ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ-ಭಾಗ 1
(ಉತ್ತರಗಳು ಈ ಪುಟದ ಅಂತ್ಯದಲ್ಲಿವೆ)
1. ಮನೋವಿಜ್ಞಾನದ Psyche ಎಂಬ ಪದವು ಈ ಭಾಷೆಯಿಂದ ಬಂದಿದೆ.
ಎ) ಇಂಗ್ಲಿಷ್ ಬಿ) ಲ್ಯಾಟಿನ್
ಸಿ) ಟರ್ಕಿ ಡಿ) ಗ್ರೀಕ್
2. ಮನೋವಿಜ್ಞಾನದ Psyche ಈ ಪದದ ಅರ್ಥ
ಎ) ಮನುಷ್ಯ ಬಿ) ಆತ್ಮ
ಸಿ) ದೇಹ ಡಿ) ತಲೆ
3. ಮನೋವಿಜ್ಞಾನವು ಆತ್ಮದ, ವಿಜ್ಞಾನದ ವಿಜ್ಞಾನವಲ್ಲ ಎಂದು ವಿರೋಧಿಸಿದವನು
ಎ) ಕ್ಯಾಂಟ್ ಬಿ) ವ್ಯಾಟ್ಸನ್
ಸಿ) ಟಿಚ್ನರ್ ಡಿ) ಸಿಗ್ಮಾಂಡ್ ಫ್ರಾಯ್ಡ್
4. ಇದು ವ್ಯಕ್ತಿಯಲ್ಲಿನ ಭಾವನಾತ್ಮಕ ಚಟುವಟಿಕೆ ಅಲ್ಲ
ಎ) ಕೋಪ ಬಿ) ದು:ಖ
ಸಿ) ಹರ್ಷ ಡಿ) ನೃತ್ಯ
5. ಮನೋವಿಜ್ಞಾನದ ಜ್ಞಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಅನ್ವಯಿಸಿಕೊಳ್ಳುವ ಶಾಖೆ
ಎ) ಶೈಕ್ಷಣಿಕ ಮನೋವಿಜ್ಞಾನ
ಬಿ) ಸಾಮಾಜಿಕ ಮನೋವಿಜ್ಞಾನ
ಸಿ) ಭಾವನಾತ್ಮಕ ಮನೋವಿಜ್ಞಾನ
ಡಿ) ತುಲನಾತ್ಮಕ ಮನೋವಿಜ್ಞಾನ
6. ಮನೋವಿಜ್ಞಾನದ ಅರ್ಥ ಹರಿದು ಬಂದ ದಾರಿಯ ಸರಿಯಾದ ಕ್ರಮ
1) ಆತ್ಮ 2) ಪ್ರಜ್ಞೆ 3) ಮನಸ್ಸು 4) ವರ್ತನೆ
ಎ. 1 2 3 4 ಬಿ. 1 3 2 4
ಸಿ. 4 3 2 1 ಡಿ. 3 2 4 1
7. ಪರಿಸರಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯ ಚಟುವಟಿಕೆಗಳ ವೈಜ್ಞಾನಿಕೆಗಳ ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ ಎಂದ ಮನೋವಿಜ್ಞಾನಿಯ ಹೆಸರು
ಎ) ಗ್ಯಾರೆಟ್ ಬಿ) ಕ್ರೋ ಮತ್ತು ಕ್ರೋ
ಸಿ) ವುಡ್ವರ್ತ ಡಿ) ಮ್ಯಾಕಡೂಗ್ಮಲ್
8. ನಡತೆ ಮತ್ತು ವರ್ತನೆಗಳ ಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ) ಗ್ಯಾರೆಡ್ ಬಿ) ಮಿಲ್ಲರ್
ಸಿ) ಸಮ್ಮನೊರ ಡಿ) ಮ್ಯಾಕ್ಡ್ಯೂಗಲ್
9. ವ್ಯಕ್ತಿ ಸಮಾಜದಲ್ಲಿ ವರ್ತಿಸುವ ರೀತಿ ನೀತಿ ಹಾಗೂ ಜನರ ನಡುವಿನ ಸಮಬಂಧಗಳನ್ನು, ಅಭ್ಯಾಸ ಮಾಡುವ ಶಾಖೆಯೇ
ಎ) ಸಾಮಾನ್ಯ ಮನೋವಿಜ್ಞಾನ
ಬಿ) ಅಸಾಮಾನ್ಯ ಮನೋವಿಜ್ಞಾನ
ಸಿ) ಸಾಮಾಜಿಕ ಮನೋವಿಜ್ಞಾನ
ಡಿ) ವರ್ತನಾ ಮನೋವಿಜ್ಞಾನ
10. ಹುಟ್ಟಿನಿಂದ ಸಾಯುವರೆಗೆ ವ್ಯಕ್ತಿಯ ಕಲಿಕೆಯ ಅನುಭವಗಳನ್ನು ತಿಳಿಸುವ ಶಾಸ್ತ್ರವೇ ಮನೋಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ) ವೀರಪ್ಪ ಬಿ) ಮ್ಯಾಕಡ್ಯೂಗಲ್
ಸಿ) ಕ್ರೋ ಮತ್ತು ಕ್ರೋ ಡಿ) ಥಾರ್ನಡೈಯಿಕ್
11. ತರಗತಿ ಕೋಣೆಯಲ್ಲಿ ಹಿಂದಿನ ಬೆಂಚಿನ ವಿದ್ಯಾರ್ಥಿಗಳು ಯಾವಾಗಲೂ ಅನವಶ್ಯಕ ಮಾತುಗಾರಿಕೆಯಲ್ಲಿ ತೊಡಗಿದ್ದಾರೆ, ಶಿಕ್ಷಕರು ಕೈಗೊಳ್ಳಬೇಕಾದ ನಿರ್ಣಯ
ಎ) ಅವರನ್ನು ತರಗತಿಯಿಂದ ಹೊರಹಾಕುವುದು
ಬಿ) ಶಿಕ್ಷಕರು ಹಿಂಭಾಗದಲ್ಲಿ ನಿಂತು ಪಾಠ ಮಾಡುವುದು
ಸಿ) ಮುಂದಿನ ಬೆಂಚಿಗೆ ಅವರನ್ನು ಸ್ಥಳಾಂತರಿಸುವುದು
ಡಿ) ದೈಹಿಕ ಶಿಕ್ಷೆ ನೀಡುವುದು
12. ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ
ಎ) ವಿದ್ಯಾರ್ಥಿಗಳ ಬೌದ್ಧಿಕ ಸಾಮಥ್ರ್ಯ ಮತ್ತು ಮಾನಸಿಕ
ಮಟ್ಟ ಅರಿಯುವುದು
ಬಿ) ಭಾಷೆಯ ಮೇಲೆ ಪ್ರಭುತ್ವ ಹೊಂದಿರಬೇಕು
ಸಿ) ಬೋಧನಾ ವಿಷಯದ ಮೇಲೆ ಪ್ರಭುತ್ವವಿರಬೇಕು
ಡಿ) ಮೇಲಿನ ಎಲ್ಲವೂ
13. ತರಗತಿಯಲ್ಲಿ ಶಿಸ್ತನ್ನು ಕಾಪಾಡಲು ಶಿಕ್ಷಕರು ಕೈಗೊಳ್ಳಬೇಕಾದ ಕಾರ್ಯ ಇದಾಗಿದೆ
ಎ) ತರಗತಿಯಲ್ಲಿ ಕಟ್ಟುನಿಟ್ಟಿನ ಸನ್ನಿವೇಶ
ನಿರ್ಮಾಣಮಾಡುವುದು
ಬಿ) ಅಶಿಸ್ತು ಹೊಂದಿದ ವಿದ್ಯಾರ್ಥಿಗಳನ್ನು ದಂಡಿಸುವುದು
ಸಿ) ವಿದ್ಯಾರ್ಥಿಗಳ ಅಗತ್ಯತೆ ಮತ್ತು ಆಸಕ್ತಿಗಳಿಗೆ
ಅನುಗುಣವಾದ ಕಾರ್ಯಕ್ರಮಗಳನ್ನು ಕೈಗೊಳ್ಳುವುದು
ಡಿ) ತರಗತಿಯಿಂದ ಹೊರಹಾಕುವುದು
14. ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ
ಎ) ವ್ಯಾಟ್ಸನ್ ಬಿ) ವುಂಟ್
ಸಿ) ಪಾವ್ಲವ್ ಡಿ) ಥಾರ್ನಡೈಯಿಕ್
15. ಮನೋವಿಶ್ಲೇಷಣಾವಾದದ ಪಿತಾಮಹ
ಎ) ಸಿಗ್ಮಂಡಫ್ರಾಯ್ಡ್ ಬಿ) ವ್ಯಾಟ್ಸನ್
ಸಿ) ಪಾವಲೋವ್ ಡಿ) ಥಾರ್ನಡೈಯಿಕ್
16. ದೇಹಶಾಸ್ತ್ರ ಮತ್ತು ಮನಶಾಸ್ತ್ರಕ್ಕೂ ನಡುವಿನ ಅಂತರವನ್ನು
ಸಮೀಪಕ್ಕೆ ತಂದವನು
ಎ) ಇ.ಬಿ. ಟಿಚ್ನರ್ ಬಿ) ವಿಲಿಯಂ ವೂಂಟ್
ಸಿ) ಎಬ್ಬಿಂಗ್ಹೌಸ್ ಡಿ) ಬಿನೆಟ್
17. ಜೀವಿಯ ಹುಟ್ಟಿನಿಂದ ಸಾವಿನವರೆಗೆ ಉಂಟಾಗುವ ಬೆಳವಣಿಗೆ ಮತ್ತು ವಿಕಾಸವನ್ನು ಅಧ್ಯಯನ ಮಾಡುವ ಶಾಖೆ
ಎ) ಸಾಮಾನ್ಯ ಮನೋವಿಜ್ಞಾನ
ಬಿ) ಶೈಕ್ಷಣಿಕ ಮನೋವಿಜ್ಞಾನ
ಸಿ) ವಿಕಾಸ ಮನೋವಿಜ್ಞಾನ
ಡಿ) ವಿಭೇದಾತ್ಮಕ ಮನೋವಿಜ್ಞಾನ
ಬೆಳಕಿಗೆ ಸಂಬಂಧಿಸಿದ ಪ್ರಮುಖ ಅಂಶಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
18. ವಾಟ್ಸನರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ ಅಧ್ಯಯನವಾಗಿದೆ
ಎ) ಮನಸ್ಸು ಬಿ) ಆತ್ಮ
ಸಿ) ವರ್ತನೆ ಡಿ) ಪ್ರಜ್ಞಾವಸ್ಥೆ
19. ಆಂಜನ್ ಆಫ್ ಸೀಸಸ್ ಈ ವಿಷಯಕ್ಕೆ ಸಂಬಂಧಿಸಿದೆ
ಎ) ಮನೋವಿಜ್ಞಾನ ಬಿ) ಜೀವವಿಕಾಸ
ಸಿ) ಕಲಿಕೆ ಡಿ) ತತ್ವಶಾಸ್ತ್ರ
20. ಮಗು ಆಟ ಆಡುವಾಗ ಅವನ ವರ್ತನೆಯನ್ನು ಅಧ್ಯಯನ ಮಾಡುವುದು
ಎ) ಸ್ವಾಭಾವಿಕ ಅವಲೋಕನ
ಬಿ) ನಿಯಂತ್ರಿತ ಅವಲೋಕನ
ಸಿ) ಅವಲೋಕ ಡಿ) ಯಾವುದು ಅಲ್ಲ
21. ಅಂತರಾವಲೋಕನ ಪದ್ಧತಿಯನ್ನು ಬಳಕೆಗೆ ತಂದವರು
ಎ) ಎಡ್ವರ್ಡ ಬ್ರಾಡ್ ಟಿಚ್ನರ್
ಬಿ) ಜೆ.ಬಿ.ವಾಟ್ಸನ್
ಸಿ) ಕೋಹರಲ್
ಡಿ) ಆಲ್ಫೋರ್ಡ್
22. ಎಲ್ಲಾ ಮನೋವಿಜ್ಞಾನ ಅಧ್ಯಯಗಳ ತಳಹದಿ ಎಂದರೆ
ಎ) ಪ್ರಾಯೋಗಿಕ ಪದ್ಧತಿ
ಬಿ) ಅವಲೋಕನ ಪದ್ಧತಿ
ಸಿ) ವ್ಯಕ್ತಿಗತ ಪದ್ಧತಿ
ಡಿ) ಅಂತರಾವಲೋಕನ ಪದ್ಧತಿ
23. ನಡವಳಿಕೆ ವಿಜ್ಞಾನ ಎನಿಸಿಕೊಂಡಿರುವುದು
ಎ) ಪಳೆಯುಳಿಕೆ ವಿಜ್ಞಾನ ಬಿ) ಮನ್ಸಶಾಸ್ತ್ರ
ಸಿ) ರಸಾಯನಶಾಸ್ತ್ರ ಡಿ) ಜೀವಶಾಸ್ತ್ರ
24. ವ್ಯಕ್ತಿಯ ಅಧ್ಯಯನ ವಿಧಾನದ ಪಿತಾಮಹ
ಎ) ಇ.ಬಿ.ಟಿಚ್ನರ್ ಬಿ) ವುಂಟ್
ಸಿ) ಡಿ.ಎಫ್.ಡಿ.ಬುಕ್ಸ ಡಿ) ಸ್ಕಿನ್ನರ್
25. ಒಬ್ಬ ವಿದ್ಯಾರ್ಥಿ ಸತತವಾಗಿ ತಡವಾಗಿ ಬರುತ್ತಿದ್ದಾನೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಯಾವ ವಿಧಾನದ ಮುಖಾಂತರ ಪರಿಹಾರ ಮಾಡಬಹುದು
ಎ) ಅವಲೋಕನ ವಿಧಾನ
ಬಿ) ವ್ಯಕ್ತಿಗತ ಅಧ್ಯಯನ
ಸಿ) ಅಂತರಾವಲೋಕನ ವಿಧಾನ
ಡಿ) ಪ್ರಾಯೋಗಿಕ ವಿಧಾನ
ಉತ್ತರಗಳು : 1ಡಿ / 2ಬಿ/ 3ಎ/ 4ಡಿ/ 5ಎ/ 6ಬಿ / 7ಸಿ/ 8ಡಿ/ 9ಸಿ/ 10 ಸಿ /11ಸಿ / 12ಡಿ / 13ಸಿ / 14ಡಿ / 15ಎ / 16ಬಿ / 17ಡಿ
18ಸಿ / 19ಬಿ / 20ಎ / 21ಎ / 22ಡಿ / 23ಬಿ / 24ಎ / 25ಬಿ