Monday, November 25, 2024
Latest:
GKHistory

ಹಿಂದೂ ಧರ್ಮ ಕುರಿತ ಕೆಲವು ಪ್ರಮುಖ ಅಂಶಗಳು

Share With Friends

ಹಿಂದು ಧರ್ಮವು ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ.

ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ “ದೈನಿಕ ಸದಾಚಾರ”ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.

# ಇತಿಹಾಸ :
ಹಿಂದೂ ಧರ್ಮವು ಭಾರತಕ್ಕೆ ಸ್ಥಳೀಯವಾದ ಸಂಬಂಧಿತ ಧಾರ್ಮಿಕ ಸಂಪ್ರದಾಯಗಳ ವ್ಯಾಪಕ ವೈವಿಧ್ಯಕ್ಕೆ ಒಂದು ಪದ. ಐತಿಹಾಸಿಕವಾಗಿ, ಅದು ಕಬ್ಬಿಣ ಯುಗದ ಸಂಪ್ರದಾಯಗಳಿಂದ ಭಾರತದಲ್ಲಿ ಧರ್ಮದ ಬೆಳವಣಿಗೆಯನ್ನು ಒಳಗೊಳ್ಳುತ್ತದೆ, ಮತ್ತು ಇವು ಪ್ರತಿಯಾಗಿ ಕಂಚಿನ ಯುಗದ ಸಿಂಧೂ ಕಣಿವೆಯ ನಾಗರಿಕತೆ ಮತ್ತು ತರುವಾಯ ಕಬ್ಬಿಣ ಯುಗದ ಐತಿಹಾಸಿಕ ವೈದಿಕ ಬ್ರಹ್ಮಣರ ಧರ್ಮದಂತಹ ಪ್ರಾಗೈತಿಹಾಸಿಕ ಧರ್ಮಗಳಿಗೆ ಹಿಂದಿರುಗುತ್ತವೆ. ಕ್ರಿ.ಪೂ. ೮೦೦ ಮತ್ತು ಕ್ರಿ.ಪೂ. ೨೦೦ರ ನಡುವಿನ ಅವಧಿಯು ವೈದಿಕ ಧರ್ಮ ಹಾಗು ಹಿಂದೂ ಧರ್ಮಗಳ ನಡುವೆ ಒಂದು ಸಂಧಿಕಾಲವಾಗಿದೆ ಮತ್ತು ಹಿಂದೂ ಧರ್ಮ, ಜೈನ ಧರ್ಮ ಹಾಗು ಬೌದ್ಧ ಧರ್ಮಕ್ಕೆ ಒಂದು ರೂಪಗೊಳ್ಳುವಿಕೆಯ ಅವಧಿಯಾಗಿದೆ.

➤ ಭಾರತದ ಅತೀ ಪ್ರಾಚೀನ ಧರ್ಮ – ಹಿಂಧೂ ಧರ್ಮ
➤ ಹಿಂಧೂ ಧರ್ಮವನ್ನು ಈ ಹೆಸರಿನಿಂದಲೂ ಕರೆಯುವರು – ಸನಾತನ ಧರ್ಮ
➤ ಹಿಂಧೂ ಎಂಬ ಪದ ಈ ಭಾಷೆಯಿಂದ ಬಂದಿದೆ – ಪರ್ಶಿಯನ್
➤ ಸಿಂಧೂ ದೇಶವನ್ನು ಹಿಂಧೂ ಎಂದು ಕರೆದವರು – ಪರ್ಶಿಯನ್ನರು
➤ ಹಿಂದೂ ಧರ್ಮದ ಸಂಕೇತ – ಪ್ರಣವ ಅಥವಾ ಓಂ
➤ ಪ್ರಣವ ಪದದ ಅರ್ಧ – ಸದಾ ನೂತನ ಅಥವಾ ಆ ಮೂಲಕ
➤ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ
➤ ಹಿಂದೂ ಧರ್ಮದ ಇತರ ಹೆಸರುಗಳು – ವೈಧಿಕ ಧರ್ಮ , ಆರ್ಯ ಧರ್ಮ
➤ ಹಿಂದೂ ಧರ್ಮದ ಮೂಲ ಗ್ರಂಥಗಳ ವಿಭಾಗಗಳು – ಶೃತಿ ಮತ್ತು ಸ್ಮೃತಿ (ಶೃತಿ ಎಂದರೆ – ಕೇಳಿಸಿಕೊಂಡಿದ್ದು ಎಂದರ್ಥ, ಸ್ಮೃತಿ ಎಂದರೆ – ನೆನಪಿನಲ್ಲಿ ಉಳಿದದ್ದು ಎಂದರ್ಥ
➤ ಭಗವದ್ಗೀತೆ – ಮಹಾಭಾರತದ ಒಂದು ಅಂಗವಾಗಿದೆ

# ಹಿಂದೂ ಧರ್ಮದ ತತ್ವಗಳು
ನಾಲ್ಕು ಪುರುಷಾರ್ಥಗಳು – ಧರ್ಮ ,ಅರ್ಥ , ಕಾಮ ಹಾಗೂ ಮೋಕ್ಷ
ನಾಲ್ಕು ಆಶ್ರಮಗಳು – ಬ್ರಹ್ಮಚಾರ್ಯ , ಗೃಹಸ್ಥ , ವಾನಪ್ರಸ್ಥ , ಸನ್ಯಾಸ
ಮೋಕ್ಷ ಹೊಂದಲು ಇರುವ ಮೂರು ಮಾರ್ಗ – ಜ್ಞಾನ , ಕರ್ಮ ಹಾಗೂ ಭಕ್ತಿ
ಚತುರ್ವರ್ಣಗಳು – ಬ್ರಾಹ್ಮಣ ,ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ

➤ ಹಿಂದೂ ಧರ್ಮ ಬೆಳೆದು ಬಂದ ಹಂತಗಳು
ವೇದಗಳ ಕಾಲ, ಆಚಾರ್ಯರ ಕಾಲ, . ಭಕ್ತಿಯುಗ, ಸುಧಾರಣಿಯ ಕಾಲ

➤ ಹಿಂದೂ ಧರ್ಮದ ಇತಿಹಾಸ – ಸುಮಾರು 5000 ವರ್ಷಗಳ ಹಿಂದಿನದು
➤ ವೇದಕಾಲದ ಜನರ ಅಭಿಮಾನ ದೇವತೆಗಳು – ಪ್ರಜಾಪತಿ , ರುದ್ರ , ಯಮ
➤ ಹಿಂದೂ ಧರ್ಮವು – ವೇದಗಳ ಉಪದೇಶಗಳ ಆಧಾರದ ಮೇಲೆ ನಿಂತಿದೆ
➤ ದಕ್ಷಿಣ ಭಾರತದಲ್ಲಿ ಹಿಂಧೂ ಧರ್ಮದಲ್ಲಿ ತೊಡಗಿದ್ದ ಪ್ರಥಮ
➤ ಆಚಾರ್ಯರು – ನಾಯನಾರಘಲು ಹಾಗೂ ಆಳ್ವಾರರು
➤ ದಕ್ಷಿಣ ಭಾರತದ ಪ್ರಸಿದ್ದ ಆಚಾರ್ಯ ತ್ರಯರು – ಶಂಕರಾಚಾರ್ಯ , ಮಧ್ವಾಚಾರ್ಯ ಹಾಗೂ ರಮಾನುಜಾಚಾರ್ಯ
➤ ಅದ್ವೈತ ಸಿದ್ದಾಂತದ ಪ್ರವರ್ತಕರು – ಶಂಕರಚಾರ್ಯ
➤ ಕಾಯಕ ತತ್ವದ ಪ್ರತಿಪಾದಕರು – ಬಸವಣ್ಣ
➤ ದ್ವೈತ ಸಿದ್ದಾಂತದ ಪ್ರತಿಪಾದಕರು – ಮಧ್ವಚಾರ್ಯರು
➤ ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರು – ರಾಮಾನುಜಾಚಾರ್ಯರು
➤  ನವಭಾರತದ ಪ್ರವಾದಿ ಎಂದು ಕರೆಸಿಕೊಂಡವರು – ರಾಜಾರಾಮ್ ಮೋಹನ್ ರಾಯ್
➤ ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು – ರಾಜ ರಾಮ್ ಮೋಹನ್ ರಾಯ್
➤ ಬ್ರಹ್ಮ ಸಮಾಜದ ಸ್ಥಾಪನೆಯಾದ ವರ್ಷ – 1928
➤ ನವೋದಯ ಧೃವ ತಾರೆ – ರಾಜರಾಮ್ ಮೋಹನ್ ರಾಯ್
➤ ಆರ್ಯ ಸಮಾಜದ ಸ್ಥಾಪಕರು – ಸ್ವಾಮಿ ದಯಾನಂದ ಸರಸ್ವತಿ
➤ ಆರ್ಯ ಸಮಾಜದ ಸ್ಥಾಪನೆಯಾದ ವರ್ಷ – 1875 ರಲ್ಲಿ
➤ ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು – ದಯಾನಂದ ಸರಸ್ವತಿ
➤ ಸ್ವಾಮಿ ಶಿವನಂದರ ಪ್ರಮುಖ ಸಂಘ ಸಂಸ್ಥೆಗಳು – Devine life Sociaty , ➤ ಸಾಧು ಸಮಾಜ , ಹಾಗೂ ದಿ ಹಿಂದೂ ಪರಿಷತ್

 

Leave a Reply

Your email address will not be published. Required fields are marked *

error: Content Copyright protected !!