ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
1. ಯಮುನಾ ನದಿ ತೀರದಲ್ಲಿ ಮುಬಾರಕಾಬಾದ್ ಎಂಬ ನಗರವನ್ನು ನಿರ್ಮಿಸಿದವರು ಯಾರು..?
ಎ. ಮುಬಾರಕ್ ಶಾ
ಬಿ. ಅಲ್ತಮಸ್
ಸಿ. ಬಲ್ಬಾನ್
ಡಿ. ಇವರು ಯಾರೂ ಅಲ್ಲ
2. ಪ್ರಾಚೀನ ಕಾಲದಲ್ಲಿ ಹೆಸರಾಂತ ‘ದಶ ಅರಸರ ಯುದ್ಧ’ವು ಯಾವ ನದಿಯ ದಡದ ಮೇಲೆ ನಡೆಯಿತು..?
ಎ. ಸಿಂಧೂ
ಬಿ. ಗಂಗಾ
ಸಿ. ರಾವಿ
ಡಿ. ಚೀನಾಬ್
3. ಯಾರ ಆಡಳಿತಾವಧಿಯಲ್ಲಿ ಗ್ರಾಮೀಣ ಜನರು ಸಾಕಷ್ಟು ಅಧಿಕಾರ ಪಡೆದರು..?
ಎ. ಪಲ್ಲವರು
ಬಿ. ಚೋಳರು
ಸಿ. ಗಂಗರು
ಡಿ. ಗುಪ್ತರು
4. ‘ಪಂಚತಂತ್ರ’ವನ್ನು ಬರೆದವರು ಯಾರು..?
ಎ. ವಾಲ್ಮೀಕಿ
ಬಿ. ವಿಷ್ಣುಶರ್ಮ
ಸಿ. ಭವಭೂತಿ
ಡಿ. ಅಶ್ವಘೋಷ
5. ಸಿಂಧೂ ಬಯಲಿನ ನಾಗರೀಕತೆಗೆ ಸೇರಿದ ಕಾಲಿಬಂಗಾನ್ ನಿವೇಶನವು ಯಾವ ರಾಜ್ಯದಲ್ಲಿದೆ..?
ಎ.ಗುಜರಾತ್
ಬಿ. ಪಂಜಾಬ್
ಸಿ. ರಾಜಸ್ಥಾನ
ಡಿ. ಉತ್ತರ ಪ್ರದೇಶ
6. ಕಲ್ಕತ್ತಾದಲ್ಲಿ 1800 ರಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದವರು ಯಾರು..?
ಎ. ಲಾರ್ಡ್ ಮೆಕಾಲೆ
ಬಿ. ಲಾರ್ಡ್ ಲಿಟ್ಟನ್
ಸಿ. ಲಾರ್ಡ್ ವೆಲ್ಲೆಸ್ಲಿ
ಡಿ. ಲಾಡ್ ಹೇಸ್ಟಿಂಗ್ಸ್
7. ಸಿಂಧೂ ಬಯಲಿನ ನಾಗರೀಕತೆಗೆ ಸೇರಿದ ಯಾವ ನಿವೇಶನದಲ್ಲಿ ಸಾರ್ವಜನಿಕ ಈಜುಕೊಳ ದೊರೆತಿದೆ..?
ಎ. ಹರಪ್ಪ
ಬಿ. ಲೋಥಾಲ್
ಸಿ. ಕಾಲಿಬಂಗಾನ್
ಡಿ. ಮೊಹೆಂಜೊದಾರೋ
8. ‘ಇಂಡಿಯಾ ವಿನ್ಸ್ ಫ್ರೀಡಂ’ ಕೃತಿಯನ್ನು ಬರೆದವರು ಯಾರು..?
ಎ. ಮಹಾತ್ಮಾಗಾಂಧಿ
ಬಿ. ಮೌಲಾನಾ ಅಬ್ದುಲ್ ಕಲಾಂ ಆಜಾದ್
ಸಿ. ಅಬ್ದುಲ್ ಗಫಾರ್ ಖಾನ್
ಡಿ. ಇವರು ಯಾರೂ ಅಲ್ಲ
9. ಅಕ್ಬರನ ಗುರು ಯಾರು..?
ಎ. ಅಬ್ದುಲ್ ಫಜಲ್
ಬಿ. ಅಬ್ದುಲ್ ಲತೀಫ್
ಸಿ. ಬೈರಾಂ ಖಾನ್
ಡಿ. ಇವರು ಯಾರು ಅಲ್ಲ
10. ಶಿವಾಜಿಯ ರಾಜಧಾನಿ ಯಾವುದಾಗಿತ್ತು..?
ಎ. ನಾಗಪುರ
ಬಿ. ಕಾನ್ಪುರ
ಸಿ. ಮುಂಬಯಿ
ಡಿ. ರಾಯಗಢ
11. ಮೆಹ್ರೌಲಿ ಕಬ್ಬಿಣ ಸ್ಥಂಭವು ಯಾರ ಸಾಧನೆಗಳನ್ನು ದಾಖಲಿಸಿದೆ..?
ಎ. ಅಶೋಕ
ಬಿ. ಚಂದ್ರಗುಪ್ತ ಮೌರ್ಯ
ಸಿ. ಸಮುದ್ರ ಗುಪ್ತ
ಡಿ. ಎರಡನೇ ಚಂದ್ರಗುಪ್ತ
12. ‘ಅಕ್ಬರ್ನಾಮ’ ವನ್ನು ಬರೆದವರು ಯಾರು..?
ಎ. ಅಬ್ದುಲ್ ಫಜಲ್
ಬಿ. ಬದೌನಿ
ಸಿ. ಕಾಫಿಖಾನ್
ಡಿ. ಶೆಕ್ ಫೈಜಿ
13. ‘ವಾತಾಪಿಕೊಂಡ’ ಎಂಬ ಬಿರುದನ್ನು ಹೊಂದಿದ್ದ ಭಾರತದ ಪ್ರಾಚೀನ ದೊರೆ ಯಾರು..?
ಎ. ಇಮ್ಮಡಿ ಪುಲಿಕೇಶಿ
ಬಿ. ಮಯೂರವರ್ಮ
ಸಿ. ಇಮ್ಮಡಿ ವಿಕ್ರಮಾದಿತ್ಯ
ಡಿ. ನರಸಿಂಹವರ್ಮ
14. ಈ ಕೆಳಗಿನ ಯಾವ ಸಂತತಿಯು ತನ್ನ ನೌಕಾ ಬಲಕ್ಕೆ ಹೆಸರುವಾಸಿಯಾಗಿತ್ತು..?
ಎ. ಚೋಳ
ಬಿ. ರಾಷ್ಟ್ರಕೂಟ
ಸಿ. ಪಾಂಡ್ಯ
ಡಿ. ಪಲ್ಲವ
15. ಆಯುರ್ವೇದ ತಜ್ಞರಾದ ಚರಕ ಮತ್ತು ಸುಶೃತರು ಯಾರ ಕಾಲದಲ್ಲಿ ಜೀವಿಸಿದ್ದರು..?
ಎ. ಗುಪ್ತರು
ಬಿ. ಮೌರ್ಯರು
ಸಿ. ಮೊಗಲರು
ಡಿ. ಪಲ್ಲವರು
# ಉತ್ತರಗಳು :
1. ಎ. ಮುಬಾರಕ್ ಶಾ
2. ಸಿ. ರಾವಿ
3. ಬಿ. ಚೋಳರು
4. ಬಿ. ವಿಷ್ಣುಶರ್ಮ
5. ಸಿ. ರಾಜಸ್ಥಾನ
6. ಸಿ. ಲಾರ್ಡ್ ವೆಲ್ಲೆಸ್ಲಿ
7. ಡಿ. ಮೊಹೆಂಜೊದಾರೋ
8. ಬಿ. ಮೌಲಾನಾ ಅಬ್ದುಲ್ ಕಲಾಂ ಆಜಾದ್
9. ಬಿ. ಅಬ್ದುಲ್ ಲತೀಫ್
10. ಡಿ. ರಾಯಗಢ
11. ಡಿ. ಎರಡನೇ ಚಂದ್ರಗುಪ್ತ
12. ಎ. ಅಬ್ದುಲ್ ಫಜಲ್
13. ಡಿ. ನರಸಿಂಹವರ್ಮ
14. ಎ. ಚೋಳ
15. ಎ. ಗುಪ್ತರು
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)