ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
1. ಬಂಗಾಳದಲ್ಲಿ ‘ ಖಾಯಂ ಜಮೀನ್ದಾರಿ ಪದ್ಧತಿ’ಯನ್ನು ಜಾರಿಗೆ ತಂದವರು ಯಾರು?
ಎ. ಲಾರ್ಡ್ ವೆಲ್ಲೆಸ್ಲಿ
ಬಿ. ಲಾರ್ಡ್ ಕಾರನ್ವಾಲೀಸ್
ಸಿ. ಲಾರ್ಡ್ ಕ್ಲೈವ್
ಡಿ. ಲಾರ್ಡ್ ಹೇಸ್ಟಿಂಗ್ಸ್
2. ಕಾನೂನುಬಂಗ ಚಳುವಳಿ ಆರಂಭವಾದಾಗ ಯಾರು ಭಾರತದ ವೈಸರಾಯ್ ಆಗಿದ್ದರು?
ಎ. ಲಾರ್ಡ್ ರೀಡಿಂಗ್
ಬಿ. ಲಾರ್ಡ್ ಇರ್ವಿನ್
ಸಿ. ಲಾರ್ಡ್ ವೇವೆಲ್
ಡಿ.ಲಾರ್ಡ್ ಚೆಮ್ಸ್ಪೋರ್ಡ್
3. ಅರುಣ ಅಸಫ್ ಅಲಿಯವರು ಈ ಕೆಳಗಿನ ಯಾವುದಕ್ಕೆ ಸಂಬಧಿಸಿದ್ದಾರೆ?
ಎ. ಕ್ವಿಟ್ ಇಂಡಿಯಾ ಚಳುವಳಿ
ಬಿ. ಖಿಲಾಫತ್ ಚಳುವಳಿ
ಸಿ. ಬಾರ್ಡೋಲಿ ಸತ್ಯಾಗ್ರಹ
ಡಿ. ಕಾಯ್ದೆ ಭಂಗ ಚಲುವಳಿ
4. 1905 ರಲ್ಲಿ ಭಾರತ ಸೆವಕ ಸಂಘವನ್ನು ಯಾರು ಸ್ಥಾಪಿಸಿದರು?
ಎ. ರಾಜೇಂದ್ರ ಪ್ರಸಾದ್
ಬಿ. ನರೇಂದ್ರ ದೇವ್
ಸಿ. ಗೋಪಾಲಕೃಷ್ಣ ಗೋಖಲೆ
ಡಿ.ಸಿ. ಆರ್. ದಾಸ್
5. ಚೌಸ ಕದನವು ಯಾರ ಯಾರ ನಡುವೆ ನಡೆಯಿತು?
ಎ. ಹುಮಾಯೂನ್ ಮತ್ತು ಶೇರ್ಶಾ
ಬಿ. ಗುಜರಾತ್ನ ಬಹದ್ದೂರ್ ಶಾ ಮತ್ತು ಹುಮಾಯೂನ್
ಸಿ. ಜಹಾಂಗೀರ್ ಮತ್ತು ರಾಣಾ ಅಮರ್ಸಿಂಗ್
ಡಿ. ಅಕ್ಬರ್ ಮತ್ತು ರಾಣಾಪ್ರತಾಪ್
6. ಸಿಂಧೂನದಿ ಕಣಿವೆಯಲ್ಲಿ ನಡೆದ ಉತ್ಖನನವು ಭಾರತದ ಇತಿಹಾಸದ ಪ್ರಾಚೀನತೆಯನ್ನು ಎಲ್ಲಗೆ ತಳ್ಳಿತು?
ಎ. ಕ್ರಿ.ಪೂ. 5000
ಬಿ. ಕ್ರಿ.ಪೂ 4000
ಸಿ. ಕ್ರಿ.ಪೂ 2500
ಡಿ. ಕ್ರಿ.ಪೂ 1000
7. ಮಹಾಬಲಿಪುರಮನಲ್ಲಿನ ದೇವಾಲಯಗಳನ್ನು ಯಾವ ಸಂತತಿಗೆ ಸೇರಿದ ರಾಜರು ಕಟ್ಟಿಸಿದರು?
ಎ.ಪಲ್ಲವ
ಬಿ. ಕುಶಾನ
ಸಿ. ಗುಪ್ತ
ಡಿ. ಚೋಳ
8. 1904 ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಯಾರು ಸ್ಥಾಪಿಸಿದರು?
ಎ. ಲಾರ್ಡ್ ಬೆಂಟಿಂಕ್
ಬಿ. ಲಾರ್ಡ್ ಹಾರ್ಡಿಂಗ್
ಸಿ. ಲಾರ್ಡ್ ಕರ್ಜನ್
ಡಿ. ಇವರು ಯಾರೂ ಅಲ್ಲ
9. ಅಮೀರ್ ಖುಸ್ರೋ ಯಾರ ಆಸ್ಥಾನದ ಪ್ರಖ್ಯಾತ ಕವಿಯಾಗಿದ್ದನು?
ಎ. ಜಹಾಂಗೀರ್
ಬಿ. ಅಕ್ಬರ್
ಸಿ. ಅಲ್ಲಾವುದ್ದೀನ್ ಖಿಲ್ಜಿ
ಡಿ. ಇವರು ಯಾರೂ ಅಲ್ಲ
10. 1527 ರಲ್ಲಿ ಬಾಬರ್ ಮತ್ತು ರಜಪೂತರ ನಡುವೆ ನಡೆದ ಯುದ್ಧ ಯಾವುದು?
ಎ. ಕಣ್ವ ಕದನ
ಬಿ. ಘೋಗ್ರ ಕದನ
ಸಿ. ಚಾಂದೇರಿ ಕದನ
ಡಿ. ಪಾಣಿಪತ್ ಕದನ
11. ಮಧ್ಯ ಯುಗದಲ್ಲಿ ನಿರ್ಮಿತವಾದ ಲಿ0ಗರಾಜ ದೇವಾಲಯ ಎಲ್ಲಿದೆ?
ಎ. ಮಧುರೈ
ಬಿ. ಭುವನೇಶ್ವರ
ಸಿ. ಜೈಪುರ
ಡಿ. ಆಗ್ರಾ
12. ಫ್ರೆಂಚರಿಗೆ ಮಚಲೀಪಟ್ಟಣವನ್ನು ನೀಡಿದವರು ಯಾರು?
ಎ. ಮುಜಾಫರ್ ಜಂಗ್
ಬಿ. ಸಾಲಾಬತ್ ಜಂಗ್
ಸಿ. ಅಸಫ್ ಜಂಗ್
ಡಿ. ಇವರು ಯಾರೂ ಅಲ್ಲ
13. ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ‘ ಸಿಪಾಯಿ ದಂಗೆ’ಯು ಎಲ್ಲಿಂದ ಪ್ರಾರಂಭವಾಯಿತು?
ಎ. ಝಾನ್ಸಿ
ಬಿ. ಮೀರತ್
ಸಿ. ಆಗ್ರಾ
ಡಿ. ಗ್ವಾಲಿಯರ್
14. ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿಯು ಸ್ಥಾಪನೆಗೊಮಡದ್ದು ಯಾವಾಗ?
ಎ. 1930
ಬಿ. 1934
ಸಿ. 1942
ಡಿ. 1945
15. ಆಗ್ರಾದ ಮೋತಿ ಮಸೀದಿಯನ್ನು ಕಟ್ಟಿಸಿದವರು ಯಾರು?
ಎ. ಔರಂಗಜೇಬ
ಬಿ. ಹುಮಾಯೂನ್
ಸಿ. ಶಹಜಹಾನ್
ಡಿ. ಇವರು ಯಾರೂ ಅಲ್ಲ
16. 1556 ರ ಎರಡನೇ ಪಾಣಿಪತ್ ಕದನದಲ್ಲಿ ಹೇಮುವನ್ನು ಯಾರು ಸೋಲಿಸಿದರು?
ಎ. ಅಕ್ಬರ್
ಬಿ. ಬಾಬರ್
ಸಿ. ಹುಮಾಯೂನ್
ಡಿ. ಔರಂಗಜೇಬ
17. ಚೀನಾದ ಪ್ರವಾಸಿ ಫಾಹಿಯೂನ್ ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದನು?
ಎ. ಹರ್ಷವರ್ಧನ
ಬಿ. ಎರಡನೇ ಚಂದ್ರಗುಪ್ತ
ಸಿ. ಕಾನಿಷ್ಕ
ಡಿ. ಒಂದನೆ ಚಂದ್ರಗುಪ್ತ
18. 1931 ರಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ್ನು ಯಾರು ಪ್ರತಿನಿಧಿಸಿದ್ದರು?
ಎ. ಬಿ. ಆರ್. ಅಂಬೇಡ್ಕರ್
ಬಿ. ಜವಾಹರಲಾಲ ನೆಹರು
ಸಿ. ಮಹಾತ್ಮಾಗಾಂಧೀಜಿ
ಡಿ. ರಾಜೇಂದ್ರ ಪ್ರಸಾದ್
19. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕಲ್ಕತ್ತದಲ್ಲಿ ‘ ಆತ್ಮೀಯ ಸಭಾ’ವನ್ನು ಯಾರು ಸ್ಥಾಪಿಸಿದರು?
ಎ. ದೇವೇಂದ್ರನಾಥ ಠಾಗೋರ್
ಬಿ. ಬಾಲಗಂಗಾಧರ ತಿಲಕ್
ಸಿ. ರಾಜಾರಾಮ ಮೋಹನ್ರಾಯ್
ಡಿ. ದಯಾನಂದ ಸರಸ್ವತಿ
20. ಲೋಕಿತವಾದಿ ಎಂದು ಯಾರು ಪ್ರಖ್ಯಾತರಾಗಿದ್ದರು?
ಎ. ಎಂ. ಈ. ರಾನಡೆ
ಬಿ. ಜಿ. ಎಚ್. ದೇಶಮುಖ್
ಸಿ. ಜಿ. ಜಿ. ಅಗರ್ಕರ್
ಡಿ. ಇವರು ಯಾರು ಅಲ್ಲ
# ಉತ್ತರಗಳು :
1. ಬಿ. ಲಾರ್ಡ್ ಕಾರನ್ವಾಲೀಸ್
2. ಬಿ. ಲಾರ್ಡ್ ಇರ್ವಿನ್
3. ಎ. ಕ್ವಿಟ್ ಇಂಡಿಯಾ ಚಳುವಳಿ
4. ಸಿ. ಗೋಪಾಲಕೃಷ್ಣ ಗೋಖಲೆ
5. ಎ. ಹುಮಾಯೂನ್ ಮತ್ತು ಶೇರ್ಶಾ
6. ಎ. ಕ್ರಿ.ಪೂ. 5000
7. ಡಿ. ಚೋಳ
8. ಸಿ. ಲಾರ್ಡ್ ಕರ್ಜನ್
9. ಸಿ. ಅಲ್ಲಾವುದ್ದೀನ್ ಖಿಲ್ಜಿ
10. ಎ. ಕಣ್ವ ಕದನ
11. ಬಿ. ಭುವನೇಶ್ವರ
12. ಎ. ಮುಜಾಫರ್ ಜಂಗ್
13. ಬಿ. ಮೀರತ್
14. ಬಿ. 1934
15. ಸಿ. ಶಹಜಹಾನ್
16. ಎ. ಅಕ್ಬರ್
17. ಬಿ. ಎರಡನೇ ಚಂದ್ರಗುಪ್ತ
18. ಸಿ. ಮಹಾತ್ಮಾಗಾಂಧೀಜಿ
19. ಸಿ. ರಾಜಾರಾಮ ಮೋಹನ್ರಾಯ್
20. ಬಿ. ಜಿ. ಎಚ್. ದೇಶಮುಖ್
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)