GKSpardha Times

ಜಿ-20 ರಾಷ್ಟ್ರಗಳು ಎಂದರೇನು..? ಸದಸ್ಯ ರಾಷ್ಟ್ರಗಳಾವುವು..?

Share With Friends

ಜಿ-20 ವಿಶ್ವದ 20 ಪ್ರಮುಖ ಆರ್ಥಿಕ ಸರ್ಕಾರಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಅಂತರಾಷ್ಟ್ರೀಯ ವೇದಿಕೆಯಾಗಿದೆ. ಜಗತ್ತಿನ 19 ಪ್ರಮುಖ ದೇಶಗಳು ಮತ್ತು ಐರೋಪ್ಯ ಒಕ್ಕೂಟ ಇದರಲ್ಲಿವೆ. 20 ದೇಶಗಳ ಸಮೂಹ (ಗ್ರೂಪ್). ಇದನ್ನು ಜಿ-20 ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ.

ಜಾಗತಿಕ ಒಟ್ಟು ದೇಶೀಯ ಉತ್ಪನ್ನದ ಶೇಕಡಾ 80 ಪ್ರತಿಶತಕ್ಕಿಂತ ಹೆಚ್ಚು ಪಾಲು ಹೊಂದಿರುವ ‘ ಅಂತರಾಷ್ಟ್ರೀಯ ಆರ್ಥಿಕ ನಿಗಮದ ಪ್ರಧಾನ ವೇದಿಕೆಯಾಗಿ’ ಜಿ-20 ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ನಿರಂತರ ಪ್ರಯತ್ನಗಳನ್ನು ಮಾಡಿದೆ.

# G-20 ಸದಸ್ಯ ರಾಷ್ಟ್ರಗಳು :
ಅರ್ಜೆಂಟೀನಾ, ಬ್ರೆಜಿಲ್, ಚೀನಾ, ಜರ್ಮನಿ, ಇಂಡೋನೇಷ್ಯಾ, ಜಪಾನ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಭಾರತ, ಇಟಲಿ, ಮೆಕ್ಸಿಕೊ, ಕೊರಿಯಾ, ರಷ್ಯಾ, ಟರ್ಕಿ, ಅಮೆರಿಕ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಯೂರೋಪಿನ ಒಕ್ಕೂಟ.

# G- 20 ಶೃಂಗಸಭೆ :
ವಿಶ್ವದ ಆರ್ಥಿಕ ಬಲಾಢ್ಯ ರಾಷ್ಟ್ರಗಳು, ಅಭಿವೃದ್ಧಿಶೀಲ ಮತ್ತು ಪ್ರಗತಿಯ ಪಥದಲ್ಲಿ ಹೆಜ್ಜೆಹಾಕುತ್ತಿರುವ ರಾಷ್ಟ್ರಗಳು ಈ ವೇದಿಕೆಯ ಸದಸ್ಯ ರಾಷ್ಟ್ರಗಳಾಗಿವೆ. ಇದರಲ್ಲಿರುವ ರಾಷ್ಟ್ರಗಳ ಒಟ್ಟು ಜಿಡಿಪಿ ಗಣನೆಗೆ ತೆಗೆದುಕೊಂಡರೆ ಅದು ವಿಶ್ವದ ಒಟ್ಟು ಜಿಡಿಪಿಯ ಶೇ.85ರಷ್ಟಾಗುತ್ತದೆ. ಹಾಗೆಯೇ ಇದು ಜಗತ್ತಿನ ಒಟ್ಟು ಜನಸಂಖ್ಯೆಯ 2/3ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಪೂರ್ವ ಏಷ್ಯಾದಲ್ಲಿನ ಆರ್ಥಿಕ ಬಿಕ್ಕಟ್ಟು ಜಗತ್ತಿನ ಅನೇಕ ದೇಶಗಳ ಮೇಲೆ ಪರಿಣಾಮ ಬೀರಿದ ಬಳಿಕ ಮೊದಲ ಜಿ-20 ಸಭೆ 1999ರಲ್ಲಿ ಬರ್ಲಿನ್‌ನಲ್ಲಿ ನಡೆದಿತ್ತು.

ಜಿ20 ಮೊದಲಿಗೆ ಆರಂಭಗೊಂಡಾಗ, ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕುಗಳ ಗೌರ್ನರ್‌ಗಳು ಮಾತ್ರ ಶೃಂಗದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, 2008ರಲ್ಲಿ ಲೆಹ್ಮನ್‌ ಬ್ರದರ್ಸ್‌ ಹಣಕಾಸು ಸಂಸ್ಥೆ ದಿವಾಳಿ ಎದ್ದು, ಇಡೀ ಜಗತ್ತೇ ಆರ್ಥಿಕ ಹಿಂಜರಿಕೆಗೆ ಒಳಗಾಯಿತು. ಆ ಬಳಿಕವಷ್ಟೆ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ವಾರ್ಷಿಕ ಜಿ20 ಶೃಂಗದಲ್ಲಿ ಪಾಲ್ಗೊಳ್ಳುವುದು ಆರಂಭವಾಯಿತು.

2009ರಿಂದ 2010ರಲ್ಲಿ ಇಡೀ ಜಗತ್ತಿ ಆರ್ಥಿಕ ಹಿಂಜರಿಕೆಯಲ್ಲಿದ್ದಾಗ ನಾಯಕರು ಎರಡು ವರ್ಷಕ್ಕೊಮ್ಮೆ ಭೇಟಿಯಾಗುತ್ತಿದ್ದರು. ಬರ್ಲಿನ್‌ನಲ್ಲಿ ಮೊದಲ ಶೃಂಗ ನಡೆಯಿತು. ಜಗತ್ತಿನ ಶೇ. 80ಕ್ಕಿಂತಲೂ ಹೆಚ್ಚು ಆರ್ಥಿಕ ಶಕ್ತಿಯು ಈ ಜಿ20 ರಾಷ್ಟ್ರಗಳ ಬಳಿ ಇದೆ. ಈ ಹಿನ್ನೆಲೆಯಲ್ಲಿ ಜಿ20 ಶೃಂಗಸಭೆಗೆ ಸಾಕಷ್ಟು ಮಾನ್ಯತೆ ಇದೆ.

# ಸ್ವಂತ ಆಡಳಿತ ಕಚೇರಿ ಇಲ್ಲ!
ವಿಶ್ವದ ಪ್ರಮುಖ ಅಂತಾರಾಷ್ಟ್ರೀಯ ಸಂಘಟನೆಯಾದರೂ ಜಿ20ಗೆ ತನ್ನದೇ ಸ್ವಂತ ಆಡಳಿತ ಕಚೇರಿಯಾಗಲಿ, ಸಿಬ್ಬಂದಿಯಾಗಲಿ ಇಲ್ಲ! ಈ ಗ್ರೂಪ್‌ನ ಅಧ್ಯಕ್ಷೀಯ ಸ್ಥಾನ ಸದಸ್ಯ ರಾಷ್ಟ್ರಗಳ ನಡುವೆ ಪ್ರತಿ ವರ್ಷ ಬದಲಾಗುತ್ತಲೇ ಇರುತ್ತದೆ ಮತ್ತು ಇದಕ್ಕಾಗಿ ವಿಭಿನ್ನ ಪ್ರಾದೇಶಿಕ ರಾಷ್ಟ್ರಗಳ ಸಮೂಹದಿಂದಲೇ ಆಯ್ಕೆ ಮಾಡಲಾಗುತ್ತದೆ.

ಯಾವ ರಾಷ್ಟ್ರವು ಜಿ20 ಶೃಂಗದ ಆತಿಥ್ಯ ವಹಿಸುತ್ತದೆಯೋ ಅದೇ ರಾಷ್ಟ್ರ ಆ ವರ್ಷ ಪೂರ್ತಿ ಅದರ ನಿರ್ವಹಣೆ ಮಾಡುತ್ತದೆ. ಅಂದರೆ ತಾತ್ಕಾಲಿಕವಾಗಿ ಆಡಳಿತ ಕಚೇರಿಯನ್ನು ಆರಂಭಿಸಿ, ಗ್ರೂಪ್‌ನ ದಿನವಹಿ ಕೆಲಸವನ್ನು ಮತ್ತು ಸಂಘಟನೆಯ ಸಭೆಗಳನ್ನು ನೆರವೇರಿಸುತ್ತದೆ. ಈ ವರ್ಷದ ಆತಿಥ್ಯವನ್ನು ಜರ್ಮನಿ ವಹಿಸಿದ್ದು, ಅದು ಜಿ20ಯ ಪೂರ್ತಿ ವ್ಯವಹಾರವನ್ನು ನೋಡಿಕೊಳ್ಳುತ್ತದೆ. ಮುಂದಿನ ವರ್ಷ ಯಾವ ರಾಷ್ಟ್ರ ಆತಿಥ್ಯ ವಹಿಸುತ್ತದೋ ಅದು ಜಿ20 ವ್ಯವಹಾರಗಳನ್ನು ನಿರ್ವಹಿಸುತ್ತದೆ.

# ಶಾಶ್ವತ ಕಚೇರಿಗೆ ಪ್ರಯತ್ನ :
ವಿಶ್ವಸಂಸ್ಥೆಯ ರೀತಿಯಲ್ಲಿ ಜಿ20ಗೂ ಸ್ವಂತ ಆಡಳಿತ ಕಚೇರಿ ರೂಪಿಸುವ ಬಗ್ಗೆ 2010ರಲ್ಲಿ ಫ್ರಾನ್ಸ್‌ನ ಅಧ್ಯಕ್ಷ ನಿಕೋಲಸ್‌ ಸರ್ಕೋಜಿ ಅವರು ಪ್ರಸ್ತಾಪವನ್ನು ಸಿದ್ಧಪಡಿಸಿದ್ದರು. ಜಿ20 ಕೇಂದ್ರ ಕಚೇರಿಯನ್ನು ಸ್ಥಾಪಿಸಲು ಅವರು ದಕ್ಷಿಣ ಕೊರಿಯಾದ ಸೋಲ್‌ ಅಥವಾ ಪ್ಯಾರಿಸ್‌ ಸ್ಥಗಳನ್ನು ಆಯ್ಕೆ ಮಾಡಿಕೊಂಡಿದ್ದರು.

ಶಾಸ್ವತ ಆಡಳಿತ ಕಚೇರಿ ಸ್ಥಾಪನೆಗೆ ಬ್ರೇಜಿಲ್‌ ಮತ್ತು ಚೀನಾಗಳೆರಡೂ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದವು. ಆದರೆ, ಈ ಪ್ರಸ್ತಾಪವನ್ನು ಜಪಾನ್‌ ಮತ್ತು ಇಟಲಿ ವಿರೋಧಿಸಿದ್ದವು. ಏತನ್ಮಧ್ಯೆ, ದಕ್ಷಿಣ ಕೊರಿಯಾ ಸೈಬರ್‌ ಆಡಳಿತ ಕಚೇರಿಯ ಪ್ರಸ್ತಾಪವನ್ನು ಪರ್ಯಾಯವಾಗಿ ಪ್ರಸ್ತಾಪಿಸಿತ್ತು. ಆದರೆ ಇದಾವುದಕ್ಕೂ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ತಾತ್ಕಾಲಿಕ ಕಚೇರಿಗಳ ಮೂಲಕವೇ ಜಿ20 ತನ್ನ ವ್ಯವಹಾರವನ್ನು ನಿರ್ವಹಿಸುತ್ತಿದೆ.

# ಇವುಗಳನ್ನೂ ಓದಿ…
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು
ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು

# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು 

# ಪ್ರಶಸ್ತಿಗಳು :
# ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
# ನೊಬೆಲ್ ಪ್ರಶಸ್ತಿ
# ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು
# ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಸ್ಥೆ ಯಾವುದು..? ಅದರ ಹಿನ್ನೆಲೆ ಏನು..?
# ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು

error: Content Copyright protected !!