ಪರಿಸರ ವ್ಯವಸ್ಥೆ – ಬಯೋಮ್
• ಬಯೋಮ್: ಒಂದೇ ರೀತಿಯ ಹವಾಮಾನ ಪರಿಸ್ಥಿತಿಯನ್ನು ಹೊಂದಿರುವ ವಿಶಾಲವಾದ ಭೌಗೋಳಿಕ ಪ್ರದೇಶದಲ್ಲಿರುವ ಪರಿಸರ ವ್ಯವಸ್ಥೆಗಳಿಗೆ “ ಬಯೋಮ್’ ಎಂದು ಹೆಸರು.
• ಬಯೋಮ್ಗಳ ಮೂಲಭೂತ ವರ್ಗಿಕರಣ
1. ಭೂಮಿಯ(ನೆಲದ) ಬಯೋಮ್ಗಳು
2. ಜಲ ಬಯೋಮ್ಗಳು
• ಬಯೋಮ್ಗಳ ವಿಧಗಳು
1. ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು ಅಥವಾ ಮಳೆಕಾಡುಗಳು
2. ಉಷ್ಣವಲಯದ ಮತ್ತು ಸಮಶೀತೋಷ್ಣವಲಯದ ಪರ್ಣಪಾತಿ ಕಾಡುಗಳು
3. ಹುಲ್ಲುಗಾವಲು ಬಯೋಮ್
4. ಮರುಭೂಮಿ ಬಯೋಮ್
5. ಟಂಡ್ರಾ ಬಯೋಮ್
• ಪರ್ಮಾಫ್ರಾಸ್ಟಾ : ಟಂಡ್ರಾ ಬಯೋಮ್ನ ಮಣ್ಣಿನ ಕೆಳಭಾಗದ ಶೀತಲವಾದ ಘನೀಕೃತ ಪದರಕ್ಕೆ “ಪರ್ಮಾಫ್ರಾಸ್ಟ್” ಎಂದು ಹೆಸರು.
• ಜಲಬಯೋಮ್ಗಳ ಮೂರು ಗುಂಪಿನ ಜೀವಿಗಳು
1. ಪ್ಲವಕಗಳು
ನೀರಿನ ಮೇಲ್ಭಾಗದಲ್ಲಿ ಜಡವಾಗಿ ತೇಲುತ್ತಿರುವ ಸೂಕ್ಷ್ಮ ಗಾಥ್ರದ ಜೀವಿಗಳನ್ನು “ ಪ್ಲವಕಗಳು” ಎಂದು ಕರೆಯಲಾಗುತ್ತದೆ. ಇವುಗಳನ್ನು ಸಸ್ಯ ಪ್ಲವಕಗಳು, ಪ್ರಾಣಿ ಪ್ಲವಕಗಳು ಎಂದು ವಿಂಗಡಿಸಬಹುದು.
ಸಸ್ಯಪ್ಲವಕಗಳು ಪತ್ರಹರಿತ್ತನ್ನು ಹೊಮದಿದ್ದು, ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ನಡೆಸುವ ಸಾಮಥ್ರ್ಯವನ್ನು ಪಡೆದಿವೆ. ಇವು ಜಲಬಯೋಮ್ಗಳ ಪ್ರಮುಖ ಉತ್ಪಾದಕ ಜೀವಿಗಳು. ಇವು ಜಲಬಯೋಮ್ನ ಎಲ್ಲಾ ಪ್ರಾಣಿಗಳ ಆಹಾರ ಶಕ್ತಿಯ ಮೂಲಧಾರವಾಗಿವೆ.
ಪ್ರಾಣಿ ಪ್ಲವಕಗಳು ಭಕ್ಷಕ ಜೀವಿಗಳಾಗಿದ್ದು, ಇವು ತಮ್ಮ ಆಹಾರಕ್ಕಾಗಿ ಸಸ್ಯಪ್ಲವಕಗಳನ್ನು ಅವಲಂಬಿಸಿವೆ.
ಉದಾ : ಪ್ರೋಟೋಸೋವಾಗಳು, ಏಡಿ, ಸೀಗಡಿ ಮುಂತಾದ ಪ್ರಾಣಿಗಳ ಡಿಂಭಗಳು.
2. ನೆಕ್ಟಾನ್ಗಳು
ನೀರಿನಲ್ಲಿ ಈಜಾಡುತ್ತಾ ಅತ್ಯಂತ ಚಟುವಟಿಕೆಯಿಂದ ಕೂಡಿದ ಪ್ರಾಣಿಗಳು ಈ ಗುಂಪಿಗೆ ಸೇರುತ್ತವೆ. ಇವು ನೀರಿನ ಮಧ್ಯಭಾಗದಲ್ಲಿ ವಾಸಿಸುತ್ತವೆ.
ಉದಾ : ಸೀಗಡಿ ಮುಂತಾದ ಸಂಧೀಪದಿಗಳು, ಬಗೆಬಗೆಯ ಮೀನುಗಳು, ಹಾವುಗಳು, ಮೃದ್ವಂಗಿಗಳು, ಡಾಲ್ಫಿನ್. ತಿಮಿಂಗಲ ಮುಂತಾದ ಜಲಚರಗಳು.
3. ಬೆಂಥಾಸ್ಗಳು
ನೀರಿನ ತಳಭಾಗದಲ್ಲಿ ತೆವಳುತ್ತಾ ಚಲಿಸುವ ಪ್ರಾಣಿಗಳು ಈ ಗುಂಪಿಗೆ ಸೇರುತ್ತವೆ. ಇವು ಚಲಿಸಲಾರವು. ಇವುಗಳಿಗೆ ಚಲನಾಂಗಗಳಿಲ್ಲ. ಇವು ನೀರಿನ ತಳಬಾಗದಲ್ಲಿರುವ ಬಂಡೆಗಳಿಗೆ ಅಥವಾ ಇತರ ಯಾವುದಾದರೂ ವಸ್ತುವಿಗೆ ಅಂಟಿಕೊಂಡು ವಾಸಿಸುತ್ತವೆ. ಕೆಲವು ಜೀವಿಗಳು ನಿಧಾನವಾಗಿ ತೆವಳುತ್ತಾ ಚಲಿಸುತ್ತವೆ. ಇವು ಮೇಲಿನಿಂದ ಸತ್ತು ಬಿದ್ದಂತಹ ಜೀವಿಗಳನ್ನು ತಿಂದು ಬದುಕುತ್ತವೆ.
ಉದಾ :ಸ್ಪಂಜುಪ್ರಾಣಿಗಳು, ಹವಳಗಳು, ಕೆಲವು ಮ್ರದ್ವಂಗಿಗಳು, ನಕ್ಷತ್ರಮೀನು, ಪೆಡಸುನಕ್ಷತ್ರ ಮುಂತಾದ ಕಂಟಕಚರ್ಮಿಗಳು ಹಾಗೂ ಕೆಲವು ಬಗೆಯ ಮೀನುಗಳು.
• ಜಲಬಯೋಮ್ಗಳಲ್ಲಿನ ವಲಯಗಳು
1. ದ್ಯುತಿವಲಯ
ಸೂರ್ಯನ ಬೆಳಕು ಜಲಬಯೋಮ್ನ ನೀರಿನ ಆಳದಲ್ಲಿ ಎಲ್ಲಿಯವರೆಗೆ ಪ್ರವೇಶಿಸಬಲ್ಲದೋ. ಅಲ್ಲಿಯವರೆಗಿನ ಜಲಪ್ರದೇಶವನ್ನು ‘ ದ್ಯುತಿವಲಯ’ ಎಂದು ಗುರುತಿಸಲಾಗಿದೆ.
ಈ ವಲಯದಲ್ಲಿ ಸಾಮಾನ್ಯವಾಗಿ ಜೀವಿಗಳು ಬೃಹತ್ ಸಂಖ್ಯೆಯಲ್ಲಿ ಮತ್ತು ವೈವಿಧ್ಯದಲ್ಲಿ ಕಂಡುಬರುತ್ತವೆ. ಇಲ್ಲಿ ಉತ್ಪಾದಕ ಜೀವಿಗಳು ಯಥೇಚ್ಛವಾಗಿರುದರಿಂದ, ಅವುಗಳನ್ನು ಅವಲಂಬಿಸಿರುವ ಭಕ್ಷಕ ಜೀವಿಗಳೂ ಸಹ ಯಥೇಚ್ಛವಾಗಿ ಕಂಡುಬರುತ್ತವೆ.
ಭೂಮಿಯ ಮೇಲೆ ನಡೆಯುವ ದ್ಯುತಿಸಂಶ್ಲೇಷಣೆಯ 90 % ರಷ್ಟು ಸಮುದ್ರ ಮತ್ತು ಸಾಗರಗಳ ದ್ಯುತಿವಲಯದಲ್ಲಿಯೇ ಆಗುತ್ತದೆ.
2. ಅಬಿಸ್
ಸೂರ್ಯನ ಬೆಳಕು ಪ್ರವೇಶಿಸಲಾರದ ನೀರಿನ ತಳ ಭಾಗಕ್ಕೆ ‘ ಅಬಿಸ್’ ಎಂದು ಹೆಸರು. ಇದು ಅಂಧಕಾರ ವಲಯ. ಇಲ್ಲಿ ಉತ್ಪಾದಕ ಜೀವಿಗಳು ಇರಲು ಸಾಧ್ಯವೇ ಇಲ್ಲ. ಏಕೆಂದರೆ ಇಲ್ಲಿಗೆ ಸೂರ್ಯನ ಬೆಳಕು ಪ್ರವೇಶಿಸುವುದಿಲ್ಲ. ಹೀಗಾಗಿ ಈ ವಲಯದಲ್ಲಿ ಭಕ್ಷಕ ಪ್ರಾಣಿಗಳು ಮಾತ್ರ ಕಂಡುಬರುತ್ತವೆ. ಇಲ್ಲಿನ ಪ್ರಾಣಿಗಳು ದ್ಯುತಿವಲಯದಲ್ಲಿನ ಇತರ ಜೀವಿಗಳನ್ನು ಭಕ್ಷಿಸುತ್ತವೆ. ಇಲ್ಲವೇ ದ್ಯುತಿ ವಲಯದಲ್ಲಿನ ಜೀವಿಗಳು ಸತ್ತಾಗ ಅವುಗಳನ್ನು ಭಕ್ಷಿಸಿ ತಮ್ಮ ಆಹಾರವನ್ನು ಪಡೆಯುತ್ತವೆ.