ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
1. ಕೆಳಗಿನವುಗಳಲ್ಲಿ ಯಾವುದು ಕಾಂತ ವಸ್ತುವಲ್ಲ?
ಎ. ಕಬ್ಬಿಣ
ಬಿ. ಕೋಬಾಲ್ಟ್
ಸಿ. ನಿಕ್ಕಲ್
ಡಿ. ಚಿನ್ನ
2. ಒಂದು ತಾತ್ಕಾಲಿಕ ಆಯಸ್ಕಾಂತವನ್ನು ಯಾವುದರಿಂದ ತಯಾರಿಸಲಾಗುತ್ತದೆ?
ಎ. ತಾಮ್ರ
ಬಿ. ಉಕ್ಕು
ಸಿ. ತವರ
ಡಿ. ಅಲ್ಯೂಮಿನಿಯಂ
3. ಈ ಕೆಳಗಿನವುಗಳಲ್ಲಿ ಯಾವುದು ಆಯಸ್ಖಾಂತದ ಗುಣಲಕ್ಷಣವಾಗಿರುತ್ತದೆ?
ಎ. ಆಯಸ್ಕಾಂತದಲ್ಲಿ ಎರಡು ಧ್ರುವಗಳಿರುತ್ತವೆ.
ಬಿ. ಕಾಂತೀಯ ರೇಖೆಗಳು ಪರಸ್ಪರ ಛೇಧಿಸುತ್ತವೆ.
ಸಿ. ಸ್ವಂತಂತ್ರವಾಗಿ ತೂಗುಬಿಟ್ಟ ಆಯಸ್ಕಾಂತವು ಉತ್ತರ ದಕ್ಷಿಣವಾಗಿ ವಿರಮಿಸುವುದಿಲ್ಲ.
ಡಿ. ಆಯಸ್ಕಾಂತವು ಮರದ ಚೂರನ್ನು ಆಕರ್ಷಿಸುತ್ತದೆ
4. ವ್ಹೀಲ್ ಸ್ಟೋನ್ ಬ್ರಿಡ್ಜ್ ಎಂಬುದು…….
ಎ. ಮೂರು ಕಮಾನುಗಳಿಂದ ಕೂಡಿದ ಸೇತುವೆ
ಬಿ. ಕೊಯಲಿಗಾಗಿ ಟ್ರಾಕ್ಟರಿಗೆ ಸೇರಿಸಿರುವ ಜೋಡಣೆ
ಸಿ. ವಿದ್ಯುಚ್ಚಕ್ತಿ ನಿರೋಧಕವನ್ನು ಅಳೆಯುವ ಸಾಧನ
ಡಿ. ತೂಕ ಮಾಡಲು ಉಪಯೋಗಿಸುವ ಸೇತುವೆ
5. ವಿದ್ಯುತ್ ಪ್ರವಾಹದ ಏಕಮಾನ ಯಾವುದು?
ಎ. ಓಮ್
ಬಿ. ಅಂಪಿಯರ್
ಸಿ. ವೋಲ್ಟ್
ಡಿ. ವ್ಯಾಟ್
6. ಭಾರತದಲ್ಲಿ ವಿದ್ಯುತ್ ಪ್ರಸರಣದಲ್ಲಿ ಯಾವ ಗುಣವಾಚಕ ಸ್ಥಿರವಾಗಿರುತ್ತದೆ?
ಎ. ವೋಲ್ಟೇಜ್
ಬಿ. ಕರೆಂಟ್
ಸಿ. ತರಂಗ
ಡಿ. ಶಕ್ತಿ
7. ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಯಾವುದು?
ಎ. ಮೋಟಾರ್
ಬಿ. ಡೈನಮೋ
ಸಿ. ಜನರೇಟರ್
ಡಿ. ಯಾವುದೂ ಅಲ್ಲ
8. ವಿದ್ಯುದಾವೇಶಗಳ ಆಕರ್ಷಣೆ ಮತ್ತು ವಿಕರ್ಷಣೆಗಳ ನಿಯಮವನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಎ. ಕೂಲಾಮ್
ಬಿ. ನ್ಯೂಟನ್
ಸಿ. ಮಾರ್ಕೋನಿ
ಡಿ. ಐನ್ಸ್ಟೈನ್
9. ವಿದ್ಯುತ್ ಶಕ್ತಿಯ ಆಯಸ್ಕಾಂತೀಯ ಪರಿಣಾಮವನ್ನು ಕಂಡು ಹಿಡಿದವರು ಯಾರು?
ಎ. ಮ್ಯಾಕ್ಸ್ವೆಲ್ಲ್
ಬಿ. ಫ್ಯಾರೆಡೇ
ಸಿ. ಅಂಪಿಯರ್
ಡಿ. ಓಸ್ರ್ಟ್ಡ್
10. ವ್ಯಾಟ್ ಅವರ್ ಈ ಕೆಳಗಿನ ಯಾವುದರ ಮಾಪನವಾಗಿದೆ?
ಎ. ಪ್ರವಾಹ
ಬಿ. ನಿರ್ದೇಶಿಸಿದ ವಿದ್ಯುತ್ ಬಲ
ಸಿ. ಶಕ್ತಿ
ಡಿ. ವಿದ್ಯುಚ್ಛಕ್ತಿ
11. ಇಲೆಕ್ಟ್ರಾನ್ ವೋಲ್ಟ್ ಎಂಬುದು ಯಾವುದನ್ನು ಅಳೆತಯುವ ಮಾನವಾಗಿದೆ?
ಎ. ಆವೇಶ
ಬಿ. ಶಕ್ತಿ
ಸಿ. ವಿಭವಾಂತರ
ಡಿ. ಚಲನ ಪರಿಮಾಣ
12. ಕಾಂಪ್ಯಾಕ್ಟ್ ಪ್ಲೋರಸೆಂಟ್ ಲ್ಯಾಂಪ್ಗಳು
ಎ. ಕೆಟ್ಟ ಬೆಳಕನ್ನು ಉತ್ಪಾದಿಸುತ್ತದೆ.
ಬಿ. ದಕ್ಷತೆ ಇಲ್ಲದ ಅಸಮರ್ಥ ಲ್ಯಾಂಪುಗಳು
ಸಿ. ಕಡಿಮೆ ವಿದ್ಯುತ್ತನು ಬಳಸುತ್ತದೆ.
ಡಿ. ಮಿಣುಕುತ್ತಿರುವ ಬೆಳಕನ್ನು ಉತ್ಪಾದಿಸುತ್ತದೆ
13. ‘ ವೋಲ್ಟೇಜ್’ ನ್ನು ಕೆಲವು ಸಲ ಇ. ಎಂ. ಎಫ್ ಅಥವಾ ಇಲೆಕ್ಟ್ರೋಮೋಟಿವ್ ——- ಎಂ ದು ಉಪರಿಗಣಿಸಲಾಗುತ್ತದೆ.
ಎ. ಪೋರ್ಸ್
ಬಿ. ಫೀಲ್ಡ್
ಸಿ. ಫ್ಲಾಶ್
ಡಿ. ಫ್ಯಾಕ್ಟರ್
14. ಲೋಹದ ವಾಹಕದ ರೋಧಕವು….
ಎ. ಉಷ್ಣತೆ ಹೆಚ್ಚಾದಂತೆ ಹೆಚ್ಚುತ್ತದೆ.
ಬಿ. ಉಷ್ಣತೆ ಹೆಚ್ಚಿದಂತೆ ಕಡಿಮೆಯಾಗುತ್ತದೆ
ಸಿ. ಉಷ್ಣತೆಯು ಬದಲಾವಣೆಯೊಂದಿಗೆ ಸ್ಥಿರವಾಗಿರುತ್ತದೆ.
ಡಿ. ಅತ್ಯಂತ ಹೆಚ್ಚು ಉಷ್ಣತೆಯಲ್ಲಿ ಶೂನ್ಯವಾಗುತ್ತದೆ.
15. ಪ್ಯೂಸ್ ತಂತಿಯಲ್ಲಿ ಅತ್ಯವಶ್ಯಕವಾಗಿ ಇರಬೇಕಾದ ಅಂಶಗಳೆಂದರೆ..
ಎ. ಅಧಿಕ ಪ್ರತಿರೊಧಕತ್ವ ಮತ್ತು ಅಧಿಕ ಕರಗುವ ಬಿಂದು
ಬಿ. ಅಧಿಕ ಪ್ರತಿರೋಧಕತ್ವ ಮತ್ತು ಅಲ್ಪ ಕರಗುವ ಬಿಂದು
ಸಿ. ಅಲ್ಪ ಪ್ರತಿರೋಧಕತ್ವ ಮತ್ತು ಅಲ್ಪ ಕರಗು ಬಿಂದು
ಡಿ. ಅಲ್ಪ ಪ್ರತಿರೋಧಕತ್ವ ಮತ್ತು ಅಧಿಕ ಕರಗುವ ಬಿಂದು
16. ಬೆಳಕಿನ ಯಾವ ಗುಣದಿಂದ ಕಾಮನಬಿಲ್ಲು ಉಂಟಾಗುತ್ತದೆ?
ಎ. ಬೆಳಕಿನ ಪ್ರತಿಫಲನ
ಬಿ. ಬೆಳಕಿನ ವಕ್ರೀಭವನ
ಸಿ. ಬೆಳಕಿನ ವಿಚಲನೆ
ಡಿ. ಬೆಳಕಿನ ಧ್ರುವೀಕರಣ
17. ರೂಬಿ ಲೇಸರ್ನ ಕೆಂಪು ಬಣ್ಣಕ್ಕೆ ಕಾರಣ
ಎ. ಅಲ್ಯೂಮಿನಿಯಂ ಆಯಾನುಗಳು
ಬಿ. ಸಿಲಿಕಾನ್ ಆಯಾನುಗಳು
ಸಿ. ಅಮ್ಲಜನಕ ಆಯಾನುಗಳು
ಡಿ. ಕ್ರೋಮಿಯಂ ಆಯಾನುಗಳು
18. ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು?
ಎ. ರಕ್ತ ವೇಗಾತೀತ ಕಿರಣಗಳು
ಬಿ. ಗೋಚರ ಕಿರಣಗಳು
ಸಿ. ನೇರಳಾತೀತ ಕಿರಣಗಳು
ಡಿ. ಕ್ಷ- ಕಿರಣಗಳು
19. ರೇಡಿಯೋ ವಿಕಿರಣವನ್ನು ಕಂಡು ಹಿಡಿದವರು ಯಾರು?
ಎ. ಹೆನ್ರಿ ಬೆಕೆರಲ್
ಬಿ. ರುದರ್ ಪೋರ್ಡ್
ಸಿ. ಜೆ.ಜೆ. ಥಾಮಸನ್
ಡಿ. ಮೇಡಂ ಕ್ಯೂರಿ
20. ರಾಡಾರ್ನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ.?
ಎ. ಹಾರಾಡುವ ವಸ್ತುಗಳನ್ನು
ಬಿ. ಮಿಲಟರಿ ಟ್ಯಾಂಕ್ಗಳು
ಸಿ. ಆಯುಧಗಳು
ಡಿ. ಈ ಮೇಲಿನ ಯಾವುದೂ ಅಲ್ಲ
# ಉತ್ತರಗಳು :
1. ಡಿ. ಚಿನ್ನ
2. ಬಿ. ಉಕ್ಕು
3. ಎ. ಆಯಸ್ಕಾಂತದಲ್ಲಿ ಎರಡು ಧ್ರುವಗಳಿರುತ್ತವೆ.
4. ಸಿ. ವಿದ್ಯುಚ್ಚಕ್ತಿ ನಿರೋಧಕವನ್ನು ಅಳೆಯುವ ಸಾಧನ
5. ಬಿ. ಅಂಪಿಯರ್
6. ಸಿ. ತರಂಗ
7. ಎ. ಮೋಟಾರ್
8. ಎ. ಕೂಲಾಮ್
9. ಡಿ. ಓಸ್ರ್ಟ್ಡ್
10. ಡಿ. ವಿದ್ಯುಚ್ಛಕ್ತಿ
11. ಬಿ. ಶಕ್ತಿ
12. ಸಿ. ಕಡಿಮೆ ವಿದ್ಯುತ್ತನು ಬಳಸುತ್ತದೆ.
13. ಎ. ಪೋರ್ಸ್
14. ಎ. ಉಷ್ಣತೆ ಹೆಚ್ಚಾದಂತೆ ಹೆಚ್ಚುತ್ತದೆ.
15. ಸಿ. ಅಲ್ಪ ಪ್ರತಿರೋಧಕತ್ವ ಮತ್ತು ಅಲ್ಪ ಕರಗು ಬಿಂದು
16. ಬಿ. ಬೆಳಕಿನ ವಕ್ರೀಭವನ
17. ಡಿ. ಕ್ರೋಮಿಯಂ ಆಯಾನುಗಳು
18. ಡಿ .ಕ್ಷ- ಕಿರಣಗಳು
19. ಎ. ಹೆನ್ರಿ ಬೆಕೆರಲ್
20. ಎ. ಹಾರಾಡುವ ವಸ್ತುಗಳನ್ನು
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05