ಚಿಕ್ಕದೇವರಾಜ ಒಡೆಯರು (ಕ್ರಿ.ಶ.1673-1704)
✦ ಇವರು ಮೈಸೂರಿನ ಸುಪ್ರಸಿದ್ಧ ದೊರೆಗಳಲ್ಲಿ ಒಬ್ಬರಾಗಿದ್ದರು.
✦ ಚಿಕ್ಕದೇವರಾಜ ಒಡೆಯರು ಉತ್ತಮ ಆಡಳಿತಗಾರರಾಗಿದ್ದರು.
✦ ಅವರು ಆಡಳಿತವನ್ನು ವ್ಯವಸ್ಥೆಗೊಳಿಸಿ, ಅಠಾರ ಕಛೇರಿಯನ್ನು ಸ್ಥಾಪಿಸಿದರು. ಇದರಲ್ಲಿ 18 ಆಡಳಿತ ಶಾಖೆಗಳಿದ್ದವು.
✦ ಪತ್ರ ವ್ಯವಹಾರಕ್ಕೆ ಸುವ್ಯವಸ್ಥೆ ಏರ್ಪಡಿಸಿ “ಅಂಚೆ” ಇಲಾಖೆಯನ್ನು ಆರಂಭಿಸಿದರು.
✦ ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿದರು.
✦ ಇವರು ಆಡಳಿತದಲ್ಲಿ ಮಿತವ್ಯಯ ಸಾಧಿಸಿ ಖಜಾನೆಯಲ್ಲಿ ಧನಕನಕಗಳನ್ನು ಸಂಗ್ರಹಿಸಿದ್ದರು.
✦ ಚಿಕ್ಕದೇವರಾಜನಾಲೆ ಮತ್ತು ದೊಡ್ಡದೇವರಾಜನಾಲೆ ಎಂಬ ಎರಡು ಕಾಲುವೆಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಿದರು.
✦ ಚಿಕ್ಕದೇವರಾಜರು ಮೊಘಲ ದೊರೆ ಔರಂಗಜೇಬನಿಂದ “ಬೆಂಗಳೂರನ್ನು” ಗುತ್ತಿಗೆ ಪಡೆದರು.
✦ ಕಲೆ ಮತ್ತು ಸಾಹಿತ್ಯಕ್ಕೆ ಇವರು ಹಲವು ಕೊಡುಗೆಗಳನ್ನು ನೀಡಿದರು.
✦ ಬೆಂಗಳೂರಿನ ಕೋಟೆ ವೆಂಕಟರಮಣ ಮಂದಿರ, ಮೈಸೂರಿನ ಶ್ವೇತ ವರಾಹ ಮಂದಿರ ಮತ್ತು ಗುಂಡ್ಲುಪೇಟೆಯ ಪರವಾಸುದೇವ ಮಂದಿರಗಳು ಇವರ ಕಾಲದಲ್ಲಿ ನಿರ್ಮಾಣವಾದವು.
✦ ಸ್ವತ: ಇವರು ಕವಿಯಾಗಿದ್ದುಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯನ್ನು ಕುರಿತು”ಚಿಕ್ಕದೇವರಾಜ ಬಿನ್ನಪಂ” ಎಂಬ ಕಾವ್ಯವನ್ನು ಬರೆದಿದ್ದಾರೆ.
✦ ಸಿಂಗಾರಾರ್ಯ, ಚಿಕ್ಕುಪಾಧ್ಯಾಯ,ಮತ್ತುಸಂಚಿಯ ಹೊನ್ನಮ್ಮ (ಕೃತಿ-ಹದಿಬದೆಯ ಧರ್ಮ) ಇವರ ಆಸ್ಥಾನ ಕವಿಗಳಾಗಿದ್ದರು.
✦ ಚಿಕ್ಕದೇವರಾಜ ಒಡೆಯರಿಗಿದ್ದ ಎರಡು ಪ್ರಮುಖ ಬಿರುದುಗಳು – “ಕರ್ನಾಟಕ ಚಕ್ರವರ್ತಿ” “ “ನವಕೋಟಿ ನಾರಾಯಣ”.
✦ ಇವರನ್ನು “ ನವಕೋಟಿ ನಾರಾಯಣ” ಎಂದು ಕರೆಯಲು ಕಾರಣ – ಇವರು ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿ ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಿ ತಮ್ಮ ಖಜಾನೆಯಲ್ಲಿ ಅಪಾರ ಧನಕನಕಗಳನ್ನು ಸಂಗ್ರಹಿಸಿದ್ದರು.
✦ ಚಿಕ್ಕದೇವರಾಜನು ಆಧುನಿಕ ವಿಚಾರಧಾರೆ ಹೊಂದಿದ್ದನು. ಇದಕ್ಕೆ ಸಾಕ್ಷಿಯಾಗಿ ಅವರು ತಾನು ತೀರಿಕೊಂಡಾಗ ತನ್ನ ರಾಣಿಯರು ಸಹಗಮನ ಮಾಡಬಾರದೆಂದು ಆಜ್ಞಾಪಿಸಿದ್ದರು.