Wednesday, November 27, 2024
Latest:
Job AlertSpardha Times

ಹಾವೇರಿ ಜಿಲ್ಲೆಯಲ್ಲಿ 152 ಅಂಗನವಾಡಿ ಕಾರ್ಯಕರ್ತೆ & ಸಹಾಯಕಿಯರ ನೇಮಕಾತಿ

Share With Friends

ಹಾವೇರಿ ಜಿಲ್ಲೆಯಲ್ಲಿ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ (Women and Child Development Department Haveri) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆ ಪ್ರಕಾರ, ಒಟ್ಟು 152 ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ದಿನಾಂಕ 15-02-2024ರ ಒಳಗಾಗಿ ಅರ್ಜಿ ಸಲ್ಲಿಸಬಹುದು.

✦ ಹುದ್ದೆಗಳ ವಿವರ :
ಅಂಗನವಾಡಿ ಕಾರ್ಯಕರ್ತೆ- 39
ಅಂಗನವಾಡಿ ಸಹಾಯಕಿ – 113

✦ ವಿದ್ಯಾರ್ಹತೆ :
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ P.U.C. ತೇರ್ಗಡೆ ಹೊಂದಿರಬೇಕು. S.S.L.C.ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

✦ ವಯೋಮಿತಿ:
ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು 19-35 ವರ್ಷ ವಯೋಮಿತಿಯೊಳಗಿನ ಹೆಣ್ಣು ಮಕ್ಕಳು ಹಾಗೂ ಮಹಿಳಾ ಲಿಂಗತ್ಯ. ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು ಹಾಗೂ ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

✦ ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳಿಗೆ ರೂ. . 200/-, ಪ್ರವರ್ಗ-2 ಎ/ 2 ಬಿ/3 ಎ/2ಬಿ ಗೆ ಸೇರಿದ ಅಭ್ಯರ್ಥಿಗಳಿಗೆ. ರೂ. 100/- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್‌ಸೈಟ್ ವಿಳಾಸ https://yadgir.dcourts.gov.in/notice-category/recruitments/ ನಲ್ಲಿ ನೀಡಲಾದ ಲಿಂಕ್ ಮುಖಾಂತರ ಸ್ಟೇಟ್ ಬ್ಯಾಂಕ್ ಇಂಡಿಯಾದ State Bank Collect ಮೂಲಕ Online payment through Net Banking/Credit card/Debit card/UPI fe ಒಂದು ಸೌಲಭ್ಯದ ಮೂಲಕ ಪಾವತಿಸತಕ್ಕದ್ದು.( ಯಾವುದೇ ಡಿಡಿ, ಚಲನ್, ಪೋಸ್ಟ್‌ಲ್ ಆರ್ಡರ್, ಮನಿ ಆರ್ಡ‌್ರಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ನಿಗದಿತ ಶುಲ್ಕವನ್ನು ಪಾವತಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.)

ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ : Click Here


ಇಸ್ರೋದಲ್ಲಿ 224 ವಿವಿಧ ಹುದ್ದೆಗಳ ನೇಮಕಾತಿ : ISRO Recruitment 2024

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗಳ ನೇಮಕಾತಿ
10th, ITI ಪಾಸಾದವರಿಗೆ ವಾಯುವ್ಯ ರೈಲ್ವೆಯಲ್ಲಿ ಉದ್ಯೋಗಾವಕಾಶ
ಯಾದಗಿರಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಜವಾನ ಹುದ್ದೆಗಳ ನೇಮಕಾತಿ

Leave a Reply

Your email address will not be published. Required fields are marked *

error: Content Copyright protected !!