ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -3 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಹೃದಯದ ಈ ಭಾಗದಲ್ಲಿ ಅಶುದ್ಧ ರಕ್ತ ಸಂಗ್ರಹಣೆಯಾಗುತ್ತದೆ..?
ಎ. ಬಲಹತ್ಕರ್ಣ
ಬಿ. ಬಲಹೃತ್ಕುಕ್ಷಿ
ಸಿ. ಎಡಹೃತ್ಕರ್ಣ
ಡಿ. ಎಡಹೃತ್ಕುಕ್ಷಿ
2. ಆಹಾರ ಸರಪಳಿಯಲ್ಲಿ ಇವು ಉತ್ಪಾದಕಗಳು..
ಎ. ಶಾಖಾಹಾರಿಗಳು
ಬಿ. ಸೂಕ್ಷ್ಮ ಜೀವಿಗಳು
ಸಿ. ಸಸ್ಯಾಹಾರಿಗಳು
ಡಿ. ಹಸಿರುಸಸ್ಯಗಳು
3. ಸ್ಕರ್ವಿ – ಈ ಜೀವಸತ್ವದ ನ್ಯೂನತಾ ಕಾಯಿಲೆ..
ಎ. ಜೀವಸತ್ವ – ಬಿ
ಬಿ. ಜೀವಸತ್ವ- ಕೆ
ಸಿ. ಜೀವಸತ್ವ -ಸಿ
ಡಿ. ಜೀವಸತ್ವ- ಡಿ
4. ರಕ್ತಹೆಪ್ಪುಗಟ್ಟುವಿಕೆಯಲ್ಲಿ ಅವಶ್ಯಕವಾದ ಅಂಶಗಳು..
ಎ. ಕಿರುತಟ್ಟೆಗಳು
ಬಿ. ಫೈಬ್ರಿನೊಜಿನ್
ಸಿ. ಜೀವಸತ್ವ- ಕೆ
ಡಿ. ಮೇಲಿನ ಎಲ್ಲವೂ
5. ಕುದುರೆಯ ಪ್ರಪ್ರಥಮ ಪೂರ್ವಹ ಇದು..
ಎ. ಈಯೋಹಿಪ್ಟಸ್
ಬಿ. ಈಸೋಹಿಪ್ಟಸ್
ಸಿ. ಮೇರಿಚಪ್ಪಸ್
ಡಿ. ಈಕ್ವಿಸ್
6. ಅಂತಃಪ್ರಜನವು ಸಾಮಾನ್ಯವಾಗಿ ಈ ಜೀವಿಗಳಲ್ಲಿ ಉಂಟಾಗುತ್ತದೆ.?
ಎ. ಬೇರೆ ಬೇರೆ ಪ್ರಭೇಧಗಳು
ಬಿ. ಒಂದೇ ಪ್ರಬೇಧಗಳು
ಸಿ. ಒಂದೇ ಜಾತಿ
ಡಿ. ಒಂದೇ ಕುಂಟುಂಬ
7. ಪರಿಸರವನ್ನು ಬಳಸಿ ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸಿಕೊಳ್ಳುವ ಜೀವಿಗಳನ್ನು ಹೀಗೆನ್ನುತ್ತಾರೆ?
ಎ. ಉತ್ಪಾದಕರು
ಬಿ. ಬಯೋಟ
ಸಿ. ಭಕ್ಷಕರು
ಡಿ. ಗ್ರಾಹಕರು
8. ಅಮೀಬಾವು ಹೀಗೆ ಪ್ರಜನನಿಸುತ್ತದೆ..?
ಎ.ಅಂಕುರಣ
ಬಿ. ದ್ವಿವಿದಲನ
ಸಿ. ತುಂಡೀಕರಣ
ಡಿ. ಲೈಂಗಿಕ ಪ್ರಜನನ
9. ಮಾನವನಲ್ಲಿ ಅತಿದಪ್ಪ ಚರ್ಮವು ಎಲ್ಲಿದೆ..?
ಎ. ಅಂಗೈ
ಬಿ. ತೊಡೆ
ಸಿ. ಅಂಗಾಲು
ಡಿ. ಹೆಬ್ಬೆರಳು
10. ಸಸ್ತನಿಗಳ ಹಲ್ಲಿನ ಬಹಳಷ್ಟು ಭಾಗವು ಇದರಿಂದ ಉಂಟಾಗಿದೆ..?
ಎ. ಡೆಂಟಿನ್
ಬಿ. ಎನಾಮಲ್
ಸಿ. ಪೆಲ್ಪ್ಕುಹರ್
ಡಿ. ಬೇರು
11. ‘ರಿಕೆಟ್ಸ್’ ಒಂದು ವಿಧದ….
ಎ.ಸಾಂಕ್ರಾಮಿಕ ರೋಗ
ಬಿ. ಅನುವಂಶೀಯ ರೋಗ
ಸಿ. ಸೋಹತ್ರೋಗ
ಡಿ. ನ್ಯೂನತಾ ರೋಗ
12. ಉಸಿರಾಟ ಪ್ರಕ್ರಿಯೆ ಇದಕ್ಕೆ ಸಂಬಂಧಿಸಿದೆ..?
ಎ. ಆಕ್ಸಿಜನ್ ಬಿಡುಗಡೆ
ಬಿ. ಇಂಗಾಲಡೈ ಆಕ್ಸೈಡ್ ಬಿಡುಗಡೆ
ಸಿ. ಶಕ್ತಿಯ ಬಿಡುಗಡೆ
ಡಿ. ಆಕ್ಸಿಜನ್ ತೆಗೆದುಕೊಳ್ಳುವುದು
13. ವೈಟ್ಲೈನ್ ಪೊರೆ ಇದರೊಂದಿಗಿರುತ್ತದೆ..
ಎ. ಲಿಂಗಕೋಶಗಳು
ಬಿ. ಅಂಡಾಣುಗಳು ಮಾತ್ರ
ಸಿ. ವೀರ್ಯಾಣು ಮಾತ್ರ
ಡಿ. ಎಲ್ಲಾ ವಿಧದ ಜೀವಕೋಶಗಳಲ್ಲಿ
14. ಪ್ರತಿಜನಕ ಎಂದರೇನು?
ಎ. ಅದು ಒಂದು ನಂಜು ಪದಾರ್ಥ
ಬಿ. ಅದು ಒಂದು ಫಾಸ್ಪೋಲಿಪಿಡು
ಸಿ. ಅದು ಒಂದು ರಕ್ತದ ಗುಂಪು
ಡಿ. ಅದು ಒಂದು ಪ್ರೋಟೀನು
15. ರೋಗವೊಂದರಿಂದ ಸುಧಾರಿಸಿಕೊಂಡ ಬಳಿಕ ದೇಹವು ಪಡೆದುಕೊಳ್ಳುವ ರೋಗರಕ್ಷೆಯನ್ನು ಹೀಗೆನ್ನುತ್ತಾರೆ..?
ಎ. ಚುರುಕು ರೋಗರಕ್ಷೆ
ಬಿ. ಯಾಂತ್ರಿಕ ರೋಗರಕ್ಷೆ
ಸಿ. ಎ ಮತ್ತು ಬಿ ಎರಡೂ
ಡಿ. ಯಾವೂದು ಅಲ್ಲ
# ಉತ್ತರಗಳು :
1. ಎ. ಬಲಹತ್ಕರ್ಣ
2. ಡಿ. ಹಸಿರುಸಸ್ಯಗಳು
3. ಸಿ. ಜೀವಸತ್ವ -ಸಿ
4. ಡಿ. ಮೇಲಿನ ಎಲ್ಲವೂ
5. ಎ. ಈಯೋಹಿಪ್ಟಸ್
6. ಬಿ. ಒಂದೇ ಪ್ರಬೇಧಗಳು
7. ಎ. ಉತ್ಪಾದಕರು
8. ಬಿ. ದ್ವಿವಿದಲನ
9. ಸಿ. ಅಂಗಾಲು
10. ಎ. ಡೆಂಟಿನ್
11. ಡಿ. ನ್ಯೂನತಾ ರೋಗ
12. ಸಿ. ಶಕ್ತಿಯ ಬಿಡುಗಡೆ
13. ಬಿ. ಅಂಡಾಣುಗಳು ಮಾತ್ರ
14. ಡಿ. ಅದು ಒಂದು ಪ್ರೋಟೀನು
15. ಎ. ಚುರುಕು ರೋಗರಕ್ಷೆ
# ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -1 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -2 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ
# ಜೀವಕೋಶ ಅಧ್ಯಯನ ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಸೂಕ್ಷ್ಮಾಣು ಜೀವಿಗಳಿಗೆ ಸಂಬಂಧಿಸಿದ 45 ಪ್ರಶ್ನೆಗಳು ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )