GKIndian ConstitutionSpardha Times

ಭಾರತದ ವಿದೇಶಾಂಗ ನೀತಿ : Foreign Policy of India

Share With Friends

ಒಂದು ರಾಷ್ಟ್ರ ಅನ್ಯರಾಷ್ಟ್ರದೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿಯೇ ವಿದೇಶಾಂಗ ನೀತಿ ಎಂದು ಕರೆಯಲಾಗಿದೆ. ಭಾರತದ ವಿದೇಶಾಂಗ ನೀತಿಯನ್ನು ವಿಸ್ತಾರವಾಗಿ ನಿರೂಪಿಸಿದವರು ಜವಾಹರಲಾಲ ನೆಹರುರವರು ಆದ್ದರಿಂದ ಇವರನ್ನು ‘ಭಾರತದ ವಿದೇಶಾಂಗ ನೀತಿಯ ಶಿಲ್ಪಿ’ ಎಂದು ಕರೆಯುತ್ತಾರೆ. ಅಂತಾರಾಷ್ಟ್ರೀಯ ಸಂಬಂಧಗಳುಆಧುನಿಕ ಯುಗದ ವಿಶ್ವವ್ಯಾಪಾರಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಬಹು ಪ್ರಮುಖವಾದ ಸ್ಥಾನವನ್ನು ಹೊಂದಿವೆ. ಅಂತಾರಾಷ್ಟ್ರೀಯ ಸಂಬಂಧಗಳು ಈಗ ಒಂದು ವಿಶೇಷ ಅಧ್ಯಯನವಾಗಿ ಪರಿಗಣಿಸಲ್ಪಟ್ಟಿವೆ. ಅವು ಇತರ ಸಮಾಜಶಾಸ್ತ್ರಗಳಂತೆ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾನವನ ಮತ್ತು ರಾಷ್ಟ್ರಗಳ ನಡೆವಳಿಕೆಗೆ ಸಂಬಂಧಪಟ್ಟಿವೆ. ಕೆಲವು ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಶಾಖೆಯನ್ನು ರಾಜಕೀಯಶಾಸ್ತ್ರದ ಒಂದು ಮುಖ್ಯವಾದ ಭಾಗವೆಂದು ಪರಿಗಣಿಸಲಾಗಿದೆ.

ಅಂತಾರಾಷ್ಟ್ರೀಯ ಸಂಬಂಧಗಳು ಬಹು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಪ್ರಾಚೀನ ಕಾಲದಲ್ಲಿ ಕೆಲವು ರಾಷ್ಟ್ರಗಳು ತಮ್ಮ ಸಂಪರ್ಕವನ್ನು ಬೇರೆ ರಾಷ್ಟ್ರಗಳೊಡನೆ ಬೆಳೆಸಿಕೊಂಡಿದ್ದುವು. ಆದರೆ ಆಗ ಇವಕ್ಕೆ ಅಷ್ಟು ಪ್ರಾಮುಖ್ಯವಿಲ್ಲದಿದ್ದರೂ ಆಧುನಿಕ ಕಾಲದಲ್ಲಿ ಪ್ರತಿ ಯೊಂದು ರಾಷ್ಟ್ರವೂ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಗಮನ ಕೊಡಲೇಬೇಕಾಗಿದೆ. 20ನೆಯ ಶತಮಾನದಲ್ಲಿ ಯಾವ ರಾಷ್ಟ್ರವೂ ಇವುಗಳನ್ನು ಕಡೆಗಣಿಸುವ ಹಾಗಿಲ್ಲ.

ಏಕೆಂದರೆ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು ರಾಷ್ಟ್ರದ ಅಳಿವು ಉಳಿವು ಅದರ ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ನಿಂತಿದೆ. ಇದೇ ಸಂದರ್ಭವೇ ಇದರ ಬೆಳೆವಣಿಗೆಗೆ ವಿಶೇಷ ಪ್ರೋತ್ಸಾಹ ಕೊಟ್ಟಿದೆ. ನಾನಾ ಕಾರಣಗಳಿಂದ ಅಂತಾರಾಷ್ಟ್ರೀಯ ಸಂಬಂಧಗಳು ಈಗಿನ ಕಾಲದಲ್ಲಿ ಪ್ರಾಮುಖ್ಯ ಪಡೆದಿವೆ. ಇದು ಪ್ರಪಂಚದ ಸನ್ನಿವೇಶವನ್ನು ತಿಳಿಯಲು ಅವಕಾಶವನ್ನುಂಟುಮಾಡುತ್ತದೆ. ಯುದ್ಧದಿಂದ ಆಗುವ ಪರಿಣಾಮಗಳನ್ನು ತಿಳಿಸಿ, ಅವಕ್ಕೆ ಪರಿಹಾರೋಪಾಯಗಳನ್ನು ಸೂಚಿಸುತ್ತದೆ.

ಅಂತಾರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದದ ವೈಶಿಷ್ಟ್ಯವನ್ನು ತಿಳಿಸಿ ಅದನ್ನು ಕಾಪಾಡಿಕೊಂಡು ಹೋಗುವ ಮಾರ್ಗಗಳನ್ನು ಸೂಚಿಸುತ್ತದೆ; ಪ್ರಪಂಚದಲ್ಲಿ ಒದಗಬಹುದಾದ ಯುದ್ಧಗಳನ್ನು ತಡೆಗಟ್ಟಿ, ಅದರಿಂದ ಮಾನವ ಜನಾಂಗದ ಏಳಿಗೆಗೆ ಶ್ರಮಿಸುತ್ತಿದೆ. ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಹಾಗೂ ಪ್ರಜಾಸತ್ತೆಯ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಇದು ಪ್ರೋತ್ಸಾಹಿಸುತ್ತದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ವ್ಯವಹಾರ ನಿರ್ವಹಣೆಗೆ ಅವಕಾಶ ಮಾಡಿಕೊಡುತ್ತದೆ. ಪ್ರಪಂಚದ ಪ್ರತಿಯೊಬ್ಬ ನಾಗರಿಕನ ಮತ್ತು ಪ್ರತಿ ರಾಷ್ಟ್ರದ ಮೇಲೆ ಇದರ ಪ್ರಭಾವ ಬಿದ್ದಿರುವುದರಿಂದ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಇಂದಿನ ಪ್ರಪಂಚದಲ್ಲಿ ಹೆಚ್ಚಿನ ಪ್ರಾಧಾನ್ಯ ಸಿಕ್ಕಿದೆ.

# ಭಾರತದ ವಿದೇಶಾಂಗ ನೀತಿಯ ಮೂಲಭೂತ ಅಂಶಗಳು:
1. ಪಂಚಶೀಲ ತತ್ವಗಳು :
ವಿಶ್ವದ ರಾಷ್ಟ್ರಗಳು ವಿಭಿನ್ನ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಗಳನ್ನು ಹೊಂದಿದ್ದರೂ ಸಹ ಪರಸ್ಪರ ಸಹಕಾರ ಸಹಬಾಳ್ವೆಯನ್ನು ಅಳವಡಿಸಿಕೊಂಡಿವೆ. ಇದೇ ಆಧಾರದ ಮೇಲೆ 1954 ಜೂನ್ ತಿಂಗಳಲ್ಲಿ ವಿಶ್ವಶಾಂತಿ ದೃಷ್ಟಿಯಿಂದ ಚೀನಾ ಮತ್ತು ಭಾರತ (ಅಂದಿನ ಚೀನಾದ ಪ್ರಧಾನಿ ಚೌ.ಎನ್. ಲಾಯ್ ಮತ್ತು ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ) ಪರಸ್ಪರ ಅಂತರರಾಷ್ಟ್ರೀಯ ಸಂಬಂಧ ವೃದ್ಧಿಗಾಗಿ ಐದು ತತ್ವಗಳನ್ನು ಅಳವಡಿಸಿಕೊಂಡವು. ಅವುಗಳೇ ಪಂಚಶೀಲ ತತ್ವಗಳು, ಅವುಗಳೆಂದರೆ,
1. ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಹಾಗೂ ಸಾರ್ವಭೌಮತೆಗೆ ಗೌರವ. 2. ಪರಸ್ಪರ ಆಕ್ರಮಣ ಮಾಡದಿರುವುದು. 3. ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು 4. ಪರಸ್ಪರ ಸಹಕಾರ ಮತ್ತು ಸಮಾನತೆ 5. ಶಾಂತಿಯುತ ಸಹಬಾಳ್ವೆ ಇವು ನಮ್ಮ ದೇಶದ ವಿದೇಶಾಂಗ ನೀತಿಯ ತಳಹದಿ ಎನ್ನಬಹುದಾಗಿದೆ.

2. ಅಲಿಪ್ತ ನೀತಿ :
ದ್ವಿತೀಯ ಮಹಾಯುದ್ಧದ ಬಳಿಕ ವಿಶ್ವವು ಎರಡು ಶಕ್ತಿ ಬಣಗಳಾಗಿ ವಿಭಾಗವಾಗಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನ ನೇತೃತ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಹಾಗೂ ಸೋವಿಯತ್ ರಷ್ಯಾ ಹಿರಿತನದ ಕಮ್ಯುನಿಸ್ಟ್ ರಾಜ್ಯಗಳು ಎಂಬುದಾಗಿ ಜಗತ್ತಿನ ಧುೃವೀಕರಣ ಕಂಡು ಬಂದಿತು. ಅಲ್ಲದೆ ಎರಡೂ ಬಣಗಳ ನಡುವೆ ಶೀತಲ ಸಮರವೂ ಪ್ರಾರಂಭವಾಯಿತು. ಆ ದಿನಗಳಲ್ಲಿ ಭಾರತವು ಈ ಎರಡರಲ್ಲಿ ಯಾವ ಶಕ್ತಿ ಬಣಕ್ಕೂ ಸೇರದೆ ಅಲಿಪ್ತನೀತಿ ಅನುಸರಿಸಿ ತಟಸ್ಥವಾಯಿತು. ಜೊತೆಗೆ ಈ ಎರಡು ಬಣಗಳ ವಿಶ್ವಾಸಗಳಿಸಿಕೊಳ್ಳುವುದರ ಮೂಲಕ ಅಮೆರಿಕಾದಿಂದ ಆರ್ಥಿಕ ನೆರವನ್ನು ಮತ್ತು ಸೋವಿಯತ್ ರಷ್ಯಾದಿಂದ ಭದ್ರಾತಾ ನೆರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ನೆಹರೂ ನಂತರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿಯವರು ಸವಾಲಿಗೆ ಸವಾಲಿನ ವಿದೇಶಾಂಗ ನೀತಿಯನ್ನು ಅನುಸರಿಸಿದರು. 1965ರಲ್ಲಿ ಮತ್ತು 1971ರಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಯುದ್ಧಗಳು ಈ ನೀತಿಯನ್ನು ಅಳವಡಿಸಿಕೊಂಡಿದ್ದವು. ನಂತರದ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿಯವರು ನಮ್ಮ ದೇಶದ ವಿದೇಶಾಂಗ ನೀತಿಯನ್ನು ಸುಧಾರಿಸಿ, ಪಾಕಿಸ್ತಾನದ ಜೊತೆ ಮೈತ್ರಿ ಬಾಂಧವ್ಯಕ್ಕೆ ಪ್ರಯತ್ನ ಮಾಡಿದರು.

3. ವಸಾಹತುಶಾಹಿತ್ವಕ್ಕೆ ವಿರೋಧ :
ಭಾರತದ ವಿದೇಶಾಂಗ ನೀತಿ ವಸಾಹತುಶಾಹಿತ್ವವನ್ನು ವಿರೋಧಿಸುತ್ತದೆ. ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದಕ್ಕೆ ವಸಾಹತು ಶಾಹಿತ್ವ ಎಂದು ಕರೆಯುತ್ತಾರೆ. ವಸಾಹತು ಶಾಹಿತ್ವವನ್ನು ವಿರೋಧಿಸಿ ಸ್ವತಂತ್ರಗಳಿಸಿಕೊಂಡ ಭಾರತ ಸ್ವಾಭಾವಿಕವಾಗಿ ಅದನ್ನು ವಿರೋಧಿಸಿ ಪ್ರಪಂಚದ ಯಾವುದೇ ಮೂಲೆಯಲ್ಲಿ ವಸಾಹತು ಶಾಹಿತ್ವ ಇರಕೂಡದು ಎಂದು ದೆಹಲಿ ಮತ್ತು ಬಾಂಡೂಂಗ್ನಲ್ಲಿ ಜರುಗಿದ ಏಷ್ಯಾ ರಾಷ್ಟ್ರಗಳ ಸಮ್ಮೇಳನದಲ್ಲಿ (1949 ಮತ್ತು 1955) ತನ್ನ ನಿಲುವನ್ನು ಪ್ರತಿಪಾದಿಸಿತು.

4. ವರ್ಣಭೇದ ನೀತಿಗೆ ವಿರೋಧ :
ಒಂದು ಜನಾಂಗದ ಅಥವಾ ವರ್ಣದ ಜನಸಮುದಾಯ ಇನ್ನೊಂದು ಜನಾಂಗ ಅಥವಾ ವರ್ಣದ ಜನಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿಅವರನ್ನು ಕಡೆಗಣಿಸುವ ಅಥವಾ ವಿರೋಧಿಸುವ ನೀತಿಗೆ ವರ್ಣಭೇದ ನೀತಿ ಎಂದು ಕರೆಯಬಹುದು. ಈ ವರ್ಣಭೇದ ನೀತಿಯು ಅಮಾನವೀಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗುತ್ತದೆ. ಇಂತಹ ವರ್ಣಭೇದ ನೀತಿ ಜಗತ್ತಿನಲ್ಲಿ ಎಲ್ಲಿಯೂ ಯಾವ ರಾಷ್ಟ್ರವೂ ಅನುಸರಿಸಬಾರದು ಎಂಬ ವಿದೇಶಾಂಗ ನೀತಿಯನ್ನು ಭಾರತ ಹೊಂದಿದೆ. ಇತ್ತೀಚಿನವರೆಗೂ ದಕ್ಷಿಣ ಆಫ್ರಿಕಾದಲ್ಲಿ ಅಲ್ಪಸಂಖ್ಯಾತ ಬಿಳಿಯರು ಬಹುಸಂಖ್ಯಾತ ಆಫ್ರಿಕನ್ ದೇಶಿಯರನ್ನು ತಮ್ಮ ಹಿಡಿತದಲ್ಲಿಟ್ಟಿದ್ದರು ಎಂಬುದು ವಿಶೇಷವಾಗಿದೆ. ಈ ವರ್ಣಭೇದ ನೀತಿಯನ್ನು ಆಫ್ರಿಕಾಗಾಂಧಿ ಎಂದೇ ಪ್ರಸಿದ್ಧರಾದ ನೆಲ್ಸನ್ ಮಂಡೇಲ ಅವರ ನೇತೃತ್ವದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಬಲವಾಗಿ ಖಂಡಿಸಿ ಹಮ್ಮಿಕೊಂಡಿದ್ದ ಚಳುವಳಿಯನ್ನು ಭಾರತವು ಬೆಂಬಲಿಸಿತು ಮತ್ತು ಗುರಿಸಾಧಿಸಿತು.

5. ನಿಶ್ಯಸ್ತ್ರೀಕರಣ :
ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದೇ ನಿಶ್ಯಸ್ತ್ರೀಕರಣ. ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ, ಮಾರಾಟ, ಸಂಗ್ರಹಣೆಯಲ್ಲ್ಲಿ ಭಾರಿ ಪೈಪೋಟಿ ನಡೆದಿದೆ. ಈ ರೀತಿಯ ಶಸ್ತ್ರಾಸ್ತ್ರಗಳಪೈಪೋಟಿ ಯಿಂದ ಮೂರನೇ ಮಹಾಯುದ್ಧ ನಡೆಯಬಹುದೆಂಬ ಆತಂಕ ಹಲವು ರಾಷ್ಟ್ರಗಳಲ್ಲಿ ಉಂಟಾಗಿದೆ. ಶಸ್ತ್ರಾಸ್ತ್ರಗಳ ಪೈಪೋಟಿ ಗೆ ಒಳಗಾದ ರಾಷ್ಟ್ರಗಳು ಅಚಾತುರ್ಯದಿಂದಲೋ, ತಪ್ಪುಗ್ರಹಿಕೆಯಿಂದಲೋ ಬೇಕೆಂತಲೇ ಒಂದರ ಮೇಲೊಂದು ಯುದ್ಧ ಶಸ್ತ್ರಾಸ್ತ್ರಗಳನ್ನು ಅದರಲ್ಲೂ ಅಣ್ವಸ್ತ್ರಗಳನ್ನು ತಯಾರಿಸಿ ಉಪಯೋಗಿಸುವ ಸಂಭವವಿರುತ್ತದೆ.

ಆದುದರಿಂದ ಭಾರತ ಶಾಂತಿಪ್ರಿಯ ರಾಷ್ಟ್ರವಾಗಿದ್ದು ಗುಣಾತ್ಮಕ ಹಾಗೂ ಗಾತ್ರದ ಪರಿಮಿತಿಯಲ್ಲಿನ ನಿಶ್ಯಸ್ತ್ರೀಕರಣವನ್ನು ಪ್ರತಿಪಾದಿಸುತ್ತದೆ. ಶಾಂತಿ ಸೌಹಾರ್ದತೆಗೆ ಒತ್ತು ನೀಡಿದ ಭಾರತ ಪ್ರಧಾನಿ ನೆಹರೂರವರ ಕಾಲದಲ್ಲಿ ಸಹಜವಾಗಿಯೇ ನಿಶ್ಯಸ್ತ್ರೀಕರಣಕ್ಕೆ ಬೆಂಬಲವನ್ನು ಸೂಚಿಸಿತು. ಸಂಪೂರ್ಣ ನಿಶ್ಯಸ್ತ್ರೀಕರಣ ಸಾಧ್ಯವಾಗದ ವಿಚಾರವಾಗಿದೆ, ಏಕೆಂದರೆ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ರಕ್ಷಣಾವ್ಯೂಹ ಅತ್ಯಗತ್ಯ. ಆದರೂ ಭಾರತ ವಿಶ್ವಶಾಂತಿ ಹಾಗೂ ಸಹಬಾಳ್ವೆಗೆ ಪೂರಕವಾದ ವಿದೇಶಾಂಗ ನೀತಿಗೆ ವಿಶೇಷವಾಗಿ ಒತ್ತು ನೀಡಿದೆ.

ಭಾರತ ಸಂವಿಧಾನವು ತನ್ನ 51ನೇ ವಿಧಿಯ ಮೂಲಕ ಅಂತರರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿಯನ್ನು ಸೂಚಿಸುತ್ತದೆ. ಭಾರತ ಕಾಮನ್ವೆಲ್ತ್ ಆಫ್ ನೇಶನ್ಸ್ ಹಾಗೂ ಸಾರ್ಕ್ (ಸೌತ್ ಏಷಿಯನ್ ಅಸೋಸಿಯೇಶನ್ ಫಾರ್ ರೀಜೆನಲ್ ಕೋ – ಆಪರೇಶನ್) ಈ ಎರಡೂ ಸಂಸ್ಥೆಗಳ ಮೂಲಕ ಹಲವಾರು ದೇಶಗಳೊಂದಿಗೆ ನಿಕಟ ಸಂಬಂಧ ಹೊಂದಲು ಬಯಸಿದೆ. ಮೇಲಾಗಿ, ವಿಶ್ವ ಸಂಸ್ಥೆಯ ಪ್ರಮುಖ ಸದಸ್ಯ ರಾಷ್ಟ್ರವಾಗಿ ಭಾರತವು ಮಹತ್ವದ ಪಾತ್ರವಹಿಸುತ್ತ ಬಂದಿದೆ.

# ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳು:
➤ ಪೂರ್ವದೆಡೆಗೆ ನೋಡುವ ನೀತಿ: (LOOK AT EAST POLICY- 1990)
ಇದು ಪೂರ್ವ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ರಾಜಕೀಯ ಮತ್ತು ಆರ್ಥಿಕ ಸಂಪರ್ಕಗಳನ್ನು ನವೀಕರಿಸುವುದರ ಮೇಲೆ ಕೇಂದ್ರೀಕರಿಸಿದೆ. ಶೀತಲ ಸಮರದ ಯುಗದಲ್ಲಿ, ಭಾರತದ ವಿದೇಶಾಂಗ ನೀತಿಯ ಪ್ರಮುಖ ಅಂಶವೆಂದರೆ ಲುಕ್ ಈಸ್ಟ್ ಪಾಲಿಸಿ. ಶೀತಲ ಸಮರದ ಸಮಯದಲ್ಲಿ, ಅದರ ದಕ್ಷಿಣ ಪೂರ್ವ ಏಷ್ಯಾದ ನೆರೆಯವರೊಂದಿಗಿನ ಭಾರತದ ಸಂಬಂಧಗಳು ಬಲವಾಗಿರಲಿಲ್ಲ. ಶೀತಲ ಸಮರದ ಅಂತ್ಯದ ನಂತರ, ಭಾರತದ ವಿದೇಶಾಂಗ ನೀತಿಯಲ್ಲಿ ಈ ಅಸಮತೋಲನವನ್ನು ನಿವಾರಿಸುವ ಪ್ರಾಮುಖ್ಯತೆಯನ್ನು ಭಾರತ ಸರ್ಕಾರ ವಿಶೇಷವಾಗಿ ಅರಿತುಕೊಂಡಿದೆ. ತರುವಾಯ, ಕಳೆದ ಶತಮಾನದ ತೊಂಬತ್ತರ ದಶಕದ ಆರಂಭದಲ್ಲಿ ನರ್ಸಿಂಹ ರಾವ್ ಸರ್ಕಾರವು ಪೂರ್ವದ ನೀತಿಯ ನೋಟವನ್ನು ಅನಾವರಣಗೊಳಿಸಿತು.

➤ SAARC : South Asian Association for Regional Co-operation.
ಸಾರ್ಕ್ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಘಟನೆಯಾಗಿದೆ. ಡಿಸೆಂಬರ್ 8, 1985ರಲ್ಲಿ ಇದು ಅಸ್ತಿತ್ವಕ್ಕೆ ಬಂದಿದೆ. ಭಾರತ, ಶ್ರೀಲಂಕಾ, ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ರಾಷ್ಟ್ರಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ. 1986ರಲ್ಲಿ ಸಾರ್ಕ್ ಸಮ್ಮೇಳನವು ನಮ್ಮ ರಾಜ್ಯದಲ್ಲಿ ನಡೆದಿದೆ. ಇಸ್ಲಾಮಾಬಾದ್ನಲ್ಲಿ ನಡೆಯಬೇಕಾಗಿದ್ದ ಇತ್ತೀಚಿನ ಸಾರ್ಕ್ ಶೃಂಗಸಭೆಯು , ಭಾರತದ ಉರಿ ಮೇಲಿನ ಭಯೋತ್ಪಾದನೆಯ ದಾಳಿಯಿಂದಾಗಿ ಮುಂದೂಡಲ್ಪಟ್ಟಿತು.

# ವಿದೇಶಾಂಗ ಸಚಿವರು :
ವಿದೇಶಾಂಗ ಸಚಿವ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವನು ಸಾಮಾನ್ಯವಾಗಿ ಒಂದು ದೇಶದ ವಿದೇಶಾಂಗ ನೀತಿ ಹಾಗೂ ಸಂಬಂಧಗಳ ಉಸ್ತುವಾರಿ ಹೊಂದಿರುವ ಸಂಪುಟ ಸಚಿವನಾಗಿರುತ್ತಾನೆ. ವಿದೇಶ ಸಚಿವನ ಅಧಿಕಾರಗಳು ಸರ್ಕಾರದಿಂದ ಸರ್ಕಾರಕ್ಕೆ ಬದಲಾಗಬಹುದು. ಸಾಮಾನ್ಯ ಸಂಸದೀಯ ವ್ಯವಸ್ಥೆಯಲ್ಲಿ, ವಿದೇಶ ಸಚಿವನು ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಸಂಭಾವ್ಯವಾಗಿ ಗಣನೀಯ ಪ್ರಭಾವವನ್ನು ಬೀರಬಹುದು. ಆದರೆ ಸರ್ಕಾರದಲ್ಲಿ ಪ್ರಬಲ ಪ್ರಧಾನ ಮಂತ್ರಿಯ ಪ್ರಾಬಲ್ಯ ಇರುವಾಗ, ನೀತಿಯನ್ನು ನಿರ್ಧರಿಸುವಲ್ಲಿ ವಿದೇಶ ಸಚಿವನು ಹೆಚ್ಚು ಮಹತ್ವದಲ್ಲದ ಅಥವಾ ಸಹಾಯಕ ಪಾತ್ರ ವಹಿಸುವುದಕ್ಕೆ ಸೀಮಿತವಾಗಿರಬಹುದು.

ತಮ್ಮ ರಾಜಕೀಯ ಪಾತ್ರಗಳ ಜೊತೆಗೆ, ವಿದೇಶ ಸಚಿವರುಗಳು ಸಾಂಪ್ರದಾಯಿಕವಾಗಿ ವಿದೇಶಿ ವಿಶ್ವ ನಾಯಕರ ಆತಿಥ್ಯ ವಹಿಸುವುದು ಮತ್ತು ಇತರ ದೇಶಗಳಿಗೆ ರಾಜ್ಯ ಪರ್ಯಟನೆಗೆ ಹೋಗುವಂತಹ ಅನೇಕ ರಾಜತಾಂತ್ರಿಕ ಕರ್ತವ್ಯಗಳಿಗೆ ಕೂಡ ಜವಾಬ್ದಾರರಾಗಿರುತ್ತಾರೆ. ವಿದೇಶಾಂಗ ಸಚಿವನು ಸಾಮಾನ್ಯವಾಗಿ ಯಾವುದೇ ಸಂಪುಟದ ಅತ್ಯಂತ ಹೆಚ್ಚು ಪ್ರವಾಸ ಮಾಡುವ ಸದಸ್ಯನಾಗಿರುತ್ತಾನೆ.

# ನೆನಪಿನಲ್ಲಿಡಬೇಕಾದ ಅಂಶಗಳು :
➤ ವಿಶ್ವದ ಯಾವುದೇ ಬಣಕ್ಕೆ ಸೇರದೇ ಇರುವ ನೀತಿಯನ್ನು ‘ಅಲಿಪ್ತ ನೀತಿ’ ಎನ್ನಬಹುದು. ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು ಜಗತ್ತು ಎರಡು ಬಣಗಳಾಗಿ ವಿಭಜನೆಯಾದ ಸಂದರ್ಭದಲ್ಲಿ.
➤ ಭಾರತದ ಸಂವಿಧಾನವು ತನ್ನ 51ನೇ ವಿಧಿಯ ಮೂಲಕ ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿ ಸೂಚಿಸುತ್ತದೆ.
➤ 1946 ಸೆಪ್ಟಂಬರ್ 7 ರಂದು ಜವಾಹರಲಾಲ ನೆಹರು ಅವರು ನೀಡಿದ ರೇಡಿಯೋ ಭಾಷಣದಲ್ಲಿ ವಿದೇಶಾಂಗ ನೀತಿಯ ರೂಪರೇಷಗಳ ಬಗ್ಗೆ ಅರಿವು ಮೂಡಿಸಿದ್ದರು.

➤ ಭಾರತದ ವಿದೇಶಾಂಗ ನೀತಿಯ ಉದ್ದೇಶ ಅಥವಾ ಗುರಿಗಳಾವವು?
• ರಾಷ್ಟ್ರದ ಭದ್ರತೆ
• ರಾಷ್ಟ್ರದ ಆರ್ಥಿಕ ಸಂವರ್ಧನೆ.
• ನಮ್ಮ ದೇಶದ ಸಾಂಸ್ಕøತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸುವದು.
• ಮಿತ್ರ ರಾಷ್ಟ್ರಗಳನ್ನು ಹೆಚ್ಚಿಸಿಕೊಂಡು ವಿರೋಧಿ ರಾಷ್ಟ್ರಗಳನ್ನು ನಿರ್ಭಂದಿಸುವುದು ಅಥವಾ ಹತ್ತಿಕ್ಕುವುದು.
• ವಿಶ್ವಶಾಂತಿ ಹಾಗೂ ಸಹಬಾಳ್ವೆಯನ್ನು ಸಾಧಿಸುವುದು.

➤ ಸಾರ್ವಭೌಮ ರಾಷ್ಟ್ರವೆಂದರೇನು?
ಸಾರ್ವಭೌಮ ರಾಷ್ಟ್ರವೆಂದರೆ ಯಾವುದೇ ರಾಷ್ಟ್ರ ಆಂತರಿಕವಾಗಲೀ, ಬಾಹ್ಯವಾಗಿಯಾಗಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವದನ್ನು ಸಾರ್ವಭೌಮ ಅಥವಾ ಪರಮಾಧಿಕಾರವುಳ್ಳ ರಾಷ್ಟ್ರ ಎನ್ನಲಾಗಿದೆ.

➤ ವಸಾಹತುಶಾಹಿತ್ವವನ್ನು ಭಾರತವು ವಿರೋಧಿಸಲು ಕಾರಣಗಳೇನು?
ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವದಕ್ಕೆ ವಸಾಹತುಶಾಹಿತ್ವ ಎಂದು ಕರೆಯುತ್ತಾರೆ. ವಸಾಹತುಶಾಹಿತ್ವವನ್ನು ವಿರೋಧಿಸಿ ಸ್ವಾತಂತ್ರ್ಯ ಗಳಿಸಿಕೊಂಡ ಭಾರತವು ಸ್ವಾಭಾವಿಕವಾಗಿಯೇ ಪ್ರಪಂಚದ ಯಾವುದೇ ಮೂಲೆಯಲ್ಲಿ ಇರಕೂಡದು ಎಂಬ ತನ್ನ ನಿಲುವನ್ನು
ಪ್ರತಿಪಾದಿಸಿದೆ.

➤ ಪಂಚಶೀಲ ತತ್ವಗಳಾವವು?
ಪಂಚಶೀಲ ತತ್ವಗಳು : ಕ್ರಿ ಶ 1954 ರಲ್ಲಿ ಚೀನಾದ ಪ್ರದಾನಿ ಚೌ ಎನ್ಲಾಯ್ ಮತು ಪಂಡಿತ ನೆಹರುರವರು ಮಾಡಿಕೊಂಡ ಒಪ್ಪಂದವು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.
ಅವುಗಳೆಂದರೆ –
• ಪರಸ್ಪರರ ಪರಮಾಧಿಕಾರ ಮತ್ತು ಪ್ರಾದೇಶಿಕ ಐಕ್ಯತೆಗಳನ್ನು ಗೌರವಿಸುವದು.
• ಪರಸ್ಪರರ ಮೇಲೆ ಆಕ್ರಮಣ ಮಾಡದೇ ಇರುವದು.
• ದೇಶಗಳ ಒಳಾಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಇರುವದು.
• ಸಮಾನತೆ ಮತ್ತು ಪರಸ್ಪರ ಹಿತಸಾಧನೆಗೆ ಶ್ರಮಿಸುವದು.
• ಶಾಂತಿಯುತ ಸಹಜೀವನ.

➤ ನಿಶ್ಯಸ್ತ್ರೀಕರಣ ಎಂದರೇನು?
ನಿಶ್ಯಸ್ತ್ರೀಕರಣ ಎಂದರೆ ಕೆಲವು ನಿರ್ದಿಷ್ಟ ಬಗೆಯ ಅಥವಾ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದೇ ಆಗಿದೆ.

➤  ಪ್ರಚಲಿತ ಜಗತ್ತಿಗೆ ನಿಶಸ್ತ್ರೀಕರಣ ಅತೀ ಅಗತ್ಯ ಎಂದು ಭಾರತ ಏಕೆ ಪ್ರತಿಪಾದಿಸುತ್ತಿದೆ?  
• ನಿಶ್ಯಸ್ತ್ರೀಕರಣವೆಂದರೆ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದೇ ಆಗಿದೆ.
• ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ, ಮಾರಾಟ, ಸಂಗ್ರಹಣೆಯಲ್ಲಿ ಬಾರಿ ಪೈಪೋಟಿ ನಡೆದಿದೆ.
• ಶಸ್ತ್ರಾಸ್ತ್ರಗಳ ಪೈಪೋಟಿಯಿಂದ ಮೂರನೇ ಮಹಾಯುದ್ಧ ನಡೆಯಬಹುದೆಂಬ ಆತಂಕ ಹಲವು ರಾಷ್ಟ್ರಗಳಲ್ಲಿ ಉಂಟಾಗಿದೆ.
• ಶಸ್ತ್ರಾಸ್ತ್ರ ಪೈಪೋಟಿಗೆ ಒಳಗಾದ ರಾಷ್ಟ್ರಗಳು ಅಚಾತುರ್ಯದಿಂದಲೋ, ತಪ್ಪು ಗ್ರಹಿಕೆಯಿಂದಲೋ ಬೇಕಂತಲೇ ಒಂದರ ಮೇಲೊಂದು ಯುದ್ಧ ಶಸ್ತ್ರಾಸ್ತ್ರಗಳನ್ನು ಅದರಲ್ಲೂ ಅಣ್ವಸ್ತ್ರಗಳನ್ನು ತಯಾರಿಸಿ ಉಪಯೋಗಿಸುವ ಸಂಭವವಿರುತ್ತದೆ.
• ಭಾರತ ಶಾಂತಿಪ್ರೀಯ ರಾಷ್ಟ್ರವಾಗಿದ್ದು, ಶಾಂತಿ ಸೌಹಾರ್ಧತೆಗೆ ಒತ್ತು ನೀಡಿ ಪ್ರಚಲಿತ ಜಗತ್ತಿಗೆ ನಿಶ್ಯಸ್ತ್ರೀಕರಣ ಅತಿ ಅಗತ್ಯ ಎಂದು ಪ್ರತಿಪಾದಿಸುತ್ತಿದೆ.

 

# ಇವುಗಳನ್ನೂ ಓದಿ…
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು

error: Content Copyright protected !!