ದಯಾಮರಣ ಎಂದರೇನು.? ಇತಿಹಾಸವೇನು.? ಎಷ್ಟು ವಿಧ..?
ದೀರ್ಘಕಾಲದಿಂದಲೂ ತೀವ್ರ ಚರ್ಚೆ ಮತ್ತು ಪರ-ವಿರೋಧ ಅಭಿಪ್ರಾಯಗಳಿಗೆ ಕಾರಣವಾಗಿದ್ದ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಪಾಶ್ಚಾತ್ಯ ದೇಶಗಳಲ್ಲಿ ಜಾರಿಯಲ್ಲಿರುವ ದಯಾಮರಣ ಭಾರತದಲ್ಲೂ ಚಾಲನೆಗೆ ಬರುವ ಕಾಲ ಸನ್ನಿಹಿತವಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನ ಪೀಠ ಈ ಮಹತ್ವದ ತೀರ್ಪು ಘೋಷಿಸಿದೆ. ಹಿರಿಯ ನ್ಯಾಯಮೂರ್ತಿಗಳಾದ ಎ.ಕೆ.ಸುಕ್ರಿ, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರೂ ಸಹ ಈ ಪೀಠದಲ್ಲಿದ್ದಾರೆ.
ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳು ನಿರ್ದಿಷ್ಟ ಪ್ರಕರಣಗಳಲ್ಲಿ ನಿಷ್ಕ್ರಿಯ ದಯಾಮರಣಕ್ಕೆ(ಪ್ಯಾಸಿವ್ ಯುಥನಾಸಿಯಾ)ಮನವಿ ಸಲ್ಲಿಸುವುದಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ದಯಾಮರಣದ ಸಂಬಂಧ ಕಾಮನ್ ಕಾಸ್ ಎಂಬ ಎನ್ಜಿಒ (ಸರ್ಕಾರೇತರ ಸಂಸ್ಥೆ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗೌರವದಿಂದ ನಿಧನರಾಗುವುದು ಮಾನವನ ಮೂಲಭೂತ ಹಕ್ಕು ಎಂದು ಹೇಳಿದೆ.
* ದಯಾಮರಣಕ್ಕೆ ಹಲವು ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಅನುಸರಿಸುವುದು ಅಗತ್ಯವಿದೆ. ಇವುಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
* ಮಾರ್ಗಸೂಚಿಗಳನ್ವಯ ಕಾನೂನು ರೂಪಿಸಬೇಕು. ಅದರಲ್ಲಿನ ಸಾಧಕ-ಬಾಧಕಗಳನ್ನು ಪರಿಗಣಿಸಿದ ನಂತರ ದಯಾಮರಣ ಜಾರಿ ಬಗ್ಗೆ ಪರಿಶೀಲಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
* ದಯಾಮರಣವನ್ನು ಯಾರು ಕಾರ್ಯಗತಗೊಳಿಸಬೇಕು, ಇದರಲ್ಲಿ ವೈದ್ಯಕೀಯ ಮಂಡಳಿ ಪಾತ್ರವೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ಸೂಕ್ತ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ರೂಪಿಸಬೇಕು.ಆನಂತರ ಈ ಸಂಬಂಧ ಮಸೂದೆಯೊಂದನ್ನು ಜಾರಿಗೊಳಿಸಬೇಕಿದೆ ಎಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿದೆ.
* ಇದೊಂದು ಗಂಭೀರ ವಿಷಯ. ಹಲವು ಷರತ್ತುಗಳೊಂದಿಗೆ ಇದನ್ನು ಕಾರ್ಯಗತಗೊಳಿಸಬೇಕು. ಇದು ದುರುಪಯೋಗವಾಗದಂತೆ ಕಾನೂನು ಕ್ರಮ ಕೈಗೊಳ್ಳಬೇಕು.
* ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಮತ್ತು ದಯಾಮರಣಕ್ಕೆ ಅರ್ಹರಾಗಿರುವ ವ್ಯಕ್ತಿಗಳು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು. ಆಸ್ಪತ್ರೆಗಳಲ್ಲಿ ಜೀವ ರಕ್ಷಕ ವ್ಯವಸ್ಥೆಯಲ್ಲಿರುವ ಮತ್ತು ಮರಣ ಶಯ್ಯೆಯಲ್ಲಿರುವ ವ್ಯಕ್ತಿ (ಆತ ಅಥವಾ ಆಕೆ) ತಾನು ಬದುಕಲು ಇಚ್ಚೆ ಇಲ್ಲ ಎಂದು ದೃಢಪಡಿಸಿದ ನಂತರ, ಈ ಬಗ್ಗೆ ವೈದ್ಯಕೀಯ ಮಂಡಳಿ ತೀರ್ಮಾನ ಕೈಗೊಳ್ಳಬೇಕು. ಆ ಬಳಿಕ ದಯಾಮರಣ ಜಾರಿಗೊಳಿಸಲು ಅವಕಾಶ ಇದೆ. ಅಂಥ ಸಂದರ್ಭಗಳಲ್ಲಿ ಜೀವ ರಕ್ಷಕ ವ್ಯವಸ್ಥೆ (ಲೈಫ್ ಸೇವಿಂಗ್ ಸಿಸ್ಟಮ್) ತೆಗೆಯಬಹುದು. ಆದಾಗ್ಯೂ ಇದನ್ನು ಜಾರಿಗೊಳಿಸುವ ಸಂಬಂಧ ಷರತ್ತುಗಳನ್ನು ಪಾಲಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
* ಸರ್ವೋಚ್ಚ ನ್ಯಾಯಾಲಯವು 2011ರಲ್ಲಿ ಅರುಣಾ ಶಾನ್ಭಾಗ್ ಪ್ರಕರಣದಲ್ಲಿ (ಆಸ್ಪತ್ರೆಯ ಕಾವಲುಗಾರನಿಂದ ಅತ್ಯಾಚಾರಕ್ಕೆ ಒಳಗಾಗಿ ಮಾರಕವಾಗಿ ಗಾಯಗೊಂಡು ಹಲವಾರು ವರ್ಷಗಳ ಕಾಲ ಜೀವಂತ ಶವವಾಗಿದ್ದ ನರ್ಸ್) ನಿಷ್ಕ್ರಿಯ ದಯಾಮರಣ(ಜೀವ ರಕ್ಷಕ ತೆಗೆಯಬಹುದಾದ ಪ್ರಕರಣ) ನೀಡಬಹುದಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತ್ತು.
# ದಯಾಮರಣ ಎಂದರೇನು..?
ಯುಥೆನೇಶಿಯ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಯಾಮರಣ ಪದಕ್ಕೆ ಉತ್ತಮ ಸಾವು ಎಂಬ ಅರ್ಥವಿದೆ. ದಯಾಮರಣವನ್ನು ಜೀವನ ನಡೆಸಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಅವರ ನೋವಿನ ಜೀವನ ಕೊನೆಗಾಣಿಸುವ ನೆಲೆಯಲ್ಲಿ ಒದಗಿಸಲಾಗುತ್ತದೆ. ದಯಾಮರಣ ವಿಷಯ ಸಂಭಂದಿಸಿ ಬೇರೆ ಬೇರೆ ರಾಷ್ಟ್ರಗಳಲ್ಲಿ ತಮ್ಮದೇ ಆದ ಕಾನೂನು ವ್ಯವಸ್ಥೆ ಜಾರಿಯಲ್ಲದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಭಾರತ ಮಾನವೀಯ ಮೌಲ್ಯಗಳಿಗೆ ಸಾಕಷ್ಟು ಪ್ರಾಮುಖ್ಯುತೆ ನೀಡಿದ ರಾಷ್ಡ. ದಯಾಮರಣವನ್ನು ಕಾನೂನಿನ ಮಾನ್ಯತೆ ಪಡೆದು ತಜ್ಞವೈದ್ಯರ ಸಹಾಯದೊಂದಿಗೆ ನಡೆಸಲಾಗುವ ಆತ್ಮಹತ್ಯೆ ಎಂದೂ ವ್ಯಾಖ್ಯಾನಿಸಬಹುದು. ಇಲ್ಲಿ ರೋಗಿಯ ಬೇಡಿಕೆಯ ಮೇರೆಗೆ ವೈದ್ಯರು ದಯಾಮರಣವನ್ನು ಆತನ ಆರೋಗ್ಯ ಸ್ಥಿತಿ ಆದರಿಸಿ ಒದಗಿಸುತ್ತಾರೆ.
ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 20
# ದಯಾಮರಣದಲ್ಲಿ ಎರಡು ವಿಧ :
> ದಯಾಮರಣದಲ್ಲಿ ಮುಖ್ಯವಾಗಿ ಎರಡು ವಿಧ ಗೋಚರಿಸುತ್ತದೆ. ಒಂದು ಸ್ವಘೋಷಿತ ದಯಾಮರಣ ಮತ್ತು ಪರೋಕ್ಷ ದಯಾಮರಣ. ಸ್ವಘೋಷಿತ ದಯಾಮರಣದಲ್ಲಿ ರೋಗಿಯು ತನ್ನ ನೋವಿನ ಜೀವನವನ್ನು ಮುಂದುವರಿಸಲಾಗದ ಸ್ಥಿತಿಯಲ್ಲಿ ಸಾವಿಗಾಗಿ ಸಲ್ಲಿಸುವ ಬೇಡಿಕೆಯಾಗಿದೆ.
> ಪರೋಕ್ಷ ದಯಾಮರಣದಲ್ಲಿ ರೋಗಿಯು ತನ್ನ ಭಾವನೆಯನ್ನು ವ್ಯಕ್ತಪಡಿಸಲಾಗದ ಸ್ಥಿತಿಯಲ್ಲಿದ್ದು ಆತನ ಮನೆಯವರು ಆತನ ಸಾವಿಗಾಗಿ ಸಲ್ಲಿಸುವ ಬೇಡಿಕೆಯಾಗಿದೆ. ಇಲ್ಲಿ ಹೆಚ್ಚಿನ ರಾಷ್ಡ್ರಗಳು ಪರೋಕ್ಷ ದಯಾಮರಣವನ್ನು ಕೊಲೆ ಎಂದು ಪರಿಗಣಿಸಿ ಮಾನ್ಯತೆ ನೀಡಿಲ್ಲ. ಇಂತಹ ರಾಷ್ಟ್ರಗಳ ಸಾಲಿನಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಗಳೂ ಸೇರಿ ಕೊಂಡಿವೆ.
# ಇತಿಹಾಸ :
ಇತಿಹಾಸ ಹೇಳುವಂತೆ ಯುಥೆನೇಶಿಯ ಪ್ರಕಾರವು ಪ್ರಾಚೀನ ಗ್ರೀಸ್ ಮತ್ತು ರೋಮ್ ರಾಷ್ಟ್ರಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ. ಆ ಕಾಲದಲ್ಲಿ ಸಾಕ್ರೆಟಿಸ್ ಸೇರಿದಂತೆ ಪ್ಲೇಟೋ ಮೊದಲಾದ ತತ್ವಜ್ನಾನಿಗಳಿಂದಲೂ ದಯಾಮರಣ ಮಾನ್ಯತೆ ಪಡೆದಿತ್ತು. ಅಮೇರಿಕ ಮೂಲದ ಜ್ಯುಡಿಯೋ ಕ್ರಿಶ್ಚಿಯನ್ ಸಮುದಾಯವು ದಯಾಮರಣವನ್ನು ಬಲವಾಗಿ ವಿರೋಧಿಸಿದೆ.
ಈ ಧರ್ಮ ಹೇಳುವಂತೆ ದಯಾಮರಣದಲ್ಲಿ ಪಾಲ್ಗೊಳ್ಳುವುದು ಪಾಪ .ಅಮೇರಿಕ ಮೂಲದ ಫ್ಲೆರಿಕ್ಸ್ ಅಡ್ಲೆರ್ ಪ್ರಪ್ರಥಮಬಾರಿಗೆ ದಯಾಮರಣದ ಅನುಷ್ಠಾನದ ಅವಶ್ಯಕತೆಯ ಕುರಿತಾಗಿ ವಿಶ್ವದ ಗಮನ ಸೆಳೆದವರು. ದಯಾಮರಣ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಅರುಣಾ ಶ್ಯಾನುಭೋಗ್ ಪ್ರಕರಣವು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಈ ಪ್ರಕರಣದ ಕುರಿತು ತೀರ್ಪು ನೀಡುವವೇಳೆ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಭಾರತದಲ್ಲಿ ಅವಕಾಶ ಒದಗಿಸಲಾಗದೇ ಇರುವುದರ ಕುರಿತಾಗಿ ಸ್ಪಷ್ಟನೆ ನೀಡಿತ್ತು.
ದಯಾಮರಣ ನೀಡುವ ಪ್ರಕ್ರಿಯೆಯನ್ನು ಹಲವುರೀತಿಯಲ್ಲಿ ಅನುಸರಿಸಲಾಗುತ್ತಿದ್ದು, ಮುಖ್ಯವಾಗಿ ರೋಗಿಗೆ ಈಗಾಗಲೇಒದಗಿಸಡಲಾಗುವ ತಾತ್ಕಾಲಿಕ ಜೀವ ಉಳಿಸುವ ಔಷಧ ಉಪಚಾರಗಳನ್ನು ಸ್ಥಗಿತಗೊಳಿಸುವ ಮೂಲಕ ಹಾಗೂ ವಿಷದ ಸಿರಿಂಜನ್ನು ನೀಡುವ ಮೂಲಕ ಹಾಗೂ ಹಲವು ಇತರ ವಿಧಾನಗಳ ಮೂಲಕ ದಯಾಮರಣವನ್ನು ಹೊರ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ.