Friday, December 27, 2024
Latest:
GKScienceSpardha Times

ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು..? (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತ ಮಾಹಿತಿ)

Share With Friends

ಮಾನವ ರಕ್ತ ಕಣಗಳು- ಎರಿಥ್ರೋಸೈಟ್ಸ್; ನ್ಯೂಟ್ರೋಫಿಲ್; ಎಸಿನೋಫಿಲ್; ಲಿಂಫೋಸೈಟ್ ‘ರಕ್ತ’ ದೇಹವೆಂಬ ವಾಹನದಲ್ಲಿ ಜೀವಕಣಗಳನ್ನು ಹೊತ್ತೊಯ್ಯುವ ರಕ್ತವೇ ಎಲ್ಲಾ ಜೀವಿಗಳ ಪೋಷಕ ಶಕ್ತಿ. ಒಂದು ಅಮೂಲ್ಯ ಜೀವದ್ರವ. ಅದಕ್ಕೆ ರಕ್ತವನ್ನು ಒಂದು ವಿಶಿಷ್ಟ ವರ್ಗಕ್ಕೆ ಸೇರಿದ, “ಕನೆಕ್ಟೀವ್ ಟಿಶ್ಯೂ” ಎನ್ನುತ್ತಾರೆ.

ಸುಮಾರು 70 ಕಿ. ತೂಗುವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಸುಮಾರು 5 ಲೀಟರ್ ನಷ್ಟು ರಕ್ತವಿರುತ್ತದೆ. (ಒಟ್ಟುತೂಕದ ಶೇ. 9%) ಎಲುಬಿನ ಮಜ್ಜೆ ರಕ್ತತಯಾರಿಸುವ ಕಾರ್ಖಾನೆ. ಇದು ದೇಹದ ಮೂಳೆಯೊಳಗಿನ ಟೊಳ್ಳುಭಾಗದಲ್ಲಿ ಅಡಗಿ ಕುಳಿತಿರುತ್ತದೆ. ಹುಟ್ಟುವಾಗ ಸುಮಾರು 70 ಮಿ. ಲೀಟರ್ ತೂಗುವ ಮಜ್ಜೆ, ವಯಸ್ಕರಲ್ಲಿ ಸುಮಾರು, 4 ಲೀಟರ್ ನಷ್ಟಾಗುತ್ತದೆ.

ಆಮ್ಲಜನಕವನ್ನು ಶ್ವಾಸಕೋಶದಿಂದ ದಹದ ಎಲ್ಲಾ ಅಂಗಾಂಶಗಳಿಗೂ, ಇಂಗಾಲದ ಡೈ ಆಕ್ಸೈಡನ್ನು ದೇಹದ ಎಲ್ಲಾ ಅಂಗಗಳಿಂದ ಶ್ವಾಸಕೋಶಕ್ಕೂ ತರುವ ಕೆಲಸಮಾಡುತ್ತವೆ. ಪಚನಗೊಂಡ ಆಹಾರ ಪದಾರ್ಥಗಳನ್ನು ಕರುಳಿನಿಂದ ಅಂಗಾಂಗಗಳಿಗೆ, ಒದಗಿಸುತ್ತದೆ.

ತಿಂದ ಆಹಾರದಲ್ಲಿರುವ ವಿಟಮಿನ್ ಶಕ್ತಿ, ಕೊಬ್ಬಿನಂಶ ಹಾಗೂ ದೇಹದಲ್ಲೇ ಉತ್ಪತ್ತಿಯಾಗುವ ಹಾರ್ಮೋನ್ ಗಳನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸಲು ಸಹಾಯಮಾಡುತ್ತವೆ. ದೇಹಕ್ಕೆ ಬೇಡವಾದ ವಸ್ತುಗಳನ್ನು ಅಂಗಾಶಗಳಿಂದ ಪಡೆದು, ಮೂತ್ರಪಿಂಡ, ಶ್ವಾಶಕೋಶ, ಹಾಗೂ ಕರುಳಿನಮುಖಾಂತರ, ದೇಹದಿಂದ ಹೊರದೂಡುತ್ತದೆ.

ದೇಹಕ್ಕೆ ಅತ್ಯವಶ್ಯಕವಾದ, ನೀರಿನ, ಆಮ್ಲ- ಪ್ರತ್ಯಾಮ್ಲ, ಹಾಗೂ ಚರಾಣುಗಳ ಸಮತೋಲನದೊಂದಿಗೆ, ದೇಹದ ಉಷ್ಣತೆಯನ್ನು 98.4-98.6 ಫ್ಯಾರನ್ ಹೀಟ್ (37 ಡಿಗ್ರಿ ಸ್ಯಾಲ್ಸಿಯಸ್) ನಲ್ಲಿರುವಂತೆ ಕಾಪಾಡುತ್ತದೆ. ದೇಹದ ಸಿಪಾಯಿಯಾಗಿ ರಕ್ಷಣೆ ಮಾಡುವುದಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ರಕ್ತದಲ್ಲಿ ಪ್ರೋಟೀನ್ ಗಳಿವೆ. ಫೈಬ್ರನೋಜನ್, ಪ್ರೋಥ್ರಾಂಬಿನ್ ಗಳು, ರಕ್ತ ಹೆಪ್ಪು ಕಟ್ಟಲು ಸಹಾಯಮಾಡುತ್ತವೆ. ಆಲ್ಬುಮಿನ್ ರಕ್ತ ಹಾಗೂ ಉಳಿದ ಅಂಗಾಂಗಗಳ ನಡುವಿನ ಉಚ್ಚಾಲನಿಕ ಒತ್ತಡವನ್ನು ಕಾಪಾಡುತ್ತದೆ. ರಕ್ತದ ಸ್ನಿಗ್ಧತ್ವವನ್ನು ಇದು ಕಾಪಾಡುತ್ತದೆ. ದೇಹದ ರಕತದೊತ್ತಡ ನಿಯಂತ್ರಣಕ್ಕೆ ಅತ್ಯಾವಶ್ಯಕ.

ಬಿಳಿ ರಕ್ತಕಣಗಳು ಟ್ರಿಫೋನ್ಸ್ ಎಂಬ ವಸ್ತುವನ್ನು ರಕ್ತದಲ್ಲಿನ ಪ್ರೋಟೀನ್ ಜೊತೆಗೂಡಿ ತಯಾರಿಸುತ್ತವೆ. ಇದು ಅಂಗಾಂಗಳ ಬೆಳವಣಿಗೆಗೂ ಪೋಷಣೆಗೂ ಅತ್ಯಗತ್ಯ. ಗಾಮಾಗ್ಲಾಬ್ಯುಲಿನ್ ಪ್ರತಿರೋಧಕ ವಸ್ತುವನ್ನು ತಯಾರಿಸಿ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತವೆ. ರಕ್ತದಲ್ಲಿ ಸುಮಾರು 13 ಹೆಪ್ಪುಗಟ್ಟುವ ಅಂಶಗಳಿವೆ. ರಕ್ತಸ್ರಾವವಾಡೊಡನೆಯೇ ಕಾರ್ಯೋನ್ಮುಖವಾಗುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸಿ ಅಪಾಯವನ್ನು ತಪ್ಪಿಸುತ್ತವೆ. ರಕ್ತ ಸುರುಯುವುದು ಸುಮಾರು 1 ರಿಂದ 6 ನಿಮಿಷಗಳಲ್ಲಿ. ಹೆಪ್ಪುಗಟ್ಟಲು ತಗಲುವ ವೇಳೆ, 4- 10 ನಿಮಿಷಗಳು. ಫಬ್ರಿನೋಜಿನ್, ಪ್ರೋಥ್ರಾಂಬಿನ್, ಥ್ರಾಂಬೋ ಪ್ಲಾಸ್ಟಿನ್, ಆಂಟಿ ಹಿಮೋಫಿಲಿಕ್ ಫ್ಯಾಕ್ಟರ್, ಹೇಗ್ ಮನ್ ಫ್ಯಾಕ್ಟರ್, ಪಿಟಿಸಿ, ಮುಂತಾದವುಗಳು, ಮುಖ್ಯವಾದ ರಕ್ತ ಹೆಪ್ಪುಗಟ್ಟುವ ಅಂಶಗಳು.

ಒಂದು ವೇಳೆ ವಯಸ್ಕ ಮನುಷ್ಯನ ದೇಹದಲ್ಲಿರುವ ಎಲ್ಲ ಅಪಧಮನಿಗಳು, ಲೋಮನಾಳಗಳು ಮತ್ತು ರಕ್ತನಾಳಗಳನ್ನು ಒಂದಕ್ಕೊಂದು ಉದ್ದಕ್ಕೆ ಜೋಡಿಸಿದರೆ ಅದರ ಉದ್ದವು ಸುಮಾರು 1,00,000 ಕಿಲೊ ಮೀಟರ್‍ಗಳಷ್ಟು ಆಗುತ್ತದೆ. ಭೂಮಿಯ ಸುತ್ತಳತೆಯು 40,000 ಕಿ.ಮಿ. ಇರುವುದರಿಂದ, ಮನುಷ್ಯನ ರಕ್ತನಾಳಗಳಿಂದ ಭೂಮಿಯನ್ನು ಸುಮಾರು 2.5 ಬಾರಿ ಸುತ್ತಬಹುದಾಗಿದೆ! ಒಂದು ರಕ್ತ ಕಣವು ನಿಮ್ಮ ಇಡೀ ದೇಹವನ್ನು ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಪ್ರದಕ್ಷಿಣೆ ಹಾಕುತ್ತದೆ.

#  ರಕ್ತ ಮತ್ತು ವಿಲಿಯಂ ಹಾರ್ವೆ :
ನಮಗೆ ಈ ರಕ್ತ ಪರಿಚಲನೆಯೆಂಬ ಸೂಕ್ಷ್ಮ ಏರ್ಪಾಟಿನ ವಿಷಯ ಸರಿಯಾಗಿ ತಿಳಿದು ಬಂದುದು ಕೇವಲ 400ವರ್ಷಗಳ ಹಿಂದೆ. ಇಂಗ್ಲೆಂಡಿನ ವೈದ್ಯನಾದ ವಿಲಿಯಂ ಹಾರ್ವೆ ((1578-1657) ಎಂಬುವವನಿಂದ. ಅವನಿಗಿಂತ ಸ್ವಲ್ಪ ಮೊದಲು ಮೈಕೇಲ್ ಸರ್ವೇಟಿಸ್ ಎಂಬ ಸ್ಪೇನಿಶ್ ವೈದ್ಯ ರಕ್ತವು ಸ್ವಾಶಕೋಶಗಳಿಗೂ ಹೃದಯಕ್ಕೂ ಆಗಾಗ ಹೋಗಿ ಬರುತ್ತದೆ ಎಮದು ತಿಲಿಸಿದ್ದ. ನಮ್ಮ ದೇಹದಲ್ಲಿ ಎಲ್ಲಿ ಚುಚ್ಚಿದರೂ ರಕ್ತ ಬಂದರೂ ಅದರ ಕೆಲಸವೇನು,ಶ್ವಾಸಕೋಶಕ್ಕೂಅದಕ್ಕೂ ಏನು ಸಂಬಂಧ ಎಂದು ತಿಳಿಯಲು 16ನೇಶತಮಾದವರೆಗೂ ಮಾನವ ಕಾಯಬೇಕಾಯಿತು.

ಡಾ ಹಾರ್ವೆ ಕಪ್ಪೆ, ಏಡಿ, ನಾಯಿ, ಹಂದಿ ಮೊದಲಾದ ಪ್ರಾಣಿಗಳ ಶರೀರ ವಿಚ್ಛೇದನ ಮಾಡಿ ರಕ್ತದ್ರವ್ಯ ದೇಹದಲ್ಲಿ ಸದಾಸಂಚರಿಸುತ್ತಲೇ ಇರುವುದೆಂದು ಕಂಡುಕೊಂಡ. ಹೃದಯ ಸಂಕುಚಿದಾಗ/ಮುದುಡಿದಾಗ ರಕ್ತ ಹೃದಯದಿಂದ ಮುಂದಕ್ಕೆ ಸಾಗುತ್ತದೆ; ಮತ್ತು ಒಂದು ಗಂಟೆಯಲ್ಲಿ ಹೃದಯವು 1000ಬಾರಿಯಾದರೂ ರಕ್ತವನ್ನು ಹೊರಕ್ಕೆ ತಳ್ಳುತ್ತಿರುತ್ತದೆ ಎಂದು ತಿಳಿಗುಕೊಂಡ.

ಹಾಗೆ ಹೊರಗೆ ತಳ್ಳಲ್ಪಟ್ಟ ರಕ್ತ ಪುನಹ ಹೃದಯಕ್ಕೆ ಬಂದೇ ತಿರಬೇಕಾಗುವುದು ಎಂದು ತೀರ್ಮಾನಿಸಿದ. ಹೃದಯ ಹೋಗಿ ಅಲ್ಲಿಂದ ಹೃದಯಕ್ಕೆ ಮರಳಿಬಂದು ಅನಂತರ ದೇಹದ ವಿವಿಧ ಭಾಗಗಳಿಗೆ ಪಸರಿಸುತ್ತದೆ. ಅದು ದೇಹದ ಎಲ್ಲ ಭಾಗಗಳಿಗೆ ಮುಟ್ಟಿ ಅವಕ್ಕೆಬೇಕಾದ ಆಹಾರ ಪದಾರ್ಥಗಳನ್ನೊದಗಿಸಿ ಅವು ಕೊಉವ ಕಶ್ಮಲ ವಸ್ತುಗಳನ್ನು ಸ್ವೀಕರಿಸಿ ಮರಳಿ ಹೃದಯಕ್ಕೇ ಬರುತ್ತದೆ; ಅಲ್ಲಿಂದ ಶುದ್ಧಗೊಳ್ಳಲು ಶೌಅಸಕೋಶಗಳಿಗೆ ಹೋಗುತ್ತದೆ ಎಂದು ಡಾ. ಹಾರ್ವೆ ಪ್ರಥಮ ಬಾರಿಗೆ ಜಗತ್ತಿಗೆ ತಿಳಿಸಿದ. ಹೀಗೆ ಹೃದಯದ ಮತ್ತು ರಕ್ತದ ಪ್ರಾಮುಖ್ಯತೆ ಜನರಿಗೆ ತಿಳಿಯಿತು.

ಯುವ ಡಚ್ ಜೀವಶಾಸ್ತ್ರಜ್ಞ ಜ್ಯಾನ್ ಸ್ವಾಮ್ಮೆ ರ್ಡ್ಯಮ್ ಕೆಂಪು ರಕ್ತ ಕಣಗಳನ್ನು ವರ್ಣಿಸಿದ ಮೊತ್ತ ಮೊದಲ ವ್ಯಕ್ತಿ, ಇವರು ಕಪ್ಪೆಯ ರಕ್ತದ ಅಧ್ಯಯನಕ್ಕಾಗಿ 1658ರಲ್ಲಿ ಮೊದಲ ಸೂಕ್ಷ್ಮ ದರ್ಶಕ ಯಂತ್ರವನ್ನು ಉಪಯೋಗಿಸಿದ್ದರು. ಈ ಬಾರಿ “ಒಂದು ಸೂಕ್ಷ್ಮ ಮರಳಿನ ಕಣಕ್ಕಿಂತ 25,000 ಪಟ್ಟು ಚಿಕ್ಕದಾಗಿರುವಂತೆ”, ಅವುಗಳ ಗಾತ್ರವನ್ನೂ ಅಂದಾಜಿಸುತ್ತಾ ಈ ಕೆಲಸದ ಅರಿವಿಲ್ಲದೆ, ಆಂಟೋನ್ ವ್ಯಾನ್ಲ್ಯೂವೆನ್ಹೋಕ್ 1673 ರಲ್ಲಿ ಮತ್ತೋಂದು ಸೂಕ್ಷ್ಮದರ್ಶಕ ಯಂತ್ರದ ವಿವರವನ್ನು ಒದಗಿಸಿದನು.

1901 ರಲ್ಲಿ ಕಾರ್ಲ ಲ್ಯಾಂಡ್ ಸ್ಟೇಯೈರ್ ಮೂರು ಪ್ರಮುಖ ರಕ್ತದ ಗುಂಪುಗಳಾದ – ಎ, ಬಿ,ಸಿ (ಇದನ್ನು ಅವರು ಮುಂದೆ ಓ ಎಂದು ಪುನಃ ಹೆಸರಿಸಿದರು) ಲ್ಯಾಂಡ್ ಸ್ಟೇಯೈರ್ ಕೆಂಪು ರಕ್ತ ಕಣಗಳ ಜೊತೆ ಲಸಿಕೆಯನ್ನು ಸೇರಿಸಿದಾಗ ಪ್ರತಿಕ್ರಿಯೆಗಳು ಆಗುವಂತಹ ವ್ಯವಸ್ಥಿತ ಮಾದರಿಗಳನ್ನು ವಿವರಿಸಿದರು, ಈ ರೀತಿ ಅನುರೂಪವಾದ ಹಾಗೂ ಘರ್ಷಣೆಯ ಸಂಯೋಜನೆಗಳು ಈ ರಕ್ತದ ಗುಂಪುಗಳ ನಡುವೆ ಗುರುತಿಸಿದರು. ಒಂದು ವರ್ಷದ ನಂತರ ಲ್ಯಾಂಡ್ ಸ್ಟೇಯ್ಐರ್ ನ ಇಬ್ಬರು ಸಹೋದ್ಯೋಗಿಗಳಾದ ಆಲ್ ಫ್ರೆಡ್ ವೊನ್ ಡಿಕ್ಯಾಸ್ಟೆಲ್ಲೊ ಹಾಗೂ ಆಡ್ರಿನೊ ಸ್ಟಾರ್ಲಿ ಯವರು, ನಾಲ್ಕನೆಯ ರಕ್ತದ ಗುಂಪು -ಎಬಿ ಯನ್ನು ಗುರುತಿಸಿದರು.

1959 ರಲ್ಲಿ, ಡಾ. ಮ್ಯಾಕ್ಸ್ ಪೆರುಟ್ಜ ರವರು, ಆಮ್ಲಜನಕ ವಾಹಕವಾದ ಕೆಂಪು ರಕ್ತ ಕಣದ ಸಸಾರಜನಕ ಾಹಾರ ಪದಾರ್ಥ (ಪ್ರೋಟೀನ್), ಅನ್ನು ಕ್ಷ-ಕಿರಣದ ುಪಯೋಗದಿಂದ ಹೆಮೋಗ್ಲಾಬಿನ್ ರಚನೆಯನ್ನು ಪ್ರಕಟಿಸಿದರು.

# ರಕ್ತದ ಗುಂಪುಗಳು :
ಮನುಷ್ಯನ ರಕ್ತವನ್ನು A, B, AB ಮತ್ತು O ಎಂಬುದಾಗಿ ವಿಂಗಡಿಸಲಾಗುತ್ತದೆ. ಇದನ್ನು ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ ಆಂಟಿಜಿನ್ ಅಂಶಗಳನ್ನು ನೋಡಿಕೊಂಡು ವಿಂಗಡಿಸಲಾಗುತ್ತದೆ.
ಈ ಆಂಟಿಜಿನ್ ಜೊತೆಗೆ ಇನ್ನೊಂದು rh ಆಂಟಿಜಿನ್ ಆಧಾರದ ಮೇಲೆ A+ve, A-ve, B+ve,B-ve, AB+ve, AB-ve, O-ve, O+ve ಎಂಬುದಾಗಿ ಪುನಃ ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ A+ve ಮತ್ತು O+ve ಗುಂಪುಗಳ ಹೆಚ್ಚಿನ ಜನರಲ್ಲಿ ಕಾಣಸಿಗುತ್ತದೆ. B-ve O-ve ಮುಂತಾದ ರಕ್ತದ ಗುಂಪುಗಳು ಬಹಳ ವಿರಳ. ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಬಹಳ ಕಷ್ಟದ ಕೆಲಸ.

ಆ ಕಾರಣಕ್ಕಾಗಿಯೂ ವಿರಳ ರಕ್ತದ ಗುಂಪನ್ನು ಹೊಂದಿದ ವ್ಯಕ್ತಿಗಳನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆ ತೆಗೆದುಕೊಳ್ಳಲಾಗುತ್ತದೆ ಹಾಗೂ ಅಗತ್ಯವಿದ್ದಾಗ ಮಾತ್ರ ಇಂತಹ ವಿರಳ ಗುಂಪಿನ ವ್ಯಕ್ತಿಗಳಿಂದ ರಕ್ತದಾನವನ್ನು ಪಡೆಯಲಾಗುತ್ತದೆ.1901ರಲ್ಲಿ ಕಾರ್ಲ್ ಲಾಂಡ್‍ಸ್ಪೈನರ್ ಎಂಬ ಆಸ್ಟ್ರಿಯಾ ದೇಶದ ವೈದ್ಯರು ರಕ್ತದ ಗುಂಪುಗಳ ವರ್ಗಿಕರಣವನ್ನು ನೀಡಿದರು. ಆ ಕಾರಣಕ್ಕಾಗಿಯೇ ಆತನ ಜನ್ಮ ದಿನಾಂಕ ಜೂನ್ 14ರಂದು “ವಿಶ್ವ ರಕ್ತದಾನಿಗಳ ದಿವಸ” ಎಂದು ಆಚರಿಸಲಾಗುತ್ತದೆ.

ಅದೇ ರೀತಿ ಅಕ್ಟೋಬರ್ 1ರಂದು ‘ರಾಷ್ಟ್ರೀಯ ರಕ್ತದಾನ ದಿವಸ’ ಎಂದು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ. O+ve ಮತ್ತು A+ve ರಕ್ತದ ಗುಂಪನ್ನು ಸಾಮಾನ್ಯವಾಗಿ ಮೂರು ರಕ್ತದಾನಿಗಳಲ್ಲಿ ಒಬ್ಬ ವ್ಯಕ್ತಿ ಹೊಂದಿರುವ ಸಾಧ್ಯತೆ ಇರುತ್ತದೆ. B+ve ಪ್ರತೀ 12ರಲ್ಲಿ ಒಬ್ಬರಿಗೆ,AB+ve ಪ್ರತೀ 29ರಲ್ಲಿ ಒಬ್ಬರಿಗೆ, O-ve ಮತ್ತು A-ve ಪ್ರತೀ 15ರಲ್ಲಿ ಒಬ್ಬರಿಗೆ, B-ve ರಕ್ತ ಪ್ರತೀ 67 ಜನರಲ್ಲಿ ಒಬ್ಬರಿಗೆ ಹಾಗೂ AB-ve ರಕ್ತ ಪ್ರತೀ 167 ಜನರಲ್ಲಿ ಒಬ್ಬರಿಗೆ ಇರುವ ಸಂಭವವಿರುತ್ತದೆ.

ಸಾಮಾನ್ಯವಾಗಿ O-ve ರಕ್ತವನ್ನು ಯುನಿವರ್ಸಲ್ ಡೋನರ್ (UNIVERSAL DONOR) ಎಂದು ಕರೆಯಲಾಗುತ್ತದೆ. ಯಾಕೆಂದರೆ ವ್ಯಕ್ತಿಗೆ ಸರಿಹೊಂದುವ ರಕ್ತವು ದೊರಕದೇ ಇದ್ದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ O-ve ರಕ್ತವನ್ನು ರೋಗಿಗೆ ಕೊಡಲಾಗುತ್ತದೆ. ಯಾವುದೇ ರಕ್ತದ ಗುಂಪು ಹೊಂದಿರುವ ವ್ಯಕ್ತಿಗೆ O-ve ರಕ್ತವನ್ನು ಕೊಡಬಹುದು. ಆದರೆ ನಮ್ಮ ದೇಶದ ಜನಸಂಖ್ಯೆಯ ಕೇವಲ 7 ಪ್ರತಿಶತ ಜನರು ಮಾತ್ರ O-ve ರಕ್ತವನ್ನು ಹೊಂದಿರುತ್ತಾರೆ.

ಸಾಮಾನ್ಯವಾಗಿ ತುರ್ತು ಸನ್ನಿವೇಶಗಳಲ್ಲಿ ರೋಗಿಯ ರಕ್ತದ ಗುಂಪು ತಿಳಿಯದೇ ಇದ್ದಲ್ಲಿ ಹಾಗೂ ನವಜಾತ ಶಿಶುಗಳಲ್ಲಿ ಈ ರೀತಿ O-ve ರಕ್ತವನ್ನು ನೀಡಬಹುದು. 35 ಪ್ರತಿಶತ ಜನರು O(+ve ಮತ್ತು -ve) ರಕ್ತದ ಗುಂಪನ್ನು ಹೊಂದಿರುತ್ತಾರೆ. ಕೇವಲ 0.4 ಪ್ರತಿಶತ ಜನರು AB ರಕ್ತದ ಗುಂಪು ಹೊಂದಿರುತ್ತಾರೆ. AB ರಕ್ತದ ಗುಂಪು ಇರುವವರನ್ನು ಯುನಿವರ್ಸಲ್ ಪ್ಲಾಸ್ಮಾ ಡೊನರ್ ಎಂದು ಕರೆಯುತ್ತಾರೆ.

ತುರ್ತು ಸನ್ನಿವೇಶಗಳಲ್ಲಿ ಮತ್ತು ನವಜಾತ ಶಿಶುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಇದ್ದಲ್ಲಿ AB ಗುಂಪಿನ ಪ್ಲಾಸ್ಮಾವನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ರಕ್ತದಲ್ಲಿಯೂ ಕೆಂಪುರಕ್ತಕಣ, ಬಿಳಿರಕ್ತಕಣ, ಪ್ಲೇಟ್‍ಲೆಟ್ ಮತ್ತು ಪ್ಲಾಸ್ಮಾ ಎಂಬ ಅಂಶಗಳು ಇರುತ್ತದೆ. ಆದರೆ ಪ್ರತಿಯೊಬ್ಬರ ರಕ್ತವು ಇತರರ ರಕ್ತಕ್ಕಿಂತ ಭಿನ್ನವಾಗಿರುತ್ತದೆ. ಮೇಲೆ ತಿಳಿಸಿದಂತೆ 8 ರೀತಿಯ ವಿಭಿನ್ನ ರಕ್ತದ ಗುಂಪುಗಳು ಇವೆ.

ಆ ಕಾರಣಕ್ಕಾಗಿಯೇ ರಕ್ತದಾನ ಮಾಡುವ ಮೊದಲ ಹಲವಾರು ಬಾರಿ ರಕ್ತವನ್ನುಪರೀಕ್ಷಿಸಿ, ಕ್ರಾಸ್‍ಮ್ಯಾಚ್ (ಹೊಂದಾಣಿಕೆ) ಮಾಡಿದ ಬಳಿಕವೇ ರಕ್ತವನ್ನು ರೋಗಿಗೆ ನೀಡಲಾಗುತ್ತದೆ. ಕೆಂಪು ರಕ್ತಕಣಗಳ ಮೇಲಿರುವ A ಮತ್ತು B ಆಧಾರದ ಮೇಲೆ ರಕ್ತದ ಗುಂಪುಗಳನ್ನು ಈ ರೀತಿ ವಿಂಗಡಿಸಲಾಗಿದೆ.

A ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘A’ ಆಂಟಿಜಿನ್ ಮತ್ತು ಪ್ಲಾಸ್ಮಾದಲ್ಲಿ ‘B’ ಆಂಟಿಬಾಡಿ ಇರುತ್ತದೆ.
B ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘B’ ಆಂಟಿಜಿನ್ ಮತ್ತು ಪ್ಲಾಸ್ಮಾದಲ್ಲಿ ‘A’ ಆಂಟಿಬಾಡಿ ಇರುತ್ತದೆ.
AB ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘A’ ಮತ್ತು ‘B’ ಆಂಟಿಜಿನ್ ಎರಡೂ ಇರುತ್ತದೆ ಮತ್ತು ಪ್ಲಾಸ್ಮಾದಲ್ಲಿ ಯಾವುದೇ ಆಂಟಿಬಾಡಿ ಇರುವುದಿಲ್ಲ.
O ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ಯಾವುದೇ ಆಂಟಿಜಿನ್ ಇರುವುದಿಲ್ಲ. ಆದರೆ ಪ್ಲಾಸ್ಮಾದಲ್ಲಿ ‘A’ ಮತ್ತು ‘B’ ಆಂಟಿಬಾಡಿ ಇರುತ್ತದೆ.
AB ರಕ್ತದ ಗುಂಪು ಇರುವವರಲ್ಲಿ ಯಾವುದೇ ಆಂಟಿಬಾಡಿ ಇಲ್ಲದ ಕಾರಣ AB ರಕ್ತದ ಗುಂಪಿನವರು A, B, AB ಮತ್ತು O ರಕ್ತದ ಗುಂಪಿನವರು ರಕ್ತವನ್ನು ಪಡೆಯಬಹುದು. ಆ ಕಾರಣಕ್ಕಾಗಿಯೇ ‘AB+ve’ ರಕ್ತ ಗುಂಪನ್ನು ಯನಿರ್ವಸಲ್ ರಿಸೀವರ್ ಎಂದು ಹೇಳುತ್ತಾರೆ. ಅದೇ ರೀತಿ ‘O’ ಗುಂಪಿನ ರಕ್ತದಲ್ಲಿ ಯಾವುದೇ ಆಂಟಿಜೆನ್ ಇಲ್ಲದ ಕಾರಣ ‘O’ ಗುಂಪಿನ ರಕ್ತವನ್ನು A, B, AB ಮತ್ತು O ಗುಂಪಿನವರಿಗೆ ತುರ್ತು ಪರಿಸ್ಥಿತಿಗಳಲ್ಲಿ ನೀಡಬಹುದು.
ಅದಕ್ಕಾಗಿಯೇ O-ve ಗುಂಪಿನ ರಕ್ತದಾನಿಗಳನ್ನು ಯನಿವರ್ಸಲ್ ಡೊನರ್ (UNIVERSAL DONOR) ಎಂದು ಕರೆಯಲಾಗುತ್ತದೆ. ಅದೇ ರೀತಿ A,B ಆಂಟಿಜೆನ್ ಅಲ್ಲದೇ RH ಎಂಬ ಇನ್ನೊಂದು ಆಂಟಿಜೆನ್‍ನ ಆಧಾರದ ಮೇಲೆ Rh+ve ಮತ್ತು Rh-ve ಎಂದು ರಕ್ತವನ್ನು ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ Rh-ve ರಕ್ತವನ್ನು Rh-ve ರಕ್ತದ ಗುಂಪಿನವರಿಗೆ ದಾರಾಳವಾಗಿ ನೀಡಬಹುದು. ಆದರೆ Rh+ve ಅಥವಾ Rh-ve ರಕ್ತವನ್ನು Rh+ve ಗುಂಪಿನ ಜನರಿಗೆ ಕೊಡಲೂಬಹುದು.

ಈ ಎಲ್ಲಾ ಕಾರಣಕ್ಕಾಗಿಯೇ O-ve ರಕ್ತವನ್ನು ಯನಿವರ್ಸಲ್ ಡೊನರ್ ಮತ್ತು AB ರಕ್ತವನ್ನು ಯನಿವರ್ಸಲ್ ಪ್ಲಾಸ್ಮಾ ಡೊನರ್ ಎಂದು ಕರೆಯಲಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ರಕ್ತದ ಗುಂಪಿನ ಅನುಪಾತಗಳು ಈ ಕೆಳಗಿನಂತಿವೆ:
O+ve=39%
O-ve=1%
A+ve=27%
A-ve=0.5%
B+ve=25%
B-ve=0.4%
AB+ve=7%
AB-ve=0.1%

# ರಕ್ತದ ಬಗ್ಗೆ ಹಿಂದಿಯ ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೆಗಳ ಸಂಗ್ರಹ ಇಲ್ಲಿದೆ ನೋಡಿ : (ಉತ್ತರಗಳು ಪುಟದ ಕೊನೆಯಲ್ಲಿವೆ ) 

1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
1. 30 ದಿನಗಳು.
2. 60 ದಿನಗಳು.
3. 90 ದಿನಗಳು.
4. 120 ದಿನಗಳು.

2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
1. 2-4 ದಿನಗಳು
2. 4-8 ದಿನಗಳು.
3. 6-12 ದಿನಗಳು
4. ಯಾವುದು ಅಲ್ಲ.

3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
1. ಮೆದುಳು.
2. ಕೆಂಪು ರಕ್ತಕಣಗಳು.
3. ಬಿಳಿ ರಕ್ತಕಣಗಳು
4. ಹೃದಯ.

4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
1. 10 ದಿನಗಳು.
2. 12 ದಿನಗಳು
3. 14 ದಿನಗಳು.
4. 20 ದಿನಗಳು.

5. _________ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
1. ಪ್ಲಾಸ್ಮಾ.
2. ಕೆಂಪು ರಕ್ತ.
3. ಬಿಳಿ ರಕ್ತ.
4. ಕಿರುತಟ್ಟೆ.

6. _______ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
1. ಬಿಳಿ ರಕ್ತಕಣಗಳ.
2. ಕೆಂಪು ರಕ್ತಕಣಗಳ.
3. ಕಿರುತಟ್ಟೆಗಳ.
4. ಆಯ್ಕೆ 1 ಮತ್ತು 2 ಸರಿ.

7. ________ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
1. ಪಿತ್ತಜನಕಾಂಗ.
2. ಅಸ್ಥಿಮಜ್ಜೆ.
3. ಮೂತ್ರಪಿಂಡ.
4. ಯಾವುದು ಅಲ್ಲ.

8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
1. 9% ರಷ್ಟು.
2. 7% ರಷ್ಟು.
3. 10. ರಷ್ಟು.
4. 5% ರಷ್ಟು.

9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
1. ಕಾರ್ಲ್ ಲ್ಯಾಂಡ್ ಸ್ಪಿನರ್
2. ವಿಲಿಯಂ ಹಾರ್ವೆ.
3. ರಿಚರ್ಡ್ ಫೇಮನ್.
4. ಡೇವಿಡ್ ರಾಬರ್ಟ್ ನೆಲ್ಸನ್.

10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?
1. ಸಿಗ್ಮಾನೋಮೀಟರ್.
2. ಸ್ಟೆತಸ್ಕೋಪ್.
3. ಇ.ಸಿ.ಜಿ.
4. ಯಾವುದು ಅಲ್ಲ.

11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
1. ಕಾರ್ಡಿಯೋಲಾಜಿ.
2. ಅಂಕಾಲಾಜಿ.
3. ಕಾಲಿಯೋಲಾಜಿ.
4. ಹೆಮಟಾಲೋಜಿ.

12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
1. ಕಾರ್ಲ್ ಲ್ಯಾಂಡ್ ಸ್ಪಿನರ್.
2. ವಿಲಿಯಂ ಹಾರ್ವೆ.
3. ಜೋನಾಸ್ ಸಾಲ್ಕ್.
4. ಜಗದೀಶ ಚಂದ್ರ ಬೋಸ್.

13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?
1. ಅಪಧಮನಿ.
2. ಅಭಿದಮನಿ.
3. ಲೋಮನಾಳ
4. ಯಾವುದು ಅಲ್ಲ.

14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
1. A ಗುಂಪು.
2. B ಗುಂಪು.
3. AB ಗುಂಪು.
4. O ಗುಂಪು.

15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
1. A ಗುಂಪು.
2. B ಗುಂಪು.
3. AB ಗುಂಪು.
4. O ಗುಂಪು.

# ಉತ್ತರಗಳು :
1. 4. 120 ದಿನಗಳು
2. 3. 6-12 ದಿನಗಳು
3. 3. ಬಿಳಿ ರಕ್ತಕಣಗಳು
4. 2. 12 ದಿನಗಳು
5. 4. ಕಿರುತಟ್ಟೆ.
6. 1. ಬಿಳಿ ರಕ್ತಕಣಗಳ.
7. 1. ಪಿತ್ತಜನಕಾಂಗ.
8. 1. 9% ರಷ್ಟು.
9. 2. ವಿಲಿಯಂ ಹಾರ್ವೆ.
10. 1. ಸಿಗ್ಮಾನೋಮೀಟರ್.
11. 4. ಹೆಮಟಾಲೋಜಿ.
12. 1. ಕಾರ್ಲ್ ಲ್ಯಾಂಡ್ ಸ್ಪಿನರ್.
13. 1. ಅಪಧಮನಿ.
14. 4. O ಗುಂಪು.
15. 3. AB ಗುಂಪು.

Leave a Reply

Your email address will not be published. Required fields are marked *

error: Content Copyright protected !!