ಭಾರತ ಚುನಾವಣಾ ಅಯೋಗ ಕುರಿತ ಸಂಕ್ಷಿಪ್ತ ಮಾಹಿತಿ
ಭಾರತದ ಚುನಾವಣಾ ಆಯೋಗವು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ಲೋಕಸಭೆಗೆ, ರಾಜ್ಯಸಭೆಗೆ, ರಾಜ್ಯದಲ್ಲಿ ರಾಜ್ಯ ವಿಧಾನಸಭೆಗಳಿಗೆ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸುತ್ತದೆ.ಚುನಾವಣಾ ಆಯೋಗವು ಆರ್ಟಿಕಲ್ 324 ರ ಪ್ರಕಾರ ಸಂವಿಧಾನದ ಅಧಿಕಾರದಲ್ಲಿ ಕಾರ್ಯನಿರ್ವಹಿಸುತ್ತದೆ, ಮತ್ತು ತರುವಾಯ ಪೀಪಲ್ಸ್ ಕಾಯ್ದೆಯ ಪ್ರಾತಿನಿಧ್ಯವನ್ನು ಜಾರಿಗೊಳಿಸಿತು. ಆಯೋಗವು ಸಂವಿಧಾನದ ಅಡಿಯಲ್ಲಿ ಸನ್ನಿವೇಶವನ್ನು ನಿಭಾಯಿಸಲು ಕೆಲವು ಅಧಿಕಾರವನ್ನು ಹೊಂದಿದೆ.
➤ ಚುನಾವಣಾ ಆಯೋಗವು ಭಾರತದ ಸಂವಿಧಾನವು ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ನಡೆಸಲು ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ.
➤ ಇದು ಸರಕಾರದ ಹಸ್ತಕ್ಷೇಪದಿಂದ ಮುಕ್ತವಾಗಿದ್ದು, ಸ್ವಾಯತ್ತ ಮತ್ತು ಅರೆ ನ್ಯಾಯಿಕ ಸ್ವಾಯತ್ತ ಸಂಸ್ಥೆಯಾಗಿದೆ.
➤ ಚುನಾವಣೆ ಎಂಬ ಕನ್ನಡ ಪದ ‘ ಚುನಾವ್’ ಎಂಬ ಹಿಂದಿ ಪದದಿಂದ ಬಂದಿದೆ.
➤ ಚುನಾವಣಾ ಆಯೋಗವನ್ನು 1950 ರ ಜನವರಿ 25 ರಂದು ರಚಿಸಲಾಯಿತು. ಈ ಆಯೋಗವು 2010 ಜನವರಿ 25 ಕ್ಕೆ 60 ವಸಂತಗಳನ್ನು ಪೂರೈಸಿದೆ.
➤ ಉದ್ದೇಶ- ಪ್ರಜಾಪ್ರಭುತ್ವ ಸರ್ಕಾರದಲ್ಲಿ ಜನರಿಂದ ನೇರವಾಗಿ ಸಮರ್ಥವಾದ ಜನ ನಾಯಕನನ್ನು ನ್ಯಾಯಬದ್ದವಾಗಿ ಚುನಾವಣೆಯ ಮೂಲಕ ಅಯ್ಕೆ ಮಾಡುವದಾಗಿದೆ.
➤ ಭಾರತ ಸಂವಿಧಾನದ 15 ನೇ ಭಾಗದ 324 ನೇ ವಿಧಿಯಿಂದ 329 ರವರೆಗಿನ ವಿಧಿಗಳು ಚುನಾವಣಾ ಆಯೋಗದ ಬಗ್ಗೆ ತಿಳಿಸುತ್ತವೆ.
# ಚುನಾವಣಾ ಬಗ್ಗೆ ಅನುಚ್ಛೇಧಲ್ಲಿನ ಉಲ್ಲೇಖಗಳು :
ಅನುಚ್ಛೇಧ : 324 – ಚುನಾವಣೆಗಳ ಮೇಲ್ವಿವಾರಣೆ, ನಿರ್ದೇಶನ, ನಿಯಂತ್ರಣ ಮತ್ತು ಜವಾಬ್ದಾರಿಗಳನ್ನು ಹೇಳುತ್ತದೆ.
ಅನುಚ್ಛೇಧ :325 – ಮತದಾರರ ಪಟ್ಟಿಯಲ್ಲಿ ಧರ್ಮ, ಜಾತಿ, ಲಿಂಗದ ಆಧಾರದ ಮೇಲೆ ಹೆಸರನ್ನು ಸೇರಿಸಲು ನಿರಾಕರಿಸುವಂತಿಲ್ಲ.
ಅನುಚ್ಛೇಧ :326 –ಮತದಾನವು ವಯಸ್ಕ ಮತಾಧಿಕಾರದ ಆಧಾರದ ಮೇಲೆ ನಡೆಯಬೇಕು.
ಅನುಚ್ಛೇಧ : 327 – ವಿಧಾನ ಮಂಡಲಗಳ ಚುನಾವಣೆಗಳ ಬಗ್ಗೆ ಉಪಬಂಧ ರಚಿಸಲು ಸಂಸತ್ತಿನ ಅಧಿಕಾರವಿದೆ.
ಅನುಚ್ಛೇಧ : 328 – ವಿಧಾನ ಮಂಡಲಗಳಚುನಾವಣೆಗೆ ಸಂಬಂಧಿಸಿದ ಉಪಬಂಧಗಳನ್ನು ರಾಜ್ಯ ವಿಧಾನ ಮಮಡಲಗಳು ರಚಿಸಿಕೊಳ್ಳುವ ಅಧಿಕಾರ.
ಅನುಚ್ಛೇಧ : 329 –ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗದ ಕಾರ್ಯದಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಪ್ರತಿಷೇಧ.
# ಚುನಾವಣಾ ಆಯೋಗದ ರಚನೆ :
ಚುನಾವಣಾ ಆಯೋಗದಲ್ಲಿ 1989 ರ ವರೆಗೆ ಮುಖ್ಯ ಚುನಾವಣಾ ಆಯುಕ್ತರು ಮಾತ್ರ ಇದ್ದರು. ಬಳಿಕ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಲಾಯಿತು. ಆದರೆ 1990 ರಲ್ಲಿ ನೇಮಕಗೊಂಡ ಮುಖ್ಯ ಚುನಾವಣಾ ಅಧಿಕಾರಿ ‘ಟಿ. ಎನ್. ಶೇಷನ್ರವರ’ ನಿರಂಕುಶ ತಿರ್ಮಾನಗಳು ಬಹಳ ಚರ್ಚೆಗೆ ಗ್ರಾಸವಾದವು. ಈ ರೀತಿಯ ನಿರಂಕುಶ ನಿರ್ಧಾರದ ಅವಗಡಗಳನ್ನು ತಪ್ಪಿಸಲು ಸಂಸತ್ತಿನ ಜಂಟಿ ಸಮಿತಿ ಮತ್ತು ದೀನೇಸ ಗೋಸ್ವಾಮಿ ಸಮಿತಿ ಬಹು ಸದಸ್ಯ ಆಯೋಗದ ರಚನೆಗೆ ಶಿಫಾರಸ್ಸು ಮಾಡಿತು.
➤ ಈ ನಿರಂಕುಶ ಅಧಿಕಾರಕ್ಕೆ ಕಡಿವಾಣ ಹಾಕಲು ಪಿ. ವಿ ನರಸಿಂಹರಾವ್ ಸರ್ಕಾರ 1993 ಅಕ್ಟೋಬರ್ 1 ರಂದು ಬಹು ಚುನಾವಣಾ ಅಧಿಕಾರಿಯ ಆಯೋಗವನ್ನು ಸುಗ್ರಿವಾಜ್ಞೆಯ ಮೂಲಕ ರಚಿಸಿತು. ಡಿಸೆಂಬರ್ 20, 1993ರಲ್ಲಿ ಸಂಸತ್ತು ಸುಗ್ರಿವಾಜ್ಞೆಗೆ ಒಪ್ಪಿಗೆ ನೀಡಿತು.
➤ ಚುನಾವಣಾ ಆಯೋಗಕ್ಕೆ ಒಬ್ಬರು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.
➤ ಚುನಾವಣಾ ಆಯುಕ್ತರಿಗೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾದೀಶರ ಸ್ಥಾನಮಾನ ನೀಡಲಾಗಿದ್ದು. ನ್ಯಾಐಆದೀಶರಿಗೆ ದೊರೆಯುವ ವೇತನ, ಪಿಂಚಣಿ ಮತ್ತು ಇತರೆ ಸೌಲಭ್ಯಗಳು ಚುನಾವಣಾ ಆಯುಕ್ತರಿಗೂ ಲಭಿಸುತ್ತವೆ.
➤ ಚುನಾವಣಾ ಆಯುಕ್ತರ ಅಧಿಕಾರದ ಅವಧಿ 6 ವರ್ಷ ಅಥವಾ 65 ವರ್ಷವಯಸ್ಸಿನವರೆU ಈ ರೆಡರಲ್ಲಿ ಯಾವುದು ಬೇಗ ಅಂತ್ಯವಾಗುವುದೋ ಅದಕ್ಕನುಸಾರವಾಗಿ ಪದತ್ಯಾಗ ಮಾಡಬೇಕು.
➤ ಸಂವಿಧಾನದ 324 (5) ನೇ ಉಪವಿಧಿಯ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಯನ್ನು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಪದಚ್ಯುತಿ ಮಾದರಿಯಂತೆ ಮಾಡಲಾಗುತ್ತದೆ. ಅಂದರೆ ಮುಖ್ಯ ಚುನಾವಣಾ ಆಯುಕ್ತರು ವರ್ತನೆ ಅನುಚಿತವಾಗಿರುವುದು ಸಾಬೀತಾದರೆ, ಅವರ ವಿರುದ್ದ ಸಂಸತ್ತಿನಲ್ಲಿ ಬಹುಮತದೊಂದಿಗೆ ನಿರ್ಣಯ ಅಂಗೀಕರಿಸಿ ಹುದ್ದೆಯಿಂದ ತೆಗೆದು ಹಾಕಬಹುದು. ಅದೇ ರೀತಿ ಉಳಿದ ಇಬ್ಬರು ಆಯುಕ್ತರನ್ನು ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ಅವರು ವಜಾ ಮಾಡಬಹುದು.
# ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ- ಸುನೀಲ್ ಅರೋರಾ