History

ಚಿತ್ರದುರ್ಗದ ನಾಯಕರು

Share With Friends

ಚಿತ್ರದುರ್ಗದ ನಾಯಕರು(1300 – 1779):  ಚಿತ್ರದುರ್ಗದ ನಾಯಕರು ಪೂರ್ವ ಕರ್ನಾಟಕದ ಭಾಗಗಳನ್ನು ಆಳಿದರು. ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಆಳ್ವಿಕೆ ಕಾಲದಲ್ಲಿ ಇವರು ಅವರು ಸಾಮಂತ ರಾಜರಾಗಿ ಕಾರ್ಯನಿರ್ವಹಿಸಿದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಇವರ ಕೆಲವು ಕಾಲ ಸ್ವತಂತ್ರವಾಗಿ ಮತ್ತು ಕೆಲವು ಬಾರಿ ಮೈಸೂರು, ಮೊಘಲರು ಮತ್ತು ಮರಾಠರಿಗೆ ಸಾಮಂತರಾದರು.

ಸ್ಥಳೀಯ ಮುಖ್ಯಸ್ಥರಾಗಿ (ದಂಡನಾಯಕ) ಹೊಯ್ಸಳ ರಾಜ್ಯದಲ್ಲಿದ್ದ ಇವರು ತಮ್ಮ ಶೌರ್ಯದಿಂದ ವಿಜಯನಗರದ ರಾಜರ ಮನಸ್ಸನ್ನು ಗೆದ್ದು ಸಾಮಂತರಾಗಿ ನೇಮಕಗೊಂಡು ಆಳ್ವಿಕೆ ನಡೆಸಿದರು. ಕೆಲವು ದಾಖಲೆಗಳ ಪ್ರಕಾರ ಇವರು ಕರ್ನಾಟಕದ ದಾವಣಗೆರೆ ಜಿಲ್ಲೆಯವರು. ಚಿತ್ರದುರ್ಗ ಅಭೇದ್ಯವಾದ ಕೋಟೆಯಾಗಿದ್ದು ರಾಜ್ಯದ ಹೃದಯದಂತಿತ್ತು.

ಚಿತ್ರದುರ್ಗದ ಮಹಾನ್ ನಾಯಕರಲ್ಲಿ ಒಬ್ಬರಾದ ಬಿಳಿಚೋಡಿನ ಬಿಚ್ಚುಗತ್ತಿ ಬರಮಣ್ಣ ನಾಯಕರು (1689- 1721) ಮರಾಠರ ಮೈತ್ರಿಯೊಂದಿಗೆ ದೊಡ್ಡೇರಿ ಯುದ್ದದಲ್ಲಿ ತೊಡಗಿದ್ದರೂ ಕೂಡ ಮುಂದೆ ಮೊಘಲರಿಗೆ ಗೌರವ ಕೊಡಬೇಕಾಯಿತು. ಅವರು ಮೊಘಲರ ವಿರುದ್ಧ ಅನೇಕ ಯುದ್ಧಗಳಲ್ಲಿ ಹೋರಾಡಿದರು ಮತ್ತು ಅನೇಕ ದೇವಾಲಯಗಳು ಮತ್ತು ನೀರಾವರಿ ಕೆರೆಗಳನ್ನು ನಿರ್ಮಾಣಮಾಡಿದ್ದಾರೆ.

ಮದಕರಿ ನಾಯಕ (1758-1779) ಒಬ್ಬ ಕೆಚ್ಚೆದೆಯ ಯೋಧ ಮತ್ತು ಜೊತೆಗೆ ಒಂದು ಪ್ರಬಲವಾದ ನಿರ್ವಾಹಕರಾಗಿದ್ದರು. ಇವರ ಸಮಯದಲ್ಲಿ ಹೈದರ್ ಅಲಿ ದಾಳಿ ನಡೆಸಿದ್ದು ಮತ್ತು “ಒನಕೆ ಓಬವ್ವ” ನ ಸಾಹಸಕ್ಕೆ ನಾಂದಿಯಾಗಿದ್ದು ಈಗ ಚರಿತರೆಯ ಪುಟಗಳಲ್ಲಿ ಕಾಣಬಹುದು. ನಂತರ ಮರಾಠರು ಮತ್ತು ಕೆಲವು ಸ್ಥಳೀಯ ಅಧಿಕಾರಿಗಳ ದ್ರೋಹದಿಂದಾಗಿ ಇವರು ಹೈದರ್ ಆಲಿಯಿಂದ ಸೋಲಲ್ಪಟ್ಟು, ಸೆರೆಹಿಡಿದು ಕೊಲ್ಲಲ್ಪಟ್ಟರು. ಚಿತ್ರದುರ್ಗ ನಾಯಕರು ಕನ್ನಡ ಜಾನಪದದ  ಅವಿಭಾಜ್ಯ ಅಂಗವಾಗಿದ್ದಾರೆ. ಚಂದವಿಕ್ರಮರಾಯ, ಗಾದ್ರಿಮೇಲೆ ಹೆಬ್ಬುಲಿ ಮತ್ತು ಹಿಂದೂ ಪಾಳೆಯಗಾರರ ಗಂಡು ಇವರ ಬಿರುದುಗಳಾಗಿವೆ.

# ಚಿತ್ರದುರ್ಗದ ಕೋಟೆ:
ಚಿತ್ರದುರ್ಗದ ಕೋಟೆ ಕಲ್ಲಿನ ಕೋಟೆ, ಉಕ್ಕಿನ ಕೋಟೆ, ಏಳು ಸುತ್ತಿನ ಕೋಟೆ ಎಂದು ಪ್ರಸಿದ್ಧವಾಗಿದೆ. ಹದಿನೆಂಟು ಪುರಾತನ ದೇವಾಲಯಗಳನ್ನು  ಕೋಟೆಯ ಒಳಗೆ ಕಾಣಬಹುದು. ಈ ಅಭೇದ್ಯ ಕೋಟೆಯಲ್ಲಿ 19 ದ್ವಾರಗಳು, 38 ಹಿಂಭಾಗದ ದ್ವಾರಗಳು, ಅರಮನೆ, ಮಸೀದಿ, ಗೋದಾಮುಗಳು, ತೈಲ ಹೊಂಡ, ನಾಲ್ಕು ರಹಸ್ಯ ಪ್ರವೇಶದ್ವಾರಗಳು ಮತ್ತು ನೀರಿನ ಹೊಂಡಗಳನ್ನು ಇವೆ. ಅನೇಕ ಪ್ರವೇಶಗಳನ್ನು ಈ ಕೋಟೆಯು ಹೊಂದಿದ್ದು ಅವುಗಳಲ್ಲಿ ಪ್ರಮುಖವಾದವು ರಂಗಯ್ಯನ ಬಾಗಿಲು, ಸಿದ್ದಯ್ಯನ ಬಾಗಿಲು, ಉಚ್ಚಂಗಿ ಬಾಗಿಲು, ಕಾಮನ ಬಾಗಿಲು, ಲಾಲ್ ಕೋಟೆ ಬಾಗಿಲು, ಶೃಂಗಾರದ ಬಾಗಿಲು ಮತ್ತು ಗಾರೆ ಬಾಗಿಲು. ಕೋಟೆಗೆ 19 ದ್ವಾರಗಳು ಮತ್ತು ಕನಿಷ್ಠ 38 ಪ್ರವೇಶಗಳು ಇವೆ ಎಂದು ಹೇಳಲಾಗಿದೆ.

ಮಹಾಭಾರತದ ಮಹಾಕಾವ್ಯದಲ್ಲಿನ ಕಥೆಯ ಪ್ರಕಾರ ನರಭಕ್ಷಕ ಬಕಾಸುರ ಚಿತ್ರದುರ್ಗದಲ್ಲಿ ವಾಸವಾಗಿದ್ದು ಎಲ್ಲರ ಭಯಕ್ಕೆ ಕಾರಣವಾಗಿದ್ದ. ಪಾಂಡವರು ವನವಾಸದ ಸಮಯದಲ್ಲಿ ತಾಯಿ ಕುಂತಿಯೊಡನೆ ಇಲ್ಲಿಗೆ ಬಂದಾಗ ಭೀಮ ಬಕಾಸುರನ  ಜೊತೆ ಹೋರಾಡಿ ಅವನನ್ನು ಕೊಂದುಹಾಕಿದನು. ದಂತಕಥೆಯ ಪ್ರಕಾರ ಈ ಬಂಡೆಗಳು  ಹೋರಾಟದಲ್ಲಿ  ಉಪಯೋಗಿಸಲ್ಪಟ್ಟವು.

ಮದಕರಿ ನಾಯಕ ಆಳ್ವಿಕೆಯಲ್ಲಿ, ಚಿತ್ರದುರ್ಗ ನಗರವು ಹೈದರಾಲಿಯ  ಸೈನ್ಯದಿಂದ ಮುತ್ತಲ್ಪಟ್ಟಿತ್ತು. ಒಬ್ಬ ಹೆಂಗಸು ಕೋಟೆಯನ್ನು ಕಂದಕದ ಮೂಲಕ ಪ್ರವೇಶಿಸುವುದನ್ನು ಕಂಡು ಹೈದರಾಲಿ ಒಂದು ಯೋಜನೆಯನ್ನು ರೂಪಿಸಿದನು. ಆ ಕಿಂಡಿಯ ಹತ್ತಿರವಿರುವ ಕರ್ತವ್ಯ ಸಿಬ್ಬಂಧಿ ಊಟಕ್ಕೆ ಮನೆಗೆ ಹೋಗಿದ್ದಾಗ ಅವನ ಹೆಂಡತಿ ಓಬವ್ವ ಕಾವಲು ಕಾಯುತ್ತಿದ್ದಳು.

ಇಂತಹ ಸಮಯದಲ್ಲಿ ನುಸುಳುತ್ತಿದ್ದ ಹೈದರಾಲಿ ಸೈನಿಕರನ್ನು ಕಂಡು ಓಬವ್ವ ತನ್ನಲ್ಲಿದ್ದ ಒನಕೆಯಿಂದ ಒಬ್ಬೊಬ್ಬರನ್ನಾಗಿ ಕೊಂದು ಹಾಕಿದಳು. ಓಬವ್ವನ ಪತಿ ಊಟದಿಂದ ಹಿಂದಿರುಗಿ ರಕ್ತ ಸಿಕ್ತ ಒನಕೆಯೊಂದಿಗೆ ಓಬವ್ವನ ಕಂಡು ಆಘಾತಕ್ಕೊಳಗಾದನು. ಬಂಡೆಗಳಲ್ಲಿನ ಕಿಂಡಿಗಳು/ ರಂದ್ರಗಳು  ಕಥೆಗೆ  ಒಂದು ಐತಿಹಾಸಿಕ ಸಾಕ್ಷಿಗಳಾಗಿವೆ. (ತಣ್ಣೀರ ಹೋಂಡ, ವರ್ಷ ಪೂರ್ತಿ ತಣ್ಣೀರಿನ ಸಂಗ್ರಹವಿರುತ್ತದೆ. ಕರ್ನಾಟಕದ ಮಹಿಳೆಯರಿಗೆ ಓಬವ್ವ, ಕಿತ್ತೂರ ರಾಣಿ ಚೆನ್ನಮ್ಮನಂತೆ, ಒಂದು ದಂತ ಕಥೆಯಾಗಿದ್ದಾಳೆ.

ಚಿತ್ರದುರ್ಗ ಪ್ರಸಿದ್ಧತೆಗೆ ಮತ್ತು ಕಥೆಗಳ ಅಮರತ್ವಕ್ಕೆ ಒಬ್ಬರು (ಬಹುಶ್ಯ ಇತಿಹಾಸ ಕಾರಣಪುರಷರಿಕ್ಕಿಂತ) ಕಾರಣಕರ್ತರಾಗಿದ್ದಾರೆ . ಅವರೇ ತಳಕು ರಾಮಸ್ವಾಮಿ ಸುಬ್ಬ ರಾವ್ (ತಾರಾಸು). ಕನ್ನಡ ಸಾಹಿತ್ಯವನ್ನು ಲವಲೆಶದಷ್ಟಾದರು ಓದಿದ್ದರೆ ಅವರ ಮೇರುಕೃತಿ ದುರ್ಗಾಸ್ತಮಾನ ( ಮದಕರಿ ನಾಯಕನ ಕೊನೆಯ ಸಮಯ ಮತ್ತು ಚಿತ್ರದುರ್ಗವು ಕೊನೆಯಲ್ಲಿ ಹೈದರಾಲಿಯ ಕೈವಶವಾಗುವುದನ್ನು ವಿವರಿಸಿದ್ದಾರೆ)

ಪುಸ್ತಕಕ್ಕೆ ಕಡಿಮೆ ಒಲವಿದ್ದವರು ಸಂಗೀತಗಾರ ವೆಂಕಟಸುಬ್ಬಯ್ಯ (ತಾರಾಸು ಅವರ ಅದೇ ಹೆಸರಿನ ಪುಸ್ತಕ) ಅವರನ್ನು ಆಧರಿಸಿ ಚಿತ್ರದುರ್ಗದ ಹಿನ್ನಲೆಯುಳ್ಳ ಚಲನಚಿತ್ರವನ್ನು ನೋಡಿರಬಹುದು (ಜಿ. ವಿ. ಐಯರ್ ಅವರ ನಿರ್ದೇಶನ, ಬಾಲಮುರಳಿಕೃಷ್ಣ ಅವರ ಹಾಡಿಗೆ ಅನಂತನಾಗ್ ಅವರ ಅಭಿನಯ). ಈ ಸಿನಿಮಾ ಹಿಂದಿಯ ಚಲನಚಿತ್ರ ಬಸಂತ್ ಬಹಾರ್ ಗೆ ಪ್ರೇರಣೆಯಾಗಿತ್ತು.

error: Content Copyright protected !!