▶ ಪ್ರಚಲಿತ ಘಟನೆಗಳ ಕ್ವಿಜ್ (27/07/2021) | Current Affairs Quiz
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. 2021ರಲ್ಲಿ ಮೊದಲ ‘ವಿಶ್ವ ಮುಳುಗುವಿಕೆ ತಡೆಗಟ್ಟುವ ದಿನ’ (World Drowning Prevention Day-WDPD)ವನ್ನು ಯಾವ ದಿನಾಂಕದಂದು ಆಚರಿಸಲಾಯಿತು.. ?
1) ಜುಲೈ 21
2) ಜುಲೈ 25
3) ಜುಲೈ 28
4) ಜುಲೈ 31
2. ಮನೆಗಳಲ್ಲಿ ನ್ಯೂಟ್ರಿ-ಗಾರ್ಡನ್ಗಳನ್ನು ಹೊಂದಿಸುವ ಯೋಜನೆಗಾಗಿ ಇತ್ತೀಚೆಗೆ (ಜುಲೈ 21 ರಲ್ಲಿ) ಆರೋಗ್ಯ ವಿಭಾಗದಲ್ಲಿ ‘ಸಿಶ್ವರ್ ಸ್ಕೋಚ್ ಪ್ರಶಸ್ತಿ’ (Silver SKOCH Award’ ) ಪಡೆದ ಭಾರತದ ಜಿಲ್ಲೆ ಯಾವುದು..?
1) ಕೂಚ್ ಬೆಹರ್; ಅಸ್ಸಾಂ
2) ಕ್ಯಾಚರ್, ಅಸ್ಸಾಂ
3) ಕೂಚ್ ಬೆಹರ್; ಪಶ್ಚಿಮ ಬಂಗಾಳ
4) ಕ್ಯಾಚರ್; ಪಶ್ಚಿಮ ಬಂಗಾಳ
3. ಭಾರತದ 40ನೇ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ನಗರ ಯಾವುದು..?
1) ಧೋಲವಿರಾ
2) ಉಜ್ಜಯಿನಿ
3) ತಂಜಾವೂರು
4) ಪುರಿ
4. ಹಿಂಸಾಚಾರದಿಂದ ಬಳಲುತ್ತಿರುವ ಮಹಿಳೆಯರಿಗೆ ಹೊಸ 24/7 ಸಹಾಯವಾಣಿ ಸಂಖ್ಯೆ ಯಾವುದು..?
1) 7827170170
2) 9999999999
3) 1000000000
4) 6767787878
5. ಚಿರಾಪುಂಜಿಯಲ್ಲಿ ಹಸಿರು ಸೊಹ್ರಾ ಅರಣ್ಯೀಕರಣ ಅಭಿಯಾನ(Green Sohra Afforestation Campaign)ವನ್ನು ಪ್ರಾರಂಭಿಸಿದವರು ಯಾರು..?
1) ಅಮಿತ್ ಶಾ
2) ನರೇಂದ್ರ ಮೋದಿ
3) ರಾಜನಾಥ್ ಸಿಂಗ್
4) ಜಿತೇಂದ್ರ ಸಿಂಗ್
6. ಶಾಂಘೈ ಸಹಕಾರ ಸಂಸ್ಥೆಯ ( SCO-Shanghai Cooperation Organisation’s) ರಕ್ಷಣಾ ಮಂತ್ರಿಗಳ ಸಭೆಯನ್ನು ಯಾವ ರಾಷ್ಟ್ರ ಆಯೋಜಿಸಿದೆ..?
1) ಅಫ್ಘಾನಿಸ್ತಾನ
2) ತಜಿಕಿಸ್ತಾನ್
3) ಉಜ್ಬೇಕಿಸ್ತಾನ್
d) ತುರ್ಕಮೆನಿಸ್ತಾನ್
7. ‘ವಿಶ್ವ ಮ್ಯಾಂಗ್ರೋವ್ ದಿನ’ (World Mangrove Day)ವನ್ನು ಯಾವಾಗ ಆಚರಿಸಲಾಗುತ್ತದೆ..?
1) ಜುಲೈ 24
2) ಜುಲೈ 25
3) ಜುಲೈ 26
4) ಜುಲೈ 27
8. ಇತ್ತೀಚಿಗೆ ಯಾವ ರಾಷ್ಟ್ರದ ಅಧ್ಯಕ್ಷರು ಪ್ರಧಾನಿಯನ್ನು ವಜಾ ಮಾಡಿದ್ದಾರೆ ಮತ್ತು ಸಂಸತ್ತನ್ನು ಅಮಾನತುಗೊಳಿಸಿದ್ದಾರೆ..?
1) ಅರ್ಮೇನಿಯಾ
2) ತುರ್ಕಮೆನಿಸ್ತಾನ್
3) ಟುನೀಶಿಯಾ
4) ಇಂಡೋನೇಷ್ಯಾ
9. ಭಾರತ ಯಾವ ದೇಶದೊಂದಿಗೆ ಆಗಸ್ಟ್ನಲ್ಲಿ ವೋಲ್ಗೊಗ್ರಾಡ್ನಲ್ಲಿ ನಡೆಯುವ ಜಂಟಿ ಮಿಲಿಟರಿ ವ್ಯಾಯಾಮದ 12ನೇ ಆವೃತ್ತಿಯಲ್ಲಿ ಭಾಗವಹಿಸಲಿದೆ..?
1) ಜಪಾನ್
2) ಯುಎಸ್
3) ಆಸ್ಟ್ರೇಲಿಯಾ
4) ರಷ್ಯಾ
10. ಇತ್ತೀಚೆಗೆ ಉದ್ಘಾಟನೆಯಾದ “ಆಜಾದ್ ಕಿ ಶೌರ್ಯ ಗಾಥಾ” (Azad Ki Shaurya Gatha) ಪ್ರದರ್ಶನವು ಯಾವ ಸ್ವಾತಂತ್ರ್ಯ ಹೋರಾಟಗಾರನ ಜೀವನವನ್ನು ಆಧರಿಸಿದೆ..?
1) ಚಂದ್ರಶೇಖರ್ ಆಜಾದ್
2) ಭಗತ್ ಸಿಂಗ್
3) ಸುಭಾಷ್ ಚಂದ್ರ ಬೋಸ್
4) ಝಾನ್ಸಿ ರಾಣಿ ಲಕ್ಷ್ಮಿ ಬಾಯಿ
# ಉತ್ತರಗಳು :
1. 2) ಜುಲೈ 25
ವಿಶ್ವ ಆರೋಗ್ಯ ಸಂಸ್ಥೆ (World Health Organisation-WHO) ಸಮನ್ವಯದಿಂದ 2021ರ ಜುಲೈ 25 ರಂದು ಮೊದಲ ‘ವಿಶ್ವ ಮುಳುಗುವಿಕೆ ತಡೆಗಟ್ಟುವ ದಿನ’ವನ್ನು ಆಚರಿಸಲಾಯಿತು. ವಿಶ್ವಸಂಸ್ಥೆಯ (ಯುಎನ್) ಸಾಮಾನ್ಯ ಸಭೆಯು 2021 ರ ಏಪ್ರಿಲ್ 28 ರಂದು ಜಾಗತಿಕ ಮುಳುಗುವಿಕೆ ತಡೆಗಟ್ಟುವಿಕೆ ಕುರಿತು ನಿರ್ಣಯವನ್ನು ಅಂಗೀಕರಿಸಿತು. ಪ್ರತಿವರ್ಷ ಅಂದಾಜು 236,000 ಜನರು ಮುಳುಗುತ್ತಾರೆ ಮತ್ತು 5-14 ವರ್ಷ ವಯಸ್ಸಿನ ಮಕ್ಕಳ ಸಾವಿಗೆ ಹತ್ತು ಪ್ರಮುಖ ಕಾರಣಗಳಲ್ಲಿ ಮುಳುಗುವುದು ಕೂಡ ಒಂದು.
2. 2) ಕ್ಯಾಚರ್, ಅಸ್ಸಾಂ
3. 1) ಧೋಲವಿರಾ
ಜುಲೈ 27, 2021 ರಂದು ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಸೇಶನ್ ( United Nations Educational, Scientific and Cultural Organization-UNESCO) ಹರಪ್ಪ ಯುಗದ ನಗರವಾದ ಧೋಲವಿರಾವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿತು. ಈ ನಗರವು ಗುಜರಾತ್ನ ರಾನ್ ಆಫ್ ಕಚ್ನಲ್ಲಿದೆ.
4. (1) 7827170170
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಅವರು ಜುಲೈ 27, 2021 ರಂದು ಹಿಂಸಾಚಾರಕ್ಕೆ ಒಳಗಾದ ಮಹಿಳೆಯರಿಗಾಗಿ 24/7 ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದರು. ಸಹಾಯವಾಣಿ ಸಂಖ್ಯೆ – 7827170170.
5. 1) ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜುಲೈ 25, 2021 ರಂದು ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರೀನ್ ಸೊಹ್ರಾ ಅರಣ್ಯೀಕರಣ ಅಭಿಯಾನವನ್ನು ಸೊಹ್ರಾ (ಚಿರಾಪುಂಜಿ)ಯಲ್ಲಿ ಪ್ರಾರಂಭಿಸಿದರು. ಗ್ರೇಟರ್ ಸೊಹ್ರಾ ನೀರು ಸರಬರಾಜು ಯೋಜನೆಯನ್ನೂ ಅವರು ಉದ್ಘಾಟಿಸಿದರು.
6. 2) ತಜಿಕಿಸ್ತಾನ್
ತಜಕಿಸ್ತಾನದ ರಾಜಧಾನಿ ದುಶಾನ್ಬೆ ಶಾಂಘೈ ಸಹಕಾರ ಸಂಸ್ಥೆಯ ರಕ್ಷಣಾ ಮಂತ್ರಿಗಳ ಸಭೆಯನ್ನು ಆಯೋಜಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.
7. (3) ಜುಲೈ 26
ಪ್ರತಿ ವರ್ಷ ಜುಲೈ 26 ರಂದು ವಿಶ್ವ ಮ್ಯಾಂಗ್ರೋವ್ ದಿನವನ್ನು ಆಚರಿಸಲಾಗುತ್ತದೆ. ಒಂದು ವಿಶಿಷ್ಟವಾದ, ವಿಶೇಷ ಮತ್ತು ದುರ್ಬಲ ಪರಿಸರ ವ್ಯವಸ್ಥೆಯಾಗಿ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವುಗಳ ಸುಸ್ಥಿರ ನಿರ್ವಹಣೆ, ಸಂರಕ್ಷಣೆ ಮತ್ತು ಬಳಕೆಗಳಿಗೆ ಪರಿಹಾರಗಳನ್ನು ಉತ್ತೇಜಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
8. 3) ಟುನೀಶಿಯಾ
ಟುನೀಶಿಯಾದ ಅಧ್ಯಕ್ಷ ಕೈಸ್ ಸಯೀದ್ ಅವರು ಪ್ರಧಾನಿ ಹಿಚೆಮ್ ಮೆಚಿಚಿಯನ್ನು ಪದಚ್ಯುತಗೊಳಿಸಿದರು ಮತ್ತು 2021 ರ ಜುಲೈ 25 ರಂದು ಸಂಸತ್ತನ್ನು ಅಮಾನತುಗೊಳಿಸಿದರು. ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವುದಾಗಿ ಘೋಷಿಸಿದರು.
9. 4) ರಷ್ಯಾ
ಭಾರತ ಮತ್ತು ರಷ್ಯಾ ಇಂಡೋ-ರಷ್ಯಾ ಜಂಟಿ ಮಿಲಿಟರಿ ವ್ಯಾಯಾಮದ (Indo-Russia Joint Military Exercise -INDRA) 12ನೇ ಆವೃತ್ತಿಯನ್ನು ಆಗಸ್ಟ್ನಲ್ಲಿ ರಷ್ಯಾದ ವೋಲ್ಗೊಗ್ರಾಡ್ ನಗರದಲ್ಲಿ ನಡೆಸಲಿದೆ. 13 ದಿನಗಳ ವ್ಯಾಯಾಮವು ಆಗಸ್ಟ್ 1, 2021 ರಂದು ಪ್ರಾರಂಭವಾಗಲಿದೆ.
10. 1) ಚಂದ್ರಶೇಖರ್ ಆಜಾದ್
ಕೇಂದ್ರ ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಹುತಾತ್ಮರಾದ ‘ಚಂದ್ರಶೇಖರ್ ಆಜಾದ್’ ಅವರ ಜೀವನವನ್ನು ಆಧರಿಸಿದ “ಆಜಾದ್ ಕಿ ಶೌರ್ಯ ಗಥಾ” ಪ್ರದರ್ಶನವನ್ನು ಇತ್ತೀಚೆಗೆ ಉದ್ಘಾಟಿಸಿದರು. ನವದೆಹಲಿಯ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (ಐಜಿಎನ್ಸಿ1) ಯಲ್ಲಿ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಇದು ನಮ್ಮ ದೇಶದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು “ಆಜಾದಿ ಕಾ ಅಮೃತ್ ಮಹೋತ್ಸವ” ದ ಒಂದು ಭಾಗವಾಗಿದೆ. “ಆಜಾದಿ ಕಾ ಅಮೃತ್ ಮಹೋತ್ಸವ” ಆಚರಿಸಲು ಸಂಸ್ಕೃತಿ ಸಚಿವಾಲಯವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (11/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (16/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (19/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (21/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (22/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (23/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (24/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (25/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (26/07/2021)
# ವಾರದ ಪ್ರಚಲಿತ ಘಟನೆಗಳು : Weekly Current Affairs
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಜೂನ್-2021
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020