GKLatest Updates

“ಇ-ಸ್ವತ್ತು” ನಿಮಗೆಷ್ಟು ಗೊತ್ತು..? ಇ- ಸ್ವತ್ತು ಮಾಡಿಸುವುದು ಹೇಗೆ..?

Share With Friends

ಗ್ರಾಮೀಣ ಪ್ರದೇಶಗಳ ಭೂ ಮಾಲಿಕತ್ವದ ದಾಖಲೆಗಳು ಆನ್‍ಲೈನ್‍ನಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಇ ಸ್ವತ್ತು ಪೋರ್ಟಲ್ ಆರಂಭಿಸಿದೆ. ಇದರಲ್ಲಿ ಆಸ್ತಿಯ ದಾಖಲೆಗಳು ದೊರಕುತ್ತವೆ. ಈ ಮೂಲಕ ಭೂಮಿ ಮತ್ತು ಸ್ವತ್ತುಗಳಿಗೆ ಸಂಬಂಧಪಟ್ಟ ವಂಚನೆ, ಪೋರ್ಜರಿಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿದೆ. ಅನಧಿಕೃತ ಬಡಾವಣೆ ನಿರ್ಮಾಣವನ್ನೂ ತಡೆಯಲು ಈ ಪೋರ್ಟಲ್ ಸಹಕರಿಸುತ್ತದೆ.

• ಈ – ಸ್ವತ್ತು ಕಾರ್ಯ
ಪ್ರತಿಯೊಂದು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರಪಾರ್ಟಿಗಳ ರೆಕಾರ್ಡ್ ಆಫ್ ಓನರ್‍ಶಿಪ್ ಮತ್ತು ಇತರ ವಿವರಗಳನ್ನು ಇ- ಸ್ವತ್ತು ಕರ್ನಾಟಕದ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ವಂಶಪಾರಂಪರ್ಯ ದಾಖಲೆಗಳು, ಮಾಲೀಕತ್ವ ವರ್ಗಾವಣೆ ಅಥಾವ ಪ್ರಾಪರ್ಟಿ ಗಿಪ್ಟ್, ಕೋರ್ಟ್ ಕೇಸ್ ಇತ್ಯಾದಿ ವಿವರಗಳನ್ನು ಇದರಲ್ಲಿ ಅಪಡೇಟ್ ಮಾಡಲಾಗುತ್ತದೆ. ಈ ಪೋರ್ಟಲ್ ಮೂಲಕ ಗ್ರಾಮಪಂಚಾಯತ್ ಅಥವಾ ಇತರೆ ಸಂಬಂಧಪಟ್ಟ ಸರಕಾರದ ಇಲಾಖೆಗಳು, ಕೋರ್ಟ್‍ಗಳು, ನಗರ ಪ್ರಾಧಿಕಾರ ಕಛೇರಿಗಳ ಜೊತೆಗೆ ಪ್ರಾಪರ್ಟಿ ವಿವರವನ್ನು ಹಂಚಿಕೊಳ್ಳುವ ಮೂಲಕ ಪೋರ್ಜರಿ ತಡೆಯಬಹುದು.

# ಇ- ಸ್ವತ್ತಿನಲ್ಲಿ ಯಾವೆಲ್ಲ ದಾಖಲೆಗಳು ಲಭ್ಯ
ಇ -ಸ್ವತ್ತು ಪೋರ್ಟಲ್‍ನಲ್ಲಿ ನಮೂನೆ 9 ಮತ್ತು ನಮೂನೆ 11 ದಾಖಲೆಗಳು ಇರುತ್ತವೆ.

# ನಮೂನೆ 9 : 
ಫಾರ್ಮ 9 ಗೆ ಎ – ಖಾತಾ ದಾಖಲೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿ ಕೃಷಿಯೇತರ ಭೂಮಿಗಳನ್ನು ಈ ದಾಖಲೆ ಮೂಲಕ ನಿರ್ವಹಿಸುತ್ತದೆ. ಗ್ರಾಮ ಪಂಚಾಯಿತಿಯು ನಮೂನೆ 9 ನೀಡಬೇಕಿದ್ದರೆ ಈ ಮುಂದಿನ ನಿಯಮಗಳನ್ನು ಪಾಲಿಸಬೇಕು.
• ಕರ್ನಾಟಕ ಲ್ಯಾಂಡ್ ರೆವೆನ್ಯೂ ಕಾಯಿದೆ 1964 ರ ಅನ್ವಯ ಸಂಬಂಧಪಟ್ಟ ಕಂದಾಯ ಇಲಾಕೆಯಡಿ ಕೃಷಿಯೇತರ ಭೂಮಿಯೆಂದು ಪ್ರಾಪರ್ಟಿಯನ್ನು ಕಾನೂನು ಪ್ರಕಾರವಾಗಿ ಕನ್ವರ್ಟ್ ಮಾಡಿರಬೇಕು.
• ಸಂಬಂಧಪಟ್ಟ ಸರ್ಕಾರದ ಇಲಾಖೆಯಿಂದ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಕಾಯಿದೆಯಡಿ ಯೋಜನೆಗೆ ಅನುಮತಿ ಪಡೆದಿರಬೇಕು.
• ಈ ಪ್ರಾಪರ್ಟಿ ದಾಖಲೆಗಳನ್ನು ಮತ್ತು ಸ್ಥಳವನ್ನು ತಹಶೀಲ್ದಾರ್ ಮೂಲಕ ದೃಡೀಕರಿಸಬೇಕು.(ಸ್ಕೆಚ್ ಜೊತೆಗೆ)

 # ಫಾಮ್ 9 ಗೆ ಅಗತ್ಯವಿರುವ ದಾಖಲೆಗಳು
• ಪ್ರಾಪರ್ಟಿಯು ಗ್ರಾಮಠಾಣದ ವ್ಯಾಪ್ತಿಗೆ ಬರುವುದಾದರೆ ಈ ಮುಂದಿನ ದಾಖಲೆಗಳು ಬೇಕು. ಸರ್ವೇ ಮಾಡಿದ ಮತ್ತು ತಹಶೀಲ್ದಾರ್‍ರಿಂದ ದೃಢೀಕರಿಸಿದ ಗ್ರಾಮಾಠಾಣ ಸ್ಕೆಚ್
• ಕನ್ವರ್ಟಡ್ ಪ್ರಾಪರ್ಟಿಯಾಗಿದ್ದರೆ ಮಾಲಿಕತ್ವ ದಾಖಲೆಗಳು. ಕಂದಾಯ ಇಳಾಖೆ ನಿಡಿದ ಕನ್ವರ್ಷನ್ ಆದೇಶ. ಸಂಬಂಧಪಟ್ಟ ಪ್ರಾಧಿಕಾರವು ಪ್ಲಾನ್‍ಗೆ ನೀಡಿದ ಅನುಮತಿ.
• ಸರಕಾರದ ವಸತಿ ಯೋಜನೆಯಡಿ ನಿಡಿರುವ ಪ್ರಾಪರ್ಟಿಯಾಗಿದ್ದರೆ ಸಂಬಂಧಪಟ್ಟ ಪ್ರಾಧಿಕಾರವು ನೀಡಿದ ಹಕ್ಕು ಪತ್ರ ಮತ್ತು ಸಾಂಕ್ಷನ್ ಆರ್ಡರ್
• ಈ ಎಲ್ಲ ರೀತಿ ಪ್ರಾಪರ್ಟಿಗಳಿಗೂ ಮುಂದಿನ ದಾಖಲೆಗಳು ಅಗತ್ಯ ಅರ್ಜಿದಾರರ ಭಾವಚಿತ್ರ, ಗುರುತಿನ ಪತ್ರ, ವಿಳಾಸ ದಾಖಲೆ( ರೇಷನ್ ಕಾರ್ಡ್, ಪಾನ್ ಕಾರ್ಡ್, ಪಾಸ್‍ಪೋರ್ಟ್ ಅಥವಾ ಆಧಾರ ಕಾರ್ಡ್ ಇತ್ಯಾದಿ)

*ನಮೂನೆ 11
ನಮೂನೆ 11 ನ್ನು ಕೂಡ ಸಂಬಂಧಪಟ್ಟ ಗ್ರಾಮಪಂಚಾಯತ್ ಕಚೇರಿಗಳಲ್ಲಿ ಕೃಷಿಯೇತರ ಪ್ರಾಪರ್ಟಿಗಳಿಗಾಗಿ ನೀಡಲಾಗುತ್ತದೆ. ಕರ್ನಾಟಕ ಪಂಚಾಯತ್ ರಾಜ್ ನಿಯಮಗಳು 2006 ಅಡಿಯಲ್ಲಿ ಇದನ್ನು ನೀಡಲಾಗುತ್ತದೆ.

ಸಾಮಾನ್ಯವಾಗಿ ನಮುನೆ 9 ಮತ್ತು ನಮೂನೆ 11 ಅನ್ನು ಆಸ್ತಿ ತೆರಿಗೆ ಸಂಗ್ರಹಕ್ಕೆ ಬಳಸಲಾಗುತ್ತದೆ. ಈ ನಮುನೆಗಳು ಅಥವಾ ದಾಖಲೆಗಳು ಇರುವ ಆಸ್ತಿ ಮಾಲೀಕರು ಕಡ್ಡಾಯವಾಗಿ ತೆರಿಗೆಯನ್ನು ಪಾವತಿಸಬೇಕಿರುತ್ತದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದು ಅತ್ಯಂತ ಅಗತ್ಯವಾದ ದಾಖಲೆಯಾಗಿದೆ.

ಇ- ಸ್ವತ್ತಿಗೆ ಗ್ರಾಮ ಪಂಚಾಯತ್‍ನಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕಿದ್ದರೂ ಈ ಅರ್ಜಿ ನಮೂನೆಗಳನ್ನು ಇ- ಸ್ವತ್ತು ಪೋರ್ಟಲ್‍ಗೆ ಅಪ್ಲೋಡ್ ಮಾಡಲಾಗುತ್ತದೆ. ಈ ನಮುನೆಗಳಿಗೆ ಪಿಡಿಒ ಡಿಜಿಟಲ್ ಸಹಿ ಹಾಕಿರುತ್ತಾರೆ. ಇ- ಸ್ವತ್ತಿನಲ್ಲಿ ನೀಡಲಾದ ಪ್ರತಿಯೊಂದು ಸರ್ಟಿಫಿಕೆಟ್‍ಗೂ ವಿಶೇಷ ಸಂಖ್ಯೆ ಇರುತ್ತದೆ. ಈ ಸಂಖ್ಯೆಯು ದಾಖಲೆ ದೃಡೀಕರಣಕ್ಕೆ ಅಗತ್ಯವಾಗಿ ಬೇಕಿರುತ್ತದೆ.

# ಗಮನಿಸಬೇಕಾದ ಅಂಶಗಳು :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಕೃಷಿಯೇತರ ಸ್ವತ್ತುಗಳಿಗೆ ‘ಇ- ಸ್ವತ್ತು’ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ. ‘ಇ- ಸ್ವತ್ತು’ ಇಲ್ಲದೆ ಯಾವ ಉಪ ನೋಂದಣಾಧಿಕಾರಿಯೂ ಸ್ವತ್ತು ನೋಂದಣಿ ಮಾಡುವಂತಿಲ್ಲ. ಹೀಗಾಗಿ, ಎಲ್ಲವೂ ಸಕ್ರಮವಾಗಿಲ್ಲದ ಆಸ್ತಿಗಳ ಮಾಲೀಕರು ಅದನ್ನು ಮಾರಾಟ ಮಾಡಲು ಪರಿತಪಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿಗಳು ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ-9 ಮತ್ತು 11 ನೀಡುತ್ತಿದ್ದವು. ಇದನ್ನು ಇದೀಗ ಒಟ್ಟುಗೂಡಿಸಿ ‘ಇ-ಸ್ವತ್ತು’ ಎಂದು ಹೆಸರಿಸಲಾಗಿದೆ. ಇದು ಗಣಕೀಕೃತವಾಗಿದ್ದು, ಗ್ರಾಮ ಲೆಕ್ಕಗರ ಶಾಹಿ ಸಹಿಯ ಅಗತ್ಯ ಇಲ್ಲ. ಡಿಜಿಟಲ್ ಸಿಗ್ನೇಚರ್ ಮೂಲಕ ಇದು ಕಾರ್ಯನಿರ್ವಹಿಸಲಿದೆ. ಗ್ರಾಮ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರು ‘ಇ-ಸ್ವತ್ತು’ ಅನ್ನು ಕಂಪ್ಯೂಟರ್ ಮೂಲಕ ವಿತರಿಸಿದರೆ ಮಾತ್ರ ಆ ಆಸ್ತಿ ನೋಂದಣಿಯಾಗುತ್ತದೆ.

ಕೃಷಿಯೇತರ ಭೂಮಿಯ ಆಸ್ತಿಗಳು ಭೂಕಂದಾಯ ಕಾಯ್ದೆಗೆ ಅನುಗುಣವಾಗಿ ಪರಿವರ್ತನೆಯಾಗಿ, ಅನುಮೋದಿತ ಬಡಾವಣೆಯಲ್ಲಿರಬೇಕು. ವಸತಿ ಇಲಾಖೆ ನೀಡಿದ್ದಾದರೆ, ಅದರ ಆದೇಶದಂತಿರುವ ಆಸ್ತಿ ಆಗಿರಬೇಕು. ಗ್ರಾಮಠಾಣಾ ವ್ಯಾಪ್ತಿಯ ಆಸ್ತಿಯಾಗಿದ್ದರೆ ತಹಸೀಲ್ದಾರ್ ನೀಡುವ ಕಚ್ಚಾ ನಕ್ಷೆ, ಸರ್ಕಾರ ಸುತ್ತೋಲೆ ಸಂಖ್ಯೆಯನ್ನು ಆಧರಿಸಿರಬೇಕು. ಇದು ನಮೂನೆ-9ರ ನಿಬಂಧನೆಗಳು.

ಇನ್ನು ನಮೂನೆ-11ರಂತೆ ಪಂಚಾಯತ್‌ರಾಜ್ ನಿಯಮಗಳನ್ವಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೃಷಿಯೇತರ ಆಸ್ತಿಗಳಿಗೆ ವಿತರಿಸುವ ನಮೂನೆಯಲ್ಲಿ ಭೂಮಿ, ಕಟ್ಟಡಗಳ ಬೇಡಿಕೆ, ವಸೂಲಿ, ಬಾಕಿಗಳ ವಹಿಗಳಿರುತ್ತವೆ. ಇವೆರಡೂ ಸೇರಿದ ಮಾಹಿತಿಯೇ ಗಣಕೀಕೃತ ‘ಇ-ಸ್ವತ್ತು’.
ಗ್ರಾಮ ಪಂಚಾಯಿತಿಗಳಲ್ಲಿ ಕೃಷಿ ಭೂಮಿಗಳಿಗೆ ಪಹಣಿ (ಆರ್‌ಟಿಸಿ) ಮೂಲಕ ಆಸ್ತಿ ಮಾಲೀಕತ್ವ ದೃಢೀಕರಿಸಲಾಗುತ್ತದೆ.

ಆದರೆ ಕೃಷಿಯೇತರ ಭೂಮಿಗಳಲ್ಲಿ ಆರ್‌ಟಿಸಿ ಒಂದೇ ಮಾನದಂಡ ಆಗುವುದಿಲ್ಲ. ಕೃಷಿಯೇತರ ಭೂಮಿ ಆದ ಮೇಲೆ ಅದು ಬಡಾವಣೆ ಆಗಿದ್ದೇ ಆದರೆ ಅದನ್ನು ನಗರ ಯೋಜನೆ ಪ್ರಾಧಿಕಾರವು ಅನುಮೋದಿಸಬೇಕು. ಇಂತಹ ದಾಖಲೆಗಳನ್ನು ಪರಿಶೀಲಿಸಿ ‘ಇ-ಸ್ವತ್ತು’ ಪ್ರಮಾಣಪತ್ರ ನೀಡುತ್ತದೆ. ಇದಿದ್ದರೆ ಮಾತ್ರ ನೋಂದಣಿ ಸಾಧ್ಯ.

# 45 ದಿನದೊಳಗೆ ಪ್ರಕ್ರಿಯೆ :
ಕರ್ನಾಟಕ ಪಂಚಾಯತ್ ರಾಜ್ ನಿಯಮ 2006ರ ಅನ್ವಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕ್ರಮಬದ್ಧ ಆಸ್ತಿಗಳಿಗೆ ನಮೂನೆ-9 ಹಾಗೂ 11(ಎ) ಮತ್ತು ನಮೂನೆ-11(ಬಿ)ಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ (ಪಿಡಿಒ) ಡಿಜಿಟಲ್ ಸಹಿಯ ಮೂಲಕ ವಿತರಿಸಲಾಗುತ್ತಿದೆ. ಈ ನಮೂನೆಗಳನ್ನು ಪಡೆಯಲು ಸಾರ್ವಜನಿಕರು ಅಗತ್ಯ ದಾಖಲಾತಿಗಳನ್ನು ಒದಗಿಸಬೇಕಿದೆ.

ನಮೂನೆ-9 ಹಾಗೂ 11(ಎ) ಪಡೆಯಲು ಗ್ರಾಮಠಾಣಾ ವ್ಯಾಪ್ತಿಯ ಸ್ಥಳದ ಮಾಲೀಕತ್ವ ದಾಖಲೆ, ಗ್ರಾಮಠಾಣಾ ನಕ್ಷೆ, ಚೆಕ್ಕುಬಂದಿ ವಿವರ ಮತ್ತು ಮಾಲೀಕನ ವಿಳಾಸದ ಗುರುತಿನ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ನಮೂನೆ- 11(ಬಿ) ಪಡೆಯಲು ಸ್ಥಳದ ಆಸ್ತಿಗಳಿಗೆ ಮಾಲೀಕತ್ವ ದಾಖಲೆ ಅಥವಾ ಕ್ರಯಪತ್ರ, ಪಹಣಿ ಪತ್ರ, ನಿವೇಶನದ ನಕ್ಷೆ, ಕಟ್ಟಡದ ತೆರಿಗೆ ರಸೀದಿ ಅಥವಾ ವಿದ್ಯುತ್ ಬಿಲ್, ಮಾಲೀಕನ ವಿಳಾಸದ ಗುರುತಿನ ಪತ್ರ ಮತ್ತು ಚೆಕ್ಕುಬಂದಿ ವಿವರಗಳನ್ನು ಸಲ್ಲಿಸಬೇಕು.

ಅಗತ್ಯ ದಾಖಲಾತಿಗಳೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ದ್ವಿತೀಯ ದರ್ಜೆ ಸಹಾಯಕ, ಕಾರ್ಯದರ್ಶಿ ದಾಖಲಾತಿ ಮತ್ತು ಸ್ಥಳದ ಪರಿಶೀಲನೆ ನಡೆಸಿ, 7 ದಿನಗಳ ಒಳಗೆ ಆಕ್ಷೇಪಣೆಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ.

ಆಕ್ಷೇಪಣೆಗಳು ಬಂದಲ್ಲಿ, ಪರಿಶೀಲಿಸಿ ದಾಖಲು ಮಾಡಿ ಟಿಪ್ಪಣಿಯೊಂದಿಗೆ ಪ್ರಸ್ತಾವನೆಯನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಸಭೆಯ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಅರ್ಜಿ ಪುರಸ್ಕರಿಸಿದ್ದಲ್ಲಿ ಇ-ಸ್ವತ್ತು ತಂತ್ರಾಂಶದ ಅರ್ಜಿಯನ್ನು ಅಪ್ಲೋಡ್ ಮಾಡಿ ಆಸ್ತಿ ನಕ್ಷೆ ಪಡೆಯಲು ಮೋಜಿಣಿಗೆ ವರ್ಗಾಯಿಸಲಾಗುತ್ತದೆ.
ಮೋಜಿಣಿಗೆ ವರ್ಗಾಯಿಸಿದ ನಂತರ ಸ್ವೀಕೃತಿ ಪತ್ರ ಪಡೆದು, ನಾಡಕಚೇರಿಯಲ್ಲಿ ರೂ.800 ಶುಲ್ಕ ಪಾವತಿಸಬೇಕು.

ಇದಾದ 21 ದಿನದೊಳಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರ್ಜಿದಾರ ಮತ್ತು ಬಾಜುದಾರನ ಸಮ್ಮುಖದಲ್ಲಿ ಸ್ಥಳ ತನಿಖೆ ನಡೆಯುತ್ತದೆ. ನಕ್ಷೆ ಬಂದ ನಂತರ ದ್ವಿತೀಯ ದರ್ಜೆ ಸಹಾಯಕ ಅದನ್ನು ಅನುಮೋದಿಸಿ ಕಾರ್ಯದರ್ಶಿ ಅಥವಾ ಪಿಡಿಒಗೆ ಕಳುಹಿಸಲಾಗುವುದು. ಅವರ ಡಿಜಿಟಲ್ ಸಹಿಯ ಮೂಲಕ ಅನುಮೋದನೆಗೊಳ್ಳಲಿದ್ದು, ನಮೂನೆ ಪಡೆಯಬಹುದು. ಈ ಎಲ್ಲಾ ಪ್ರಕ್ರಿಯೆಯು ಅರ್ಜಿ ಸಲ್ಲಿಸಿದ 45 ದಿನದೊಳಗೆ ನಡೆಯಲಿದೆ

# ಇವುಗಳನ್ನೂ ಓದಿ…
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)

➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು
ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
ಕನ್ನಡ ಪ್ರಮುಖ ಕವಿಗಳ ಬಿರುದುಗಳು
ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
ಕರ್ನಾಟಕದ ಮುಖ್ಯ ನದಿಗಳು ಮತ್ತು ಅವುಗಳು ಉಗಮ ಸ್ಥಳ

error: Content Copyright protected !!