FDA ExamGKGK QuestionsMultiple Choice Questions SeriesQuizSDA examSpardha TimesTET - CET

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 2

Share With Friends

1. ಸಾರಿಸ್ಕ ಹುಲಿ ಉದ್ಯಾನವು ಯಾವ ರಾಜ್ಯದಲ್ಲಿದೆ..?
ಎ. ರಾಜಸ್ಥಾನ       ಬಿ. ಉತ್ತರ ಪ್ರದೇಶ
ಸಿ. ಗುಜರಾತ್      ಡಿ. ಮಧ್ಯಪ್ರದೇಶ

2. ಚಿಲ್ಕಾ ಸರೋವರವು ಯಾವ ರಾಜ್ಯದಲ್ಲಿದೆ..?
ಎ. ಮಹಾರಾಷ್ಟ್ರ         ಬಿ. ಒರಿಸ್ಸಾ
ಸಿ. ಪಶ್ಚಿಮ ಬಂಗಾಳ   ಡಿ. ಗುಜರಾತ್

3. ಪರ್ಯಾಯ ದ್ವೀಪವೆಂದರೆ ಹೆಚ್ಚು ಕಡಿಮೆ ಸಂಪೂರ್ಣ – ಸುತ್ತುವರಿಯಲ್ಪಟ್ಟ ಭೂಭಾಗ..?
ಎ. ಪರ್ವತಗಳಿಂದ
ಬಿ. ಅರಣ್ಯಗಳಿಂದ
ಸಿ. ನೀರಿನಿಂದ/ ಸಮುದ್ರದಿಂದ
ಡಿ. ಇವು ಯಾವೂದು ಅಲ್ಲ

4. ಯಾವ ರಾಷ್ಟ್ರಗಳ ಭೂ ಗಡಿ ರೇಖೆಯಲ್ಲಿ ‘ ವಾಘಾ’ ಇದೆ..?
ಎ. ಭಾರತ – ನೇಪಾಳ
ಬಿ. ಭಾರತ – ಪಾಕಿಸ್ತಾನ
ಸಿ. ಭಾರತ – ಚೀನಾ
ಡಿ. ಪಾಕಿಸ್ತಾನ – ಚೀನಾ

5. ಭಾರತದ ಅತೀ ಹೆಚ್ಚು ವಿಸ್ತೀರ್ಣದಲ್ಲಿ ಆವರಿಸಿರುವ ಮಣ್ಣು ಯಾವುದು..?
ಎ. ಕೆಂಪು ಮಣ್ಣು     ಬಿ. ಕಪ್ಪು ಮಣ್ಣು
ಸಿ. ಮೆಕ್ಕಲು ಮಣ್ಣು  ಡಿ. ಜಂಬಿಟ್ಟಿಗೆ ಮಣ್ಣು

6. ಭಾರತದ ಮೊದಲ ಜೈವಿಕ ತಾಣವನ್ನು ಎಲ್ಲಿ ಸ್ಥಾಪಿಸಲಾಯಿತು..?
ಎ. ಗ್ರೇಟ್ ನಿಕೋಬಾರ್
ಬಿ. ಮನ್ನಾರ್ ಖಾರಿ
ಸಿ. ನೀಲಗಿರಿ             ಡಿ. ನಂದಾದೇವಿ

7. ಈ ಕೆಳಗಿನವುಗಳಲ್ಲಿ ಮಹಾರಾಷ್ಟರದಲ್ಲಿರುವ ಬೀಚ್ ಯಾವುದು..?
ಎ. ಎರಂಗಲ್ ಬೀಚ್
ಬಿ. ಗೋರ್ಯಾ ಬೀಚ್
ಸಿ. ಆಲಿಬಾಂಗ್ ಬೀಚ್
ಡಿ. ದೇವಬಾಗ್ ಬೀಚ್

8. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಮುಖ ಗೋಧಿ ಬೆಳೆಯುವ ರಾಜ್ಯವಲ್ಲ..?
ಎ. ಪಂಜಾಬ್          ಬಿ. ಹರಿಯಾಣ
ಸಿ. ಮಧ್ಯಪ್ರದೇಶ     ಡಿ. ತಮಿಳುನಾಡು

9. ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ..?
ಎ. ಮಹಾನದಿ        ಬಿ. ಗಂಗಾ ನದಿ
ಸಿ. ಗೋದಾವರಿ      ಡಿ. ಬ್ರಹ್ಮಪುತ್ರ

10. ಕಾಂಚನ್‍ಜುಂಗಾ ರಾಷ್ಟ್ರೀಯ ಉದ್ಯಾನವು ಎಲ್ಲಿದೆ..?
ಎ. ಮಧ್ಯಪ್ರದೇಶ       ಬಿ. ನಾಗಲ್ಯಾಂಡ್
ಸಿ. ಮೇಘಾಲಯ       ಡಿ. ಸಿಕ್ಕಿಂ

11. ಭಾರತದ ಪ್ರಮುಖ ನೀರಾವರಿ ಮೂಲ ಯಾವುದು..?
ಎ. ಕಾಲುವೆ ನೀರಾವರಿ
ಬಿ. ಕೆರೆ ನೀರಾವರಿ
ಸಿ. ಬಾವಿ ಮತ್ತು ಕೊಳವೆ ಬಾವಿ ನೀರಾವರಿ
ಡಿ. ಇತರೆ ಮೂಲಗಳು

12. ಜಾರವಾಸ್ ಬುಡಕಟ್ಟು ಜನಾಂಗವು ಎಲ್ಲಿ ಕಂಡು ಬರುತ್ತವೆ..?
ಎ. ಅಸ್ಸಾಂ     ಬಿ. ಬಿಹಾರ
ಸಿ. ಸಿಕ್ಕಿಂ       ಡಿ. ಅಂಡಮಾನ್ ಮತ್ತು ನಿಕೋಬಾರ್

13. ಜಂಬಿಟ್ಟಿಗೆ ಮಣ್ಣು ಈ ಕೆಳಗಿನ ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ..?
ಎ. ಗುಜರಾತ್ ಮತ್ತು ರಾಜಸ್ಥಾನ
ಬಿ. ಕರ್ನಾಟಕ ಮತ್ತು ತಮಿಳುನಾಡು
ಸಿ. ಹರಿಯಾಣ ಮತ್ತು ಪಂಜಾಬ್
ಡಿ. ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ

14. ಈ ಕೆಳಗಿನ ಯಾವ ರೇಖೆಯು ಭಾರತದ ಯಾವುದೇ ಅಂತರಾಷ್ಟ್ರೀಯ ಗಡಿ ರೇಖೆಯಾಗಿಲ್ಲ..?
ಎ. ರ್ಯಾಡ್‍ಕ್ಲಿಫ್ ಲೈನ್
ಬಿ. ಡುರ್ಯಾಂಡ್ ಲೈನ್
ಸಿ. ಮ್ಯಾಕ್ ಮೋಹನ್ ಲೈನ್
ಡಿ. ಸರ್ ಕ್ರಿಕ್ ಲೈನ್

15. ಭಾರತದ ನೆರೆಯಲ್ಲಿರುವ ಕುದುರೆ ಲಾಳಾಕಾರದ ಹವಳದ ದ್ವೀಪಕ್ಕೆ ಉದಾಹರಣೆ ಯಾವುದು..?
ಎ. ಮಾಲ್ದೀವ್ಸ್     ಬಿ. ಶೀಲಂಕಾ
ಸಿ. ಲಕ್ಷದ್ವೀಪ       ಡಿ. ಅಂಡಮಾನ ಮತ್ತು ನಿಕೋಬಾರ್

16. ಸರ್ದಾರ್ ಸರೋವರ ಯೋಜನೆಯ ಉಪಯೋಗ ಪಡೆಯುವ ರಾಜ್ಯಗಳಾವುವು..?
ಎ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ
ಬಿ. ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ
ಸಿ. ಮಹಾರಾಷ್ಟ್ರ, ಕರ್ನಾಟಕ ಮಧ್ಯಪ್ರದೇಶ ಮತ್ತು ರಾಜಸ್ಥಾನ
ಡಿ. ಗುಜರಾತ್, ಕರ್ನಾಟಕ, ಉತ್ತರಪ್ರದೇಶ ಮತ್ತು ಒರಿಸ್ಸಾ

17. ಪಶ್ಚಿಮ ಬಂಗಾಳವು ಎಷ್ಟು ಪರ ರಾಷ್ಟ್ರಗಳೊಂದಿಗೆ ಗಡಿಯನ್ನು ಹೊಂದಿದೆ..?
ಎ. ಒಂದು      ಬಿ. ಎರಡು
ಸಿ. ಮೂರು     ಡಿ. ನಾಲ್ಕು

18. ಸ್ಪಿತಿ ( ಕಣಿವೆ) ನದಿಯು ಯಾವ ನದಿಗೆ ಸೇರುತ್ತದೆ..?
ಎ. ಸಟ್ಲೆಜ್           ಬಿ. ಬಿಯಾಸ್
ಸಿ. ಚೀನಾಬ್       ಡಿ. ರಾವಿ

19. ಹರಿಯಾಣದಲ್ಲಿರುವ ಪ್ರಖ್ಯಾತ ಪಕ್ಷಿಧಾಮ ಯಾವುದು..?
ಎ. ಸುಲ್ತಾನಪುರ      ಬಿ. ಭರತ್‍ಪುರ್
ಸಿ. ರಾಜಾಜಿ          ಡಿ. ಸಾರಿಸ್ಕ

20. ಕೊಚಿನ್‍ನ ಅವಳಿ ನಗರ ಯಾವುದು..?
ಎ. ಅಲಪುಜ       ಬಿ. ತ್ರಿಚೂರ್
ಸಿ. ಎರ್ನಾಕುಲಂ   ಡಿ. ಅಲುವ

21. ಯಾವ ರಾಜ್ಯವು ಬಾಂಗ್ಲಾದೇಶದಿಂದ ಮೂರು ಬದಿಗಳಲ್ಲಿ ಸುತ್ತುವರೆದಿದೆ..?
ಎ. ಮಿಜೋರಾಂ         ಬಿ. ಮೇಘಾಲಯ
ಸಿ. ಪಶ್ಚಿಮ ಬಂಗಾಳ     ಡಿ. ತ್ರಿಪುರ

22. ಭಾರತದಲ್ಲಿ ಅತೀ ಹೆಚ್ಚು ಕಾಲುವೆ ನೀರಾವರಿ ವ್ಯವಸ್ಥೆಯನ್ನು ಹೊಂದಿರುವ ರಾಜ್ಯ ಯಾವುದು..?
ಎ. ಪಂಜಾಬ್         ಬಿ. ಆಂದ್ರಪ್ರದೇಶ
ಸಿ. ಮಧ್ಯಪ್ರದೇಶ    ಡಿ. ಉತ್ತರ ಪ್ರದೇಶ

23. ಭಾರತದಲ್ಲಿ ಮಾನ್ಸೂನ್ ಅರಣ್ಯಗಳು ಎಲ್ಲಿ ಕಂಡು ಬರುತ್ತವೆ..?
ಎ. ಮಧ್ಯ ಭಾರತ
ಬಿ. ಪೂರ್ವ ಭಾರತ
ಸಿ. ಈಶಾನ್ಯ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು
ಡಿ. ವಾಯುವ್ಯ ಹಿಮಾಲಯ ಮತ್ತು ಪೂರ್ವಬೆಟ್ಟಗಳು

24. ಜೆಮ್‍ಷೆಡ್‍ಪುರ ಯಾವ ನದಿಯ ದಡದ ಮೇಲಿದೆ..?
ಎ. ದಾಮೋದರ     ಬಿ. ಗಂಗಾ
ಸಿ. ಮೂಸಿ            ಡಿ. ಸುವರ್ಣರೇಖ

25. ಈ ಕೆಳಗಿನವುಗಳಲ್ಲಿ ಯಾವುದನ್ನು ಸಹ್ಯಾದ್ರಿ ಪರ್ವತ ಶ್ರೇಣಿಗಳು ಎಂತಲೂ ಕರೆಯುತ್ತಾರೆ..?
ಎ. ಪಶ್ಚಿಮ ಘಟ್ಟಗಳು      ಬಿ. ಪೂರ್ವ ಘಟ್ಟಗಳು
ಸಿ. ವಿಂಧ್ಯಾಪರ್ವತ        ಡಿ. ಶಿವಾಲಿಕ

ಉತ್ತರಗಳು:

1. ಸಿ. ಗುಜರಾತ್
2.ಬಿ. ಒರಿಸ್ಸಾ
3.ಸಿ. ನೀರಿನಿಂದ/ ಸಮುದ್ರದಿಂದ
4.ಬಿ. ಭಾರತ – ಪಾಕಿಸ್ತಾನ
5.ಸಿ. ಮೆಕ್ಕಲು ಮಣ್ಣು
6.ಸಿ. ನೀಲಗಿರಿ
7.ಡಿ. ದೇವಬಾಗ್ ಬೀಚ್
8.ಡಿ. ತಮಿಳುನಾಡು
9.ಬಿ. ಗಂಗಾ ನದಿ
10. ಡಿ. ಸಿಕ್ಕಿಂ
11.ಸಿ. ಬಾವಿ ಮತ್ತು ಕೊಳವೆ ಬಾವಿ ನೀರಾವರಿ
12.ಡಿ. ಅಂಡಮಾನ್ ಮತ್ತು ನಿಕೋಬಾರ್
13.ಡಿ. ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ
14.ಬಿ. ಡುರ್ಯಾಂಡ್ ಲೈನ್
15.ಸಿ. ಲಕ್ಷದ್ವೀಪ
16.ಎ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ
17.ಸಿ. ಮೂರು
18.ಎ. ಸಟ್ಲೆಜ್
19.ಎ. ಸುಲ್ತಾನಪುರ
20.ಸಿ. ಎರ್ನಾಕುಲಂ
21.ಡಿ. ತ್ರಿಪುರ
22.ಡಿ. ಉತ್ತರ ಪ್ರದೇಶ
23.ಸಿ. ಈಶಾನ್ಯ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು
24.ಡಿ. ಸುವರ್ಣರೇಖ
25.ಎ. ಪಶ್ಚಿಮ ಘಟ್ಟಗಳು

 

 

Leave a Reply

Your email address will not be published. Required fields are marked *