40 ಸಾಮಾನ್ಯ ಜ್ಞಾನ ಪ್ರಶ್ನೆಗಳು : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ ಒಟ್ಟು ಎಷ್ಟು ಸಾಲುಗಳಿವೆ?
✦ 13
2) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?
✦ 527
3) ಇತಿಹಾಸದ ಪಿತಾಮಹ ‘ಹೆರೋಡೊಟಸ್’ ಯಾವ ದೇಶದವನು?
✦ ಗ್ರೀಕ್
4) ಇಂಗ್ಲಿಷನಲ್ಲಿ ಒಟ್ಟು” ಅಲ್ಪಾಬೆಟ್”ಎಷ್ಟು?
✦ 26
5) “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
✦ ಫೆಭೃವರಿ-28
6) ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
✦ 2
7) ಸೊನ್ನೆ (0) ಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
✦ ಭಾರತ
8 ) ಕರ್ನಾಟಕದ ಪಂಜಾಬ್(ಪಂಚನದಿಗಳ ನಾಡು) ಎಂದು ಕರೆಯಲಾಗುವ ಜಿಲ್ಲೆ ಯಾವುದು?
✦ ವಿಜಯಪುರ
9) “ವಿಶ್ವ ಭೂ ದಿವಸ” ವನ್ನು ಯಾವ ದಿನ ಆಚರಿಸುತ್ತಾರೆ?
✦ ಎಪ್ರಿಲ್-22
10)ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?
✦ ಹಂಪಿ
11. ಅಂತರ್ರಾಷ್ಟ್ರೀಯ ಓಝೊನ್ ‘ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
✦ ಸೆಪ್ಟೆಂಬರ್
12) ಖೈಬರ್ ಕಣಿವೆ (ಖೈಬರ್ ಪಾಸ್) ಎಲ್ಲಿದೆ?
✦ ಪಾಕಿಸ್ತಾನ
13) ಇತ್ತೀಚೆಗೆ (2010) ಜಾರಿಗೆ ಬಂದ ಹೆರಿಗೆ ಪೂರ್ವ ಹಾಗೂ ನಂತರ ಮಹಿಳೆಗೆ ಬೇಕಾದ ರಕ್ತದ ಬಾಟಲ್ ಪೂರೈಸುವ ಯೋಜನೆ
✦ ಆಪತ್.
14) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:
✦ 38ನೇ ಪ್ಯಾರಲಲ್
15) ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು:
✦ ಅ.ನ.ಕೃ.
16) ಹೆಳವನಕಟ್ಟೆ ಗಿರಿಯಮ್ಮ ನ ಜನಪ್ರಿಯ ಕಾವ್ಯ ಯಾವುದು?
✦ ಚಂದ್ರಹಾಸ ಕಥೆ.
17) ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ
✦ 6
18) ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
✦ ಬೆಳಗಾವಿ.
19) ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ
✦ ದೈನಿಕ್ ಜಾಗರಣ್.
20) ಕರ್ನಾಟಕದ ರಫ್ತಿನಲ್ಲಿ ಅತ್ಯಧಿಕ ಪ್ರಮಾಣ ಹೊಂದಿರುವ ಉತ್ಪನ್ನ ಯಾವುದು?
✦ ಕಂಪ್ಯೂಟರ್ ಸಾಫ್ಟವೇರ್.
21) ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು?
✦ ಕ್ಯಾಬಿನೆಟ್ ಮಿಷನ್ ಯೋಜನೆ.
22. ಸಾಲುಮರದ ತಿಮ್ಮಕ್ಕ ಯಾವ ಗ್ರಾಮಗಳ ನಡುವೆ ಮರಗಳನ್ನು ಬೆಳೆಸಿದ್ದಾರೆ ?
✦ ಕೋಲಾರ –ಹೊರಮಾವು.
23. ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ
✦ ಮುಂಬಯಿನಲ್ಲಿ. (8.9 ಕಿ.ಮೀ ಉದ್ದ. ವಡಾಲಾ – ಚಂಬೂರ್ ಪ್ರದೇಶಗಳ ಮಧ್ಯೆ)
24. ‘ಕಿಸಾನ್ ದಿವಸ್’ ಯಾರ ಜನ್ಮದಿನಾಚರಣೆಯ ನೆನಪಿಗಾಗಿ ಆಚರಿಸಲಾಗುತ್ತಿದೆ?
✦ ಮಾಜಿ ಪ್ರಧಾನಿ ಚರನ್ ಸಿಂಗ್. (ಡಿಸೆಂಬರ್ 23)
25. ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ ?
✦ ಚೀನಾ.
26. ‘ರಾಮನಾಥ್ ಗೋಯೆಂಕಾ ಪ್ರಶಸ್ತಿ’ ಯನ್ನು ಕೊಡಲಾಗುವ ಕ್ಷೇತ್ರ:
✦ ಪತ್ರಿಕೋದ್ಯಮ
27. ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ?
✦ ಯುನೈಟೆಡ್ ಸ್ಟೇಟ್ಸ್.3
28. ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ?
✦ ಪೆರಿಸ್ಕೋಪ್.
29. ಯಾವ ವೈಸರಾಯ್ ನ ಕಾಲದಲ್ಲಿ ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು ?
✦ ಲಾರ್ಡ್ ಹಾರ್ಡಿಂಜ್.
30. ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಜನಕನೆಂದು ಯಾರನ್ನು ಕರೆಯುತ್ತಾರೆ ?
✦ ಥಾರ್ನ್ ಡೈಕ್.
31. ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು ?
✦ ಅನ್ನಾ ಬೆಲ್ಲಿಲ್ಯಾಂಡ್.
32. ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ
✦ ಪಿ.ವಿ. ನರಸಿಂಹರಾವ್.
33. ವಿಶ್ವದಲ್ಲೇ ಅತಿದೊಡ್ಡದಾದ ‘ತ್ರಿ ಗೊಜರ್ಸ್ ಜಲಾಶಯ’ ವನ್ನು ಚೀನಾ ದೇಶವು ಯಾವ ನದಿಯ ಮೇಲೆ ನಿರ್ಮಿಸುತ್ತಿದೆ
✦ ಯಾಂಗ್ಜಿ ನದಿ.
34. ಪರಿಸರ ಸಂರಕ್ಷಣೆಗೊಸ್ಕರ ‘ಗ್ರೀನ್ ಟ್ರ್ಯಾಕ್’ ನ್ನು ವಿಧಿಸಿದ ಮೊದಲ ರಾಷ್ಟ್ರ ?
✦ ನ್ಯೂಜಿಲೆಂಡ್
.35. ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ ಹಿಮಾಲಯ ಪರ್ವತಗಳಾದರೆ, ಉದ್ದವಾದ ಪರ್ವತ ಶ್ರೇಣಿ ಯಾವುದು ?
✦ ಆಂಡೀಸ್ ಪರ್ವತಗಳು
36. ವಿಶ್ವ ಬ್ಯಾಂಕ್ ನ ‘ಆಣೆಕಟ್ಟು ಪುನಶ್ಚೇತನ ಯೋಜನೆ’ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ ಹಾಕಿರುವ ರಾಜ್ಯ:
✦ ಕೇರಳ
37. ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ:
✦ ಥೋರಿಯಂ
38. ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ ?
✦ 32ನೇ ವಿಧಿ.
39. ‘ಸಂವಿಧಾನದ ಪೀಠಿಕೆ’ ಸಂವಿಧಾನದ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
✦ ಬೇರುಬೆರಿ ಪ್ರಕರಣದಲ್ಲಿ.
40. ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?
✦ ಫಜಲ್ ಅಲಿ.