ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
1. ‘ಚೌತ್’ ಎಂಬುದು ಯಾರು ಸಂಗ್ರಹಿಸುತ್ತಿದ್ದ ತೆರಿಗೆಯಾಗಿತ್ತು..?
ಎ.ಖಿಲ್ಜಿಗಳು
ಬಿ. ಮರಾಠರು
ಸಿ. ಮೊಘಲರು
ಡಿ. ತುಘಲಕರು
2. ಈ ಕೆಳಗಿನ ಯಾವ ಸಿಂಧೂ ಕಣಿವೆಯ ನಾಗರೀಕತೆಗೆ ಸೇರಿದ ನಿವೇಶನವು ಈಗ ಪಾಕಿಸ್ತಾನದಲ್ಲಿದೆ..?
ಎ. ಹರಪ್ಪ
ಬಿ. ಕಾಲಿಭಾಂಗಾನ್
ಸಿ. ಅಲಂಗಿರ್ಪುರ
ಡಿ. ಲೋಥಾಲ್
3. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಜಾರಿಗೆ ತಂದವರು ಯಾರು..?
ಎ. ಲಾರ್ಡ್ ಕ್ಲೈವ್
ಬಿ. ಲಾರ್ಡ್ ಡಾಲ್ಹೌಸಿ
ಸಿ. ಲಾರ್ಡ್ ಮೆಕಾಲೆ
ಡಿ. ಲಾರ್ಡ್ ಮೆಟ್ಯಾಫ್
4. ‘ದೀನ್ ಇಲಾಹಿ’ ಇದು ಯಾರು ಸ್ಥಾಪಿಸಿದ ಹೊಸ ಧರ್ಮವಾಗಿದೆ..?
ಎ. ಬಾಬರ್
ಬಿ. ಅಕ್ಬರ್
ಸಿ. ಮಹಮದ್ ಬಿನ್ ತುಘಲಕ್
ಡಿ. ಶಹಜಹಾನ್
5. ಯಾವ ದೆಹಲಿ ಸುಲ್ತಾನನ್ನು ಐಲು ದೊರೆ ಎಂದು ಕರೆಯಲಾಗಿದೆ..?
ಎ. ಅಲ್ಲಾವುದ್ದೀನ್ ಖಿಲ್ಜಿ
ಬಿ. ಮಹಮದ್ ಬಿನ್ ತುಘಲಕ್
ಸಿ. ಫಿಯಾಸುದ್ದೀನ್ ತುಘಲಕ್
ಡಿ. ಶಹಜಹಾನ್
6. ಗೌತಮ ಬುದ್ದನಿಗೆ ಯಾವ ಸ್ಥಳದಲ್ಲಿ ಜ್ಞಾನೋದಯವಾಯಿತು..?
ಎ. ಗಯಾ
ಬಿ. ಲುಂಬಿನಿ
ಸಿ. ಮಗಧ
ಡಿ. ಸೂರತ್
7. 1639 ರಲ್ಲಿ ಫ್ರಾನ್ಸಿಸ್ಡೇ ಎಂಬ ಬ್ರಿಟಿಷನು ಯಾವ ನಗರವನ್ನು ಸ್ಥಾಪಿಸಿದನು..?
ಎ. ಕಲ್ಕತ್ತಾ
ಬಿ. ಮುಂಬಯಿ
ಸಿ. ಮದ್ರಾಸ್ ( ಚೆನ್ನೈ)
ಡಿ. ಸೂರತ್
8. ‘ ಜಟಕವು’ ಯಾರ ಜನನ ಕಥೆಯಾಗಿದೆ..?
ಎ. ಮಹಾವೀರ
ಬಿ. ಗೌತಮ ಬುದ್ಧ
ಸಿ. ವಿಶ್ವಾಮಿತ್ರ
ಡಿ. ಅಶೋಕ
9. ಅಲಹಾಬಾದ್ ಸ್ಥಂಬ ಶಾಸನವು ಯಾರ ದಿಗ್ವಿಜಯಗಳ ಕುರಿತಂತೆ ವಿವರಿಸುತ್ತದೆ..?
ಎ. ಅಶೋಕ
ಬಿ. ಶ್ರೀಗುಪ್ತ
ಸಿ. ಚಂದ್ರಗುಪ್ತ ಮೌಯ್
ಡಿ. ಸಮುದ್ರಗುಪ್ತ
10. ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯ ಸ್ಮಾರಕದ ದಂಡನಾಯಕನಾಗಿದ್ದವನು ಯಾರು..?
ಎ. ಅಮೀರ್ ಖುಸ್ರೋ
ಬಿ. ಅಬ್ದುಲ್ ಫಜಲ್
ಸಿ. ಅಬ್ದುಲ್ ಲತೀಫ್
ಡಿ. ಮಲ್ಲಿಕಾಫರ್
11. ಋಗ್ವೇದವನ್ನು ಇಂಗ್ಲೀಷ್ಗೆ ಯಾರು ಅನುವಾದಿಸಿದರು..?
ಎ. ಅನಿಬೆಸೆಂಟ್
ಬಿ. ಸರ್. ವಿಲಿಯಂ ಜೋನ್ಸ್
ಸಿ. ಬಾಲಗಂಗಾಧರ ತಿಲಕ್
ಡಿ. ಮ್ಯಾಕ್ಸ್ ಮುಲ್ಲರ್
12. ಜಲಿಯನ್ವಾಲಾಬಾಗ್ ಹತ್ಯಾಕಾಂಡ ನಡೆಸಿದ ಮೈಕೇಲ್ ಒಡೆಯರ್ನನ್ನು ಯಾರು ಹತ್ಯೆಗೈದರು..?
ಎ. ಉದಂ ಸಿಂಗ್
ಬಿ. ಭಗತ್ಸಿಂಗ್
ಸಿ. ಸಾವರ್ಕರ್
ಡಿ. ಅಜಾದ್ ಚಂದ್ರಶೇಖರ್
13. ಭಾರತವು ಸ್ವಾತಂತ್ರ್ಯ ಪಡೆದಾಗ ಇಂಗ್ಲೆಂಡ್ನ ಪ್ರಧಾನಮಂತ್ರಿಯಾಗಿದ್ದವರು ಯಾರು..?
ಎ. ಹರಾಲ್ಡ್ ವಿಲ್ಸನ್
ಬಿ. ಮ್ಯಾಕದ್ ಡೊನಾಲ್ಡ್
ಸಿ. ಕ್ಲೆಮೆಂಟ್ ಅಟ್ಲೀ
ಡಿ. ವಿನ್ಸಟನ್ ಚರ್ಚಿಲ್
14. ಬಿಜಾಪುರದ ಗೋಲಗುಂಬಜ್ ಯಾರ ಸಮಾಧಿಯನ್ನು ಒಳಗೊಂಡಿದೆ..?
ಎ. ಮಹಮ್ಮದ್ ಆದಿಲ್ ಶಾ
ಬಿ. ಖುತುಬ್ ಶಾ
ಸಿ. ಇಸ್ಮಾಯಿಲ್ ಆದಿಲ್ ಶಾ
ಡಿ. ಮಹಮದ್ ಗವಾನ್
15. ಅಕ್ಬರನ ಆಸ್ಥಾನದ ಖ್ಯಾತ ಸಂಗೀತಗಾರ ಯಾರು..?
ಎ. ತಾನ್ಸೇನ್
ಬಿ. ತುಳಸಿದಾಸ
ಸಿ. ರಮಾನಂದ
ಡಿ. ಬೀರ್ಬಲ್
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಉತ್ತರಗಳು :
1. ಬಿ. ಮರಾಠರು
2. ಎ. ಹರಪ್ಪ
3. ಸಿ. ಲಾರ್ಡ್ ಮೆಕಾಲೆ
4. ಬಿ. ಅಕ್ಬರ್
5. ಬಿ. ಮಹಮದ್ ಬಿನ್ ತುಘಲಕ್
6. ಎ. ಗಯಾ
7. ಸಿ. ಮದ್ರಾಸ್ ( ಚೆನ್ನೈ)
8. ಬಿ. ಗೌತಮ ಬುದ್ಧ
9. ಡಿ. ಸಮುದ್ರಗುಪ್ತ
10. ಡಿ. ಮಲ್ಲಿಕಾಫರ್
11. ಡಿ. ಮ್ಯಾಕ್ಸ್ ಮುಲ್ಲರ್
12. ಎ. ಉದಂ ಸಿಂಗ್
13. ಸಿ. ಕ್ಲೆಮೆಂಟ್ ಅಟ್ಲೀ
14. ಎ. ಮಹಮ್ಮದ್ ಆದಿಲ್ ಶಾ
15. ಎ. ತಾನ್ಸೇನ್