ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
1. ಶ್ವಾಸಕೋಶಗಳಿಂದ ಆಮ್ಲಜನಕವನ್ನು ಸಾಗಣಿಕೆ ಮಾಡುವ ರಕ್ತದ ಘಟಕ – ಹೀಮೋಗ್ಲೋಬಿನ್
2. ರಕ್ತಪರಿಚಲನಾವ್ಯೂಹದ ಮುಖ್ಯ ಕಾರ್ಯ- ಆಹಾರ ಮತ್ತು ಆಮ್ಲಜನಕ ಸಾಗಾಣಿಕೆ
3. ಹೃದಯದ ಕಡೆಗೆ ರಕ್ತವನ್ನು ಒಯ್ಯುವ ನಾಳಗಳು– ಅಭಿದಮನಿಗಳು
4. ಹೃದಯದ ಕಡೆಯಿಂದ ದೇಹಕ್ಕೆ ರಕ್ತವನ್ನು ಒಯ್ಯುವ ನಾಳಗಳು– ಅಪದಮನಿಗಳು
5. ಅತಿ ಚಿಕ್ಕ ರಕ್ತನಾಳಗಳು – ಲೋಮನಾಳ
6. ವಸ್ತುಗಳ ವಿನಿಮಯವಾಗುವುದು ಈ ರಕ್ತನಾಳಗಳಲ್ಲಿ – ಲೋಮನಾಳಗಳಲ್ಲಿ
7. ಮನುಷ್ಯನ ದೇಹದ ತೂಕದಲ್ಲಿ ರಕ್ತದ ಪ್ರಮಾಣ – ಶೇ. 8
8. ರಕ್ತದಲ್ಲಿರುವ ಮಾತೃಕೆ – ಪ್ಲಾಸ್ಮಾ
9. ರಕ್ತದ ಪ್ಲಾಸ್ಮಾದಲ್ಲಿರುವ ಎರಡು ಪ್ರೋಟಿನ್ಗಳು – ಫೈಬ್ರಿನೊಜೆನ್ ಮತ್ತು ಪ್ರೋಥ್ರಾಂಬಿನ್
10. ರಕ್ತವು ಸಾಮಾನ್ಯವಾಗಿ ಹೆಪ್ಪುಗಟ್ಟಲು ತೆಗೆದುಕೊಳ್ಳುವ ಸಮಯ – 2-3 ನಿಮಿಷಗಳು
11. ಕೆಂಪು ರಕ್ತಕಣಗಳು ಎಲ್ಲಿ ಉತ್ಪತ್ತಿಯಾಗುತ್ತವೆ– ಅಸ್ಥಿಮಜ್ಜೆ
12. ಕೆಂಪು ರಕ್ತ ಕಣಗಳಲ್ಲಿರುವ ವಸ್ತು– ಹಿಮೋಗ್ಲೋಬಿನ್
13. ಹಿಮೋಗ್ಲೋಬಿನ್ನಲ್ಲಿರುವ ಖನಿಜ- ಕಬ್ಬಿಣ
14. ಬಿಳಿಯ ರಕ್ತಕಣಗಳು ಇಲ್ಲಿ ಉತ್ಪತ್ತಿಯಾಗುತ್ತವೆ- ಅಸ್ಥಿಮಜ್ಜೆ ಮತ್ತು ಲಿಂಫ್ ಗ್ರಂಥಿಗಳು
15. ರೋಗಾಣುಗಳ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ಕೊಡುವ ರಕ್ತ ಕಣಗಳು – ಬಿಳಿಯ ರಕ್ತ ಕಣಗಳು
16. ರೋಗಾಣುಗಳ ವಿರುದ್ಧ ಹೋರಾಡಲು ಬಿಳಿಯ ರಕ್ತಕಣಗಳಿಂದ ಬಿಡುಗಡೆಯಾಗುವ ವಸ್ತುಗಳು- ಆಂಟಿಬಾಡಿ (ಪ್ರತಿಕಾಯಗಳು)
17. ಕವಾಟಗಳಿಲ್ಲದ ರಕ್ತನಾಳಗಳು– ಅಪಧಮನಿಗಳು
18. ಕವಾಟಗಳಿರುವ ರಕ್ತನಾಳಗಳು – ಅಭಿಧಮನಿಗಳು
19. ಹೃದಯವನ್ನು ಆವರಿಸಿರುವ ಪೊರೆ- ಹೃದಯಾವರಣ(ಪೆರಿಕಾರ್ಡಿಯಂ)
20. ಹೃದಯದ ಪೆರಿಕಾರ್ಡಿಯಂ ಪೊರೆಯ ನಡುವೆ ಇರುವ ದ್ರವ- ಪೆರಿಕಾರ್ಡಿಯಲ್ ದ್ರವ
21. ಮಾನವನ ಹೃದಯದಲ್ಲಿರುವ ಕೋಣೆಗಳ ಸಂಖ್ಯೆ– 4
22. ಹೃದಯದ ಬಲಹೃತ್ಕರ್ಣ ಮತ್ತು ಬಲ ಹೃತ್ಕಕ್ಷಿಯ ನಡುವಿನ ಕವಾಟ – ತ್ರಿದಳ ಕವಾಟ
23. ಹೃದಯದ ಎಡ ಹೃತ್ಕರ್ಣ ಮತ್ತು ಎಡ ಹೃತ್ಕಕ್ಷಿಯ ನಡುವಿನ ಕವಾಟ- ದ್ವಿದಳ ಕವಾಟ
24. ತ್ರಿದಳ ಮತ್ತು ದ್ವಿದಳ ಕವಾಟಗಳ ಕಾರ್ಯ- ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ.
25. ಹೃದಯದ ಬಲ ಹೃತ್ಕಕ್ಷಿಯಿಂದ ಹೊರಡುವ ರಕ್ತನಾಳ– ಪುಪ್ಪಸಕ ಅಪಧಮನಿ
26. ಹೃದಯದ ಎಡ ಹೃತ್ಕರ್ಣದಿಂದ ಹೊರಡುವ ರಕ್ತನಾಳ- ಮಹಾ ಅಪಧಮನಿ
27. ಹೃದಯದ ಸ್ನಾಯುಗಳಿಗೆ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ– ಕರೋನರಿ ಅಪಧಮನಿ
28. ಹೃದಯದ ಸ್ನಾಯುಗಳಿಂದ ರಕ್ತವನ್ನು ತರುವ ರಕ್ತನಾಳ- ಕರೋನರಿ ಸೈನಸ್( ಅಭಿಧಮನಿ)
29. ಮೂತ್ರಪಿಂಡಗಳಿಗೆ ರಕ್ತವನ್ನು ತರುವ ರಕ್ತನಾಳ- ರೀನಲ್ ಅಪಧಮನಿ
30. ಮೂತ್ರಪಿಂಡಗಳಿಂದ ರಕ್ತವನ್ನು ತರುವ ರಕ್ತನಾಳ– ರೀನಲ್ ಅಭಿಧಮನಿ
31. ಹೃದಯದ ಸ್ನಾಯುಗಳ ಸಂಕೋಚನ ಕ್ರಿಯೆ– ಸಿಸ್ಬೋಲ್
32. ಹೃದಯದ ಸ್ನಾಯುಗಳ ವಿಕಸನಕ್ರಿಯೆ– ಡಯಾಸ್ಟೋಲ್
33. ರಕ್ತವು ರಕ್ತನಾಳಗಳಲ್ಲಿ ಹರಿಯುವಾಗ ರಕ್ತನಾಳದ ಒಳಗೋಡೆಗಳ ಮೇಲೆ ಉಂಟು ಮಾಡುವ ಒತ್ತಡ – ರಕ್ತದ ಒತ್ತಡ( ಬಿ.ಪಿ)
34. ರಕ್ತವು ಅಪಧಮನಿಯ ಗೋಡೆಯಲ್ಲಿ ಉಂಟುಮಾಡುವ ಅಲೆಯಂತಹ ಚಲನೆ- ನಾಡಿ ಮಿಡಿತ(ಪಲ್ಸ್)
35. ಆರೋಗ್ಯವಂತ ಮಾನವನ ನಾಡಿಮಿಡಿತ ಎಷ್ಟು- 72 ನಿಮಿಷ
36. ಒಂದು ಸಂಪೂರ್ಣ ಪರಿಚಲನೆಗೆ ರಕ್ತವು ಎಷ್ಟು ಬಾರಿ ಹೃದಯವನ್ನು ಹಾದು ಹೋಗಬೇಕು– 2 ಬಾರಿ
37. ಮಾನವನ ದೇಹದಲ್ಲಿ ರಕ್ತದ ಪರಿಚಲನೆಯನ್ನು ಕಂಡುಹಿಡಿದವರು – ವಿಲಿಯಂ ಹಾರ್ವೆ
38. ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತಪರಿಚಲನೆಯನ್ನು ಹೀಗೆನ್ನುವರು- ಪುಪ್ಪಸಕ ಪರಿಚಲನೆ
39. ಹೃದಯ ಮತ್ತು ದೇಹದ ವಿವಿಧ ಅಂಗಾಂಶಗಳ ನಡುವಿನ ರಕ್ತ ಸಂಚಾರದ ಪಥಕ್ಕೆ ಹೀಗೆನ್ನುವರು- ದೈಹಿಕ ಪರಿಚಲನೆ
40. ಹೃದಯದ ಸ್ನಾಯುಗಳಿಗೆ ಅಸಮರ್ಪಕ ರಕ್ತ ಸರಬರಾಜಾಗುವುದರಿಂದ ಉಂಟಾಗುವ ತೊಂದರೆ- ಹೃದಯಾಘಾತ
41. ಹೃದಯ ರಕ್ತವನ್ನು ಸರಬರಾಜು ಮಾಡುವ ಕರೋನರಿ ಅಪಧಮನಿಗಳಲ್ಲಿ ಕೊಲೆಸ್ಟರಾಲ್ ಶೇಖರಣೆಯಾದಾಗ ಅವುಗಳನ್ನು ಬದಲಿಸುವ ಶಸ್ತ್ರಚಿಕಿತ್ಸೆ – ಬೈಪಾಸ್ ಶಸ್ತ್ರ ಚಿಕಿತ್ಸೆ
42. ರೋಗಿಗೆ ರಕ್ತ ನೀಡುವುದನ್ನು ಹೀಗೆನ್ನುವರು– ರಕ್ತಪೂರಣ
43. ಬಿಳಿಯ ರಕ್ತಕಣಗಳ ಸಂಖ್ಯೆ ಅತೀ ಹೆಚ್ಚಾದಾಗ ಉಂಟಾಗುವ ತೊಂದರೆ- ರಕ್ತದ ಕ್ಯಾನ್ಸರ್(ಲ್ಯುಕೇಮಿಯಾ)
44. ಹೃದಯ ಬಡಿತವನ್ನು ಪ್ರಚೋದಿಸುವ ಮತ್ತು ನಿಯಂತ್ರಿಸುವ ರಚನೆ- ಸೈನೋಅಟ್ರಿಯಲ್ನೋಡ್( ಪೇಸ್ಮೇಕರ್)
45. ಮಾನವನ ರಕ್ತದ 4 ಗುಂಪುಗಳು – ಎ, ಬಿ, ಎಬಿ, ಒ