲ 26. ಈ ಪೇಪರುಗಳಲ್ಲಿ ಒಂದು ‘ವಿಶೇಷ ಸಾಪೇಕ್ಷ ಸಿದ್ಧಾಂತ’ಕ್ಕೆ (Special Theory of Relativity) ಸಂಬಂಧಿಸಿದ್ದಾದರೆ, ಮತ್ತೊಂದು ಫೋಟೋ ಎಲೆಕ್ಟ್ರಿಕ್‌ ಕ್ರಿಯೆಗೆ ಸಂಬಂಧಿಸಿದ್ದು. ಅದು ಮುಂದೆ ಅವರಿಗೆ ನೊಬೆಲ್ ಬಹುಮಾನ ತಂದುಕೊಟ್ಟಿತು. ಮತ್ತೊಂದು ಪೇಪರ್ ಪ್ರಖ್ಯಾತ ‘e=mc2’ ಸಮೀಕರಣವನ್ನು ಹೊರತಂದು ಅವರನ್ನು ಬಾಂಬ್ ಜೊತೆ ಅನಗತ್ಯವಾಗಿ ಶಾಮೀಲಾಗುವಂತೆ ಮಾಡಿತು.

# ಜನ ಮತ್ತು ಬಾಲ್ಯ :
ಐನ್‍ಸ್ಟೈನ್, ಜನಿಸಿದ್ದು ಜರ್ಮನಿಯ ವುಟೆನ್ ಬರ್ಗ್ ನ ಉಲ್ಮ್ ಎಂಬ ಹಳ್ಳಿಯಲ್ಲಿ. 1879 ರ ಮಾರ್ಚ್ 14ರಂದು. ತಂದೆ, ಹರ್ಮನ್ ಐನ್‍ಸ್ಟೈನ್. ತಾಯಿ, ಪೌಲಿನ್ ಐನ್‍ಸ್ಟೈನ್. ಬಾಲ್ಯದಲ್ಲಿ ಅವರನ್ನು ಕಾಡಿದ ಸಮಸ್ಯೆಯೆಂದರೆ ತೊದಲುವಿಕೆ. ಮನೆಯ ಸದಸ್ಯರಿಗೆಲ್ಲಾ ಬಹಳ ನೊಂದುಕೊಂಡಿದ್ದರು. ತಮ್ಮ ಜರ್ಮನ್ ಮಾತೃಭಾಷೆಯನ್ನು ಚೆನ್ನಾಗಿ ಕಲಿತರು. ಮ್ಯುನಿಕ್ ನಲ್ಲಿ ಮನೆತನದ ಎಲೆಕ್ಟ್ರಿಕಲ್ ಉಪಕರಣಗಳ ತಯಾರಿಕೆಯ ಸಂಸ್ಥೆಯನ್ನು ತಂದೆ ಹಾಗೂ ಚಿಕ್ಕಪ್ಪನವರು ಸೇರಿ ಸ್ಥಾಪಿಸಿದ್ದರು. ಪರಿವಾರವೆಲ್ಲಾ ಇಟಲಿಗೆ ಹೋಗಿ ನೆಲೆಸುವ ಆತುರದಲ್ಲಿತ್ತು. ಅಗ ಐನ್‍ಸ್ಟೈನ್ ರವರಿಗೆ 6 ವರ್ಷ ವಯಸ್ಸು. ಐನ್‍ಸ್ಟೈನ್ ಝೂರಿಚ್ ನ “ಸ್ವಿಸ್ ಫೆಡರಲ್ ತಾಂತ್ರಿಕ ಸಂಸ್ಥೆ”ಗೆ ಅರ್ಜಿ ಸಲ್ಲಿಸಿದರು. ಅವರ ಬಳಿ ಸೆಕೆಂಡರಿಶಾಲೆಯ ಪ್ರಮಾಣಪತ್ರವಿರಲಿಲ್ಲ. 16 ವರ್ಷವಯಸ್ಸಿನ ಐನ್‍ಸ್ಟೈನ್ ಪ್ರವೇಶ ಪರೀಕ್ಷೆಯಲ್ಲಿ ನಾಪಾಸಾದರು.

ಸೆಕೆಂಡರಿ ವಿಧ್ಯಾಭ್ಯಾಸಕ್ಕೆ ‘ಹ್ಯಾರೋ’ ಸ್ಕೂಲಿಗೆ ಹೋಗಿ ಭರ್ತಿಯಾದರು. “ವಿದ್ಯುತ್‍ಕಾಂತೀಯ ಸಿದ್ಧಾಂತ” ( ಎಲೆಕ್ಟ್ರೋ ಮ್ಯಾಗ್ನೆಟಿಕ್ ಸಿದ್ಧಾಂತ)ದಲ್ಲಿ ವಿಶೇಷ ಆಸಕ್ತಿ ಬೆಳೆಯಿತು. 1896 ರಲ್ಲಿ ಪದವಿ ದೊರೆಯಿತು. ಐನ್‍ಸ್ಟೈನ್ ರಿಗೆ ಗಣಿತಶಾಸ್ತ್ರದಲ್ಲಿ ವಿಶೇಷಪರಿಣತಿ ಇದೆ ಎನ್ನುವ ಸತ್ಯ ಅರಿವಾಗಿದ್ದು ಆನಂತರವೇ. 1900 ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಸಿಕ್ಕಿತು. 1901 ರಲ್ಲಿ “ಸ್ವಿಸ್ ಪೌರತ್ವ”ವನ್ನು ಪಡೆದುಕೊಂಡರು. ಜರ್ಮನ್ ಇಟ್ಯಾಲಿಯನ್ ಭಾಷೆಗಳ ಜೊತೆಗೆ ಆಂಗ್ಲ ಭಾಷೆಯನ್ನು ಚೆನ್ನಾಗಿ ಅಭ್ಯಾಸಮಾಡಿದರು. ಉಪಾಧ್ಯರ ವೃತ್ತಿಗೆ ಅರ್ಜಿಹಾಕಿ 2 ವರ್ಷ ಅಲೆದಲೆದು ಸೋತುಹೋದರು. ನೌಕರಿ ಸಿಗುವುದು ಕಠಿಣವಾಗಿತ್ತು. ಕೊನೆಗೆ ‘ಬರ್ನ್’ ನಗರದ “ಪೇಟೆಂಟ್ ಆಫೀಸ್”ನಲ್ಲಿ ಕೆಲಸ ದೊರೆಯಿತು.

ಐನ್‍ಸ್ಟೈನ್ ಗೆ ಭೌತಶಾಸ್ತ್ರದಲ್ಲಿ ಅಗಾಧ ಪರಿಶ್ರಮವಿತ್ತು. ಅವರ ವ್ಯವಸಾಯವೂ ಆ ನಿಟ್ಟಿನಲ್ಲೇ ಭರದಿಂದಲೇ ಸಾಗಿತ್ತು. “ಅನಾಲೆಂಡರ್ ಫಿಸಿಕ್”ಎಂಬ ಜರ್ಮನಿಯ ಪ್ರತಿಶ್ಠಿತ ಭೌತಶಾಸ್ತ್ರದ ಪತ್ರಿಕೆಗೆ ತಮ್ಮ ಪ್ರಬಂಧವನ್ನು ಪ್ರಕಟಿಸಲು ಕಳಿಸಿಕೊಟ್ಟರು. ಇವರ ಪ್ರಗತಿಪರ ಸಂಶೋಧನಾ ತತ್ವಗಳು ಭೌತಶಾಸ್ತ್ರದ ವಲಯದಲ್ಲಿ ಎಲ್ಲರ ಗಮನವನ್ನೂ ಸೆಳೆದವು. ತಮ್ಮ 26 ನೆಯ ವರ್ಷ ವಯಸ್ಸಿನಲ್ಲೇ ಡಾಕ್ಟೊರೇಟ್ ಗಳಿಸಿದರು. 1911 ರಲ್ಲಿ ಜುರಿಚ್ ನಗರದ ವಿಶ್ವವಿದ್ಯಾಲಯದಲ್ಲಿ ಸಹ-ಪ್ರಾಧ್ಯಾಪಕವೃತ್ತಿ ಸಿಕ್ಕಿತು.

‘ಮಿಲೆವಾ ಮ್ಯಾರಿಕ್’ ಎಂಬ ಜರ್ಮನ್ ಹುಡುಗಿಯ ಜೊತೆ 1903 ರಲ್ಲಿ ಮದುವೆಯಾಯಿತು. ಹಾನ್ಸ್ ಮತ್ತು ಎಡ್ವರ್ಡ್ ಎಂಬ ಎರಡುಮಕ್ಕಳು ಜನಿಸಿದರು. ವಿವಾಹದ ಮೊದಲೆ ಒಬ್ಬ ಮಗಳು ಜನಿಸಿದ್ದಳು. ಆ ಮದುವೆ ವಿವಾಹ ವಿಚ್ಛೇದನೆಯಲ್ಲಿ ಕೊನೆಗೊಂಡಿತು. 1919 ರಲ್ಲಿ ಎಲ್ಯಾ ಲೊವೆಂಥಾಲ್ ಎಂಬ ಮಹಿಳೆಯಜೊತೆ ಮರುಮದುವೆಯಾದರು. ಐನ್‍ಸ್ಟೈನ್ ರ ನೆರಳಿನಂತೆ ಅವರ ಬಾಳಿನಲ್ಲಿ ಸಮರಸ ಹೊಂದಿಸಿದ ಎಲ್ಯಾ, ಖಾಯಿಲೆಯಿಂದ ಬಳಲಿ, 1936 ರಲ್ಲಿ ಅಸುನೀಗಿದರು.

# ಐನ್‍ಸ್ಟೈನ್ ಜೀವನದ ಅವಿಸ್ಮರಣೀಯ ಘಟನೆ :
42 ವರ್ಷವಯಸ್ಸಿನ ಐನ್‍ಸ್ಟೈನ್ ರವರಿಗೆ ಫೊಟೊ ಎಲೆಕ್ಟ್ರಿಕಲ್ ಎಫೆಕ್ಟ್(ದ್ಯುತಿವಿದ್ಯುತ್ ಪರಿಣಾಮ) ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕೆ ನೊಬೆಲ್ ಪ್ರಶಸ್ತಿ ದೊರೆಯಿತು. ಅವರ ಪ್ರಶಸ್ತಿಯ ಬಹುಪಾಲು ನಗದುಹಣವೆಲ್ಲಾ ಅವರ ಪತ್ನಿಯ ವಿವಾಹವಿಚ್ಛೇದನದ ಪರಿಹಾರಧನ ಕೊಡುವುದರಲ್ಲೇ ವ್ಯಯವಾಯಿತು. ಆಗ ಜರ್ಮನಿಯ ಯಹೂದ್ಯರಿಗೆ ಹಿಟ್ಲರ್ ನ ಕಿರುಕುಳ ಶುರುವಾಗಿತ್ತು. 1921 ರಲ್ಲಿ ಪ್ರಥಮವಾಗಿ ನ್ಯೂಯಾರ್ಕ್ ಗೆ ಭೇಟಿಕೊಟ್ಟರು. ಮನೆ ಖರೀದಿಸಿದರು.

1940 ರಲ್ಲಿ ಅಮೆರಿಕದ ಪೌರತ್ವ ಪಡೆದ ಅವರು, ತಮ್ಮ ಜೀವನದ ಶೇಷಭಾಗವನ್ನು ಅಲ್ಲೇ ಕಳೆದರು. 2ನೇ ವಿಶ್ವ ಸಮರದ ಸಮಯದಲ್ಲಿ ಅಣುಬಾಂಬ್, ನ ಹಾನಿಕರ ಪರಿಣಾಮಗಳನ್ನು ಜನರಿಗೆಲ್ಲಾ ಪ್ರಸಾರ ಮಾಡುತ್ತಿದ್ದರು. ಆ ಸಮಯದಲ್ಲಾಗಲೇ ಹಿಟ್ಲರ್ ಆಡಳಿತದಲ್ಲಿದ್ದ ಜರ್ಮನಿಯು ಅಣ್ವಸ್ತ್ರಕ್ಕಾಗಿ ಪೈಪೋಟಿ ನೆಡೆಸುತಿತ್ತು. 1939ರಲ್ಲಿ ಲಿಯೋ ಸಿಲ್ಲಾರ್ಡ್ ಎಂಬ ವಿಜ್ಞಾನಿಯನ್ನು ಒಳಗೊಂಡಿದ್ದ ಹಂಗೇರಿಯ ವಿಜ್ಞಾನಿಗಳ ಗುಂಪೊಂದು ನಾಜಿಗಳ ಈ ಕೃತ್ಯದ ಬಗ್ಗೆ ಅಮೆರಿಕವನ್ನು ಎಚ್ಚರಿಸಲು ಯತ್ನಿಸುತ್ತಿದ್ದರು.

ಪರಮಾಣು ವಿದಳನ ಕ್ರಿಯೆಯ ಹಿಂದಿದ್ದ ಸಿದ್ಧಾಂತವನ್ನು ತಿಳಿದಿದ್ದ ಲಿಯೋ ಸಿಲ್ಲಾರ್ಡ್ ಹಾಗೂ ಯೂಜಿನ್ ವಿಜಿನರ್ ಎಂಬ ವಿಜ್ಞಾನಿಗಳು ಈ ಬಗ್ಗೆ ಐನ್‍ಸ್ಟೈನ್ ರನ್ನು ಜುಲೈ 9, 1939ರಂದು ಭೇಟಿಮಾಡಿದರು. ಐನ್‍ಸ್ಟೈನ್ ರವರು ಸಿಲ್ಲಾರ್ಡ್ ಜೊತೆ ಸೇರಿ ಅಣ್ವಸ್ತ್ರದ ಸಾಧ್ಯತೆಯನ್ನು ವಿವರಿಸಿ ಆಗಿನ ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಅವರಿಗೆ ಪತ್ರ ಬರೆದರು.

ಅಮೆರಿಕದ ವಿಜ್ಞಾನಿಗಳು, ಅಣುಬಾಂಬನ್ನು ತಯಾರಿಸಿ, ಜಪಾನ್ ನ ನಾಗಸಾಕಿ, ಮತ್ತು ಹಿರೋಷಿಮಾ ನಗರಗಳ ಮೇಲೆ ಎಸೆದದ್ದರಿಂದ, ಸಹಸ್ರಾರು ಜನರ ಪ್ರಾಣವನ್ನು ಆಹುತಿಯನ್ನಾಗಿ ತೆಗೆದುಕೊಂಡಿತ್ತು. ಈ ಘಟನೆಯಿಂದ ಘಾಸಿಗೊಂಡಿದ್ದ ಐನ್‍ಸ್ಟೈನ್ ರು, ಎಲ್ಲಾ ವಿಜ್ಞಾನಿಗಳಿಗೂ ಕರೆಕೊಟ್ಟು, ಅಣುವಿಜ್ಞಾನವನ್ನು ಜಾಗತಿಕ ಶಾಂತಿ, ಹಾಗೂ ಮಾವವನ ಒಳಿತಿಗಾಗಿಯೇ ಉಪಯೋಗಿಸಲು ಬಿನ್ನವಿಸಿಕೊಂಡರು.

# ಶತಮಾನದ ಮಹಾವಿಜ್ಞಾನಿಯ :
ಸನ್. 2000 ದಲ್ಲಿ, ಪ್ರಖ್ಯಾತ “ಟೈಮ್ಸ್ ಪತ್ರಿಕೆ,”ಯ 20 ನೆಯ ಶತಮಾನದ ಅತ್ಯಂತ ಪ್ರಖ್ಯಾತ ವ್ಯಕ್ತಿಯನ್ನು ನಿರ್ಧರಿಸುವಲ್ಲಿ ನಡೆಸಿದ ವಿಶ್ವದಾದ್ಯಂತದ ಸಮೀಕ್ಷೆಯಲಿ, ‘ಐನ್‍ಸ್ಟೈನ್ ,’ ರೇ ಪ್ರಚಂಡ ಬಹುಮತದಿಂದ ಚುನಾಯಿತರಾದರು. ಐನ್‍ಸ್ಟೈನ್ , ತಮ್ಮ ನಾಲ್ಕೂವರೆ ದಶಕಗಳ ಸೇವೆ, ವೃತ್ತಿಗೌರವಗಳಿಂದ, ಮನುಕುಲದ ಒಳಿತಿಗಾಗಿ ಮಾಡಿದ ಸೇವೆಗಳನ್ನು ಜನಸ್ತೋಮ, ಸ್ಮರಿಸಿತು. ಅದಕ್ಕಾಗಿಯೇ ಅವರಿಗೆ ಅಗ್ರಸ್ಥಾನ ! ಐನ್‍ಸ್ಟೈನ್ ರವರಿಗೆ ದೊರೆತ ಗೌರವ ಪ್ರಶಸ್ತಿಗಳು, ಅಸಂಖ್ಯ.

# ವಿಶ್ವವಿಖ್ಯಾತ ಸಮೀಕರಣ : E=mc2
1916ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ರಿಲೇಟಿವಿಟಿ ಥಿಯರಿ) ಬಿತ್ತರಿಸಿದ ನಂತರ ಐನ್‍ಸ್ಟೈನ್ ವಿಶ್ವದಾದ್ಯಂತ ವಿಜ್ಞಾನಿಯೊಬ್ಬರಿಗೆ ಅಸಾಮಾನ್ಯವಾದ ಪ್ರಸಿದ್ಧಿಯನ್ನು ಪಡೆದರು. ವರ್ಷಗಳು ಕಳೆದಂತೆ ಇವರ ಪ್ರಸಿದ್ಧಿ ಜಗತ್ತಿನ ಯಾವುದೇ ವಿಜ್ಞಾನಿಗಿಂತ ಹೆಚ್ಚಾಯಿತು. ಜಗತ್ತಿನ ಅತಿ ದೊಡ್ಡ ಮೇಧಾವಿಯಾಗಿ ಚಿರಪರಿಚಿತರಾದರು. ಇಂದಿಗೂ ಭೌತಶಾಸ್ತ್ರ ಕ್ಷೇತ್ರದಲ್ಲಿ ಐನ್‍ಸ್ಟೈನ್ ಅವರು ಮಾಡಿರುವ ಸಂಶೋಧನೆಗಳಿಂದ,ಅವರನ್ನು “ಭೌತಶಾಸ್ತ್ರದ ಜನಕ” ಎಂದೇ ವಿಜ್ಞಾನಿಗಳು ಗೌರವಿಸುತ್ತಾರೆ. ಅವರನ್ನು ಗೌರವಿಸುವ ಸಲುವಾಗಿ ಮೂಲ ವಸ್ತುವೊಂದಕ್ಕೆ ‘ಐನ್‍ಸ್ಟೈನಿಯಮ್’ ಎಂದು ಹೆಸರಿಡಲಾಗಿದೆ.

# ‘ಗಾಡ್​​ ಲೆಟರ್’
ಎರಿಕ್​​ ಗಟ್​​ಕೈಂಡ್ ಅವರು ‘ಚೂಸ್ ಲೈವ್: ದಿ ಬಿಬ್ಲಿಕಲ್ ಕಾಲ್ ಟು ರಿವೋಲ್ಟ್’ ಪುಸ್ತಕದ ಪ್ರತಿಯನ್ನು ಐನ್‌ಸ್ಟೀನ್‌ಗೆ ಕಳಿಸಿದ್ದರು. ಇದಕ್ಕೆ ಪತ್ರದ ಮೂಲಕ ಐನ್‌ಸ್ಟೀನ್ ಪ್ರತಿಕ್ರಿಯಿಸಿದ್ದರು. ವಿಜ್ಞಾನ ಹಾಗೂ ಧರ್ಮದ ನಡುವೆ ಚರ್ಚೆ ಬಂದಾಗಲೆಲ್ಲಾ ಈ ಪತ್ರ ಪ್ರಾಮುಖ್ಯತೆ ಪಡೆಯುತ್ತಿತ್ತು. ದೇವರು ಅನ್ನೋ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ ಎಂದು ಐನ್‌ಸ್ಟೀನ್ ಅಭಿಪ್ರಾಯಪಟ್ಟಿದ್ದನ್ನು ಗಾಡ್ ಲೆಟರ್ ಎಂದು ಕರೆಯಲಾಗಿದೆ.ಅವರು ಬರೆದ ಈ ಪತ್ರವು ಬರೋಬ್ಬರಿ 2.9 ಮಿಲಿಯನ್​ ಡಾಲರ್​( ಸುಮಾರು 20,58,56,500 ರೂ. )ಗೆ ಹರಾಜಾಗಿ ಆಶ್ಚರ್ಯ ಮೂಡಿಸಿತ್ತು.

# ಐನ್ ಸ್ಟೈನ್ ಕುರಿತ ಕುತೂಹಲಕಾರಿ ಸಂಗತಿಗಳು :
➤ ‘ನಿಮ್ಮನ್ನು ಪತ್ನಿಯಾಗಿ ಸ್ವೀಕರಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನೀವು ನನ್ನ ಅರ್ಧಾಂಗಿಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ..’ 1900ರಲ್ಲಿ ವಿಶ್ವ ವಿಖ್ಯಾತ ಭೌತಶಾಸ್ತ್ರಜ್ಞ, ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೈನ್ ತಮ್ಮ ಭಾವಿ ಪತ್ನಿ ಮಿಲೆವಾ ಮಾರಿಕ್ ಅವರಿಗೆ ಬರೆದ ಪತ್ರವಿದು.ಅಸಲಿಗೆ ಮಿಲೆವಾ ಮಾರಿಕ್ ಕೂಡ ಭೌತಶಾಸ್ತ್ರಜ್ಞೆಯಾಗಿದ್ದು, “Einstein’s Wife: The Real Story of Mileva Einstein-Maric,” ಎಂಬ ಪುಸ್ತಕದಲ್ಲಿ ಮಿಲೆವಾ ಕುರಿತು ಹಲವು ಕುತೂಹಲಕಾರಿ ಅಂಶಗಳಿವೆ.

➤ ಐನ್‍ಸ್ಟೈನ್ ಅವರ ಪ್ರಸಿದ್ಧ ‘Theory of Relativity’ ಸಿದ್ಧಾಂತ ಮಂಡಿಸುವಲ್ಲಿ ಪತ್ನಿ ಮಿಲೆವಾ ಕೂಡ ನೆರವಾಗಿದ್ದರು ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಭೌತಶಾಸ್ತ್ರದ ಕುರಿತು ಐನ್‍ಸ್ಟೈನ್ ಅವರಿಗಿಂತ ಆಳವಾದ ಜ್ಞಾನ ಹೊಂದಿದ್ದ ಮಿಲೆವಾ, ‘Theory of Relativity’ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ.

➤ ಐನ್‌ಸ್ಟೈನ್ ಎನ್ನುವ ಪದ ಜೀನಿಯಸ್ ಎನ್ನುವುದಕ್ಕೆ ಪರ್ಯಾಯ ಎಂದು ಕರೆಸಿಕೊಂಡಿದೆ. ಐನ್‌ಸ್ಟೈನ್ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಐನ್‌ಸ್ಟೈನ್‌ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ನೀಡಿದ ‘ಬೋಸ್-ಐನ್‌ಸ್ಟೈನ್‌ ಸ್ಟಾಟಿಸ್ಟಿಕ್ಸ್’ ಸೇರಿದಂತೆ ‘ಐನ್‌ಸ್ಟೈನ್‌ ರೆಫ್ರಿಜರೇಟರ್’, ‘ಐನ್‌ಸ್ಟೈನ್‌-ಕಾರ್ಟನ್ ಸಿದ್ಧಾಂತ’, ‘ಐನ್‌ಸ್ಟೈನ್‌-ಇನ್ಫೆಲ್ಡ್-ಹಾಫ್ಮನ್ ಇಕ್ವೇಷನ್ಸ್’, ‘ಐನ್‌ಸ್ಟೈನ್‌-ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್’ ಇವುಗಳಲ್ಲಿ ಪ್ರಮುಖವಾದವು.

➤ ಐನ್‌ಸ್ಟೈನ್‌ ಹಾದಿಯಲ್ಲಿ ನಡೆಯಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಯಶಸ್ಸಿಗೆ ಸೂತ್ರಗಳೇನಾದರೂ ಇವೆಯೋ ಎಂದು ಅವರ ಬಳಿ ಕೇಳುತ್ತಿದ್ದರು. ಅದಕ್ಕೆ ಐನ್‌ಸ್ಟೈನ್‌ ಒಂದು ಫಾರ್ಮುಲಾ ನೀಡುತ್ತಿದ್ದರು ಅದು ಹೀಗಿತ್ತು, A = X+Y+Z. ಐನ್‌ಸ್ಟೈನ್‌ ಪ್ರಕಾರ ಇಲ್ಲಿ A ಅಂದರೆ ಯಶಸ್ಸು, ಅದಕ್ಕೆ ಬೇಕಾಗಿದ್ದು X- ಕೆಲಸ, Y-ಆಟ ಮತ್ತು Z-ಬಾಯಿ ಮುಚ್ಚಿಕೊಂಡಿರಬೇಕು ಎನ್ನುತ್ತಿದ್ದರು.

➤ ಮಾರ್ಚ್ 14 ರಂದು ಐನ್ ಸ್ಟೀನ್ ಅವರ ಹುಟ್ಟುಹಬ್ಬದ ಅಂಗವಾಗಿ ಇಸ್ರೇಲ್ ದೇಶದ ಜೆರುಸಲೆಮ್ ಹೀಬ್ರೂ ವಿಶ್ವವಿದ್ಯಾಲಯದವರು ಅವರ 80 ಸಾವಿರಕ್ಕೂ ಹೆಚ್ಚು ಸಂಶೋಧನಾ ಹಾಗು ಅಪರೂಪದ ಪ್ರೇಮ ಪತ್ರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದ್ದಾರೆ.

➤ ಅಲ್ಬರ್ಟ್ ಅವರು 5 ವರ್ಷದವರಿದ್ದಾಗ ಅವರ ತಂದೆಯಿಂದ ಪಾಕೆಟ್ ದಿಕ್ಸೂಚಿಯನ್ನು ಅವರು ನೋಡಿದರು. ವಿಜ್ಞಾನದೆಡೆಗೆ ಅವರ ಕುತೂಹಲಕ್ಕೆ ಕಾರಣವಾಗಿರುವ ಮೊದಲ ಅಂಶ ಇದು ಎಂದು ಅಲ್ಬರ್ಟ್ ಐನ್ ಸ್ಟೈನ್ ಹೇಳಿಕೊಂಡಿದ್ದಾರೆ. ಪಾಕೆಟ್ ದಿಕ್ಸೂಚಿಯನ್ನು ಯಾವ ದಿಕ್ಕಿಗೆ ಹಿಡಿದರೂ ಅದು ಒಂದೇ ರೀತಿಯಲ್ಲಿ ತೋರಿಸುತ್ತಿರುವುದು ಇದಕ್ಕೆ ಕಾರಣವಾಗಿತ್ತು.

➤ ಅಧ್ಭುತ ಸಂಶೋಧನೆಯ ಹೊರತಾಗಿಯೂ ಐನ್‌ಸ್ಟೈನ್‌ಗೆ ಸಾಪೇಕ್ಷ ಸಿದ್ಧಾಂತಕ್ಕೆ ನೋಬೆಲ್ ಪ್ರಶಸ್ತಿ ಸಿಗಲೇ ಇಲ್ಲ. ಏಕೆಂದರೆ, , ಸಾಪೇಕ್ಷ ಸಿದ್ಧಾಂತ ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ. ಇದರ ಬದಲಾಗಿ ಇದರ ಮುಂದೆ ಚಿಲ್ಲರೆ ಎನಿಸಬಹುದಾದ ‘ಫೋಟೋ ಎಲೆಕ್ಟ್ರಿಕ್ ಇಫೆಕ್ಟ್’ಗೆ ಅದೂ 16 ವರ್ಷ ಬಿಟ್ಟು 1921ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ವಿಚಿತ್ರ ಎಂದರೆ ಅವರ ಕೆಲವು ಥಿಯರಿಗಳು ಸಾಕ್ಷವಿಲ್ಲದೇ ಹಾಗೇ ಉಳಿದುಕೊಂಡಿದ್ದವು. ಅವು ಸತ್ಯವೋ ಸುಳ್ಳೋ ಎಂದು ಹೇಳಲು ಸಾಮಾನ್ಯರು ಬಿಡಿ ವಿಶ್ವದ ಯಾವ ಘಟಾನುಘಟಿ ವಿಜ್ಞಾನಿಗಳಿಗೂ ಸಾಧ್ಯವಾಗಿರಲಿಲ್ಲ.

➤ ಐನ್‌ಸ್ಟೈನ್ ಅವರ ಜನಪ್ರಿಯ ಚಿತ್ರವೆಂದರೆ ಅವರು ತಮ್ಮ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದ್ದು. ಐನ್‌ಸ್ಟೈನ್ ಚಿಕ್ಕ ಹುಡುಗನಂತೆ ವರ್ತಿಸಿದ್ದ ಈಈ ಚಿತ್ರ ತೆಗೆದಿದ್ದು ಐನ್‌ಸ್ಟೈನ್‌ 72ನೇ ಹುಟ್ಟುಹಬ್ಬದಂದು. ಐನ್‌ಸ್ಟೀನ್‌ಗೆ ಗೌರವ ಸೂಚಿಸಲು ಪ್ರಿನ್ಸ್‌ಟನ್ ಕ್ಲಬ್‌ನಲ್ಲಿ ಸಮಾರಂಭ ಆಯೋಜನೆಯಾಗಿತ್ತು. ಅವತ್ತು ಸ್ನೇಹಿತರು, ಸಹೋದ್ಯೋಗಿಗಳೆಲ್ಲಾ ಜಮಾಯಿಸಿದ್ದರು. ಅಲ್ಲಿಯೇ ಸಾಕಷ್ಟು ಪೋಟೋಗಳಿಗೆ ಪೋಸ್ ನೀಡಿ ನಕ್ಕು ನಕ್ಕು ವಿಜ್ಞಾನಿಗೆ ಸುಸ್ತಾಗಿತ್ತು.ಪಾರ್ಟಿ ಮುಗಿದ ಬಳಿಕ ಮನೆಗೆ ಹೊರಡಲು ಸ್ನೇಹಿತರೊಬ್ಬರ ಕಾರು ಹತ್ತಿದ ಮೇಧಾವಿಯನ್ನು ಫೋಟೊಗ್ರಾಫರ್‌ಗಳು ಬಿಡಲಿಲ್ಲ. ಮತ್ತಷ್ಟು ಫೋಟೋ ತೆಗೆಯಲು ಮುಂದಾದಾಗ ನಕ್ಕು ಸುಸ್ತಾಗಿದ್ದ ಐನ್‌ಸ್ಟೈನ್‌ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದರು.

➤ ಐನ್ ಸ್ಟೈಲ್ ಅವರ ವಿಚಿತ್ರ ಡೆಸ್ಸಿಂಗ್ ಅವರ ಹೈಲೆಟ್ ಆಗಿತ್ತು. ಆದರೆ ಅವರ ಕೆದರಿದ ಕೂಡಲೂ ಕೂಡ ಜನರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲ ಅವರು ಎಂದೂ ಕೂಡ ಶೂ ಧರಿಸುವಾಗ ಸಾಕ್ಸ್ ಹಾಕುತ್ತಿರಲಿಲ್ಲವಂತೆ.. ಅದೂ ಕೂಡ ಹೆಚ್ಚಿನವರನ್ನು ಆಕರ್ಷಿಸಿದೆ. ವಿಜ್ಞಾನಿ ಐನ್ ಸ್ಟೈನ್ ಅವರಿಗೆ ಸಾಕ್ಸ್ ಎಂದರೆ ಕಿರಿಕಿರಿ ಮಾಡುವ ಮತ್ತು ನೋವುಂಟು ಮಾಡುವ ವಸ್ತುವಾಗಿತ್ತಂತೆ. ಆದರೆ, ವಿಶ್ವದಲ್ಲಿ ಶೇ. 90 ಕ್ಕಿಂತ ಹೆಚ್ಚು ಜನರು ಸಾಕ್ಸ್ ಹಾಕುವುದನ್ನು ಇಷ್ಪಡುತ್ತಾರೆ.

➤ ಐನ್ ಸ್ಟೈಲ್ ಅವರಿಗೆ ಮ್ಯೂಸಿಕ್ ಅನ್ನು ಬಹಳವಾಗಿ ಇಷ್ಟಪಟ್ಟರು. ಐನ್‌ಸ್ಟೈನ್ಗೆ ವಯೋಲಿನ್ ಮತ್ತು ಸಂಗೀತ ಎಂದರೆ ಅತೀವ ಮೋಹ. ಒಂದೊಮ್ಮೆ ನಾನು ವಿಜ್ಞಾನಿಯಾಗದಿದ್ದರೆ; ಸಂಗೀತಗಾರನಾಗುತ್ತಿದ್ದೆ ಎಂದು ಸ್ವತಃ ಐನ್‌ಸ್ಟೈನ್ ಹೇಳಿಕೊಂಡಿದ್ದರು.

➤ ಐನ್ ಸ್ಟೈನ್ ಅವರು ಅವರ ಸೀನಿಯರ್ ಆಗಿದ್ದ ಲಿಯೋ ಸಿಜಾರ್ಡ್ ಅವರ ಜೊತೆಗೆ ರೆಫ್ರಿಜರೇಟರ್ ಅನ್ನು ಕೂಡ ಸಂಶೋಧನೆ ಮಾಡಿದ್ದರು. ಎರಡು ದಶಕಗಳ ನಂತರ ಅವರ ಥಿಯರಿಯನ್ನು ಅವರು ಪ್ರಕಟಿಸಿದರು. 1930 ರಲ್ಲಿ ಈ ರೆಪ್ರಿಜರೇಟರ್ ಅನ್ನು ಪೇಟೆಂಟ್ ಪಡೆಯಲಾಯಿತು.

➤ ಇಸ್ರೆಲ್ ನ ಮೊದಲ ಅಧ್ಯಕ್ಷ ಚೈಮ್ ವಿಜ್ಮನ್ ಅವರು 1952, ನವೆಂಬರ್ 9 ರಂದು ಮೃತಪಟ್ಟ ನಂತರ ಇಸ್ರೆಲ್ ನ ಎರಡನೇ ಅಧ್ಯಕ್ಷರಾಗುವಂತೆ ಅಲ್ಬರ್ಟ್ ಐನ್ ಸ್ಟೈನ್ ಅವರಿಗೆ ಆಫರ್ ಬಂದಿತ್ತು. ಆದರೆ 73 ವರ್ಷದವರಾಗಿದ್ದ ಐನ್ ಸ್ಟೈನ್ ನಾಜೂಕಿನಿಂದಲೇ ಅವರಿಗೆ ಬಂದ ಆಫರ್ ನ್ನು ನಿರಾಕರಿಸಿದ್ದರು.

 

Leave a Reply

Your email address will not be published. Required fields are marked *

error: Content Copyright protected !!