GKHistorySpardha Times

ಭಾರತಕ್ಕೆ ಯುರೋಪಿಯನ್ನರ ಆಗಮನ : ಪ್ರಮುಖ ಪ್ರಶ್ನೆಗಳು

Share With Friends

1.ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಯುರೋಪಿಯನ್ನರನ್ನು ಹೆಸರಿಸಿ.
✦ಪೋರ್ಚುಗೀಸರು, ಡಚ್ಚರು, ಇಂಗ್ಲಿಷರು, ಮತ್ತು ಫ್ರೇಂಚರು

2.ಭಾರತ ಮತ್ತು ಯುರೋಪಗಳ ನಡುವಣ ವ್ಯಾಪಾರದ ಪ್ರಮುಖ ಕೇಂದ್ರ ಯಾವುದು?
✦“ಕಾನ್ಸ್ಟಾಂಟಿನೋಪಲ್ ನಗರ”ವು ಭಾರತ ಮತ್ತು ಯುರೋಪ್ ನಡುವಣದ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು.

3.ಭಾರತ ಮತ್ತು ಯುರೋಪ್ನ ನಡುವೆ ಮಧ್ಯಯುಗದಲ್ಲಿ ವ್ಯಾಪರಕ್ಕೆ ಬಳಸುತ್ತಿದ್ದ ಎರಡು ಮಾರ್ಗಗಳು ಯಾವುವು?
✦ಯುರೋಪಿನ ಜೊತೆಗಿನ ಭಾರತದ ವ್ಯಾಪಾರವು “ಕಾನ್ಸ್ಟಾಂಟಿನೋಪಲ್” ಪಟ್ಟಣದ ಮೂಲಕ ‘ಭೂ ಮಾರ್ಗ’ವಾಗಿ ಸಾಗುತ್ತಿತ್ತು. ಸರಕುಗಳು ಕಾನ್ಸ್ಸ್ಟಾಂಟಿನೋಪಲ್ಗೆ ಅರಬ್ಬಿ ಸಮುದ್ರ ಮತ್ತು ಕೆಂಪು ಸಮುದ್ರಗಳ “ಜಲಮಾರ್ಗ”ದ ಮೂಲಕವಾಗಿಯೂ ತಲುಪುತ್ತಿದ್ದವು.

4.ಯುರೋಪ್ ಮತ್ತು ಏಷಿಯಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದ ಭಾರತೀಯ ವಸ್ತುಗಳು ಯಾವುವು?
✦ಹತ್ತಿ ಬಟ್ಟೆ, ಮಸಾಲೆ ಪದಾರ್ಥಗಳಾದ ಮೆಣಸು, ಏಲಕ್ಕಿ, ಲವಂಗ, ದಾಲ್ಚಿನಿ, ವಜ್ರ, ರೇಷ್ಮೇ, ಮುತ್ತುಗಳು ಮತ್ತು ಶ್ರೀಗಂಧಗಳಿಗೆ ಯೂರೋಪ್ ಮತ್ತು ಏಷಿಯಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇತ್ತು.

5.ಯುರೋಪಿಯನ್ನರು ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿಯಲು ಕಾರಣವೇನು?
✦ಕ್ರಿ.ಶ 1453ರಲ್ಲಿ ಆಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು(ಈಗಿನ ಇಸ್ತಾನ್ಬುಲ್) ವಶಪಡಿಸಿಕೊಂಡು, ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವಿನ ಭೂ ಮಾರ್ಗವನ್ನು ಮುಚ್ಚಿದರು. ಇದರಿಂದಾಗಿ ಯುರೋಪಿಯನ್ನರಿಗೆ ಭಾರತಕ್ಕೆ ಹೊಸ ಮಾರ್ಗವನ್ನು ಕಂಡುಹಿಡಿಯುವುದು ಅನಿವಾರ್ಯವಾಯಿತು.

6.ಸಮುದ್ರಯಾನವನ್ನು ಪ್ರೋತ್ಸಾಹಿಸಿದ ಮೊದಲ ದೇಶ ಯಾವುದು?
✦ಪೋರ್ಚುಗಲ್

7.15 ನೆಯ ಶತಮಾನದಲ್ಲಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಯಾರು ಕಂಡುಹಿಡಿದರು?
✦ಪೋರ್ಚುಗೀಸ್ ನಾವಿಕ “ವಾಸ್ಕೋ-ಡ- ಗಾಮನು” ಸಮುದ್ರ ಮಾರ್ಗವನ್ನು ಕಂಡುಹಿಡಿದನು. ಅವನು ಕ್ರಿ.ಶ 1498ರಲ್ಲಿ ಕ್ಯಾಲಿಕಟ್ ತಲುಪಿದನು.

8.ವಾಸ್ಕೋ-ಡ- ಗಾಮನು ವ್ಯಾಪಾರಕ್ಕೆ ಯಾರಿಂದ ಅನುಮತಿ ಪಡೆದನು?
✦ವಾಸ್ಕೋ-ಡ-ಗಾಮನು ವ್ಯಾಪಾರಕ್ಕೆ “ಕ್ಯಾಲಿಕಟ್ ದೊರೆ ಜಾಮೋರಿನ್ನಿಂದ” ಅನುಮತಿ ಪಡೆದನು.

9.ಫ್ರಾನ್ಸಿಸ್ಕೋ- ಅಲ್ಮೇಡ್ ಯಾರು, ಅವನ ಸಾಧನೆಗಳೇನು?
✦ಫ್ರಾನ್ಸಿಸ್ಕೋ – ಅಲಮೇಡ್ ಭಾರತದಲ್ಲಿನ ಪೋರ್ಚುಗೀಸ್ ವಸಾಹತುಗಳ ವೈಸರಾಯ ಆಗಿದ್ದನು. ಇವನು ಅರಬ್ಬರಿಂದ ಅರಬ್ಬೀ ಸಮುದ್ರದಿಂದ ದೂರವಿಡಲು ಫ್ರಾನ್ಸಿಸ್ಕೋ- ಅಲಮೇಡ್ ಒಂದು ಶಕ್ತಿಯುತವಾದ ನೌಕಾಬಲವನ್ನು ಕಟ್ಟಿದನು. ಇದರಿಂದಾಗಿ ಸುಮಾರು ಒಂದು ಶತಮಾನದವರೆಗೂ ಹಿಂದೂ ಮಹಾಸಾಗರವು ಪೋರ್ಚುಗೀಸರ ಸಮುದ್ರವಾಗಿ ಮಾರ್ಪಟ್ಟಿತು.

10.ಅಲ್ಫಾನ್ಸೋ- ಡಿ- ಅಲ್ಬುಕರ್ಕ್’ ಯಾರು?
✦‘ಅಲ್ಫಾನ್ಸೋ- ಡಿ- ಅಲ್ಬುಕರ್ಕ್’ ಭಾರತದಲ್ಲಿ ಪೋರ್ಚುಗೀಸg ಗವರ್ನರ್ ಆಗಿದ್ದನು.

11.ಅಲ್ಫಾನ್ಸೋ- ಡಿ- ಅಲ್ಬುಕರ್ಕ್’ ನ ಸಾಧನೆಗಳೆನು?
✦ಅಲ್ಫಾನ್ಸೋ- ಡಿ- ಅಲ್ಬುಕರ್ಕ್’ ನು ಕ್ರಿ.ಶ. 1509ರಲ್ಲಿ ಭಾರತಕ್ಕೆ ಬಂದು ಪೋರ್ಚುಗೀಸ್ ಆಡಳಿತಕ್ಕೆ ಭದ್ರ ಬುನಾದಿ ಹಾಕಿದನು. ಕ್ರಿ.ಶ 1510ರಲ್ಲಿ ಈತನು ಬಿಜಾಪುರದ ಸುಲ್ತಾನನಿಂದ ಗೋವಾವನ್ನು ಗೆದ್ದು ಅದನ್ನು ಪೋರ್ಚುಗೀಸರ ವಸಾಹತುವಾಗಿ ಮಾಡಿದನು.

12.ಪೋರ್ಚುಗೀಸರು ಭಾರತದಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ಎಲ್ಲೆಲ್ಲಿ ಸ್ಥಾಪಿಸಿದರು?
✦ಪೋರ್ಚುಗೀಸರು ತಮ್ಮ ವ್ಯಾಪಾರ ಕೇಂದ್ರಗಳನ್ನು ದೀವ್, ದಮನ್, ಸಾಲ್ಸೆಟ್, ಮುಂಬಯಿ ಬಳಿಯ ಬೆಸಿನ್, ಮದ್ರಾಸ್ ಬಳಿಯ ಸಾನ್ಥೋಮೆ, ಮತ್ತು ಬಂಗಾಳದ ಹೂಗ್ಲಿಗಳಲ್ಲಿ ಸ್ಥಾಪಿಸಿದರು.

13.ಭಾರತದಲ್ಲಿ ಪೋರ್ಚುಗೀಸರ ಅವನತಿಗೆ ಕಾರಣಗಳೆನು?
✦ಅಲ್ಬುಕರ್ಕ್ನ ನಂತರ ಬಂದ ಅಧಿಕಾರಿಗಳು ಅಸಮರ್ಥರು ಮತ್ತು ಭ್ರಷ್ಟರಾಗಿದ್ದರು. ಅವರು ವ್ಯಾಪಾರವನ್ನು ಕಡೆಗಣಿಸಿ ರಾಜಕೀಯ ವ್ಯವಹಾರದಲ್ಲಿ ತೊಡಗಿಸಿಕೊಂಡುದರಿಂದ ಇಲ್ಲಿನ ರಾಜರುಗಳೊಡನೆ ಸಂಘರ್ಷಕ್ಕೆ ಇಳಿಯಬೇಕಾಯಿತು.
✦ಮರಾಠರು ಅವರನ್ನು “ ಬೆಸಿನ್’ನಿಂದ ಹೊರ ಹಾಕಿದರು.
✦ಮೊಘಲರು 1632ರಲ್ಲಿ ಅವರನ್ನು ಹೂಗ್ಲಿಯಿಂದ ಹೊರ ಹಾಕಿದರು.
✦ಪೋಚುಗೀಸರು ಧಾರ್ಮಿಕ ಮತಾಂಧರಾಗಿದ್ದರು. ಅವರ ಮತಾಂತರ ನೀತಿಯಿಂದಾಗಿ ಬಹುಸಂಖ್ಯೆಯಲ್ಲಿ ಜನರು ಗೋವೆಯನ್ನು ತ್ಯಜಿಸಬೇಕಾಯಿತು.
✦ಪೋರ್ಚುಗಲ್ ಒಂದು ಪುಟ್ಟ ದೇಶವಾದುದರಿಂದ ಅವರಿಗೆ ದೂರದ ಭಾರತದಲ್ಲಿದ್ದ ಸಾಮ್ರಾಜ್ಯವನ್ನು ಆಳಲು ಬೇಕಾದ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳು ಇರಲಿಲ್ಲ.
✦1580ರಲ್ಲಿ ಪೋರ್ಚುಗಲ್ ಸ್ಪೇನ್ ದೇಶದ ಆಳ್ವಿಕೆಗೆ ಒಳಪಟ್ಟು ತನ್ನ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡಿತು.

14.ಪೋರ್ಚುಗೀಸರ ಆಗಮನದಿಂದ ಭಾರತದ ಮೆಲೆ ಆದ ಪರಿಣಾಮಗಳೇನು?
✦ಪೋರ್ಚುಗೀಸರ ಆಗಮನದಿಂದಾಗಿ ಭಾರತ ಮತ್ತು ಯುರೋಪ್ಗಳ ನಡುವಿನ ವ್ಯಾಪಾರ ಸಂಪರ್ಕ ಬೆಳವಣಿಗೆಯಾಯಿತು. ಭಾರತದ ಬಟ್ಟೆ, ಅಕ್ಕಿ, ಸಾಂಬಾರ ಪದಾರ್ಥಗಳಿಗೆ ಯೂರೋಪಿನಲ್ಲಿ ಬೇಡಿಕೆ ಹೆಚ್ಚಿತು.
✦ಯುರೋಪಿನ ವಾಸ್ತುಶೈಲಿಯನ್ನು ಇವರು ಕಟ್ಟಿಸಿದ ಕಟ್ಟಡಗಳು ಮತ್ತು ಚರ್ಚುಗಳ ಮೂಲಕ ಭಾರತೀಯರಿಗೆ ಪರಿಚಯಿಸಿದರು.
✦ಮೊದಲ ಮುದ್ರಣ ಯಂತ್ರವನ್ನು ಗೋವಾಗೆ ಪೋರ್ಚುಗೀಸರು ತಂದರು.
✦ಭಾರತದ ಕೃಷಿಯಲ್ಲಿ ತೀವ್ರ ಬದಲಾವಣೆಗಳಾದವು.✦ ಡಚ್ಚರು
1.ಡಚ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಯಾವಾಗ ಮತ್ತು ಎಲ್ಲಿ ಸ್ಥಾಪಿಸಲಾಯಿತು?
✦1602 ರಲ್ಲಿ ಹಾಲೆಂಡ್ ದೇಶದಲ್ಲಿ ಸ್ಥಾಪಿಸಲಾಯಿತು.
2.ಭಾರತದಲ್ಲಿ ಡಚ್ಚರ ಪ್ರಮುಖ ವ್ಯಾಪಾರ ಕೆಂದ್ರಗಳನ್ನು ಹೆಸರಿಸಿ.
✦ಮಚಲೀಪಟ್ಟಣ, ಪುಲಿಕಾಟ್, ಸೂರತ್, ಕೊಚ್ಚಿ, ಮತ್ತು ಕುಂದಾಪುರದ ಸಮೀಪದ ಬಸ್ರೂರು.
3.ಡಚ್ಚರು ಭಾರತದಲ್ಲಿನ ತಮ್ಮ ವ್ಯಾಪಾರವನ್ನು ಕೈಬಿಡಲು ಕಾರಣವೇನು?
✦ಡಚ್ಚರು ದಕ್ಷಿಣ ಪೂರ್ವ ಏಷ್ಯಾದಲ್ಲಿ ಹೊಸದಾಗಿ ಗಳಿಸಿಕೊಂಡ ದ್ವೀಪಗಳ ಕಡಗೆ ಹೆಚ್ಚು ಗಮನ ನೀಡಿದರಿಂದ ಭಾರತದಲ್ಲಿ ತಮ್ಮ ವ್ಯಾಪಾರವನ್ನು ಕೈಬಿಟ್ಟು ಇಲ್ಲಿನ ವ್ಯಾಪಾರ ಕೇಂದ್ರಗಳನ್ನು ಮುಚ್ಚಿದರು.

ಇಂಗ್ಲಿಷರು
1.ಇಂಗ್ಲೀಷರ ವ್ಯಾಪಾರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವನು ಯಾರು?
✦ ಸರ್ ಥಾಮಸ್ ರೋ, ಇವನು ಮೊಘಲ್ ಚಕ್ರವರ್ತಿಗಳ ಆಸ್ಥಾನಕ್ಕೆ ಕಳಿಸಲ್ಪಟ್ಟ ಇಂಗ್ಲೀಷ್ ರಾಯಭಾರಿಯಾಗಿದ್ದನು.

2.ಸರ್ ಥಾಮಸ್ ರೋ ನ ಪಾತ್ರವೇನು?
✦ ಇವನು ಮೊಘಲ್ ಚಕ್ರವರ್ತಿ ಜಹಾಂಗೀರನಿಂದ ಅಹ್ಮದಾಬಾದ್, ಬ್ರೋಚ್, ಆಗ್ರಾ, ಸೂರತ್, ಕಾಸಿಂ ಬಜಾರ್, ಕಲ್ಕತ್ತಾ ಮತ್ತು ಢಾಕಾಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿ ವ್ಯಾಪಾರ ಡಲು ಪರವಾನಗಿಯನ್ನು ಪಡೆದನು.

3.ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ “ಮುಂಬೈ” ಯನ್ನು ಬಳುವಳಿಯಾಗಿ ನೀಡಿದ್ದು ಯಾರು?.
✦ ಕ್ರಿಶ. 1661ರಲ್ಲಿ ಪೊರ್ಚುಗೀಸ್ ರಾಜಕುಮಾರಿಯ ಮದುವೆ ಇಂಗ್ಲೆಡಿನ ಎರಡನೆಯ ಚಾಲ್ರ್ಸ್ ರಾಜಕುಮಾರನೊಂದಿಗೆ ನಡೆಯಿತು. ಆಗ ಪೋರ್ಚುಗೀಸರು ಜೌಗು ದ್ವೀಪವಾದ ಮುಂಬಯಿಯನ್ನು ಇಂಗ್ಲೇಂಡ್ ದೊರೆಗೆ ಬಳುವಳಿಯಾಗಿ ನೀಡಿದರು.

ಫ್ರೆಂಚ್
1.ಫ್ರೆಂಚ್ ಈಸ್ಟ ಇಂಡಿಯಾ ಕಂಪೆನಿ ಯಾವಾಗ ಪ್ರಾರಂಬಿಸಲ್ಪಟ್ಟಿತು?
✦ ಕ್ರಿ. ಶ 1664 ರಲ್ಲಿ

2.ಭಾರತದಲ್ಲಿ ಸ್ಥಾಪಿಸಲ್ಪಟ್ಟ ಪ್ರಮುಖ ಫ್ರೇಂಚ್ ವ್ಯಾಪಾರ ಕೇಂದ್ರಗಳನ್ನು ಹೆಸರಿಸಿ.
✦ ಪಾಂಡಿಚೇರಿ, ಚಂದ್ರನಗರ್ ಮತ್ತು ಮಚಲಿಪಟ್ಟಣಗಳಲ್ಲಿ ಸ್ಥಾಪಿಸಿದರು.

3.ಭಾರತದಲ್ಲಿ ಫ್ರೆಂಚರ ಗವರ್ನರ್ ಯಾರಾಗಿದ್ದರು?
✦ ಡೂಪ್ಲೆ

4.ಡೂಪ್ಲೆಯ ಮಹತ್ವಾಕಾಂಕ್ಷೆ ಏನಾಗಿತ್ತು?
✦ ಭಾರತದಲ್ಲಿ ಫ್ರೆಂಚ್ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆ ಡೂಪ್ಲೆಗಿತ್ತು.

5.ಭಾರತದಲ್ಲಿ ಫ್ರೆಂಚರ ಪ್ರಭಾವವನ್ನು ಕೊನೆಗಾಣಿಸಿದ ಕದನ ಯಾವುದು?
✦ ವಾಂಡಿವಾಷ್ ಕದನ

6.ಭಾರತದಲ್ಲಿ ಫ್ರೆಂಚರ ಅವನತಿಗೆ ಕಾರಣಗಳೇನು?
✦ ಫ್ರೆಂಚರು ವ್ಯಾಪಾರವನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದರು. ಇದರಿಂದಾಗಿ ಅವರಿಗೆ ಯುದ್ಧಗಳಿಗೆ ಬೇಕಾದ ಸಂಪನ್ಮೂಲಗಳ ಕೊರತೆ ಕಾಡುತ್ತಿತ್ತು.
✦ ನಾಯಕತ್ವ ಮತ್ತು ಉಪಕರಣಗಳ ದೃಷ್ಟಿಯಿಂದ ಫ್ರೆಂಚ್ ಸೈನ್ಯವು ಕಳಪೆಯಾಗಿತ್ತು.
✦ ಫ್ರೆಂಚ್ ಅಧಿಕಾರಿಗಳು ತಮ್ಮಲ್ಲಿಯೇ ಪರಸ್ಪರ ಸಹಕಾರವಿಲ್ಲದೆ ಜಗಳವಾಡುತ್ತಿದ್ದರು.
✦ ಫ್ರಾನ್ಸ್ನಲ್ಲಿದ್ದ ರಾಜಕೀಯ ಅಸ್ಥಿರತೆಯಿಂದಾಗಿ ಫ್ರೆಂಚರಿಗೆ ತಮ್ಮ ಸರಕಾರದಿಂದ ಪೂರ್ಣ ಬೆಂಬಲ ಸಿಗಲಿಲ್ಲ. ಫ್ರೆಂಚ್ ಕಂಪನಿಯು ಬಹುತೇಕ ಸರ್ಕಾರದ ಕಂಪನಿಯಾಗಿತ್ತು.

ಕರ್ನಾಟಿಕ್ ಯುದ್ಧಗಳು

Leave a Reply

Your email address will not be published. Required fields are marked *

error: Content Copyright protected !!