ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 1
1.ಡಿಜಿಟಲ್ ಕಂಪ್ಯೂಟರ್ಗಳ ಪಿತಾಮಹ ಯಾರು..?
ಎ. ಬ್ಲಾಸ್ ಪಾಸ್ಕಲ್
ಬಿ. ಚಾಲ್ರ್ಸ್ ಬ್ಯಾಬೇಜ್
ಸಿ. ಬಿಲ್ ಗೇಟ್ಸ್
ಡಿ. ನಾರಾಯಣ ಮೂರ್ತಿ
2. ಕಂಪ್ಯೂಟರ್ ತಲೆಮಾರುಗಳು ಯಾವ ವಿಷಯದಲ್ಲಿ ಗಣನೀಯ ಮುನ್ನಡೆಯ ಕಾಲಾವಧಿಯನ್ನು ಸೂಚಿಸುತ್ತದೆ..?
ಎ. ಯಂತ್ರಾಂಶ ಮತ್ತು ತಂತ್ರಾಂಶಗಳ ತಂತ್ರಜ್ಞಾನದಲ್ಲಿ
ಬಿ. ಕಂಪ್ಯೂಟರ್ಗಳ ಗಾತ್ರ
ಸಿ. ಶಕ್ತಿ ಮತ್ತು ಸಾಮಥ್ರ್ಯ
ಡಿ. ಇವೆಲ್ಲವೂ
3.ಕಂಪ್ಯೂಟರ್ನ ಕಾರ್ಯನಿರ್ವಹಣಾ ವ್ಯವಸ್ಥೆಗಳು ಇವುಗಳಲ್ಲಿ ಯಾವುದರ ಮಧ್ಯೆ ಸಂಪರ್ಕ ಕೊಂಡಿಯಾಗಿದೆ..?
ಎ. ಯಂತ್ರಾಂಶ ಮತ್ತು ತಂತ್ರಾಂಶ
ಬಿ. ಕಂಪ್ಯೂಟರ್ ಮತ್ತು ಬಳಕೆದಾರರು
ಸಿ. ಬಳಕೆದಾರರು ಮತ್ತು ತಯಾರಕರು
ಡಿ. ಸ್ವೀಕಾರ ಸಾಧನ ಮತ್ತು ನಿರ್ಗತ ಸಾಧನ
4. ಜಿಯುಐ ಎಂದರೆ..?
ಎ. ಗ್ರಾಫಿಕಲ್ ಯುನಿಟ್ ಇಂಟರ್ಪೇಸ್
ಬಿ. ಗ್ರಾಫಿಕಲ್ ಯುಸರ್ ಇಂಟರಾಕ್ಷನ್
ಸಿ. ಗ್ರಾಫಿಕಲ್ ಯೂಸರ್ ಇಂಟರ್ಪೇಸ್
ಡಿ. ಗ್ರಾಫಿಕಲ್ ಯೂಸ್ಪುಲ್ ಇಂಟರ್ಪೇಸ್
5. ವೃತ್ತಿಪರ ಗುಣಮಟ್ಟದ ಪಠ್ಯ ದಸ್ತಾವೇಜುಗಳನ್ನು ಕಂಪ್ಯೂಟರ್ ಮೂಲಕ ಸಿದ್ಧಪಡಿಸಲು ಬಳಸಬಹುದಾದ ತಂತ್ರಾಂಶ ಯಾವುದು..?
ಎ. ನೋಟ್ ಪ್ಯಾಡ್
ಬಿ. ವರ್ಡ್ ಪ್ಯಾಡ್
ಸಿ. ಎಂಎಸ್ ವರ್ಡ್
ಡಿ. ಪೈಂಟ್
6. .ಡಾಕ್ ಎಂಬ ವಿಶೆಷಣದೊಂದಿಗೆ ಸಂರಕ್ಷಿಸಲ್ಪಡುವ ಫೈಲುಗಳಿಗೆ ಏನೆಂದು ಕರೆಯಲಾಗುತ್ತದೆ..?
ಎ.ಪಠ್ಯ ಫೈಲುಗಳು
ಬಿ. ವರ್ಡ್ ಫೈಲ್ಗಳು
ಸಿ. ಇಮೇಜ್ ಫೈಲುಗಳು
ಡಿ. ವ್ಯವಸ್ಥಾಪನಾ ಫೈಲುಗಳು
7.ಎಂಎಸ್ ಎಕ್ಸೆಲ್ ಪ್ರೋಗ್ರಾಂನ್ನು ಹೀಗೂ ಕರೆಯುತ್ತಾರೆ..?
ಎ. ಕಂಪ್ಯೂಟೇಶನ್ ಪ್ರೋಗ್ರಾಂ
ಬಿ. ಹರಡಿದ ಹಾಳೆ ಪ್ರೋಗ್ರಾಂ
ಸಿ. ಪಠ್ಯ ಸಂಸ್ಕರಣ ಪ್ರೋಗ್ರಾಂ
ಡಿ. ದತ್ತಕೋಶ ಪ್ರೋಗ್ರಾಂ
8. ಎಕ್ಸೆಲ್ ಕಾರ್ಯಪುಸ್ತಕದಲ್ಲಿರುವ ಹಾಳೆಗಳ ಸಂಖ್ಯೆ ಎಷ್ಟು..?
ಎ. 3
ಬಿ. 4
ಸಿ. 2
ಡಿ. ಅನಿರ್ದಿಷ್ಟ
9. ಎಕ್ಸೆಲ್ ಹಾಳಡಯಲ್ಲಿ ಪಂಕ್ತಿ ಮತ್ತು ಕಾಲಂಗಳು ಸಂಧಿಸಿ ಸೃಷ್ಟಿಸುವ ಆಯತಾಕಾರದ ರಚನೆ
ಎ. ಆಯ್ಕೆ ಮಾಡಿದ ಕೋಶ
ಬಿ. ಪ್ರಸಕ್ತ ಕೋಶ
ಸಿ. ಕೋಶ
ಡಿ. ಕ್ರಿಯಾಶೀಲ ಕೋಶ
10. ಉಪನ್ಯಾಸ ಸಂದರ್ಭದಲ್ಲಿ ಬಳಸಬಹುದಾದ ತಂತ್ರಾಂಶ ಪ್ರೋಗ್ರಾಂ ಯಾವುದು..?
ಎ. ವರ್ಡ್
ಬಿ. ಎಕ್ಸೆಲ್
ಸಿ. ಪವರ್ ಪಾಯಿಂಟ್
ಡಿ. ಆಕ್ಸೆಸ್
11. ಪವರ್ ಪಾಯಿಂಟ್ ತಂತ್ರಾಂಶದಲ್ಲಿ ಸಿದ್ಧಪಡಿಸಿದ ದಸ್ತಾವೇಜಿನ ಪುಟಗಳಿಗೆ ಹೀಗೆ ಕರೆಯುತ್ತಾರೆ..?
ಎ. ಸ್ಲೈಡುಗಳು
ಬಿ. ಡಾಕ್ಯುಮೆಂಟ್
ಸಿ. ವರ್ಕ್ಬುಕ್
ಡಿ. ಪ್ರಸಂಟೇಶನ್
12. ಅಗಾಧ ಪ್ರಮಾಣದ ದತ್ತಾಂಶಗಳನ್ನು ವ್ಯವಸ್ಥಿತವಾಗಿ ಕಂಪ್ಯೂಟರ್ನಲ್ಲಿ ಸಂಗ್ರಹಿಸಿಡಲು ಬಳಸಬಹುದಾದ ಪ್ರೋಗ್ರಾಂ ಯಾವುದು..?
ಎ. ಪವರ್ ಪಾಯಿಂಟ್
ಬಿ. ಆಕ್ಸೆಸ್
ಸಿ. ಆಕ್ಸೆಲ್
ಡಿ. ವರ್ಡ್
13. ಎಂಎಸ್ ಆಕ್ಸೆಸ್ನ ಅತಿ ಪ್ರಮುಖ ಉಪಯೋಗ ಯಾವುದು..?
ಎ. ದತ್ತಾಂಶ ಕೋಶಗಳ ತಯಾರಿ
ಬಿ. ಮಾಹಿತಿಗಳ ವ್ಯವಸ್ಥಿತ ಪ್ರದರ್ಶನ
ಸಿ. ಕ್ಲಿಷ್ಟ ನಕ್ಷೆಗಳ ತಯಾರಿ
ಡಿ. ಅಂಕಿ- ಅಂಶಗಳ ಕ್ರೋಡೀಕರಣ
14. ‘ಅಂತರ್ ಜಾಲ’ ಎಂದರೇನು..?
ಎ. ವಿಶ್ವವ್ಯಾಪಿ ಜಾಲ
ಬಿ. ಕಂಪ್ಯೂಟರ್ ಮತ್ತು ದೂರವಾಣಿಗಳ ಜಾಲ
ಸಿ. ಅಂತರ್ ಸಂಪಕಿತ ಕಂಪ್ಯೂಟರ್ ಜಾಲಗಳು
ಡಿ. ಇವೆಲ್ಲವೂ
15. ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾದದ್ದು..?
ಎ. ಅಂತರ್ಜಾಲವು ವಿಶ್ವವ್ಯಾಪಿ ಜಾಲ ಆಧಾರವಾಗಿರುವ ಒಂದು ಸೇವೆ
ಬಿ. ವಿಶ್ವವ್ಯಾಪಿ ಜಾಲವು ಅಂತರ್ಜಾಲ ಆಧಾರವಾಗಿರುವ ಒಂದು ಸೇವೆ
ಸಿ. ಅಂತರ್ಜಾಲ ಮತ್ತು ವಿಶ್ವವ್ಯಾಪಿ ಜಾಲ ಪರಸ್ಪರ ಆಧಾರವಾಗಿರುವ ಸೇವೆಗಳು
ಡಿ. ಅಂತರ್ಜಾಲ ಮತ್ತು ವಿಶ್ವವ್ಯಾಪಿ ಜಾಲ ಪರಸ್ಪರ ಸಂಬಂಧವಿಲ್ಲದ ಸೇವೆಗಳು
[ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 2 ]
[ ಕಂಪ್ಯೂಟರ್ ಜ್ಞಾನ : ಮೈಕ್ರೋಸಾಫ್ಟ್ ವರ್ಡ್ (ಭಾಗ-1) ]
# ಉತ್ತರಗಳು :
# ಉತ್ತರಗಳು :
1. ಬಿ. ಚಾಲ್ರ್ಸ್ ಬ್ಯಾಬೇಜ್
2. ಡಿ. ಇವೆಲ್ಲವೂ
3. ಬಿ. ಕಂಪ್ಯೂಟರ್ ಮತ್ತು ಬಳಕೆದಾರರು
4. ಸಿ. ಗ್ರಾಫಿಕಲ್ ಯೂಸರ್ ಇಂಟರ್ಪೇಸ್
5. ಸಿ. ಎಂಎಸ್ ವರ್ಡ್
6. ಬಿ. ವರ್ಡ್ ಫೈಲ್ಗಳು
7. ಬಿ. ಹರಡಿದ ಹಾಳೆ ಪ್ರೋಗ್ರಾಂ
8. ಎ. 3
9. ಸಿ. ಕೋಶ
10. ಸಿ. ಪವರ್ ಪಾಯಿಂಟ್
11. ಎ. ಸ್ಲೈಡುಗಳು
12. ಬಿ. ಆಕ್ಸೆಸ್
13. ಎ. ದತ್ತಾಂಶ ಕೋಶಗಳ ತಯಾರಿ
14. ಸಿ. ಅಂತರ್ ಸಂಪಕಿತ ಕಂಪ್ಯೂಟರ್ ಜಾಲಗಳು
15. ಬಿ. ವಿಶ್ವವ್ಯಾಪಿ ಜಾಲವು ಅಂತರ್ಜಾಲ ಆಧಾರವಾಗಿರುವ ಒಂದು ಸೇವೆ