Monday, December 2, 2024
Latest:
GKIndian ConstitutionSpardha Times

ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ-4

Share With Friends

01)”ಇಂಡಿಯನ್ ಕೌನ್ಸಿಲ್ ಆಕ್ಟ್ 1909″ನ್ನು “ಮಾರ್ಲೆ ಮಿಂಟೊ ಸುಧಾರಣೆ” ಎಂದು ಕರೆಯಲು ಕಾರಣವೇನು?
➤ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ

02)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
➤1909 ರ ಮಿಂಟೋ ಮಾರ್ಲೇ ಸುಧಾರಣೆ ಕಾಯ್ದೆ

03) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?
➤1919.

04)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು —- ಎನ್ನುವರು?
➤ಸಂವಿಧಾನ.

05)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
➤ಪ್ರಜೆಗಳ.

06)ಸಂವಿಧಾನದ ಹೃದಯ ಯಾವುದು?
➤ಪ್ರಸ್ತಾವನೆ.

07) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
➤ಭಾರತ.

08) ಭಾರತದ ಸಂವಿಧಾನದ ಆದರ್ಶವೇನು?
➤ಸುಖೀ ರಾಜ್ಯವನ್ನು ಸ್ಥಾಪಿಸುವುದು.

09) “ಸಂವಿಧಾನ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ?
➤ನವೆಂಬರ್ 26.

10)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
➤ಕ್ಯಾಬಿನೆಟ್ ಆಯೋಗ

11)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
➤ 1946 ರಲ್ಲಿ.

12)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?
➤ಡಾ.ಬಾಬು ರಾಜೇಂದ್ರ ಪ್ರಸಾದ್

13)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
➤1946, ಡಿಸೆಂಬರ್ 9.

14) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
➤ಡಾ.ಸಚ್ಚಿದಾನಂದ ಸಿನ್ಹಾ.

15) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
➤ಬಿ.ಎನ್.ರಾಯ್.

16) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
➤ಬೆನಗಲ್ ನರಸಿಂಹರಾವ್.

17) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
➤ ಪ್ರೊ.ಎಚ್.ಸಿ. ಮುಖರ್ಜಿ.

18) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
➤ 22.

19)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
➤ಡಾ.ಬಿ.ಆರ್.ಅಂಬೇಡ್ಕರ್ ರವರನ್ನು

20)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?
➤ಡಾ.ಬಿ.ಆರ್.ಅಂಬೇಡ್ಕರ್

Leave a Reply

Your email address will not be published. Required fields are marked *

error: Content Copyright protected !!