ಭಾರತದ ನಾಣ್ಯ ಪದ್ಧತಿಯ ಇತಿಹಾಸ ಮತ್ತು ಈಗಿನ ನಾಣ್ಯ ಪದ್ಧತಿ
ಭಾರತದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣೆಗೆ ಬಂದಿದ್ದು ಕ್ರಿ.ಪೂ 6ನೇ ಶತಮಾನದಲ್ಲಿ (ಸರಿ ಸುಮಾರು ಇದೇ ಅವಧಿಯಲ್ಲಿ ಅತ್ತ ಚೀನಾದಲ್ಲಿ ಮತ್ತು ಮಧ್ಯಪ್ರಾಚ್ಯದ ಲಿಡಿಯಾದಲ್ಲಿ ನಾಣ್ಯಗಳು ಟಂಕಿಸಲು ಆರಂಭಿಸಿದ್ದವು). ಪುರಾತನ ಭಾರತದಲ್ಲಿದ್ದ ಮಹಾಜನಪದರ ಆಡಳಿತ (ಮಗಧ, ಕುರು, ಪಾಂಚಾಲ, ಸೌರಾಷ್ಟ್ರ ಇತ್ಯಾದಿ) ನಾಣ್ಯಗಳನ್ನು ಚಲಾವಣೆಗೆ ತಂದಿತ್ತು.
ಬೆಳ್ಳಿಯನ್ನು ಚಪ್ಪಟೆಯಾಗಿ ತಟ್ಟಿ ಅದರಲ್ಲಿ ಚಿತ್ರಗಳನ್ನು ಅಚ್ಚೊತ್ತಲಾಗಿತ್ತು. ಆ ಕಾಲಕ್ಕೆ ಅದನ್ನು ‘ಪುರಾಣ’, ‘ಕರ್ಷಪಣ’ ಅಥವಾ ‘ಪಣ’ ಎಂದು ಕರೆಯುತ್ತಿದ್ದರಂತೆ. ಈ ನಾಣ್ಯಗಳು ನಿಗದಿತ ತೂಕವನ್ನು ಹೊಂದಿದ್ದವು. ಆದರೆ, ಆಕಾರ ಒಂದೇ ರೀತಿಯಲ್ಲಿರಲಿಲ್ಲ. ನಾಣ್ಯದಲ್ಲಿ ಇದ್ದ ಚಿಹ್ನೆಗಳೆಲ್ಲ ಆಯಾ ರಾಜವಂಶಕ್ಕೆ ಸಂಬಂಧಿಸಿದ್ದಾಗಿತ್ತು.
ಮೌರ್ಯರಕಾಲದ ಬೆಳ್ಳಿನಾಣ್ಯ ‘ರೂಪ್ಯಾರೂಪ’ (Rupyarupa),ಆನೆ ಮತ್ತು ಚಕ್ರದ ಚಿಹ್ನೆಯುಳ್ಳದ್ದು. ಕ್ರಿ ಪೂ.3ನೇ ಶತಮಾನದ್ದು. (183x183px) ನಂತರ ಅಧಿಕಾರಕ್ಕೆ ಬಂದ ಮೌರ್ಯರು (ಕ್ರಿ.ಪೂ 322–ಕ್ರಿ.ಪೂ185) ನಾಣ್ಯಕ್ಕೆ ಹೊಸ ರೂಪ ನೀಡಿದರು. ಚಿನ್ನ, ಬೆಳ್ಳಿ, ತಾಮ್ರ ಸೇರಿದಂತೆ ಬೇರೆ ಬೇರೆ ಲೋಹಗಳಿಂದ ನಾಣ್ಯಗಳನ್ನು ಆ ಕಾಲದಲ್ಲಿ ತಯಾರಿಸಲಾಗುತ್ತಿತ್ತು.
ಮೌರ್ಯರ ಮೊದಲ ರಾಜ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ಬರೆದಿರುವ ‘ಅರ್ಥಶಾಸ್ತ್ರ’ ಗ್ರಂಥದಲ್ಲಿ ನಾಣ್ಯಗಳ ಬಗ್ಗೆ ಉಲ್ಲೇಖ ಇದೆ. ಬೆಳ್ಳಿ ನಾಣ್ಯಗಳನ್ನು ‘ರುಪ್ಯರೂಪ’ ಎಂದು, ಚಿನ್ನದ ನಾಣ್ಯಗಳನ್ನು ‘ಸುವರ್ಣರೂಪ’ ಎಂದು, ತಾಮ್ರದಿಂದ ಮಾಡಿದ ನಾಣ್ಯವನ್ನು ‘ತಾಮರ ರೂಪ’ ಎಂದೂ, ಸೀಸದಿಂದ ಮಾಡಿದ ನಾಣ್ಯವನ್ನು ‘ಸೀಸರೂಪ’ ಎಂದು ಕರೆಯಲಾಗುತ್ತಿತ್ತು. ಮೌರ್ಯರು ತಮ್ಮ ರಾಜಮನೆತನದ ಮಾನದಂಡಕ್ಕೆ ತಕ್ಕಂತಹ ನಾಣ್ಯಗಳನ್ನು ರೂಪಿಸಿದ್ದರು.
# ಗ್ರೀಕರ ಕಾಲ :
Heliocles (145-130 BC) ಇಂಡೋ ಬ್ಯಾಕ್ಟ್ರಿಯಾದ ಕೊನೆಯ ರಾಜ ಹೆಲಿಯೊಕ್ಲಿಸ್ ಕಾಲದ ನಾಣ್ಯ. ಆ ಬಳಿಕ ದೇಶದಲ್ಲಿ ಅಧಿಪತ್ಯ ಸಾಧಿಸಿದ ಗ್ರೀಸ್ ಮೂಲದ ರಾಜರು ನಾಣ್ಯಗಳಲ್ಲಿ ರಾಜ್ಯದ ಮುಖ್ಯಸ್ಥರ ಚಿತ್ರಗಳನ್ನು ಅಚ್ಚೊತ್ತಲು ಆರಂಭಿಸಿದರು. ನಾಣ್ಯದ ಒಂದು ಮುಖದಲ್ಲಿ ರಾಜನ ಚಿತ್ರವಿದ್ದರೆ, ಮತ್ತೊಂದು ಮುಖದಲ್ಲಿ ಆತ ಪೂಜಿಸುತ್ತಿದ್ದ ದೇವರ ಚಿತ್ರವನ್ನು ಬಿಡಿಸಲಾಗುತ್ತಿತ್ತು.
ಇಂಡೋ-ಗ್ರೀಕ್ ರಾಜರ ವ್ಯಾಪ್ತಿಯಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಿಂದ ಪ್ರೇರಿತರಾಗಿ, ದೇಶದಲ್ಲಿದ್ದ ಇತರ ಆಡಳಿತ ವಂಶಗಳು, ಬುಡಕಟ್ಟು ಪ್ರದೇಶಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದವರು, ತಮ್ಮದೇ ಆದಂತಹ ನಾಣ್ಯಗಳನ್ನು ತಯಾರಿಸಿ ಚಲಾವಣೆಗೆ ತಂದರು.
# ಗುಪ್ತರ ಕಾಲ :
ಸುಮಾರು ಕ್ರಿ.ಶ.78 ರಲ್ಲಿ ಬಂದ ಕುಶಾನರೂ ನಾಣ್ಯಗಳನ್ನು ಟಂಕಿಸುತ್ತಿದ್ದರು. ಕುಶಾನರ ಕಾನಿಷ್ಕನ ಕಾಲದ ನಾಣ್ಯಗಳು ಸಿಕ್ಕಿವೆ. ಅದೇ ಕಾಲದಲ್ಲಿ ದಕ್ಷಿಣದ ಆಂಧ್ರದಲ್ಲಿ ಆಳುತ್ತಿದ್ದ ರಾಜರ ನಾಣ್ಯಗಳೂ ಸಿಕ್ಕಿವೆ. ಹೆಚ್ಚು ಸಂಖ್ಯೆಯಲ್ಲಿ ಚಿನ್ನದ ನಾಣ್ಯಗಳು ಚಲಾವಣೆಗೆ ಬಂದಿದ್ದು ಗುಪ್ತರ ಕಾಲದಲ್ಲಿ. ಗುಪ್ತ ಸಾಮ್ರಾಜ್ಯದ ರಾಜರು ನಡೆಸುತ್ತಿರುವ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಬಿಂಬಿಸುವ ಚಿತ್ರಗಳನ್ನು ನಾಣ್ಯಗಳಲ್ಲಿ ಕೆತ್ತಲಾಗುತ್ತಿತ್ತು.
ಸಂಸ್ಕೃತದಲ್ಲಿ ಬರೆದಿದ್ದ ಶಾಸನಗಳನ್ನೂ ಬರೆಯಲಾಗುತ್ತಿತ್ತು. ಸಮುದ್ರಗುಪ್ತನು ಸ್ವತಃ ಕವಿ ಹಾಗೂ ಸಂಗೀತ ಕಲೆಯಲ್ಲಿ ನಿಪುಣ; ಅವನ ನಾಣ್ಯಗಳ ಪೈಕಿ ಒಂದರ ಮೇಲೆ ರಾಜನು ವೀಣೆಯನ್ನು ನುಡಿಸುತ್ತಿರುವ ಚಿತ್ರವಿದೆ. ಟರ್ಕಿಯ ಸುಲ್ತಾನರು ಉತ್ತರ ಭಾರತಕ್ಕೆ ಬಂದು ಅಧಿಕಾರ ಸ್ಥಾಪಿಸುವವರೆಗೆ ಈ ಬಗೆಯ ನಾಣ್ಯಗಳ ಸಂಪ್ರದಾಯ ಮುಂದುವರೆಯಿತು.
# ರೂಪಾಯಿ ಹೆಸರು ಉಗಮ :
13ನೇ ಶತಮಾನದ ಆರಂಭದಲ್ಲಿ ಧಾಳಿಮಾಡಿದ ಮಹಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಮತ್ತು ಅವನ ನಂತರದವರೂ ತಮ್ಮದೇ ನಾಣ್ಯಗಳನ್ನು ಜಾರಿಗೆ ತಂದಿದ್ದರು. ಬಲ್ಬನ್ನ ಕಾಲದ ನಾಣ್ಯಗಳೂ ಸಿಕ್ಕಿವೆ.
ನಂತರ 16ನೇ ಶತಮಾನದಲ್ಲಿ (ಕ್ರಿ.ಶ 1526) ಮೊಘಲ್ರು ಸಾಮ್ರಾಜ್ಯ ಅಧಿಪತ್ಯ ಸ್ಥಾಪಿಸುವುದರೊಂದಿಗೆ ಭಾರತದ ಹಣಕಾಸು ವ್ಯವಸ್ಥೆ ಮತ್ತೊಂದು ಮಜಲಿಗೆ ತೆರೆದುಕೊಂಡಿತು. ತಮ್ಮ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಏಕರೂಪದ ಮತ್ತು ಸಂಘಟಿತ ಹಣಕಾಸು ವ್ಯವಸ್ಥೆಯನ್ನು ಮೊಘಲರು ಜಾರಿಗೆ ತಂದರು. ನಂತರ ಬಂದಿದ್ದೇ ರೂಪಾಯಿ.
1540ರ ನಂತರದಲ್ಲಿ ನಾಣ್ಯಗಳನ್ನು ರೂಪಾಯಿ ಮಾನದಂಡದಲ್ಲಿ ಅಳೆಯುವ ಪದ್ಧತಿ ಜಾರಿಗೆ ಬಂತು. ಇದಕ್ಕೆ ಕಾರಣೀಭೂತನಾದವನು ಉತ್ತರ ಭಾರತದಲ್ಲಿ ಸುರ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಶೇರ್ ಷಾ ಸೂರಿ ಎಂಬ ಆಫ್ಘಾನಿಸ್ತಾನ ಮೂಲದ ಪಠಾಣ್ ಸಮುದಾಯದ ರಾಜ. ಈ ಶೇರ್ ಖಾನ್ ಮೊದಲು “ರೂಪಿಯಾ” ಎಂಬ ಹೆಸರಿನ 178 ಧಾನ್ಯಗಳ ತೂಕದ ಬೆಳ್ಳಿ ನಾಣ್ಯವು 1540 ಮತ್ತು 1545.
ನಡುವೆ ಚಕ್ರವರ್ತಿ ಶೇರ್ ಷಾ ಸೂರಿಯ ಸಂಕ್ಷಿಪ್ತ ಆಳ್ವಿಕೆಯಲ್ಲಿ ಉತ್ತರ ಭಾರತದಲ್ಲಿ ಮುದ್ರಿಸಲ್ಪಟ್ಟಿತು. ಸೂರಿಯು “ದಾಮ” ಎಂಬ ತಾಮ್ರದ ನಾಣ್ಯಗಳನ್ನು ಮತ್ತು 169 ಧಾನ್ಯಗಳ ತೂಗುವ “ಮೊಹರು” ಎಂಬ ಚಿನ್ನದ ನಾಣ್ಯಗಳನ್ನೂ ಸಹ ಜಾರಿಗೆ ತಂದನು. ರೂಪಾಯಿ ಹೆಸರಿನ ಈ ಬಗೆಯ ಬೆಳ್ಳಿ ನಾಣ್ಯ ಮೊಘಲ್ ಅವಧಿಯಲ್ಲಿ,ನಂತರ ಮರಾಠಾ ಯುಗದಲ್ಲಿ ಹಾಗೂ ಬ್ರಿಟಿಷ್ ಭಾರತ ಬಳಕೆಯಲ್ಲಿ ಬಂದವು.
# ಬ್ರಿಟಿಷ್ ಕಂಪನಿಯ ನಾಣ್ಯ :
1717ರಲ್ಲಿ ಬ್ರಿಟಿಷರು, ಬಾಂಬೆಯಲ್ಲಿದ್ದ ಮೊಘಲರ ನಾಣ್ಯ ತಯಾರಿಕಾ ಕೇಂದ್ರದಲ್ಲಿ ನಾಣ್ಯ ತಯಾರಿಸಲು ಅನುಮತಿ ಪಡೆದುಕೊಂಡರು. ಅಲ್ಲಿ ಬ್ರಿಟಿಷ್ ಆಡಳಿತ ಚಿನ್ನ, ಬೆಳ್ಳಿ ತಾಮ್ರ ಮತ್ತು ತಗಡಿನಿಂದ (ಟಿನ್) ನಾಣ್ಯಗಳನ್ನು ತಯಾರಿಸಲು ಆರಂಭಿಸಿತು. ಚಿನ್ನದ ನಾಣ್ಯವನ್ನು ಕ್ಯಾರೊಲಿನಾ ಎಂದು, ಬೆಳ್ಳಿ ನಾಣ್ಯವನ್ನು ಏಂಜಲಿನಾ ಎಂದೂ, ತಾಮ್ರ ನಾಣ್ಯವನ್ನು ಕುಪ್ಪರೊನ್ ಹಾಗೂ ತಗಡಿನ ನಾಣ್ಯವನ್ನು ಟಿನ್ನಿ ಎಂದು ಕರೆಯಲಾಗುತ್ತಿತ್ತು.
ಬ್ರಿಟಿಷ್ ಇಂಡಿಯಾದಲ್ಲಿ ದೇಶದ ಮೊದಲ ಕಾಗದದ ಹಣ ತಯಾರಾಯಿತು. ಬ್ಯಾಂಕ್ ಆಫ್ ಹಿಂದೊಸ್ತಾನ್ 1770ರಲ್ಲಿ ಮೊದಲ ಕಾಗದದ ನೋಟನ್ನು ಬಿಡುಗಡೆ ಮಾಡಿತು. ಜನರಲ್ ಬ್ಯಾಂಕ್ ಆಫ್ ಬೆಂಗಾಲ್ ಮತ್ತು ಬೆಂಗಾಲ್ ಬ್ಯಾಂಕ್ ಕೂಡ ಕಾಗದದ ಹಣವನ್ನು ಚಲಾವಣೆಗೆ ತಂದವು. ಈ ಕಾಗದದ ನೋಟನ್ನು ಬೆಳ್ಳಿ ನಾಣ್ಯಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಇತ್ತು.
1835 ಈಸ್ಟ್ ಇಂಡಿಯಾಕಂಪನಿಯ ಮೂರು ಕಾಸಿನ ತಾಮ್ರದ ಬಿಲ್ಲೆ. 1835ರಲ್ಲಿ ಬ್ರಿಟಿಷರು ದೇಶದಾದ್ಯಂತ ಏಕರೂಪದ ನಾಣ್ಯಗಳನ್ನು ಬಳಸುವುದಕ್ಕಾಗಿ ನಾಣ್ಯ ಪದ್ಧತಿ ಕಾಯ್ದೆಯನ್ನೇ ಜಾರಿಗೆ ತಂದರು. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ತಮ್ಮ ವಸಾಹತುಗಳಲ್ಲಿ ರೂಪಾಯಿ ಪದ್ಧತಿಯನ್ನು ಅಧಿಕೃತವಾಗಿ ಜಾರಿಗೆ ತಂದರು. ಹಿಂದಿನ ನೋಟುಗಳು ಮತ್ತು ನಾಣ್ಯಗಳಲ್ಲಿದ್ದ ಸ್ಥಳೀಯ ಆಡಳಿತದ ಚಿಹ್ನೆಗಳ ಬದಲಿಗೆ ಬ್ರಿಟಿಷ್ ಆಡಳಿತಗಾರರ ಚಿತ್ರಗಳನ್ನು ಮುದ್ರಿಸಲು ಆರಂಭಿಸಿದರು. 1862ರಲ್ಲಿ ಬ್ರಿಟನ್ ರಾಣಿ ವಿಕ್ಟೋರಿಯಾ ಗೌರವಾರ್ಥ ಅವರ ಚಿತ್ರಗಳನ್ನೊಳಗೊಂಡ ಸರಣಿ ನೋಟುಗಳು ಮತ್ತು ನಾಣ್ಯಗಳು ಚಲಾವಣೆಗೆ ಬಂದವು.
ವಿಕ್ಟೋಇಯಾ ರಾಣಿಯ ಚಿತ್ರವಿರುವ ಒಂದು ಮೊಹರು 1862,ರದ್ದು, ಕಲ್ಕತ್ತಾ ಟೆಂಕೆ. ಮೊಘಲ್ ಚಕ್ರವರ್ತಿ II ನೇ ಶಾ ಆಲಮ್ ಪೂರ್ವ ಭಾರತದ ದೊಡ್ಡ ಭಾಗಗಳ ಆದಾಯವನ್ನು ಸಂಗ್ರಹಿಸಲು ಈಸ್ಟ್ ಇಂಡಿಯಾ ಕಂಪನಿಯ ಹಕ್ಕನ್ನು ಒಪ್ಪಿ ಅಲಹಾಬಾದ್ ಒಪ್ಪಂದಕ್ಕೆ ಸಹಿ ಮಾಡಿದನು. ಆರಂಭಿಕ ಬಂಗಾಳ ಸಮಸ್ಯೆಗಳು ಮೊಘಲ್ ಚಕ್ರವರ್ತಿ ಅಲಮಗಿರ್ II, ಹಾಗೂ ನಂತರ ಶಾ ಆಲಮ್ II ರ ಹೆಸರಿನಲ್ಲಿ ಇರಿಸಲಾಯಿತು. ಈ ವಿತ್ತೀಯ ವ್ಯವಸ್ಥೆಯು “ಭಾರತೀಯ ಸ್ಟ್ಯಾಂಡರ್ಡ್” ಎಂದು, 1 ಏಪ್ರಿಲ್ 1957 ರ ತನಕ ಇದು ನಡೆಯಿತು.
ರಾಣಿ ವಿಕ್ಟೋರಿಯಾಳ ಕಿರೀಟಸಹಿತ ವರುವ ಎದೆಮಟ್ಟದ ಚಿನ್ನದ ನಾಣ್ಯಗಳು 1862 ರ ಆರಂಭದಲ್ಲಿದ್ದು ಈ ನಾಣ್ಯಗಳು ಹಿಂದಿನ ತೂಕವನ್ನೇ ಹೋದಿತ್ತು; ಒಂದು ಮೊಹರು ನಾಣ್ಯ ಒಂದು ತೊಲ(11.66 ಗ್ರಾಂ = ಒಂದು ತೊಲ) ಮತ್ತು ಅದು (0.9167) ಉತ್ಕೃಷ್ಟತೆಯ ಚಿನ್ನ ಒಳಗೊಂಡಿತ್ತು. ವಿಕ್ಟೋರಿಯಾ ರಾಣಿ ‘ಮೊಹರುಗಳು ವರ್ಷದ 1870 ರ ಜೊತೆ 1875,ಹಾಗೂ ವಿಕ್ಟೋರಿಯಾಳ ಉತ್ತಮಪಡಿಸಿದ ಅದೇ ಚಿತ್ರದೊಂದಿಗೆ ಬಂದವು. 1876 ರಲ್ಲಿ ವಿಕ್ಟೋರಿಯಾ ‘ಭಾರತದ ಮಹಾರಾಣಿ’ ಎಂಬ ಬಿರುದನ್ನು ಪಡೆದರು. ಆಗ 1877 ರಿಂದ, ಎಲ್ಲಾ ನಾಣ್ಯಗಳನ್ನು ಮೇಲಿರುವ ‘ವಿಕ್ಟೋರಿಯಾ ಮಹಾರಾಣಿ’ ಎಂಬ ಹೆಸರಿಗೆ ಬದಲಾಯಿಸಲಾಯಿತು, ಈ ಹೊಸ ಚಿನ್ನದ ಮೊಹರುಗಳನ್ನು 1877 ಮತ್ತು 1891 ನಡುವೆ ನೀಡಲಾಯಿತು.
# ಆಧುನಿಕ ನಾಣ್ಯ ವ್ಯವಸ್ಥೆ :
ಭಾರತದ ಹಣಕಾಸು ವ್ಯವಸ್ಥೆ ಸುದೀರ್ಘ ಇತಿಹಾಸ ಹೊಂದಿದ್ದು ಇತ್ತೀಚಿನವರೆಗೂ ಭಾರತದಲ್ಲಿ ಏಕರೀತಿಯ ಹಣಕಾಸಿನ ವ್ಯವಸ್ಥೆ ಜಾರಿಯಲ್ಲಿರಲಿಲ್ಲ. ದೇಶ ಇಂದಿನ ಹಾಗೆ ಒಂದು ಏಕೀಕೃತ ರಾಷ್ಟ್ರವಾಗಿರದೆ ವಿವಿಧ ಪ್ರಾಂತ್ಯಗಳು ಮತ್ತು ಪ್ರದೇಶಗಳು ಅಸ್ತಿತ್ವದಲ್ಲಿದ್ದವು. ಹಾಗೂ ಇವುಗಳೆಲ್ಲಾ ವಿವಿಧ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದವು. ಆದ್ದರಿಂದ 1835 ರ ಹಿಂದೆ ದೇಶದಲ್ಲಿ ವಿವಿಧ ರೀತಿಯ ನಾಣ್ಯಗಳು ಬಳಕೆಯಲ್ಲಿದ್ದವು.
ಇತಿಹಾಸಕಾರರು ಹೇಳುವಂತೆ ಭಾರತದಲ್ಲಿ ವಿವಿಧ ತೂಕ ಮತ್ತು ಮೌಲ್ಯದ ಸುಮಾರು 994 ರೀತಿಯ ನಾಣ್ಯಗಳು ಅಸ್ತಿತ್ವದಲ್ಲಿದ್ದವು. ಹಾಗಾಗಿ ಈ ಕಾಲಾವಧಿಯನ್ನು “ ಬಹುಮುಖ ಹಣ ಮತ್ತು ಖಾಸಗಿ ನಾಣ್ಯ’ ದ ಕಾಲ ಎಂದು ಕರೆಯಲಾಗಿದೆ.
ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಒಮ್ಮತ ಸಾಧಿಸುವ ಸಲುವಾಗಿ ಈಸ್ಟ್ ಇಂಡಿಯಾ ಕಂಪನಿ 1835 ರಲ್ಲಿ ಕರೆನ್ಸಿ ಕಾಯಿದೆಯನ್ನು ಜಾರಿಗೊಳಿಸಿತು. ಈ ಕಾಯಿದೆನ್ವಯ ‘ ಬೆಳ್ಳಿ ನಾಣ್ಯ ಪ್ರಮಿತಿ’ ಜಾರಿಗೊಂಡಿತು. ಈ ವ್ಯವಸ್ಥೆ 1871 ರವರೆಗೆ ಮುಂದುವರೆಯಿತು. 1873 ಮತ್ತು 1893 ರ ನಡುವೆ ಯೂರೋಪಿನ ಅನೇಕ ರಾಷ್ಟ್ರಗಳು ‘ ಸುವರ್ಣ ಪ್ರಮಿತಿ’ ಯನ್ನು ಜಾರಿಗೆಗೊಳಿಸಿದವು.
ಇದರಿಂದಾಗಿ ದೇಶದಲ್ಲಿ ಅನೇಕ ಹಣಕಾಸಿನ ಸಮಸ್ಯೆಗಳು ಹುಟ್ಟಿಕೊಂಡವು. ಆದ್ದರಿಂದ ಸರ್ಕಾರ ಹಣಕಾಸಿನ ವ್ಯವಸ್ಥೆಯನ್ನು ಸರಿಪಡಿಸಲು ಅನುಸರಿಸಬೇಕಾದ ಕ್ರಮಗಳನ್ನು ಸಲಹೆ ಮಾಡುವಂತೆ ಸೂಚಿಸಿ 1893 ರಲ್ಲಿ ‘ಹೆರ್ಶ್ಚೆಲ್ ಸಮಿತಿ’ ಮತ್ತು 1898 ರಲ್ಲಿ ‘ಹೆನ್ರಿ ಪೌಲರ್’ ಸಮಿತಿಗಳನ್ನು ರಚಿಸಿತು. ಈ ಸಮಿತಿಗಳ ಸಲಹೆಯ ಮೇರೆಗೆ ‘ ಸುವರ್ಣ ವಿನಿಮಯ ಪ್ರಮಿತಿ’ ಯನ್ನು ಅಳವಡಿಸಿಕೊಳ್ಳಲಾಯಿತು. ಇದು 1931 ರವರೆಗೆ ಅಸ್ತಿತ್ವದಲ್ಲಿತ್ತು.
• 1931 ರಲ್ಲಿ ಭಾರತ ‘ಸ್ಟರ್ಲಿಂಗ್ ವಿನಿಮಯ ಪ್ರಮಿತಿ’ ಯ ಯುಗವನ್ನು ಪ್ರವೇಶಿಸಿತು. ಈ ವ್ಯವಸ್ಥೆ ಭಾರತ ಸ್ವಾತಂತ್ರ್ಯ ಪಡೆಯುವವರೆಗೂ ಅಸ್ತಿತ್ವದಲ್ಲಿತ್ತು. 1856 ರ ಜೂನ್ವರೆಗೆ ಭಾರತ ಶೇಖಡ 100 ರ ಭದ್ರತೆ ಅಪೇಕ್ಷಿಸುವ ‘ ಅನುಪಾತಿಕ ಮೀಸಲು ಪದ್ಧತಿ’ ಯನ್ನು ಅನುಸರಿಸುತ್ತಿತ್ತು.
• ಭಾರತದ ನೋಟುಗಳನ್ನು ಮುದ್ರಿಸಲು ಮತ್ತು ನಿರ್ವಹಿಸಲೇಂದೆ ‘ಭಾರತೀಯ ರಿಸರ್ವ್ ಬ್ಯಾಂಕ್’ 1935 ರಲ್ಲಿ ಪ್ರಾರಂಭವಾಯಿತು. ಆರ್ಬಿಐ ಎಂದೇ ಪ್ರಖ್ಯಾತವಾದ ಈ ಬ್ಯಾಂಕ್ 1938 ರಲ್ಲಿ ಮುದ್ರಿಸಿದ ಪ್ರಥಮ ನೋಟು ಐದು ರೂಪಾಯಿದ್ದಾಗಿದ್ದು, ಬ್ರಿಟನ್ ರಾಜ ಆರನೆಯ ಜಾರ್ಜ್ರವರ ಭಾವಚಿತ್ರ ಹೊಂದಿತ್ತು. ಸ್ವಾತಂತ್ರ್ಯ ನಂತರ ಅದರ ಮಾನ್ಯತೆಯನ್ನು ರದ್ದುಗೊಳಿಸಿತು
• ಸ್ವಾತಂತ್ರ್ಯಾ ನಂತರದ ಪ್ರಮುಖ ಬೆಳವಣಿಗೆಯೆಂದರೆ ಸರ್ಕಾರ ಇಂಗ್ಲೆಂಡಿನ ಪೌಂಡ್ ಸ್ಟರ್ಲಿಂಗ್ನೊಂದಿಗೆ ಸಂಪರ್ಕವನ್ನು ಕಡಿದು ಹಾಕಿ ಜಗತ್ತಿನ ಎಲ್ಲಾ ಪ್ರಮುಖ ನಾಣ್ಯಗಳೊಂದಿಗೆ ಸಂಪರ್ಕ ಕಲ್ಪಿಸಿತು.
• 1950 ರ ಆಗಸ್ಟ್ 15 ರ ನಂತರ ನೋಟುಗಳಲ್ಲಿ ಮತ್ತು ನಾಣ್ಯಗಳಲ್ಲಿ ಬ್ರಿಟಿಷ್ ಆಡಳಿಗಾರರ ಚಿತ್ರದ ಬದಲಿಗೆ ಅಶೋಕ ಸ್ತಂಭದ ಚಿತ್ರ ಮುದ್ರಿಸಲಾಯಿತು. ಅಲ್ಲಿಂದ ಮುಂದೆ ಭಾರತೀಯ ಹಣಕಾಸು ವ್ಯವಸ್ಥೆ ಮತ್ತೊಂದು ಹಂತಕ್ಕೆ ಕಾಲಿರಿಸಿತು.
• 1955 ರಲ್ಲಿ ಭಾರತೀಯ ನಾಣ್ಯ ಪದ್ಧತಿ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. 1957 ರ ಏಪ್ರಿಲ್ 1 ರಿಂದ ಒಂದು ರೂಪಾಯಿ ಎಂದರೆ 100 ಪೈಸೆ ಎಂಬ ಮಾನದಂಡವನ್ನು ಅನುಸರಿಸಲಾಯಿತು.
• 1969 ರಲ್ಲಿ ಮಹಾತ್ಮಗಾಂಧಿ ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ಅವರ ಚಿತ್ರವಿರುವ ನೋಟುಗಳನ್ನು ಬಿಡುಗಡೆಗೊಳಿಸಲಾಯಿತು.
# ಭಾರತದ ಈಗಿನ ನಾಣ್ಯ ಪದ್ಧತಿ:
ಭಾರತದಲ್ಲಿ ಇಂದು ‘ ಅಪರಿವರ್ತಿತ ಕಾಗದ ಹಣದ ಪ್ರಮಿತಿ’ ಜಾರಿಯಲ್ಲಿದೆ. ದೇಶದಲ್ಲಿ ಇಂದು ಚಲಾವಣೆಯ ಹಣವನ್ನು 1956 ರ ಜುಲೈನಲ್ಲಿ ಜಾರಿಗೆ ಬಂದ ‘ಕನಿಷ್ಠ ಮೀಸಲು ಪದ್ಧತಿ’ಯ ಅನುಸಾರ ಮುದ್ರಿಸಿ ಚಲಾವಣೆಗೆ ತರಲಾಗುತ್ತಿದೆ. ಭಾರತದಲ್ಲಿ ಇಂದು ಎರಡು ರೀತಿಯ ಹಣ ಚಲಾವಣೆಯಲ್ಲಿದೆ. ಅವುಗಳೆಂದರೆ
ಎ. ನಾಣ್ಯಗಳು: ನಾಣ್ಯಗಳ ಮುಖಬೆಲೆ ಅವುಗಳಲ್ಲಿ ಲೋಹದ ಬೆಲೆಗಿಂತಲೂ ಅಧಿಕವಿರುತ್ತದೆ. ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ನಾಣ್ಯಗಳನ್ನು ಟಂಕಶಾಲೆಯಲ್ಲಿ ತಯಾರಿಸಿ ಹೊರತರುತ್ತದೆ.
ಬಿ. ಕರೆನ್ಸಿ ನೋಟುಗಳು: ಭಾರತದಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ಹಣದಲ್ಲಿ ಕರೆನ್ಸಿ ನೋಟುಗಳದು ಸಿಂಹಪಾಲು. ಭಾರತದ ನೋಟುಗಳೆಲ್ಲಾ ಅಪರಿಮಿತ ಕಾನೂನು ಬದ್ದ ಹಣಗಳಾಗಿವೆ. ಈ ಎಲ್ಲಾ ನೋಟುಗಳು ಪರಿವರ್ತಿಸಲಾಗದ ಕಾಗದದ ನೋಟುಗಳಾಗಿವೆ.
# ನಾಣ್ಯ ವ್ಯವಸ್ಥೆ :
1 ಪೈ(ಕಾಸು) =1/100ರೂಪಾಯಿ 3ಪೈ= 1 ಬಿಲ್ಲೆ = 1 ಪೈ(ಕಾಸು)=1/12 ಆಣೆ ಅಥವಾ 12 ಕಾಸು= 1 ಆಣೆ
1 ಬಿಲ್ಲೆ = 1/4 ಆಣೆ = 1/64 ರೂಪಾಯಿ
1 ಆಣೆ = 1/16 ರೂಪಾಯಿ ಅಥವಾ 16 ಆಣೆ = 1ರೂಪಾಯಿ (ಬೆಳ್ಳಿ ನಾಣ್ಯ-೧ ತೊಲ)
15 ರೂಪಾಯಿ (ಅಂದಾಜು) = 1 ಮೊಹರು. (ಒಂದು ತೊಲ ಚಿನ್ನದ ಬೆಲೆ)
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು
➤ ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
➤ ಕರ್ನಾಟಕದ ಮುಖ್ಯ ನದಿಗಳು ಮತ್ತು ಅವುಗಳು ಉಗಮ ಸ್ಥಳ
➤ ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಟ್ಟಿ