▶ ಪ್ರಚಲಿತ ಘಟನೆಗಳ ಕ್ವಿಜ್ (03/08/2021) | Current Affairs Quiz
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಎಲ್ಲಾ ಸರ್ಕಾರಿ ಸೇವೆಗಳ ಪ್ರತಿ ವರ್ಗದಲ್ಲಿ ಟ್ರಾನ್ಸ್ಜೆಂಡರ್ (ತೃತೀಯ ಲಿಂಗಿಗಳು) ಸಮುದಾಯಕ್ಕೆ ಶೇ. 1 ರಷ್ಟು ಮೀಸಲಾತಿಯನ್ನು ಒದಗಿಸಿದ ಮೊದಲ ಭಾರತೀಯ ರಾಜ್ಯ ಯಾವುದು..?
1) ತಮಿಳುನಾಡು
2) ಮಹಾರಾಷ್ಟ್ರ
3) ಕರ್ನಾಟಕ
4) ಕೇರಳ
2. ಜುಲೈ 2021ರಲ್ಲಿ, ಗೈಡೊ ಬೆಲ್ಲಿಡೊ ಅವರು ಯಾವ ದೇಶದ ಪ್ರಧಾನಿಯಾಗಿ ಆಯ್ಕೆಯಾದರು..?
1) ಚಿಲಿ
2) ವೆನಿಜುವೆಲಾ
3) ಪೆರು
4) ಕೋಸ್ಟರಿಕಾ
3. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಆರಂಭಿಸಿದ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಹೆಸರೇನು..?
1) e-RUPI
2) RPAY
3) P-Money
4) PAYM
4. ಇಬ್ರಾಹಿಂ ರೈಸಿ ಯಾವ ರಾಷ್ಟ್ರದ ಎಂಟನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು..?
1) ಇಸ್ರೇಲ್
2) ಇರಾನ್
3) ಇಟಲಿ
4) ಅರ್ಮೇನಿಯಾ
5. ದೇಶಾದ್ಯಂತ ಎಷ್ಟು ‘ಖೇಲೋ ಇಂಡಿಯಾ ಕೇಂದ್ರ’ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ..?
1) 100
2) 500
3) 800
4) 1000
6. ಶೇ.100 ರಷ್ಟು ಕೋವಿಡ್ -19 ಲಸಿಕೆ ನೀಡುವ ಗುರಿ ಸಾಧಿಸಿದ ಭಾರತದ ಮೊದಲ ನಗರ ಯಾವುದು..?
1) ಭೋಪಾಲ್
2) ಇಂದೋರ್
3) ಪುರಿ
4) ಭುವನೇಶ್ವರ
7. ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು..?
1) ದೀಪಿಕಾ ಕುಮಾರಿ
2) ಮನಿಕಾ ಬಾತ್ರಾ
3) ಪಿ.ವಿ.ಸಿಂದು
4) ಸೈನಾ ನೆಹ್ವಾಲ್
8. 2021ನೇ ಸಾಲಿನ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಯಾರು..?
1) ಸಂಜಯ್ ಗುಪ್ತಾ
2) ದೀಪಕ್ ತಿಲಕ್
3) ಸೈರಸ್ ಪೂನವಾಲಾ
4) ಆದರ್ ಪೂನವಾಲಾ
9. ಭಾರತದಲ್ಲಿ ಯಾವ ದಿನದಂದು “ಮುಸ್ಲಿಂ ಮಹಿಳಾ ಹಕ್ಕುಗಳ ದಿನ”ವನ್ನು ಮೊದಲ ಬಾರಿಗೆ ಆಚರಿಸಲಾಯಿತು..?
1) ಆಗಸ್ಟ್ 12
2) ಜುಲೈ 30
3) ಆಗಸ್ಟ್ 1
4) ಜುಲೈ 26
10. ಆಗಸ್ಟ್, 2021ರಲ್ಲಿ ಹೊಸ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (CGA) ಆಗಿ ಯಾರು ನೇಮಕಗೊಂಡಿದ್ದಾರೆ..?
1) ವಿ.ಎನ್. ಕೌಲ್
2) ರಾಜೀವ್ ಮೆಹರ್ಷಿ
3) ಸೋಮ ರಾಯ್ ಬರ್ಮನ್
4) ದೀಪಕ್ ದಾಸ್
11. 2016 AJ193 ಎಂಬ ಹೆಸರಿನ ಬೃಹತ್ ಕ್ಷುದ್ರಗ್ರಹ ಯಾವ ದಿನದಂದು ಭೂಮಿಯ ಹತ್ತಿರದಲ್ಲಿ ಹಾದುಹೋಗಲಿದೆ..?
1) ಆಗಸ್ಟ್ 31, 2021
2) ಆಗಸ್ಟ್ 15, 2021
3) ಆಗಸ್ಟ್ 21, 2021
4) ಆಗಸ್ಟ್ 25, 2021
12. ಕೋವಿಡ್ -19 ಚಿಕಿತ್ಸೆಗಾಗಿ ಯಾವ ಸಂಸ್ಥೆಯು ಆಯುಷ್ ಸಚಿವಾಲಯದೊಂದಿಗೆ ‘ಅಶ್ವಗಂಧ’ ಕುರಿತು ಅಧ್ಯಯನ ನಡೆಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ..?
1) ಗೌತಮ್ ಬುದ್ಧ ವಿಶ್ವವಿದ್ಯಾಲಯ
2) ಐಐಟಿ ದೆಹಲಿ
3) ಪತಂಜಲಿ ಆಯುರ್ವೇದ ಕಾಲೇಜು
4) ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್
13. ಕೃತಕ ಬುದ್ಧಿಮತ್ತೆ (Artificial Intelligence) ಕುರಿತು ಅರಿವು ಮೂಡಿಸಲು ‘AI For All’ ಕಾರ್ಯಕ್ರಮವನ್ನು ಆರಂಭಿಸಲು ಸಿಬಿಎಸ್ಇ ಜೊತೆ ಸಹಭಾಗಿತ್ವ ಹೊಂದಿರುವ ಸಂಸ್ಥೆ ಯಾವುದು..?
1) ಮೈಕ್ರೋಸಾಫ್ಟ್
2) ಅಮೆಜಾನ್
3) ಇಂಟೆಲ್
4) ಗೂಗಲ್
14. ಜುಲೈ 2021 ರಲ್ಲಿ ಭಾರತೀಯ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆ ಮತ್ತು ಇಂಡೋನೇಷಿಯನ್ ನೌಕಾಪಡೆ ನಡುವೆ ನಡೆದ 36ನೇ ಆವೃತ್ತಿಯ ಸಂಯೋಜಿತ ಪೆಟ್ರೋಲ್ (CORPAT-Coordinated Patrol) ನಲ್ಲಿ ಭಾರತವನ್ನು ಪ್ರತಿನಿಧಿಸಿದ ನೌಕೆ ಯಾವುದು..?
1) ಐಎನ್ಎಸ್ ಸರಯೂ
2) ಐಎನ್ಎಸ್ ಕೇಸರಿ
3) ಐಎನ್ಎಸ್ ಶಾರ್ದೂಲ್
4) ಐಎನ್ಎಸ್ ತಲ್ವಾರ್
15. ಕ್ಯೂಎಸ್ (Quacquarelli Symonds) ಅತ್ಯುತ್ತಮ ವಿದ್ಯಾರ್ಥಿ ನಗರಗಳು-2022ರ ಶ್ರೇಯಾಂಕದ ಪ್ರಕಾರ, ಭಾರತದ ಉದ್ಯೋಗದಾತ ಚಟುವಟಿಕೆ (employer activity) ಸೂಚಕದಲ್ಲಿ ವಿಶ್ವದ 100 ನಗರಗಳಲ್ಲಿ ಭಾರತದ ಯಾವ ನಗರ 52 ನೇ ಸ್ಥಾನ ಪಡೆದಿದೆ..?
1) ಮುಂಬೈ; 27 ನೇ
2) ಮುಂಬೈ; 52 ನೇ
3) ಬೆಂಗಳೂರು; 27 ನೇ
4) ಬೆಂಗಳೂರು; 7 ನೇ
16. ಜುಲೈ 2021ರಲ್ಲಿ, ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA-Japan International Cooperation Agency ) ಯಾವ ಸಂಸ್ಥೆಯೊಂದಿಗೆ ತನ್ನ ತಾಂತ್ರಿಕ ಸಹಕಾರವನ್ನು ಬಲಪಡಿಸಲು ಭಾರತದೊಂದಿಗೆ ಚರ್ಚೆಯ ದಾಖಲೆಗೆ ಸಹಿ ಹಾಕಿತು..?
1) ಐಐಎಸ್ಸಿ ಬೆಂಗಳೂರು
2) ಐಐಟಿ ಮದ್ರಾಸ್
3) ಐಐಟಿ ಹೈದರಾಬಾದ್
4) ಎನ್ಐಟಿ ವಾರಂಗಲ್
# ಉತ್ತರಗಳು :
1. 3) ಕರ್ನಾಟಕ
ಎಲ್ಲಾ ಸರ್ಕಾರಿ ಸೇವೆಗಳಿಗೆ ಜನರಲ್, ಎಸ್ಸಿ, ಎಸ್ಟಿ ಮತ್ತು ಒಬಿಸಿಯ ಪ್ರತಿ ವರ್ಗದಲ್ಲಿ ಟ್ರಾನ್ಸ್ಜೆಂಡರ್ಗಳಿಗೆ 1% ರಷ್ಟು ಮೀಸಲಾತಿಯನ್ನು ಒದಗಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.
2. 3) ಪೆರು
3. 1) e-RUPI
ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 2, 2021 ರಂದು ಡಿಜಿಟಲ್ ಪಾವತಿ ವ್ಯವಸ್ಥೆ ಉತ್ತೇಜಿಸುವ ಎಲೆಕ್ಟ್ರಾನಿಕ್ ವೋಚರ್ ಅನ್ನು ಬಿಡುಗಡೆ ಮಾಡಿದರು. ಇದು ಕ್ಯೂಆರ್ ಕೋಡ್ ಅಥವಾ ಎಸ್ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್ನಲ್ಲಿ ಕಳುಹಿಸಬಹುದು.
4. 2) ಇರಾನ್
5. 4) 1000
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಭಾರತದಲ್ಲಿ 1,000 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಅವುಗಳಲ್ಲಿ 360 ಕೇಂದ್ರಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
6. 4) ಭುವನೇಶ್ವರ (ಒಡಿಶಾ)
ಕೋವಿಡ್ -19 ವಿರುದ್ಧ ಶೇ.100 ರಷ್ಟು ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಸಾಧಿಸಿದ ಭಾರತದ ಮೊದಲ ನಗರ ಒಡಿಶಾದ ಭುವನೇಶ್ವರವಾಗಿದೆ ಎಂದು ಭುವನೇಶ್ವರ ಮುನಿಸಿಪಲ್ ಕಾರ್ಪೊರೇಶನ್ (ಬಿಎಂಸಿ) ಆಗ್ನೇಯ ವಲಯದ ಉಪ ಆಯುಕ್ತ ಅಂಶುಮನ್ ರಾಥ್ ಭುವನೇಶ್ವರ ಹೇಳಿದರು.
7. 3) ಪಿ ವಿ ಸಿಂದು
ಪಿ ವಿ ಸಿಂಧು ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ. ಅವರು ರಿಯೊ ಒಲಿಂಪಿಕ್ಸ್ 2016 ರಲ್ಲಿ ಮೊದಲ ಒಲಿಂಪಿಕ್ ಬೆಳ್ಳಿ ಪದಕವನ್ನು ಗೆದ್ದರು, ಹಾಗೂ 2021 ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಪಿವಿ ಸಿಂಧು ಹೈದರಾಬಾದ್, ತೆಲಂಗಾಣಕ್ಕೆ ಸೇರಿದವರು. ಪಿ ವಿ ಸಿಂಧು ಅವರಿಗೆ 2020 ರಲ್ಲಿ ಪದ್ಮಭೂಷಣ, 2015 ರಲ್ಲಿ ಪದ್ಮಶ್ರೀ, 2016ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು 2013 ರಲ್ಲಿ ಅರ್ಜುನ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.
8. 3)ಸೈರಸ್ ಪೂನವಲ್ಲಾ
ಲೋಕಮಾನ್ಯ ತಿಲಕ್ ಟ್ರಸ್ಟ್ ನ ಅಧ್ಯಕ್ಷ ದೀಪಕ್ ತಿಲಕ್ ಅವರು ಇತ್ತೀಚೆಗೆ ಭಾರತೀಯ ಸೀರಮ್ ಇನ್ಸ್ಟಿಟ್ಯೂಟ್ (SII) ಅಧ್ಯಕ್ಷರಾದ ಡಾ. ಸೈರಸ್ ಪೂನವಲ್ಲಾ ಅವರಿಗೆ ಪ್ರತಿಷ್ಠಿತ “ಲೋಕಮಾನ್ಯ ತಿಲಕ್ ಪ್ರಶಸ್ತಿ- 2021” ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದರು. ಕೋವಿಶೀಲ್ಡ್ ತಯಾರಿಸುವ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗಾಗಿ, ಮತ್ತು ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಿದ ಸೈರಸ್ ಪೂನವಲ್ಲಾ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು 1983 ರಲ್ಲಿ ಆರಂಭಿಸಲಾಯಿತು. ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಆಗಸ್ಟ್ 1 ರಂದು ಲೋಕಮಾನ್ಯ ತಿಲಕರ ಪುಣ್ಯತಿಥಿಯಂದು ನೀಡಲಾಗುತ್ತದೆ. ಇಂದಿರಾಗಾಂಧಿ, ಡಾ.ಮನಮೋಹನ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಪ್ರಣಬ್ ಮುಖರ್ಜಿ, ಎನ್ ಆರ್ ನಾರಾಯಣ ಮೂರ್ತಿ ಮುಂತಾದ ಹಲವಾರು ಪ್ರಮುಖರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
9. 3) ಆಗಸ್ಟ್ 1
ಆಗಸ್ಟ್ 1 ರಂದು, “ಮುಸ್ಲಿಂ ಮಹಿಳಾ ಹಕ್ಕುಗಳ ದಿನ” ವನ್ನು ದೇಶಾದ್ಯಂತ ಮೊದಲ ಬಾರಿಗೆ ಆಚರಿಸಲಾಯಿತು. ಈ ದಿನವನ್ನು ‘ತ್ರಿವಳಿ ತಲಾಕ್’ ನಿಷೇಧ ಕಾಯ್ದೆ ಜಾರಿಯಾಗಿ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಸ್ಮರಣೆಗಾಗಿ ಆಚರಿಸಲಾಯಿತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಪ್ರಕಾರ, ಸರ್ಕಾರವು 1 ಆಗಸ್ಟ್, 2019 ರಂದು ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೆ ತಂದಿತು ಮತ್ತು ಈ ಕಾನೂನು ತ್ರಿವಳಿ ತಲಾಖ್ ನ ಸಾಮಾಜಿಕ ದುಷ್ಕೃತ್ಯವನ್ನು ಕ್ರಿಮಿನಲ್ ಅಪರಾಧ ಎಂದು ಮಾಡಿದೆ. ಮುಸ್ಲಿಂ ಮಹಿಳೆಯರನ್ನು ವಿಚ್ಛೇದನ ಪದಗಳ ರೂಪದಲ್ಲಿ ಅವರು ಎದುರಿಸಿದ ಸಾಮಾಜಿಕ ದುಷ್ಟತೆಯ ಸಂಕೋಲೆಯಿಂದ ಮುಕ್ತಗೊಳಿಸುವ ಗುರಿಯೊಂದಿಗೆ ಈ ಕಾನೂನನ್ನು ಜಾರಿಗೊಳಿಸಲಾಗಿದೆ.
10. 4) ದೀಪಕ್ ದಾಸ್
ಭಾರತ ಸರ್ಕಾರವು ದೀಪಕ್ ದಾಸ್ ಅವರನ್ನು ಭಾರತದ 25ನೇ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (CGA) ಆಗಿ ನೇಮಿಸಿದೆ. ದೀಪಕ್ ದಾಸ್ ಅವರು 1986 ಬ್ಯಾಚ್ ಇಂಡಿಯನ್ ಸಿವಿಲ್ ಅಕೌಂಟ್ಸ್ ಸರ್ವೀಸ್ (ಐಸಿಎಎಸ್) ಅಧಿಕಾರಿಯಾಗಿದ್ದಾರೆ. ಅವರು ಮೊದಲು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯಲ್ಲಿ ಲೆಕ್ಕಪತ್ರದ ಪ್ರಧಾನ ಮುಖ್ಯ ನಿಯಂತ್ರಕರಾಗಿ ಸೇವೆ ಸಲ್ಲಿಸಿದರು. ಅವರು ಭಾರತೀಯ ನಾಗರಿಕ ಖಾತೆಗಳ ಸೇವೆಯ ತರಬೇತಿ ಅಕಾಡೆಮಿಯ ಸರ್ಕಾರಿ ಖಾತೆಗಳು ಮತ್ತು ಹಣಕಾಸು ಸಂಸ್ಥೆಯ (INGAF) ನಿರ್ದೇಶಕರಾಗಿದ್ದಾರೆ.
11. 3) ಆಗಸ್ಟ್ 21, 2021
ಒಂದು ದೊಡ್ಡ ಕ್ಷುದ್ರಗ್ರಹ ಆಗಸ್ಟ್ 21, 2021 ರಂದು ಭೂಮಿಯ ಅತ್ಯಂತ ಸಮೀಪದಲ್ಲಿ ಹಾದುಹೋಗಲಿದೆ Earthsky ವರದಿ ಮಾಡಿದೆ.ಈ ಕ್ಷುದ್ರಗ್ರಹಕ್ಕೆ 2016 AJ193 ಎಂದು ಹೆಸರಿಸಲಾಗಿದ್ದು ಇದು ತನ್ನ 5.91 ವರ್ಷಗಳ ಕಕ್ಷೆಯಲ್ಲಿ ಸೂರ್ಯನ ಕಡೆಗೆ ಧಾವಿಸುತ್ತಿದೆ ಎಂದು ವರದಿಯಾಗಿದೆ.
12. 4) ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ (LSHTM)
13. 3) ಇಂಟೆಲ್
14. 1) ಐಎನ್ಎಸ್ ಸರಯೂ
15. 2) ಮುಂಬೈ; 52 ನೇ
ಕ್ವಾಕ್ವೆರೆಲ್ಲಿ ಸೈಮಂಡ್ಸ್(Quacquarelli Symonds)ನ ‘ಕ್ಯೂಎಸ್ ಅತ್ಯುತ್ತಮ ವಿದ್ಯಾರ್ಥಿ ನಗರಗಳು 2022’ (QS Best Student Cities 2022’)ಶ್ರೇಯಾಂಕದಲ್ಲಿ ಮುಂಬಯಿ ‘ಉದ್ಯೋಗದಾತ ಚಟುವಟಿಕೆ'(employer activity) ಸೂಚಕದಲ್ಲಿ ಜಾಗತಿಕವಾಗಿ ಅಗ್ರ 100 ನಗರಗಳಲ್ಲಿ 52ನೇ ಸ್ಥಾನದಲ್ಲಿದೆ. ಬೆಂಗಳೂರು ವಿದ್ಯಾರ್ಥಿಗಳಿಗೆ ‘ಕೈಗೆಟುಕುವ ನಗರ’ (affordable cities) ಸೂಚಕದ ಅಡಿಯಲ್ಲಿ ಟಾಪ್ -10 ರಲ್ಲಿ 7ನೇ ಸ್ಥಾನದಲ್ಲಿದೆ.
16. 3) ಐಐಟಿ ಹೈದರಾಬಾದ್
# ಇವುಗಳನ್ನೂ ಓದಿ
▶ ಪ್ರಚಲಿತ ಘಟನೆಗಳ ಕ್ವಿಜ್ (01/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/08/2021)
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಜುಲೈ-2021
➤ ಪ್ರಚಲಿತ ಘಟನೆಗಳು : ಜೂನ್-2021
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020
# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (11/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (16/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (19/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (21/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (22/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (23/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (24/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (25/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (26/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (27/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (28/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (29/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (30/07/2021)
# ವಾರದ ಪ್ರಚಲಿತ ಘಟನೆಗಳು : Weekly Current Affairs
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)