GKHistoryMultiple Choice Questions SeriesQUESTION BANKQuizSpardha Times

ಸಮಕಾಲೀನ ವಿಶ್ವದ ಕುರಿತ 30 ಪ್ರಮುಖ ಪ್ರಶ್ನೆಗಳ ಸಂಗ್ರಹ

Share With Friends

#NOTE :  ಉತ್ತರಗಳು ಪ್ರಶ್ನೆಗಳ ನಂತರದಲ್ಲಿವೆ

1. ಸಮಕಾಲೀನ ವಿಶ್ವ ಎಂದರೆ..
ಎ. ಎರಡನೇ ವಿಶ್ವಯುದ್ಧದ ಮೊದಲಿನ ವಿಶ್ವ
ಬಿ. ಎರಡನೇ ವಿಶ್ವಯುದ್ಧದ ನಂತರದ ನಂತರದ ವಿಶ್ವ
ಸಿ. ಮೂರನೇ ಜಗತ್ತಿನ ದೇಶಗಳು
ಡಿ. ಕಾಮನ್‍ವೆಲ್ತ್ ದೇಶಗಳು

2. ಎರಡನೇ ವಿಶ್ವಯುದ್ಧದ ನಂತರ ಅಸ್ತಿತ್ವಕ್ಕೆ ಬಂದ ಎರಡು ಶಕ್ತಿಬಣಗಳು
ಎ. ಪ್ರಜಾಸತ್ತಾತ್ಮಕ ಬಣ ಮತ್ತು ಅಮೆರಿಕದ ಬಣ
ಬಿ. ಕಮ್ಯುನಿಸ್ಟ್ ಬಣ ಮತ್ತು ರಷ್ಯಾದ ಬಣ
ಸಿ. ಪ್ರಜಾತಾಂತ್ರಿಕ ಸ್ವತಂತ್ರ ಬಣ ಮತ್ತು ಕಮ್ಯುನಿಸ್ಟ್ ಬಣ
ಡಿ. ಸೋವಿಯತ್ ಬಣ ಮತ್ತು ಚೀನಾದ ಬಣ

3. ಶೀತಲ ಸಮರ ಎಂದರೆ..
ಎ. ಎರಡು ಶಕ್ತಿಬಣಗಳ ನಡುವೆ ನಡೆದ ಯುದ್ಧ
ಬಿ. ಶೀತಲ ಪ್ರದೇಶದಲ್ಲಿ ನಡೆದ ಯುದ್ಧ
ಸಿ. ಅಮೆರಿಕಾ ಹಾಗೂ ರಷ್ಯಾ ಬಣಗಳ ನಡುವಿನ ಪೈಪೋಟಿ
ಡಿ. ಯೂರೋಪಿನ ಎರಡು ಮಿಲಟರಿ ಬಣಗಳ ನಡುವಿನ ಯುದ್ಧ

4. ಶೀತಲ ಯುದ್ಧದ ಬೆಳವಣಿಗೆಗೆ ಕಾರಣವಾದ ಮುಖ್ಯ ಅಂಶ..
ಎ. ರಷ್ಯಾದಿಂದ ಅಣ್ವಸ್ತ್ರಗಳ ಪರೀಕ್ಷೆ
ಬಿ. ಅಮೆರಿಕದಿಂದ ಅಣ್ವಸ್ತ್ರಗಳ ಪರೀಕ್ಷೇ
ಸಿ. ಆಪಾನಿನ ಮೇಲೆ ಅಮೇರಿಕದಿಂದ ಅಣುಬಾಂಬ್ ಸ್ಫೋಟ
ಡಿ. ಜೆಕೋಸ್ಲೊವಾಕಿಯಾ, ರುಮೇನಿಯಾ ಮತ್ತು ಯುಗೋಸ್ಲಾವಿಯಾಗಳು ಕಮ್ಯುನಿಸ್ಟ್ ದೇಶಗಳಾದದ್ದು

5. ಕೊರಿಯ ವಿಭಜನೆಯ ಪರಿಣಾಮ..
ಎ. ಅಂತರಯುದ್ದ ಪ್ರಾರಂಭವಾಯಿತು.
ಬಿ. ಅಂತರಯುದ್ಧ ಪ್ರಬಲವಾಯಿತು
ಸಿ. ಅಂತರಯುದ್ಧ ಕೊನೆಯಾಯಿತು
ಡಿ. ಅದು ದುರ್ಬಲವಾಯಿತು

6. ನ್ಯಾಟೋ ಕೂಟ ಅಸ್ತಿತ್ವಕ್ಕೆ ಬಂದ ವರ್ಷ..
ಎ. 1949
ಬಿ. 1950
ಸಿ. 1952
ಡಿ. 1951

7. ಸೀಟೋ ಕೂಟ ಅಸ್ತಿತ್ವಕ್ಕೆ ಬಂದ ವರ್ಷ..
ಎ. 1952
ಬಿ. 1953
ಸಿ. 1954
ಡಿ. 1955

8. ಪ್ರಜಾತಾಂತ್ರಿಕ ಬಣದ ರಕ್ಷಣಾ ಕೂಟಗಳು..
ಎ. ನ್ಯಾಟೋ, ಸೀಟೋ, ವಾರ್ಸಾ
ಬಿ. ನ್ಯಾಟೋ, ಸಿಟೋ ಮತ್ತು ಸೆಂಟೋ
ಸಿ. ವಾರ್ಸಾ, ಸೆಂಟೋ ಮತ್ತು ಸೀಟೋ
ಡಿ. ವಾರ್ಸಾ, ಸೆಂಟೋ ಮತ್ತು ನ್ಯಾಟೋ

9. ಸೋವಿಯತ್ ಒಕ್ಕೂಟವು ವಾರ್ಸಾ ಸಂಧಿಯನ್ನು ಮಾಡಿಕೊಂಡಿದ್ದು..
ಎ. ಏಷ್ಯಾದ ದೇಶಗಳೊಡನೆ
ಬಿ. ಯೂರೋಪಿನ ದೇಶಗಳೊಡನೆ
ಸಿ. ಪ್ರಜಾತಾಂತ್ರಿಕ ದೇಶಗಳೊಡನೆ
ಡಿ. ಕಮ್ಯುನಿಸ್ಟ್ ದೇಶಗಳೊಡನೆ

10. ಅಮೆರಿಕ ಖಂಡದಲ್ಲಿ 1958 ರಲ್ಲಿ ಕಮ್ಯುನಿಸ್ಟ್ ಕ್ರಾಂತಿ ನಡೆದ ದೇಶ..
ಎ. ನಿಕರಾಗುವಾ
ಬಿ. ಕ್ಯೂಬಾ
ಸಿ. ವೆನಝುವೆಲಾ
ಡಿ. ಗಯಾನಾ

11. ಎರಡು ಶಕ್ತಿಬಣಗಳ ನಾಯಕ ದೇಶಗಳಾದ ಅಮೆರಿಕ ಮತ್ತು ರಷ್ಯಾಗಳು ವಿಯೆಟ್ನಾಂ ಯುದ್ಧದಲ್ಲಿ ಅಣ್ವಸ್ತ್ರಗಳನ್ನು ಪ್ರಯೋಗಿಸಲಿಲ್ಲ. ಏಕೆಂದರೆ,
ಎ. ವಿಶ್ವಸಂಸ್ಥೆಯು ಮದ್ಯ ಪ್ರವೇಶಿಸಿ ಅಣ್ವಸ್ತ್ರಗಳ ಪ್ರಯೋಗವನ್ನು ನಿಲ್ಲಿಸಿತು.
ಬಿ. ಇಂಗ್ಲೆಂಡ್ ಮತ್ತು ಫ್ರಾನ್ಸ್ ಅದರ ಪ್ರಯೋಗವನ್ನು ನಿಲ್ಲಿಸಿತು.
ಸಿ. ಆಗ ಶೀತಲ ಯುದ್ಧ ಮುಗಿದಿತ್ತು
ಡಿ. ಎರಡೂ ದೇಶಗಳು ಪರಸ್ಪರ ನಾಶಹೊಂದುವ ಭಯವಿತ್ತು

15. ಗೋರ್ಬಚೇವ್ ಯು.ಎಸ್.ಎಸ್. ಆರ್ ನ . ಆಧ್ಯಕ್ಷರಾದ ವರ್ಷ..
ಎ. 1986
ಬಿ. 1985
ಸಿ. 1984
ಡಿ. 1983

16. ಶೀತಲ ಯುದ್ಧವು ಕೊನೆಗೊಳ್ಳುವುದಕ್ಕೆ ಕಾರಣ..
ಎ. ವಿಶ್ವಸಂಸ್ಥೆಯ ಜನನ
ಬಿ. ಆರ್ಮನಿಯ ಏಕೀಕರಣ
ಸಿ. ಕ್ಯೂಬಾದಲ್ಲಿ ಕಮ್ಯುನಿಸ್ಟ್ ಕ್ರಾಂತಿ
ಡಿ. ಸೋವಿಯತ್ ಒಕ್ಕೂಟದ (ಯು.ಎಸ್.ಎಸ್.ಆರ್) ಪತನ

17. ಶೀತಲ ಸಮರವು ಕೊನೆಯಾಗುವುದಕ್ಕೆ ಕಾರಣರಾದ ಇಬ್ಬರು ಪ್ರಮುಖ ನಾಯಕರು..
ಎ. ಟ್ರೂಮನ್ ಮತ್ತು ಚರ್ಚಿಲ್
ಬಿ. ಡಿ ಗಾಲೆ ಮತ್ತು ಸ್ಟಾಲಿನ್
ಸಿ. ಜಾರ್ಜ್ ಬುಶ್ ಮತ್ತು ಯೆಲ್ಸಿನ್
ಡಿ. ಕೆನೆಡಿ ಮತ್ತು ಗೋರ್ಬಚೇವ್

18. 1956 ರಲ್ಲಿ ಈಜಿಪ್ಟ್ ರಾಷ್ಟ್ರೀಕರಣ ಮಾಡಿದ ಕಾಲುವೆ..
ಎ. ಸೂಯೆಜ್ ಕಾಲುವೆ
ಬಿ. ಪನಾಮ ಕಾಲುವೆ
ಸಿ. ಬಕ್ಕಿಂಗ್‍ಹಾಮ್ ಕಾಲುವೆ
ಡಿ. ನೈಲ್ ಕಾಲುವೆ

19. 1948 ರಲ್ಲಿ ವಿಶ್ವಸಂಸ್ಥೆಯು ಇಸ್ರೇಲ್ ಎಂಬ ಹೊಸ ದೇಶವನ್ನು ಸೃಷ್ಟಿಸಿತು. ಇದರಿಂದಾಗಿ ಲಾಭ ಪಡೆದವರು..
ಎ. ಪ್ಯಾಲೆಸ್ತಿನಿಯರು
ಬಿ. ಯಹೂದಿಗಳು
ಸಿ. ಇರಾನಿಯರು
ಡಿ. ಈಜಿಪ್ಟಿಯನರು

20. ಮೊದಲ ಕೊಲ್ಲಿ ಯುದ್ಧವು ಇವರೊಳಗೆ ನಡೆಯಿತು..
ಎ. ಇರಾನ್ ಮತ್ತು ಇರಾಕ್
ಬಿ. ಇರಾಕ್ ಮತ್ತು ಕುವೈತ್
ಸಿ. ಪ್ಯಾಲೆಸ್ಟೈನ್ ಮತ್ತು ಇಸ್ರೇಲ್
ಡಿ. ಈಜಿಪ್ಟ್ ಮತ್ತು ಇಸ್ರೇಲ್

21. ಎರಡನೇ ಕೊಲ್ಲಿ ಯುದ್ಧವು ಯಾಋ ನಡುವೆ ನಡೆಯಿತು..
ಎ. ಇರಾನ್ ಮತ್ತು ಕುವೈಟ್
ಬಿ. ಇರಾಕ್ ಮತ್ತು ಕುವೈತ್
ಸಿ. ಇರಾನ್ ಮತ್ತು ಇರಾಕ್
ಡಿ. ಅರಬರು ಮತ್ತು ಇಸ್ರೇಲ್

22. ಅಫ್‍ಘಾನಿಸ್ತಾನದಿಂದ ರಷ್ಯಾ ಹಿಂದೆಗೆದ ನಂತರ ಅಲ್ಲಿ ಅಧಿಕಾರ ಗಳಿಸಿದ ಉಗ್ರಗಾಮಿ ಸಂಘಟನೆ ..
ಎ. ಮಾವೋವಾದಿಗಳು
ಬಿ. ತಾಲೀಬಾನ್
ಸಿ. ಹಮಾಸ್
ಡಿ. ಅಲ್- ಖೈದಾ

23. 2002 ರಲ್ಲಿ ಅಫ್‍ಘಾನಿಸ್ತಾನದ ಮೇಲೆ ಅಮೆರಿಕವು ದಾಳಿ ಮಾಡಿ ಅಲ್ಲಿನ ತಾಲಿಬಾನ್ ಸರಕಾಋವನ್ನು ಕೆಳಗಿಳಿಸಲು ಕಾರಣ..
ಎ. ತಾಲಿಬಾನ್ ಪಾಕಿಸ್ತಾನ ಪರವಾಗಿತ್ತು
ಬಿ. ತಾಲಿಬಾನ್ ರಷ್ಯಾದಿಮದ ಬೆಂಬಲ ಪಡೆದಿತ್ತು
ಸಿ. ಅಲ್ಲಿ ಅಮೆರಿಕದ ಗಗನಚುಂಬಿ ಕಟ್ಟಡಗಳನ್ನು(ಜಾಗತಿಕ ವ್ಯಾಪಾರ ಕೇಂದ್ರ) ಧ್ವಂಸ ಮಾಡಿದ ಅಲ್-ಖೈದಾ ಉಗ್ರರು ಆಶ್ರಯ ಪಡೆದಿದ್ದರು.
ಡಿ. ಪ್ರಜಾತಂತ್ರದ ಸ್ಥಾಪನೆಗಾಗಿ

24. 1990 ರಲ್ಲಿ ಸದ್ದಾಂ ಹುಸೇನ್ ಆಕ್ರಮಣ ಮಾಡಿಕೊಂಡ ದೇಶ ಯಾವುದು?
ಎ. ಇರಾನ್
ಬಿ. ಪಾಕಿಸ್ತಾನ
ಸಿ. ಇಸ್ರೇಲ್
ಡಿ. ಕುವೈತ್

25. 2003 ರಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್‍ಗಳು ಇರಾಕ್ ಮೇಲೆ ಆಕ್ರಮಣ ಮಾಡಲು ಕಾರಣ..
ಎ. ವಿಶ್ವಸಂಸ್ಥೆಯ ಪರಿಶೋಧನಾ ತಂಡ ಅಲ್ಲಿ ಅಪಾರ ಶಸ್ತ್ರಾಸ್ತ್ರ ಸಂಗ್ರಹಿಸಿರುವುದನ್ನು ಪತ್ತೆಹಚ್ಚಿತು.
ಬಿ. ಇರಾಕ್ ಕುವೈತ್‍ನಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಲು ನಿರಾಕರಿಸಿತು
ಸಿ.ಇರಾಕ್ ವಿಶ್ವಸಂಸ್ಥೆಯ ಪರೀಕ್ಷಣ ತಂಡಕ್ಕೆ ಅನುಮತಿ ನಿರಾಕರಿಸಿತು.
ಡಿ. ಇರಾಕ್‍ನಲ್ಲಿ ನಿರ್ಬಂಧಿತ ಅಣ್ವಸ್ತ್ರಗಳ ಅಪಾರ ಸಂಗ್ರಹ ಇರುವುದೆಂಬ ಸಂಶಯ ಅವರಿಗಿತ್ತು.

26. 1945 ರ ಮೊದಲು ‘ಈಸ್ಟ್ ಇಂಡಿಸ್’ಎಂದು ಕರೆಸಿಕೊಳ್ಳುತ್ತಿದ್ದ ಇಂಡೋನೇಷಿಯಾ ಯಾಋ ವಸಾಹತು ಆಗಿತ್ತು….
ಎ. ಫ್ರೆಂಚರ
ಬಿ. ಡಚ್ಚರ
ಸಿ. ಬ್ರಿಟಿಷರ
ಡಿ. ಪೋರ್ಚುಗೀಸರ

27. ಆಫ್ರಿಕಾ ಖಂಡದಲ್ಲಿ ಸ್ವಾತಂತ್ರ್ಯ ಪಡೆದ ಮೊದಲ ದೇಶ ಯಾವುದು?
ಎ. ಕೀನ್ಯಾ
ಬಿ. ಲಿಬಿಯಾ
ಸಿ. ಘಾನಾ
ಡಿ. ಟಾಂಗನೀಕಾ

28. ಇಂಡೋನೇಷ್ಯಾದ ಸ್ವಾತಂತ್ರಕ್ಕಾಗಿ ಹೋರಾಡಿದ ನಾಯಕ ಯಾರು?
ಎ. ಸುಕಾರ್ಣೊ
ಬಿ. ನೈರೇರೆ
ಸಿ. ಒಬೋಟೆ
ಡಿ. ನೆಲ್ಸನ್ ಮಂಡೇಲಾ

29. ಅಲಿಪ್ತ ಚಳುವಳಿ ಯಾವಾಗ ಪ್ರಾರಂಭವಾಯಿತು…..
ಎ. 1952
ಬಿ. 1953
ಸಿ. 1954
ಡಿ. 1955

30. ಅಲಿಪ್ತ ಚಳುವಳಿಯ ಆರಂಭಿಕ ಸಭೆ ನಡೆದ ಸ್ಥಳ…..
ಎ. ಕೌಲಾಲಂಪುರ್
ಬಿ. ಬಾಂಡುಂಗ್
ಸಿ. ಮನಿಲಾ
ಡಿ. ಬ್ಯಾಂಕಾಂಕ್

# ಉತ್ತರಗಳು :
1. ಬಿ. ಎರಡನೇ ವಿಶ್ವಯುದ್ಧದ ನಂತರದ ನಂತರದ ವಿಶ್ವ
2. ಸಿ. ಪ್ರಜಾತಾಂತ್ರಿಕ ಸ್ವತಂತ್ರ ಬಣ ಮತ್ತು ಕಮ್ಯುನಿಸ್ಟ್ ಬಣ
3. ಸಿ. ಅಮೆರಿಕಾ ಹಾಗೂ ರಷ್ಯಾ ಬಣಗಳ ನಡುವಿನ ಪೈಪೋಟಿ
4. ಎ. ರಷ್ಯಾದಿಂದ ಅಣ್ವಸ್ತ್ರಗಳ ಪರೀಕ್ಷೆ
5. ಸಿ. ಅಂತರಯುದ್ಧ ಕೊನೆಯಾಯಿತು
6. ಸಿ. 1952
7. ಸಿ. 1954
8. ಬಿ. ನ್ಯಾಟೋ, ಸಿಟೋ ಮತ್ತು ಸೆಂಟೋ
9. ಡಿ. ಕಮ್ಯುನಿಸ್ಟ್ ದೇಶಗಳೊಡನೆ
10. ಬಿ. ಕ್ಯೂಬಾ
11. ಡಿ. ಎರಡೂ ದೇಶಗಳು ಪರಸ್ಪರ ನಾಶಹೊಂದುವ ಭಯವಿತ್ತು
12. ಬಿ. 1985
13. ಡಿ. ಸೋವಿಯತ್ ಒಕ್ಕೂಟದ (ಯು.ಎಸ್.ಎಸ್.ಆರ್) ಪತನ
14. ಸಿ. ಜಾರ್ಜ್ ಬುಶ್ ಮತ್ತು ಯೆಲ್ಸಿನ್
15. ಎ. ಸೂಯೆಜ್ ಕಾಲುವೆ
16. ಬಿ. ಯಹೂದಿಗಳು
17. ಎ. ಇರಾನ್ ಮತ್ತು ಇರಾಕ್
18. ಬಿ. ಇರಾಕ್ ಮತ್ತು ಕುವೈತ್
19. ಬಿ. ತಾಲೀಬಾನ್
20. ಸಿ. ಅಲ್ಲಿ ಅಮೆರಿಕದ ಗಗನಚುಂಬಿ ಕಟ್ಟಡಗಳನ್ನು(ಜಾಗತಿಕ ವ್ಯಾಪಾರ ಕೇಂದ್ರ) ಧ್ವಂಸ ಮಾಡಿದ ಅಲ್-ಖೈದಾ ಉಗ್ರರು ಆಶ್ರಯ ಪಡೆದಿದ್ದರು.
21. ಡಿ. ಕುವೈತ್
22. ಡಿ. ಇರಾಕ್ನಲ್ಲಿ ನಿರ್ಬಂಧಿತ ಅಣ್ವಸ್ತ್ರಗಳ ಅಪಾರ ಸಂಗ್ರಹ ಇರುವುದೆಂಬ ಸಂಶಯ ಅವರಿಗಿತ್ತು.
23. ಬಿ. ಡಚ್ಚರ
24. ಬಿ. ಲಿಬಿಯಾ
25. ಎ. ಸುಕಾರ್ಣೊ
26. ಡಿ. 1955
27. ಬಿ. ಬಾಂಡುಂಗ್

 

 

 

 

error: Content Copyright protected !!