ಸಾಮಾನ್ಯ ಜ್ಞಾನ ಪ್ರಶೋತ್ತರಗಳ ಸರಣಿ – 01
1. ಹಟ್ಟಿ ಚಿನ್ನದ ಗಣಿ’ ರಾಯಚೂರು ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
# ಲಿಂಗಸೂಗೂರು.
2. ಧ್ವಜ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದ ‘ಗರಗ’ ಯಾವ ಜಿಲ್ಲೆಯಲ್ಲಿದೆ?
# ಧಾರವಾಡ
3. ” ಅಂತರರಾಷ್ಟ್ರೀಯ ಶಿಕ್ಷಕರ ದಿನವನ್ನು” ಯಾವಾಗ ಆಚರಿಸಲಾಗುತ್ತದೆ.?
# ಅಕ್ಟೋಬರ್ 5.
4. ” ದಾಸ್ ಕ್ಯಾಪಿಟಲ್ ” ಕೃತಿಯ ಕರ್ತೃ ಯಾರು?
# ಕಾರ್ಲಮಾರ್ಕ್ಸ.
5. “ಹೊನ್ನ ಬಿತ್ತೇವೂ ಹೊಲಕೆಲ್ಲ” ಯಾವ ವಿಶ್ವವಿದ್ಯಾಲಯದ ಘೋಷ ವಾಕ್ಯ ?
# ಜಾನಪದ ವಿಶ್ವವಿದ್ಯಾಲಯ.( ಗೋಟಗೋಡಿ ಶಿಗ್ಗಾವಿ ತಾಲ್ಲೂಕು ಹಾವೇರಿ ಜಿಲ್ಲಾ)
6. ಸಂವಿಧಾನದ 111 ನೇ ವಿಧಿ ಯಾವದಕ್ಕೆ ಸಂಬಂಧಿಸಿರುವದು.
# ವಿಟೋ ಅಧಿಕಾರ.
7. ವಿಜಯನಗರ ಸಾಮ್ರಾಜ್ಯದ ಕಾಲಾವಧಿ ತಿಳಿಸಿ?
# 1336-1565.
8. ಮಾನಸ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
# ಅಸ್ಸಾಂ.
9. “ಹಜಾರಿಭಾಗ್” ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
# ಜಾರ್ಖಂಡ್.
10. ವಿಶ್ವಸಂಸ್ಥೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
# ಅಕ್ಟೋಬರ್ 24. (ಸ್ಥಾಪನೆ 1945)
11. ಪ್ರಪಂಚದ ಅತ್ಯಂತ ಚಿಕ್ಕ ಹೂವು ಯಾವುದು?
# ವೂಲ್ಫಿಯಾ
12. ಅತಿ ಹೆಚ್ಚು ರಾಜ್ಯ ಹೆದ್ದಾರಿ ಹೊಂದಿದ ಜಿಲ್ಲೆ ಯಾವುದು?
# ಬೆಳಗಾವಿ
13. ಶಿವರಾಮ ಕಾರಂತರ ನೆನಪುಗಳನ್ನು ಬಿಂಬಿಸುವ “ಥೀಮ್ ಪಾರ್ಕ್” ಎಲ್ಲಿದೆ?
# ಉಡುಪಿ ಜಿಲ್ಲೆಯ ಕೋಟಾದಲ್ಲಿದೆ.
14. “ರಾಷ್ಟ್ರೀಯ ಹುತಾತ್ಮರ ದಿನ”ವನ್ನು ಯಾವಾಗ ಆಚರಿಸಲಾಗುತ್ತದ?
# ಜನವರಿ 30.
15. ” ರಾಧಾ ರಾಣಿ ” ಕೃತಿಯ ಕರ್ತೃ?
# ಬಂಕಿಮ ಚಂದ್ರ ಚಟರ್ಜಿ.
16. ನೊವಾಕ್ ಜೋಕೊವಿಚ್ ಯಾವ ದೇಶದವರು?
# ಸರ್ಬಿಯಾ.
17. “ಕಿತ್ತಳೆ ನಗರಿ” ಎಂದು ಯಾವ ಸ್ಥಳವನ್ನು ಕರೆಯುತ್ತಾರೆ?
# ನಾಗಪುರ (ಮಹಾರಾಷ್ಟ್ರ)
18. ಅಕ್ಬರ್ ನು “ದಿನ್-ಇ-ಇಲಾಹಿ” ಎಂಬ ಹೊಸ ಧರ್ಮ ಸ್ಥಾಪಿಸಿದ್ದು ಯಾವಾಗ?
# ಕ್ರಿ.ಶ.1582
19. ಹಳದಿ ಘಾಟ್ ಯುದ್ದ ನಡೆದದ್ದು ಯಾವಾಗ?
# 1576
(ಅಕ್ಬರ್ ಹಾಗೂ ರಾಣಾಪ್ರತಾಪ ನಡುವೆ)
20. “ಪಾಲಿಟಿಕ್ಸ್” ಕೃತಿಯ ಕರ್ತೃ ಯಾರು?
# ಅರಿಸ್ಟಾಟಲ್.
21 ” ಅಂತರ ರಾಷ್ಟ್ರೀಯ ವೃದ್ಧರ ದಿನ”ವನ್ನು ಯಾವಾಗ ಆಚರಿಸಲಾಗುತ್ತದ?
# ಅಕ್ಟೋಬರ್ 1.
22. ಆಂಡ್ರಿ ಮರ್ರೆ ಯಾವ ದೇಶದ ಟೆನಿಸ್ ಆಟಗಾರ ?
# ಬ್ರಿಟನ್.
23. ಶಿವಾಜಿಯು ಎರಡನೇ ಬಾರಿಗೆ ಸಂಪದ್ಭರಿತ ವ್ಯಾಪಾರಿ ನಗರವಾದ ಸೂರತ್ ನ್ನು ಲೂಟಿ ಮಾಡಿದ್ದು ಯಾವಾಗ?
# 1670 ರಲ್ಲಿ.
24. ಮಾನವನ ಭ್ರೂಣದ ಗರ್ಭಾವಧಿಯು ಎಷ್ಟು ವಾರಗಳು / ಎಷ್ಟು ದಿನಗಳು?
# 38ರಿಂದ40 ವಾರಗಳು/280 ದಿನಗಳು.
25. “ಸ್ರೀಯರನ್ನು ನಡೆಸಿಕೊಳ್ಳುವ ರೀತಿ, ಒಂದು ದೇಶದ ಅಭಿವೃದ್ಧಿಯ ಉತ್ತಮ ಮಾಪನ. ಪಕ್ಷಿಯು ಒಂದೇ ರೆಕ್ಕೆಯಿಂದ ಹಾರುವುದು ಸಾಧ್ಯವಿಲ್ಲ.” ಎಂದವರು ಯಾರು?
# ಸ್ವಾಮಿವಿವೇಕಾನಂದ.