ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
1. ಒಂದು ಘಂಟೆ ಸಮಯವು ಎಷ್ಟು ಡಿಗ್ರಿ ರೇಖಾಂಶಕ್ಕೆ ಸಮವಾಗಿದೆ..?
ಎ. 14 ಡಿಗ್ರಿ ರೇಖಾಂಶಕ್ಕೆ
ಬಿ. 15 ಡಿಗ್ರಿ ರೇಖಾಂಶ
ಸಿ. 16 ಡಿಗ್ರಿ ರೇಖಾಂಶ
ಡಿ. 13 ಡಿಗ್ರಿ ರೇಖಾಂಶ
2. 0 ಡಿಗ್ರಿ ರೇಖಾಂಶ ಹಾದುಹೋಗಿರುವ ಪಟ್ಟಣ ಯಾವುದು..?
ಎ. ಗ್ರೀನ್ವಿಚ್
ಬಿ. ಮ್ಯಾಂಚೆಸ್ಟರ್
ಸಿ.ಲಿವರ್ಪೂಲ್
ಡಿ. ಲಿಡ್ಸೆ
3. 0 ಡಿಗ್ರಿ ರೇಖಾಂಶ ಹಾದುಹೋಗಿರುವ ದೇಶ ಯಾವುದು..?
ಎ. ಯು.ಎಸ್.ಎ
ಬಿ. ಇಂಗ್ಲೆಂಡ್
ಸಿ. ಫ್ಯಾನ್ಸ್
ಡಿ. ಸ್ವೀಡನ್
4. ಕೆಳಗಿನ ಯಾವ ದೇಶದ ಮೇಲೆ 0 ಡಿಗ್ರಿ ರೇಖಾಂಶವು ಹಾದುಹೋಗಿದೆ..?
ಎ. ಗಿನಿಯ
ಬಿ. ಘಾನಾ
ಸಿ. ಛಾಡ
ಡಿ. ನೈಜೀರಿಯಾ
5.ಅಂತರಾಷ್ಟ್ರೀಯ ದಿನರೇಖೆ 180 ಡಿಗ್ರಿ ಯಾವ ಜಲಸಂಧಿ ಮೂಲಕ ಹಾದು ಹೋಗಿದೆ..?
ಎ. ಬೇರಿಂಗ್ ಜಲಸಂಧಿ
ಬಿ. ಡೇವಿಸ್ ಜಲಸಂಧಿ
ಸಿ. ಜಿಬ್ರಾಲ್ಟರ್
ಡಿ. ಯಾವುದೂ ಅಲ್ಲ
6. ಅಂತರಾಷ್ಟ್ರೀಯ ದಿನರೇಖೆ 180 ಡಿಗ್ರಿ ಫೆಸಿಪಿಕ್ ಸಾಗರದ ಯಾವ ದ್ವೀಪದ ಹತ್ತಿರ ಡೊಂಕಾಗಿದೆ..?
ಎ. ಅಲ್ಯೂಷಿಯಸ್ ದ್ವೀಪಗಳು
ಬಿ. ಹವಾಯಿ ದ್ವೀಪಗಳು
ಸಿ. ಸೊಲೋಮನ್ ದ್ವೀಪಗಳು
ಡಿ. ಸಾಂತಾಕುಝು ದ್ವೀಪಗಳು
7. ಯಾವ ವರ್ಷದಲ್ಲಿ 180 ಡಿಗ್ರಿ ರೇಖಾಂಶವನ್ನು ಅಂತರರಾಷ್ಟ್ರೀಯ ದಿನಾಂಕ ಎಂದು ಅಂಗೀಕರಿಸಲಾಗಿತ್ತು..?
ಎ. 1880
ಬಿ. 1890
ಸಿ. 1855
ಡಿ. 1884
8. ಒಬ್ಬ ಪ್ರಯಾಣಿಕನು ಅಂತರಾಷ್ಟ್ರೀಯ ರೇಖೆಯಿಂದ 180 ಡಿಗ್ರಿಯನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ಬಂದರೆ..
ಎ. ಒಂದು ದಿನ ಗಳಿಕೆಯಾಗುತ್ತದೆ.
ಬಿ. 12 ತಾಸು ವ್ಯತ್ಯಾಸವಾಗುತ್ತದೆ
ಸಿ. ಒಂದು ದಿನ ತೆಗೆದುಕೊಳ್ಳುವುದು
ಡಿ. ಯಾವುದೇ ವ್ಯತ್ಯಾಸವಾಗುವುದಿಲ್ಲ.
9. ಇಂಡಿಯನ್ ಸ್ಟಾಂಡರ್ಡ್ ಟೈಮ್ ಮತ್ತು ಗ್ರಿನ್ವಿಚ್ ಮಿರಿಡಿಯನ್ ನಡುವಿನ ವ್ಯತ್ಯಾಸ ಎಷ್ಟು..?
ಎ. 6 ಗಂಟೆ 30 ನಿಮಿಷ
ಬಿ. 6 .00 ಘಂಟೆ
ಸಿ. 5 ಘಂಟೆ 30 ನಿಮಿಷ
ಡಿ. 5.00 ಘಂಟೆ
10. ಒಬ್ಬ ವ್ಯಕ್ತಿಯು ಅತ್ಯಂತ ಸಮೀಪದ ಮಾರ್ಗದಲ್ಲಿ ಸಂಚರಿಸಲು ಬಯಸಿದರೆ ಆಗ ಆತನ ಆಯ್ಕೆ..
ಎ. ಮಾರುತಗಳ ದಿಕ್ಕು
ಬಿ. ನದಿಗಳ ಹರಿಯುವ ದಿಕ್ಕು
ಸಿ. ರೇಖಾಂಶ ಮಾರ್ಗ
ಡಿ. ಅಕ್ಷಾಂಶ ಮಾರ್ಗ
11. ಚಂದ್ರನು ಭೂಮಿಯ ಸಮೀಪ ಬಂದರೆ…….. ಎಂದು ಅರ್ಥ..
ಎ. ಅಪೋಜಿ
ಬಿ. ಪೆರಿಹೀಲಿಯಮ್
ಸಿ. ಅಪೀಲಯನ್
ಡಿ. ಪೆರಿಜಿ
12. ಚಂದ್ರನು ಭೂಮಿಯಿಂದ ದೂರ ಇರುವ ಅಂತರವನ್ನು ..
ಎ. ಪೆರಿಹೀಲಿಯನ್
ಬಿ. ಅಪೋಜಿ
ಸಿ. ಅಪೀಲಿಯನ್
ಡಿ. ಯಾವುದೂ ಅಲ್ಲ
13. ಚಂದ್ರಮಾಸವು ಸಾಮಾನ್ಯವಾಗಿ …—- ಒಳಗೊಂಡಿರುತ್ತದೆ.
ಎ.ಒಂದು ಅಮವಾಸ್ಯೆ ಮತ್ತು ಒಂದು ಹುಣ್ಣಿಮೆ
ಬಿ. ಎರಡು ಅಮವಾಸ್ಯೆ ಮತ್ತು ಒಂದು ಹುಣ್ಣಿಮೆ
ಸಿ. ಒಂದು ಅಮವಾಸ್ಯೆ ಮತ್ತು ಎರಡು ಹುಣ್ಣಿಮೆ
ಡಿ. ಅಮವಾಸ್ಯೆ ಮತ್ತು ಹುಣ್ಣಿಮೆಯನ್ನು ಕಾಣದೆ ಇರುವುದು.
14. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಉಂಟಾಗುವ ಗ್ರಹಣ ಯಾವುದು..?
ಎ. ಚಂದ್ರಗ್ರಹಣ
ಬಿ. ಸೂರ್ಯಗ್ರಹಣ
ಸಿ. ಭೂಮಿಗ್ರಹಣ
ಡಿ. ಗ್ರಹಣವೇ ಆಗುವುದಿಲ್ಲ
15. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಉಂಟಾಗುವ ಗ್ರಹಣ ಯಾವುದು..?
ಎ. ಚಂದ್ರಗ್ರಹಣ
ಬಿ. ಸೂರ್ಯಗ್ರಹಣ
ಸಿ. ನಕ್ಷತ್ರಗ್ರಹಣ
ಡಿ. ಗ್ರಹಣವೇ ಆಗುವುದಿಲ್ಲ
# ಉತ್ತರಗಳು :
1. ಬಿ. 15 ಡಿಗ್ರಿ ರೇಖಾಂಶ
2. ಎ. ಗ್ರೀನ್ವಿಚ್
3. ಬಿ. ಇಂಗ್ಲೆಂಡ್
4. ಬಿ. ಘಾನಾ
5. ಎ. ಬೇರಿಂಗ್ ಜಲಸಂಧಿ
6. ಎ. ಅಲ್ಯೂಷಿಯಸ್ ದ್ವೀಪಗಳು
7. ಡಿ. 1884
8. ಸಿ. ಒಂದು ದಿನ ತೆಗೆದುಕೊಳ್ಳುವುದು
9. ಸಿ. 5 ಘಂಟೆ 30 ನಿಮಿಷ
10. ಸಿ. ರೇಖಾಂಶ ಮಾರ್ಗ
11. ಡಿ. ಪೆರಿಜಿ
12. ಬಿ. ಅಪೋಜಿ
13. ಎ.ಒಂದು ಅಮವಾಸ್ಯೆ ಮತ್ತು ಒಂದು ಹುಣ್ಣಿಮೆ
14. ಎ. ಚಂದ್ರಗ್ರಹಣ
15. ಬಿ. ಸೂರ್ಯಗ್ರಹಣ
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್ಡಿಎ-ಎಫ್ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ