➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-31
1. ಸಂಗಯ್ಯಾ ಇದು ಯಾರ ಅಂಕಿತನಾಮವಾಗಿದೆ..?
2. ಶಾಖದ ಪ್ರಮಾಣವನ್ನು ಅಳೆಯುವ ಸಾಧನ ಯಾವುದು..?
3. ಬಾಂಗ್ಡಾ ಇದು ಯಾವ ರಾಜ್ಯದ ಜಾನಪದ ನೃತ್ಯ ಶೈಲಿಯಾಗಿದೆ..?
4. ಪಂಚಲೋಹಗಳು ಯಾವುವು..?
5. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು..?
6. 1857ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು ಯಾರು..?
7. ದಾಖಲೆಯ ಪ್ರದರ್ಶನ ನೀಡಿದ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರು ಯಾರು..?
8. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ ವರ್ಷ ಯಾವುದು..?
9. ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ ಚಾಲಿತ ಕಾರು ಯಾವುದು..?
10. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರ್ಕಾರ ಘೋಷಿಸಿದ ವರ್ಷ ಯಾವುದು..?
[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-30 ]
# ಉತ್ತರಗಳು :
1. ನೀಲಾಂಬಿಕೆ
2. ಕ್ಯಾಲೋರಿ ಮೀಟರ್
3. ಪಂಜಾಬ್
4. ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ
5. ಕಪ್ಪೆ ಅರೆಭಟ್ಟನ ಶಾಸನ
6. ವಿ.ಡಿ.ಸಾವರ್ಕರ್
7. ಸಿದ್ದಲಿಂಗಯ್ಯ
8. 1970
9. ರೇವಾ
10. 1963