ಮೊದಲ ಮಹಾಯುದ್ಧ (World War I) : ನೆನಪಿನಲ್ಲಿಡಬೇಕಾದ ಅಂಶಗಳು
👉ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು.
👉ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಯುದ್ದ ಮುಕ್ತಯಗೊಂಡಿತು.
👉 ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷನಿಲಗಳು ಇತ್ಯಾದಿ ಬಳಕೆಯದವು. ಅದರಿಂದುಂಟಾದ ಸಾವು, ನೋವು, ನಷ್ಟ ಅಪಾರ
👉 ಮೊದಲನೇ ಮಹಾಯುದ್ದ ಅಥವಾ ವಿಶ್ವ ಸಮರಕ್ಕೆ ಹಲವು ಅಂಶಗಳು ಕಾರಣವಾಗಿವೆ. ಈ ಯುದ್ಧ 1914 ಜೂನ್ 28ರಂದು ಸರಾಜಿವೂ ಎಂಬಲ್ಲಿ ಆಸ್ಟ್ರಿಯಾದ ಯುವರಾಜ ಆರ್ಚ್ಡ್ಯೂಕ್ ಫರ್ಡಿನಾಂಡ್ ನ ಕೊಲೆಯ ಘಟನೆಯಿಂದಾಗಿ ಆರಂಭಗಿಂಡಿತು. ಕೊಲೆ ಮಾಡಿದವನು ಸರ್ಬಿಯಾ ಜನಾಂಗದ ವಿದ್ಯಾರ್ಥಿ. ಅವನು ತನ್ನ ದೇಶದ ಸ್ವಾತಂತ್ರ್ಯ ಅಪಹರಣ ಮಾಡಿದ ಅಸ್ಟ್ರಿಯಾದ ವಿರೋಧಿ.ಇದೊಂದು ಸ್ಥಳೀಯ ಘಟನೆಯಾಗಾಗಬೇಕಿದ್ದ ಘಟನೆ ವಿಶ್ವವ್ಯಾಪಿಯಾಗಿ ಪರಿಣಮಿಸಿತು. ದಿನಕಳೆದಂತೆ ಹಲವು ಆಸಕ್ತಿಯುಳ್ಳ ರಾಜಕೀಯ ಶಕ್ತಿಗಳು, ಪರಸ್ಪರ ವ್ಯಷಮ್ಯ, ಅಸೂಯೆ, ಹಳೆಯ ಮತ್ಸರ, ಪ್ರತಿಷ್ಠೆ ಅತಿಯಾದ ರಾಷ್ಟ್ರೀಯತೆಯ ದುರಭಿಮಾನ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಎರಡು ಪ್ರತಿಸ್ಪರ್ದಿ ಬಣಗಳಾಗಿ ಮರ್ಪಟ್ಟವು.
👉ನಾಗರಿಕ ಪ್ರಪಂಚದ ಬಹುಭಾಗವನ್ನೊಳಗೊಂಡ ಪ್ರಪ್ರಥಮ ಮಹಾಸಂಗ್ರಾಮ, 1914 ಜುಲೈ 28-1918 ನವೆಂಬರ್ 11ರವರೆಗೆ ನಡೆದ ಈ ಯುದ್ಧದಲ್ಲಿ ಜರ್ಮನಿ ಮತ್ತು ಆಸ್ಟ್ರಿಯ-ಹಂಗರಿಗಳು ಒಂದು ಕಡೆಯೂ ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ಗಳೂ(ಮಿತ್ರ ಪಕ್ಷ) ಇನ್ನೊಂದು ಕಡೆಯೂ ಪ್ರಧಾನವಾಗಿ ಕಾದಿದುವು. 1917-18ರಲ್ಲಿ ಮಿತ್ರಪಕ್ಷದೊಂದಿಗೆ ಅಮೆರಿಕ ಸಂಯುಕ್ತಸಂಸ್ಥಾನವೂ ಸೇರಿಕೊಂಡಿತು. 19ನೆಯ ಶತಮಾನದ ದೃಷ್ಟಿ ಪ್ರವೃತ್ತಿಗಳಿಗೆ ಭರತವಾಕ್ಯ ಹಾಡಿ ಹೊಸದೊಂದು ವಿಶ್ವದ ನಿರ್ಮಾಣಕ್ಕೆ ಕಾರಣವಾಗಿ ಪರಿಣಮಿಸಿ ಇದು ವಿಶ್ವೇತಿಹಾಸದ ಒಂದು ಮಹಾಫಟ್ಟವೆನಿಸಿದೆ.
👉70 ರಾಷ್ಟ್ರಗಳ ಯುದ್ಧ :
ಮೊದಲ ಮಹಾಯುದ್ಧದಲ್ಲಿ ಭಾಗಿಯಾದ 70ಕ್ಕೂ ಹೆಚ್ಚು ರಾಷ್ಟ್ರಗಳ ಪೈಕಿ ಇನ್ನೂ ಅನೇಕ ರಾಷ್ಟ್ರಗಳು ಆರು ಆಡಳಿತ ಚುಕ್ಕಾಣಿಗಳಿಂದ ಸ್ವತಂತ್ರ್ಯ ಹೊಂದಿಲ್ಲ. ಆಸ್ಟ್ರಿಯಾ–ಹಂಗೇರಿ, ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾ ಹಾಗೂ ಓಟಮನ್ ಸಾಮ್ರಾಜ್ಯ ಮೊದಲ ಮಹಾಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದವು.
👉ಹನ್ನೆರಡು ಸ್ವತಂತ್ರ ರಾಷ್ಟ್ರಗಳ ನಡುವೆ 1914ರಲ್ಲಿ ಪ್ರಾರಂಭವಾದ ಯುದ್ಧ, ನಂತರದ ದಿನಗಳಲ್ಲಿ ವಿಶ್ವದ ಬಹುಭಾಗವನ್ನು ಆವರಿಸಿಕೊಂಡಿತು. 1915ರಲ್ಲಿ ಇಟಲಿ ಹಾಗೂ 1917ರಲ್ಲಿ ಅಮೆರಿಕ ರಣರಂಗ ಪ್ರವೇಶಿಸಿದವು. ಯುದ್ಧದಲ್ಲಿ ಭಾಗಿಯಾದ ರಾಷ್ಟ್ರಗಳ ಜನಸಂಖ್ಯೆ 80 ಕೋಟಿ; ಅದು ವಿಶ್ವದ ಅಂದಿನ ಜನಸಂಖ್ಯೆಯ ಅರ್ಧದಷ್ಟು. ಜಗತ್ತಿನಾದ್ಯಂತ 20 ರಾಷ್ಟ್ರಗಳು ಮಾತ್ರ ಸಂಘರ್ಷಗಳಿಗೆ ತಟಸ್ಥ ನಿಲುವು ತಾಳಿದ್ದವು. ಇವುಗಳಲ್ಲಿ ಹೆಚ್ಚಿನವು ಲ್ಯಾಟಿನ್ ಅಮೆರಿಕ ಅಥವಾ ಉತ್ತರ ಯುರೋಪ್ನ ರಾಷ್ಟ್ರಗಳು.
👉 7 ಕೋಟಿ ಯುದ್ಧ ಪಡೆ :
ಪ್ರಾರಂಭದಲ್ಲಿ 2 ಕೋಟಿ ಮಂದಿ ಯುದ್ಧ ಸಂಘರ್ಷಗಳಲ್ಲಿ ಭಾಗಿಯಾಗಿದ್ದರು. ವರ್ಷಗಳು ಉರುಳುತ್ತಿದ್ದಂತೆ ಹೋರಾಟದಲ್ಲಿ ಭಾಗಿಯಾದವರ ಸಂಖ್ಯೆ 7 ಕೋಟಿ ದಾಟಿತು. ಬ್ರಿಟಿಷ್ ಸಾಮ್ರಾಜ್ಯ ಪ್ರಮುಖವಾಗಿ ಭಾರತ ಸೇರಿದಂತೆ ಹಲವು ಭಾಗಗಳಿಂದ 90 ಲಕ್ಷ ಪುರುಷರನ್ನು ಯುದ್ಧಕ್ಕೆ ರವಾನಿಸಿತ್ತು. ಫ್ರಾನ್ಸ್ನಿಂದ 80 ಲಕ್ಷ, ಜರ್ಮನಿಯ 1.3 ಕೋಟಿ ಮಂದಿ, ಆಸ್ಟ್ರಿಯಾ–ಹಂಗೇರಿಯ 90 ಲಕ್ಷ ಜನ, ಇಟಲಿಯ 60 ಲಕ್ಷ ಮಂದಿ ಹಾಗೂ ಅಮೆರಿಕದಿಂದ 40 ಲಕ್ಷ ಜನರನ್ನು ರಣರಂಗಕ್ಕೆ ಕಳುಹಿಸಿಕೊಡಲಾಗಿತ್ತು.
👉 1 ಕೋಟಿಗೂ ಅಧಿಕ ಯೋಧರ ಸಾವು :
ಜರ್ಮನಿ ಮತ್ತು ರಷ್ಯಾದ ಯೋಧರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಾಪಾಯಕ್ಕೆ ಎದುರಾದರು. ಗಾಯಗೊಂಡವರು ಹಾಗೂ ಮೃತಪಟ್ಟವರ ಪೈಕಿ ಸುಮಾರು ಒಂದು ಕೋಟಿ ಯೋಧರು ಈ ಎರಡು ರಾಷ್ಟ್ರಗಳಿಗೆ ಸೇರಿದ್ದವರೇ ಆಗಿದ್ದರು. ಉಳಿದಂತೆ;
👉 ಫ್ರೆಂಚ್ ಸೇನೆಗೆ 1914ರ ಆಗಸ್ಟ್ 22 ಕರಾಳ ದಿನ. ಒಂದೇ ದಿನದಲ್ಲಿ 27 ಸಾವಿರ ಮಂದಿ ಫ್ರೆಂಚ್ ಯೋಧರು ಯುದ್ಧದಲ್ಲಿ ಮೃತಪಟ್ಟರು. ಪಿರಂಗಿ ದಾಳಿಯಲ್ಲಿ ಶೇ 70ರಷ್ಟು ಮಂದಿ ಗಾಯಗೊಂಡರು. 1915, ಬೆಲ್ಜಿಯಂನಲ್ಲಿ ಜರ್ಮನ್ ಪಡೆ ವಿಷಕಾರಿ ಅನಿಲ ಪ್ರಯೋಗಿಸುವ ಮೂಲಕ ರಾಸಾಯಿಕ ದಾಳಿಗಳಿಗೆ ನಾಂದಿ ಹಾಡಿತು. ವಿಷಾನಿಲದಿಂದ ಸುಮಾರು 20 ಸಾವಿರ ಮಂದಿ ಪ್ರಾಣತೆತ್ತರು.
👉 ಯುದ್ಧದ ಪರಿಣಾಮ ಬಲಿಯಾದ ಜನಸಾಮಾನ್ಯರ ಸಂಖ್ಯೆ ಅಂದಾಜಿಸುವುದೂ ಕಷ್ಟ. ಇತಿಹಾಸ ತಜ್ಞರು ಘಟನೆಗಳ ಆಧಾರದಲ್ಲಿ 50 ಲಕ್ಷದಿಂದ 1 ಕೋಟಿ ಜನರು ಮೃತಪಟ್ಟಿರಬಹುದೆಂದು ಅಂದಾಜಿಸುತ್ತಾರೆ. 60 ಲಕ್ಷ ಯುದ್ಧ ಖೈದಿಗಳು, ಯುರೋಪ್ನಾದ್ಯಂತ 1 ಕೋಟಿಯಷ್ಟು ನಿರಾಶ್ರಿತರು, ಗಂಡನನ್ನು ಕಳೆದುಕೊಂಡವರು 30 ಲಕ್ಷ ಮಂದಿ, 60 ಲಕ್ಷಕ್ಕೂ ಹೆಚ್ಚು ಜನ ಅನಾಥರಾದರು, ಆರ್ಥಿಕತೆ ಕುಸಿತ, ಸಾವಿರ ಕೋಟಿ ಪತ್ರಗಳು ಹಾಗೂ ಪ್ಯಾಕೇಜ್ಗಳ ವಿನಿಮಯ ನಡೆದಿತ್ತು ಎನ್ನಲಾಗುತ್ತದೆ.
👉 ರಾಷ್ಟ್ರ– ಮೃತಪಟ್ಟವರು– ಗಾಯಗೊಂಡವರ ಸಂಖ್ಯೆ
ರಷ್ಯಾ–20 ಲಕ್ಷ ಮಂದಿ– 50 ಲಕ್ಷ ಜನ
ಜರ್ಮನಿ– 20 ಲಕ್ಷ– 42 ಲಕ್ಷ
ಫ್ರಾನ್ಸ್– 14 ಲಕ್ಷ– 42 ಲಕ್ಷ
ಆಸ್ಟ್ರಿಯಾ–ಹಂಗೇರಿ– 14 ಲಕ್ಷ– 36 ಲಕ್ಷ
ಬ್ರಿಟನ್ ಮತ್ತು ಬ್ರಿಟಿಷ್ ಸಾಮ್ರಾಜ್ಯ– 9.60 ಲಕ್ಷ– 20 ಲಕ್ಷ
ಇಟಲಿ– 6 ಲಕ್ಷ– 10 ಲಕ್ಷ
ಓಟಮನ್ ಸಾಮ್ರಾಜ್ಯ– 8 ಲಕ್ಷ ಮಂದಿ ಸಾವು
ಅಮೆರಿಕ– 1.17 ಲಕ್ಷ ಜನರ ಸಾವು
# ಒಂದನೆಯ ಮಹಾಯುದ್ಧ ಪ್ರಮುಖ ಘಟನೆಗಳು :
👉 28-6-1914 : ಸರ್ಬಿಯದ ಸಾರಾಯೆವೊದಲ್ಲಿ ಆಸ್ಟ್ರಿಯದ ರಾಜಕುಮಾರ ಫ್ರಾನ್ಸಿಸ್ ಫರ್ಡಿನೆಂಡನ ಕೊಲೆ. ಇದೇ ಒಂದನೆಯ ಮಹಾಯುದ್ಧಕ್ಕೆ ತತ್ಕ್ಷಣದ ಕಾರಣ.
👉 5-7-1914 : ಆಸ್ಟ್ರಿಯ-ಹಂಗರಿಗೆ ಸಹಾಯ ಮಾಡುವುದಾಗಿ ಜರ್ಮನಿಯ ಭರವಸೆ.
👉 23-7-1914 : ಸರ್ಬಿಯದಿಂದ ಆಸ್ಟ್ರಿಯದ 48 ಗಂಟೆಗಳ ಕಾಲದ ಕೊನೆ ಎಚ್ಚರಿಕೆಯ ಸ್ವೀಕಾರ.
👉 28-7-1914 : ಸರ್ಬಿಯದ ಮೇಲೆ ಆಸ್ಟ್ರಿಯ-ಹಂಗರಿ ಯುದ್ದಘೋಷಣೆ.
👉 30-7-1914 : ಯುದ್ಧಸಿದ್ಧತೆ ನಡೆಸಲು ರಷ್ಯದ ಆಜ್ಞೆ.
👉 1-8-1914 : ಜರ್ಮನಿಯಿಂದ ಯುದ್ಧಘೋಷಣೆ.
👉 4-8-1914 : ಜರ್ಮನಿಯಿಂದ ಬೆಲ್ಜಿಯಂ ಪ್ರವೇಶ. ಜರ್ಮನಿಯ ವಿರುದ್ಧ ಗ್ರೇಟ್ಬ್ರಿಟನ್ ಮತ್ತು ಫ್ರಾನ್ಸುಗಳಿಂದ ಯುದ್ಧ ಘೋಷಣೆ.
👉 7-8-1914 : ಯುದ್ಧದಲ್ಲಿ ಸರ್ಬಿಯದೊಂದಿಗೆ ಮಾಂಟೆನಿಗ್ರೊ ಜೊತೆಗೂಡಿಕೆ.
👉 23-8-1914 : ಜರ್ಮನಿಯ ವಿರುದ್ಧ ಜಪಾನಿನ ಯುದ್ಧ ಘೋಷಣೆ.
👉 26 ರಿಂದ : ಟ್ಯಾನೆನ್ಬರ್ಗಿನಲ್ಲಿ ರಷ್ಯದ ವಿರುದ್ಧ ಜರ್ಮನ್ ಪ್ರಥಮ ವಿಜಯ
👉 6 ರಿಂದ : ಜರ್ಮನಿಯ ಮತ್ತು ಫ್ರಾನ್ಸುಗಳ ನಡುವೆ ಒಂದನೆಯ ಮಾರ್ನ್
👉 10-9-1914 : ಯುದ್ಧ, ಜರ್ಮನಿಯನ್ನು ತಡೆಯಲು ಮಿತ್ರರಾಷ್ಟ್ರಗಳು ಮಾಡಿದ ಮೊದಲನೆಯ ಮಹಾ ಪ್ರಯತ್ನ, ಯುದ್ಧದ ಒಂದು ಮುಖ್ಯ ತಿರುಗುಬಿಂದು.
👉 3-11-1914 : ತುರ್ಕಿಯ ವಿರುದ್ಧ ರಷ್ಯದ ಯುದ್ಧಘೋಷಣೆ. ಎರಡು ದಿವಸಗಳ ಅನಂತರ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸುಗಳೂ ತುರ್ಕಿಯ ವಿರುದ್ಧ ಯುದ್ಧ ಘೋಷಿಸಿದುವು.
👉 22-4-1915 : ಎರಡನೆಯ ಈಪ್ರ ಕದನ, ಇದರಲ್ಲಿ ಜರ್ಮನ್ನರಿಂದ ವಿಷವಾಯು ಪ್ರಯೋಗ.
👉 7-5-1915 : ಜರ್ಮನಿಯಿಂದ ಲ್ಯೂಸಿಟ್ಯಾನಿಯ ಹಡಗಿನ ಮುಳುಗಡೆ.ಹನ್ನೆರಡು ಸಾವಿರ ಜನ ಮುಳುಗಿದರು. ನೂರಕ್ಕಿಂತ ಹೆಚ್ಚು ಅಮೆರಿಕನ್ನರ ಮರಣ.
👉 9-3-1916 : ಪೋರ್ಚುಗಲ್ನ ವಿರುದ್ಧ ಜರ್ಮನಿಯ ಯುದ್ಧಘೋಷಣೆ.
👉 ಜೂನ್ 1916 : ವರ್ದನ್ ಕದನ: ಫ್ರಾನ್ಸ್ ಮತ್ತು ಜರ್ಮನಿಗಳು ಸೇಡಿನಿಂದ ಕಾದಿದ್ದುವು. ಪೇಟ್ಯಾನನ ನೇತೃತ್ವದಲ್ಲಿ ಫ್ರೆಂಚರು ವೀರಾವೇಶದಿಂದ ಹೋರಾಡಿ ಕೊನೆಗೂ ವರ್ದನ್ ನಗರವನ್ನು ರಕ್ಷಿಸಿದರು. ಎರಡು ಪಕ್ಷಗಳಲ್ಲೂ ಸತ್ತವರ ಸಂಖ್ಯೆ 10 ಲಕ್ಷ.
👉 6-4-1917 : ಜರ್ಮನಿಯ ಮೇಲೆ ಅಮೆರಿಕನ್ ಯುದ್ಧ ಘೋಷಣೆ. ಮರುದಿವಸ ಕ್ಯೂಬ ಮತ್ತು ಪನಾಮಗಳೂ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದುವು.
👉 8-1-1918 : ಅಮೆರಿಕನ್ ಕಾಂಗ್ರೆಸಿನ ಮುಂದೆ ಅಧ್ಯಕ್ಷ ವುಡ್ರೊವಿಲ್ಸನ್ನಿಂದ ಶಾಂತಿಕೌಲಿನ ಚತುರ್ದಶ ಸೂತ್ರ ಮಂಡನೆ.
👉 ಮಾರ್ಚ್ 1918 : ಎರಡನೆಯ ಮಾರ್ನ್ ಕದನ. ಹಿಂಡನ್ಬರ್ಗ್ ಸಾಲು ಎಂದು ಪ್ರಖ್ಯಾತವಾಗಿದ್ದ ಕುಂದಕಗಳ ಸಾಲನ್ನು ಮಿತ್ರರಾಷ್ಟ್ರಗಳು ಮುರಿದುವು. 1914ರಿಂದ ಜರ್ಮನ್ನರು ಇವನ್ನು ಹಿಡಿದಿದ್ದರು.
👉 29-9-1918 : 1915ರಿಂದ ಗ್ರೀಸಿನಲ್ಲಿದ್ದ ಮಿತ್ರರಾಷ್ಟ್ರಗಳ ಸೈನ್ಯದಿಂದ ಬಲ್ಗೇರಿಯದ ಮುತ್ತಿಗೆ; ಜರ್ಮನ್ನರ ಸೋಲು. ಜರ್ಮನ್ ಸೇನಾನಿ ಲೂಡೆನ್ಡಾರ್ಫನ ನಿರಾಶೆ. ವಿಲ್ಸನನ ಸೂತ್ರಗಳ ಆಧಾರದ ಮೇಲೆ ಶಾಂತಿಸಂಧಾನಕ್ಕೆ ಒಡಂಬಡಬೇಕೆಂದು ಬರ್ಲಿನಿಗೆ ಸೂಚನೆ.
👉 2-10-1918 : ಶಾಂತಿ ಬಯಸಿ ಜರ್ಮನಿಯಿಂದ ಅಧ್ಯಕ್ಷ ವಿಲ್ಸನನಿಗೆ ಕೋರಿಕೆ.
👉 3-10-1918 :ತುರ್ಕಿ, ಬಲ್ಗೇರಿಯ, ಆಸ್ಟ್ರಿಯ-ಹಂಗೇರಿಗಳ ಶರಣಾಗತಿ.
👉 11-11-1918 : ಜರ್ಮನಿಯಿಂದ ನೆದರ್ಲೆಂಡ್ಸಿಗೆ ಕೈಸóರನ ಪಲಾಯನ. ಮಿತ್ರ ರಾಷ್ಟ್ರಗಳೊಡನೆ ಯುದ್ಧ ನಿಲ್ಲಿಸುವ ಒಪ್ಪಂದಕ್ಕೆ ಜರ್ಮನ್ನರ ಸಹಿ.
👉 29-6-1919 : ವರ್ಸೇಲ್ಸ್ ಕೌಲಿಗೆ ಜರ್ಮನಿಯ ಸಹಿ.
👉 10-9-1919 : ಆಸ್ಟ್ರಿಯದೊಡನೆ ಸೆಂಟ್-ಜರ್ಮನಿ ಕೌಲು.
👉 27-11-1919 : ಬಲ್ಗೇರಿಯದೊಡನೆ ನ್ಯೂಯಿಲಿ ಕೌಲು.
👉 4-6-1919 : ಹಂಗೆರಿಯೊಡನೆ ಟ್ರಿಯನಾನ್ ಕೌಲು.
👉 10-8-1920 : ತುರ್ಕಿಯೊಡನೆ ಸೇವ್ರ್ ಕೌಲು.
ನೆನಪಿನಲ್ಲಿಡಬೇಕಾದ ಪ್ರಶ್ನೋತ್ತರಗಳು :
👉 ಮೊದಲನೆ ವಿಶ್ವಯುದ್ಧವು ಯಾವಾಗ ಪ್ರಾರಂಭವಾಯಿತು? ಅದು ಎಷ್ಟು ಕಾಲ ನಡೆಯಿತು..?
ಮೊದಲನೆ ವಿಶ್ವಯುದ್ಧವು 1914 ರಲ್ಲಿ ಪ್ರಾರಂಭವಾಯಿತು. ಈ ಯುದ್ಧ 1914 ರಿಮದ 1918 ರವರೆಗೆ ನಡೆಯಿತು.
👉 ಒಂದನೆಯ ಮಹಾಯುದ್ಧದ ಕಾರಣಗಳೇನು..?
ಯೂರೋಪಿನಲ್ಲಿ ಶಕ್ತಿಯುತ ರಾಷ್ಟ್ರೀಯತೆಯ ಉದಯ
ಯೂರೋಪ್ ಎರಡು ವಿರೋಧಿ ಶಕ್ತಿ ಬಣಗಳಾಗಿ ವಿಭಜನೆಯಾದುದು
ಯೂರೋಪ್ ದೇಶಗಳೊಳಗೆ ನಡೆದ ಶಸ್ತ್ರಾಸ್ತ್ರ ಪೈಪೋಟಿ
ಆಸ್ಟ್ರಿಯಾದ ರಾಜಕುಮಾರ ಬೊಸ್ನಿಯಾದ ರಾಜಧಾನಿ ಸರಯಾಔಒ ಎಂಬ ಊರಿಗೆ ಭೇಟಿ ನೀಡಿದಾಗ ಕೊಲೆಯಾದುದು.
👉 ಮೊದಲನೆ ವಿಶ್ವಯುದ್ಧದ ಅವಧಿಯಲ್ಲಿ ಯೂರೋಪಿನಲ್ಲಿ ರೂಪಿತವಾದ ಮೈತ್ರಿಕೂಟಗಳಾವುವು..?
ಕದನ ಬಾಂಧವ್ಯ ತ್ರಯ – ಜರ್ಮನಿ, ಆಸ್ಟ್ರೋ- ಹಂಗೇರಿಯನ್ ಸಾಮ್ರಾಜ್ಯ ಮತ್ತು ಇಟಲಿ
ಕದನ ಸೌಹಾರ್ದತ್ರಯ – ಇದರಲ್ಲಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾ
ಯೂರೋಪಿನ ದೇಶಗಳು ಮೈತ್ರಿಕೂಟಗಳನ್ನು ಏಕೆ ರಚಿಸಿಕೊಂಡರು?
ಯೂರೋಪಿನ ದೇಶಗಳು ತಮ್ಮ ಆರ್ಥಿಕ ಮತ್ತು ರಾಜಕೀಯ ಆಸಕ್ತಿಗಳನ್ನು ಕಾಪಾಡಲು ಮೈತ್ರಿಕೂಟಗಳನ್ನು ರಚಿಸಿಕೊಂಡರು.
👉 ಶಸ್ತ್ರಾಸ್ತ್ರ ಪೈಪೋಟಿ ಹೆಗೆ ಒಂದನೆ ಮಹಾಯುದ್ಧಕ್ಕೆ ಕಾರಣವಾಯಿತು..?
ಯೂರೋಪಿನ ಎರಡು ಪರಸ್ಪರ ವಿರೋಧಿ ಶಕ್ತ ಬಣಗಳ ನಡುವಿನ ಸಂಶಯ ಶಸ್ತ್ರಾಸ್ತ್ರ ಪೈಪೋಟಿಗೆ ಕಾರಣವಾಯಿತು. ಯೂರೋಪಿನ ರಾಷ್ಟ್ರಗಳು ಶಸ್ತ್ರಾಸ್ತ್ರಗಳ ಭಂಡಾರವನ್ನು ಹೆಚ್ಚಿಸಿದವು. ತಮ್ಮಲ್ಲಿರುವ ಸೈನ್ಯ ಬಲವನ್ನು ಹೆಚ್ಚಿಸಲು ಹಾಗೂ ತಮ್ಮ ಶಸ್ತ್ರಾಸ್ತ್ರಗಳನ್ನು ಆಧುನೀಕರಿಸಲು ಪೈಪೋಟಿ ನಡೆಸಿದವು. ಈ ರೀತಿಯ ಭಾರಿ ಶಸ್ತ್ರಾಸ್ತ್ರಗಳ ಸಂಗ್ರಹ ಯುದ್ಧಕ್ಕೆ ಕಾರಣವಾಯಿತು.
👉 ಒಂದನೇ ಮಹಾಯುದ್ಧದ ತತ್ಕ್ಷಣದ ಕಾರಣವೇನು..?
ಆಸ್ಟ್ರಿಯಾದ ರಾಜಕುಮಾರ ಬೊಸ್ನಿಯಾದ ರಾಜಧಾನಿ ಸರಯಾವೊ ಎಂಬ ಊರಿಗೆ ಭೇಟಿ ನೀಡಿದಾಗ ಕೊಲೆಯಾದುದು ಒಂದನೇ ಮಹಾಯುದ್ದಧ ತತಕ್ಷಣದ ಕಾರಣ.
👉 ಮೊದಲನೆ ವಿಶ್ವಯುದ್ಧದಲ್ಲಿ ಎರಡು ಬಣಗಳಿಗೆ ಸೇರಿ ಯುದ್ಧ ಮಾಡಿದ ರಾಷ್ಟ್ರಗಳನ್ನು ಹೆಸರಿಸಿ.
ಇಂಗ್ಲೆಂಡ್, ಫ್ರಾನ್ಸ್, ಜಪಾನ್ ಮತ್ತು ಇಟಲಿ ( ಸಂಧಾನ ಪಕ್ಷದ ಸದಸ್ಯ ದೇಶಗಳು)
ಜರ್ಮನಿ, ಆಸ್ಟ್ರಿಯಾ, ಟರ್ಕಿ ಮತ್ತು ಬಲ್ಗೇರಿಯಾ ( ಕೇಂದ್ರ ಪಕ್ಷದ ಸದಸ್ಯ ದೇಶಗಳು)
👉 ಅಮೇರಿಕಾ ಒಂದನೇ ಮಹಾಯುದ್ಧದಲ್ಲಿ ಭಾಗವಹಿಸಲು ಕಾರಣವೇನು..?
ಒಂದನೆ ಮಹಾಯುದ್ಧದಲ್ಲಿ ಜರ್ಮನಿಯ ಜಲಾಂತರ್ಗಾಮಿಗಳು ಲೂಸಿಟಾನಿಯಾ ಎಂಬ ಬ್ರಿಟಿಷ್ ಹಡುಗನ್ನು ಮುಳುಗಿಸಿದವು. ಇದರಿಂದ ಸಿಟ್ಟಿಗೆದ್ದ ಅಮೇರಿಕಾ ಜರ್ಮನಿಯ ಮೇಲೆ ಯುದ್ಧ ಸಾರಿತು.
👉 ಮೊದಲನೆ ವಿಶ್ವಯುದ್ಧದಲ್ಲಿ ರಷ್ಯಾವು ತಟಸ್ಥವಾಗಲು ಏನು ಕಾರಣ..?
1917 ರಲ್ಲಿ ಯುದ್ದ ನಡೆಯುತ್ತಿರುವಾಗ ರಷ್ಯಾದಲ್ಲಿ ಕಮ್ಯುನಿಷ್ಟ್ ಕ್ರಾಂತಿಯಾಗಿ ಝಾರನ ಆಳ್ವಿಕೆ ಕೊನೆಗೊಂಡಿತು. ಹೊಸ ಸರ್ಕಾರ ಜರ್ಮನಿ ಹಾಗೂ ಇತರ ಕೇಂದ್ರ ಪಕ್ಷದ ಸದಸ್ಯರೊಡನೆ ರಾಜಿ ಮಾಡಿಕೊಂಡು ಯುದ್ಧದಿಂದ ಹಿಂದೆ ಸರಿಯಿತು.
👉 ಒಂದನೆಯ ಮಹಾಯುದ್ಧದ ಮುನ್ನಡೆಯನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
ಆರಂಭದಲ್ಲಿ ಈ ಯುದ್ಧವು ಯೂರೋಪಿನ ರಾಷ್ಟ್ರಗಳ ಮಟ್ಟಿಗಷ್ಟೇ ಸೀಮಿತವಾಗಿದ್ದರೂ ಜರ್ಮನ್ ಜಲಾಂತರ್ಗಾಮಿಗಳು ಲೂಸಿಟಾನಿಯಾ ಎಂಬ ಬ್ರಿಟಿಷ್ ಹಡುಗನ್ನು ಮುಳುಗಿಸಿದವು. ಇದರಿಂದ ಸಿಟ್ಟಿಗೆದ್ದ ಅಮೇರಿಕಾ ಜರ್ಮನಿಯ ಮೇಲೆ ಯುದ್ಧ ಸಾರಿತು. ಅಮೇರಿಕಾವೂ ಈ ಯುದ್ಧದಲ್ಲಿ ಸಕ್ರಿಯವಾಗಿ ಪಾಲುಗೊಂಡಿತು. ರಷ್ಯಾದಲ್ಲಿ ಕ್ರಾಂತಿ ನಡೆದು ಅಲ್ಲಿನ ಹೊಸ ಸರ್ಕಾರ ಯುದ್ಧದಿಂದ ಹಿಂದೆ ಸರಿಯಿತು. ಅರಬ್ಬರು ಟರ್ಕಿಯ ವಿರುದ್ಧ ಬಂಡೆದ್ದರು. ಪೋರ್ಚುಗಲ್, ರುಮೇನಿಯಾ ಹಾಗೂ ಗ್ರೀಸ್ಗಳು ಇಂಗ್ಲೆಂಡ್ ಪರವಾದವು. 1918 ರಲ್ಲಿ ಮಾರ್ಣೆ ಎಂಬಲ್ಲಿ ಜರ್ಮನಿ ಸೋತಮೇಲೆ ಆಸ್ಟ್ರಿಯಾ, ಟರ್ಕಿ, ಮತ್ತು ಬಲ್ಗೇರಿಯಾಗಳು ಶರಣಾದವು. ಜರ್ಮನಿಯಲ್ಲಿ ಬಂಡಾಯವಾಗಿ ಚಕ್ರವರ್ತಿ ಕೈಸರ್ ವಿಲಿಯಂ ಸಿಂಹಾಸನತ್ಯಾಗ ಮಾಡಬೇಕಾಯಿತು. ಜರ್ಮನಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಯುದ್ಧ ಕೊನೆಗೊಂಡಿತು.
👉ಒಂದನೆ ಮಹಾಯುದ್ಧದ ಪರಿಣಾಮಗಳೇನು..?
ಲಕ್ಷಾಂತರ ಈ ಯುದ್ಧದಲ್ಲಿ ಸತ್ತರು. ಹೆಚ್ಚು ಜನ ಗಾಯಗೊಂಡು ಅಂಗವಿಕಲರಾದರು. ಆಸ್ತಿ ಪಾಸ್ತಿಗಳಿಗೂ ನಷ್ಟವಾಯಿತು.
ರಾಷ್ಟ್ರ ಸಂಘದ ಸ್ಥಾಪನೆಯಾಯಿತು.
👉 ವರ್ಸಾಯ್ ಒಪ್ಪಂದದ ಷರತ್ತುಗಳೇನು..?
ವರ್ಸಾಯ್ ಒಪ್ಪಂದ ಜರ್ಮನಿಯ ಮೇಲೆ ಅವಮಾನಕಾರಿ ಷರತ್ತುಗಳನ್ನು ಹೇರಿತು.
ಟರ್ಕಿ ಸಾಮ್ರಾಜ್ಯ ಕಣ್ಮರೆಯಾಯಿತು. ಅದರ ಒಂದು ಭಾಗವಾದ ಆರ್ಮೇನಿಯ ಪ್ರತ್ಯೇಕ ಗಣರಾಜ್ಯವಾಯಿತು.
ಜೆಕೊಸ್ಲೊವಾಕಿಯಾ, ಯುಗೊಸ್ಲಾವಿಯಾ, ಹಂಗರಿ, ಆಸ್ಟ್ರಿಯಾ, ಲಿಥುವೇನಿಯಾ ಮುಂತಾದ ಪ್ರತ್ಯೇಕ ರಾಷ್ಟ್ರಗಳು ರೂಪುಗೊಂಡವು. ಇದರಿಂದ ಯೂರೋಪಿನ ಭೂಪಟವೇ ಬದಲಾಯಿತು.
👉 ಮೊದಲನೆ ವಿಶ್ವಯುದ್ಧದ ಕೊನೆಯಲ್ಲಿ ಸ್ಥಾಪಿಸಲಾದ ಸಂಘಟನೆ ಯಾವುದು..?
ಮೊದಲನೆ ವಿಶ್ವಯುದ್ಧದ ಕೊನೆಯಲ್ಲಿ ರಾಷ್ಟ್ರಗಳ ಸಂಘವನ್ನು ಸ್ಥಾಪಿಸಲಾಯಿತು.
👉 ರಾಷ್ಟ್ರಗಳ ಸಂಘ(ಲೀಗ್ ಆಫ್ ನೇಶನ್ಸ್) ವನ್ನು ಯಾವಾಗ ಸ್ಥಾಪಿಸಲಾಯಿತು? ಅದರ ಮುಖ್ಯ ಕಛೇರಿ ಎಲ್ಲಿತ್ತು..?
ರಾಷ್ಟ್ರಗಳ ಸಂಘವನ್ನು 1920 ರಲ್ಲಿ ಸ್ಥಾಪಿಸಲಾಯಿತು. ಅದರ ಕೇಂದ್ರ ಕಛೇರಿ ಪ್ಯಾರಿಸ್ನಲ್ಲಿತ್ತು.
👉 ರಾಷ್ಟ್ರಸಂಘದ ಮುಖ್ಯ ಉದ್ದೇಶಗಳು ಯಾವುವು..?
ಯುದ್ಧಗಳನ್ನು ತಡೆಯುವುದು
ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವುದು, ದೇಶದೊಳಗೆ ಸಹಕಾರ ಮತ್ತು ಸದಭಿಪ್ರಾಯ ಮೂಡಿಸುವುದು.
👉 ರಾಷ್ಟ್ರಗಳ ಸಂಘ ದ ಸ್ಥಾಪನೆಯ ಉದ್ದೇಶ ಸಫಲವಾಗಲಿಲ್ಲ.ಏಕೆ..?
ವಿಶ್ವದ ಎಲ್ಲಾ ರಾಷ್ಟ್ರಗಳು ರಾಷ್ಟ್ರಸಂಘವನ್ನು ಸೇರಲಿಲ್ಲ. ಇದರಿಂದಾಗಿ ತನ್ನ ನಿರ್ಧಾರಗಳನ್ನು ಎಲ್ಲಾ ರಾಷ್ಟ್ರಗಳ ಮೇಲೆ ಹೇರುವುದು ಅಸಾಧ್ಯವಾಯಿತು.
ಆರಂಭದಿಂದಲೇ ಅಮೇರಿಕಾ ಸಂಯುಕ್ತ ಸಂಸ್ಥಾನವು ಸಂಘವನ್ನು ಸೇರಲಿಲ್ಲ.
ದಾಳಿಗಳನ್ನು ತಡೆಗಟ್ಟಲು ತನ್ನದೇ ಆದ ಸೈನ್ಯಶಕ್ತಿ ಈ ಸಂಸ್ಥೆಗೆ ಇರಲಿಲ್ಲ.