ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
ಕಾಮನ್ವೆಲ್ತ ಕ್ರೀಡಾಕೂಟ 1930ರಲ್ಲಿ ಪ್ರಾರಂಭವಾಗಿ ಪ್ರತೀ ನಾಲ್ಕು ವರ್ಷಕ್ಕೆ ಒಮ್ಮೆ ನಡೆಯುವ ಕ್ರೀಡಾ ಕಾರ್ಯಕ್ರಮ. ಇದು ಜಗತ್ತಿನಲ್ಲಿ ಒಲಂಪಿಕ್ ಕ್ರೀಡಾಕೂಟ ಮತ್ತು ಏಷಿಯನ್ ಗೇಮ್ಸ್ ಗಳನ್ನು ಹೊರತು ಪಡಿಸಿದರೆ ಮೂರನೆಯ ಅತಿ ದೊಡ್ಡ ಕ್ರೀಡಾ ಕೂಟ. ಇದು ಹಿಂದೆ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ದೇಶಗಳು ಹಾಗೂ ಈಗಲೂ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ದೇಶಗಳಿಗೆ ಸೀಮಿತವಾಗಿದೆ. ಈ ಕಾರ್ಯಕ್ರಮದಲ್ಲಿ ಕಾಮನ್ವೆಲ್ತಿನ 55 ದೇಶಗಳು ಭಾಗವಹಿಸುತ್ತವೆ. 2010ರಲ್ಲಿ ಈ ಕಾರ್ಯಕ್ರಮ ಭಾರತದ ರಾಜಧಾನಿ ದೆಹಲಿಯಲ್ಲಿ ನಡೆಯಿತು.
ಕಾಮನ್ವೆಲ್ತ್ ಕ್ರೀಡೆಗಳು ಎಂಬ ಒಂದು ಬಹು-ಕ್ರೀಡಾ ಕೂಟವನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. 2010 ರ ಕಾಮನ್ವೆಲ್ತ್ ಕ್ರೀಡಾ ಕೂಟಗಳನ್ನು ಇತ್ತೀಚೆಗೆ 2010 ಭಾರತದ ನವ ದೆಹಲಿಯಲ್ಲಿ ನಡೆಸಲಾಯಿತು ಮತ್ತು ಮುಂದಿನ ಕೂಟವನ್ನು ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯಲಿವೆ.
ಅಥ್ಲೆಟಿಕ್ ಆಟಗಳಷ್ಟೇ ಅಲ್ಲದೆ, ಬೇಸಿಗೆ ಒಲಂಪಿಕ್ ಕ್ರೀಡೆಗಳು , ವಿಶೇಷವಾಗಿ ಜನಪ್ರಿಯ ಕಾಮನ್ವೆಲ್ತ್ ಕ್ರೀಡೆಗಳಾದ ಬೌಲ್ಸ್, ನೆಟ್ ಬಾಲ್ಮತ್ತು ರಗ್ಬಿ ಸೆವೆನ್ಸ್ಗಳನ್ನು ನಡೆಸಲಾಗುವುದು. 1930ರಲ್ಲಿ ಆರಂಭವಾದ ಕ್ರೀಡೆಗಳನ್ನು ಒಲಂಪಿಕ್ ನೈಪುಣ್ಯತೆಯ, ಮಾದರಿಯಲ್ಲಿ , ಆದರೆ ಅವುಗಳನ್ನು, ಕಾಮನ್ವೆಲ್ತ್ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧಗಳು ಮತ್ತು ಕ್ರೀಡೆಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅವುಗಳ ನಡುವೆ ಬೆಳೆಸಿ ಇಂದಿಗೂ “ಸ್ನೇಹ ಕ್ರೀಡಾ ಕೂಟಗಳಾಗಿ ಉಳಿಯುವಂತೆ ಮಾಡಲಾಗಿದೆ.
ಕ್ರೀಡೆಗಳು ಕಾಮನ್ವೆಲ್ತ್ನ ಅತ್ಯಂತ ಸಾದೃಶ್ಯ ಚಟುವಟಿಕೆಯಾಗಿದೆ, ಮತ್ತು ಕ್ರೀಡೆಗಳನ್ನು ಹಮ್ಮಿಕೊಂಡಾಗ ಕಾಮನ್ವೆಲ್ತ್ನ ಹಿತಾಸಕ್ತಿಯು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದು ವ್ಯಕ್ತವಾಗುತ್ತದೆ. ]ಕ್ರೀಡೆಗಳನ್ನು ಕಾಮನ್ವೆಲ್ತ್ನ ರಾಜಕೀಯ ವಿಷಯಗಳಿಗೆ ಸೇರಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಈಗಲೂ ವಿವಾದ ಇದೆ. 1977ರ ಗ್ಲೆನೀಗಲ್ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಕಾಮನ್ವೆಲ್ತ್ ರಾಷ್ಟ್ರಗಳು ದಕ್ಷೀಣ ಆಫ್ರಿಕಾವನ್ನು (ಆಗ ಇನ್ನೂ ಕಾಮನ್ವೆಲ್ತ್ ನ ಸದಸ್ಯವಾಗಿರಲಿಲ್ಲ) ಕ್ರೀಡೆಯಿಂದ ಹೊರಗಿಡುವುದರ ಮೂಲಕ ವರ್ಣಬೇಧ ನೀತಿಯ ವಿರುದ್ಧ ಹೊರಾಡಲು ಪ್ರಾರಂಭಿಸಿದವು, ಆದರೆ 1986ರ ಕ್ರೀಡೆ ಗಳನ್ನು ಆಫ್ರಿಕಾ, ಏಷ್ಯಿಯಾ, ಮತ್ತು ಕೆರೆಬಿಯನ್ ದೇಶಗಳು ಇತರೆ ರಾಷ್ಟ್ರಗಳು ಗ್ಲೆನೀಗಲ್ಸ್ ಒಪ್ಪಂದವನ್ನು ಜಾರಿಗೆ ತರುವಲ್ಲಿ ವಿಫಲವಾದ್ದರಿಂದ ಈ ಕ್ರೀಡೆಗಳನ್ನು ಬಹಿಷ್ಕರಿಸಿದವು.
# ನೆನಪಿನಲ್ಲಿಡಬೇಕಾದ ಅಂಶಗಳು :
➤ ಕಾಮನ್ವೆಲ್ತ್ ಕ್ರೀಡೆಗಳು ಮೊದಲಿಗೆ 1930 ರಲ್ಲಿ ಪ್ರಾರಂಭವಾದವು.
➤ ಕಾಮನ್ವೆಲ್ತ್ ಕ್ರೀಡೆಗಳು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಜರುಗುತ್ತವೆ.
➤ ಕಾಮನ್ವೆಲ್ತ್ ಕ್ರೀಡೆಗಳು ಜಗತ್ತಿನಲ್ಲಿ ಒಲಂಪಿಕ್ ಕ್ರೀಡಾಕೂಟ ಮತ್ತು ಏಷಿಯನ್ ಗೇಮ್ಸ್ ಗಳನ್ನು ಹೊರತು ಪಡಿಸಿದರೆ ಮೂರನೆಯ ಅತಿ ದೊಡ್ಡ ಕ್ರೀಡಾ ಕೂಟ.
➤ ಕಾಮನ್ವೆಲ್ತ್ ಕ್ರೀಡೆಗಳು ‘ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್’ ಇವರ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ.
➤ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ 71 ದೇಶಗಳು ಈ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತವೆ.
➤ ಕೇವಲ 6 ರಾಷ್ಟ್ರಗಳು ಮಾತ್ರ ಪ್ರತಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿವೆ.
➤ ಭಾರತ ಮೊದಲ ಬಾರಿಗೆ 1934 ರಲ್ಲಿ ಲಂಡನ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾಗವಹಿಸಿತು.
➤ 1930 ರಲ್ಲಿ ನಡೆದ ಪ್ರಥಮ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಕೇವಲ 11 ರಾಷ್ಟ್ರಗಳು ಮಾತ್ರ ಭಾಗವಹಿಸಿದವು.
➤ ಆಸ್ಟ್ರೇಲಿಯಾ 5 ಸಲ ಕಾಮನ್ವೆಲ್ತ್ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಅತಿಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಿದ ಪ್ರಥಮ ರಾಷ್ಟ್ರ ಎನ್ನುವ ಖ್ಯಾತಿಗೆ ಒಳಗಾಗಿದೆ.
➤ ಭಾರತವು 2010ರಲ್ಲಿ 19ನೇ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತು.
➤ 2022ರ ಕಾಮನ್ವೆಲ್ತ್ ಕ್ರೀಡಾಕೂಟಗಳು ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯಲಿವೆ.
➤ 1930ರ ಮೊದಲ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಕೆನಡಾ ರಾಷ್ಟ್ರವು ಆಯೋಜಿಸಿತು