ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕುರಿತ ಮಹತ್ವದ ಮಾಹಿತಿ
# ಹೈದರಾಲಿಯು ಕ್ರಿ.ಶ.1721 ರಲ್ಲಿ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಜನಿಸಿದನು.
# ಸೈನಿಕ ತರಭೇತಿ ಪಡೆದಿದ್ದ ಈತ ಮೈಸೂರು ಸೈನ್ಯವನ್ನು ಸೇರಿಕೊಂಡು, ಕ್ರಿ,ಶ 1749 ರಲ್ಲಿ ನಡೆದ ದೇವನಹಳ್ಳಿಯ ಮುತ್ತಿಗೆಯಲ್ಲಿ ಅಪ್ರತಿಮ ಸಾಹಸ ತೋರಿ ಅಂದಿನ “ದಳವಾಯಿ ನಂಜ ರಾಜಯ್ಯನ” ಗಮನ ಸೆಳೆದನು. ನಂಜರಾಜಯ್ಯನು ಇವನನ್ನು ತುಕಡಿಯೊಂದರ ನಾಯಕನನ್ನಾಗಿ ನೇಮಿಸಿದನು.
# ದಂಡಿಗಲ್ನ ಫೌಜುದಾರನಾದ ಹೈದರಾಲಿ ಫ್ರೆಂಚರ ಮತ್ತು ಇಂಗ್ಲೀಷ್ರ ಯುದ್ಧ ತಂತ್ರಗಳನ್ನು ಗಮನಿಸಿ ಅನುಸರಿಸಿದನು. ಮುಂದೆ ಅಸಮರ್ಥನಾಗಿದ್ದ ನಂಜರಾಜನನ್ನು ಕೆಳಗಿಳಿಸಿ ಅವನ ತಮ್ಮ ‘ಬೆಟ್ಟದ ಚಾಮರಾಜ ಒಡೆಯರನ್ನು’ ಕ್ರಿ.ಶ 1770 ರಲ್ಲಿ ಸಿಂಹಾಸನವೇರಿಸಿದನು. ಇಲ್ಲಿಗೆ ದಳವಾಯಿಗಳ ಆಳ್ವಿಕೆ ಕೊನೆಗೊಂಡು, ಮುಂದೆ ಹೈದರಾಲಿಯು ಪ್ರಬಲನಾಗುತ್ತಾ ಹೋದನು.
# 1758 ರಲ್ಲಿ ಅವನು ‘ಚೌತಾಯಿ’ ವಸೂಲಿಗೆ ಬಂದ ಮರಾಠರನ್ನು ಸೋಲಿಸಿದನು. ಎಲ್ಲರೂ ಅಸಮರ್ಥರಾದ ಕಾರಣ ನಂಜರಾಜನನ್ನು ಅದೀಕಾಋದಿಂದ ಸರಿಸಿ ‘1761’ ರಲ್ಲಿ ಸರ್ವಾಧಿಕಾರಿಯಾದನು.
# ಮೂರನೆಯ ಪಾಣಿಪತ್ ಯುದ್ಧದಲ್ಲಿ ಸೋತ ಮರಾಠರು ಹೈದರಾಲಿಯ ಪ್ರಾಬಲ್ಯವನ್ನು ತಡೆಯದಾದರು.
# ರಾಜರನ್ನು ಗೌರವಿಸುತ್ತಿದ್ದ ಹೈದರನು ಬೆಂಗಳೂರು, ಶ್ರೀರಂಗಪಟ್ಟಣದಲ್ಲಿ ಅರಮನೆಗಳನ್ನು ನಿರ್ಮಿಸಿದನು.
# ಹೈದರಾಲಿಯ ಪ್ರಾಬಲ್ಯವು ಮರಾಠರಿಗೆ ಮತ್ತು ಹೈದರಾಬಾದ್ನ ನಿಜಾಮನಿಗೆ ಎಚ್ಚರಿಕೆಯ ಕರೆಗಂಟೆಯಾಯಿತು. ನಿಜಾಮನು ಇಂಗ್ಲಿಷರ ಸಹಾಯದಿಂದ ಮೈಸೂರಿನ ಮೇಲೆ ದಾಳಿ ಮಾಡಿದನು. ಆದರೆ ಹೈದರಾಲಿಯನ್ನು ಸೋಲಿಸಲು ಆಗಲಿಲ್ಲ. ಇವನ ಏಳಿಗೆಯನ್ನು ಸಹಿಸಲಾಗದ ಬ್ರಿಟಿಷರ ನಡುವೆ ‘ಕ್ರಿ.ಶ. 1763 ರಲ್ಲಿ ಮೊದಲನೇ ಆಂಗ್ಲೋ- ಮೈಸೂರು’ ಯುದ್ದ ನಡೆಯಿತು. ಆಗ ಬ್ರಿಟಿಷರಿಗೆ ಸೋಲಾಯಿತು. ಈ ಯುದ್ಧದಲ್ಲಿ ಮರಾಠರು ತಟಸ್ಥರಾಗುವಂತೆ ನೋಡಿಕೊಳ್ಳಲು ಅವರಿಗೆ ಕೆಲವು ಕೋಟೆಗಳು ಮತ್ತು ಹಣವನ್ನು ನೀಡುತ್ತಾನೆ.
# ಕ್ರಿ..ಶ 1769 ರಲ್ಲಿ ಹೈದರನು ಬ್ರಿಟಿಷರ ಕೆಲವೊಂದು ಪ್ರದೇಶಗಳನ್ನು ಗೆಲ್ಲುತ್ತಾ ಮದ್ರಾಸ್ವರೆಗೂ ಹೋದನು. ಹಾಗಾಗಿ 1769 ರಲ್ಲಿ ಬ್ರಿಟಿಷರ ನಡುವೆ “ಮದ್ರಾಸ್ ಒಪ್ಪಂದ”ವಾಗಿ ಬ್ರಿಟಿಷರು ಮತ್ತು ಹೈದರ್ ಪರಸ್ಪರ ಆಕ್ರಮಣ ಮಾಡಬಾರದು ಹಾಗೂ ಪರಸ್ಪರರಿಗೆ ಸಹಾಯ ಮಾಡಬೇಕು ಎಂದು ತಿರ್ಮಾನವಾಯಿತು.
# ಹೀಗಿದ್ದು 1770 ರಲ್ಲಿ ಮರಾಠ ಪೇಶ್ವೆ ಮಾಧವರಾವ್ ಮೈಸೂರಿನ ಮೇಲೆ ದಾಳಿ ಮಾಡಿದಾಗ ಹೈದರಾಲಿಯು ಏಕಾಂಗಿಯಾಗಿ ಹೋರಾಡಿ ಮರಾಠರನ್ನು ಹಿಮ್ಮೆಟ್ಟಿಸಿದನು. ಆದರೆ ಬ್ರಿಟಿಷರು ಮದ್ರಾಸ್ ಒಪ್ಪಂದದಂತೆ ಹೈದರಾಲಿಗೆ ಸಹಾಯ ಮಾಡಲಿಲ್ಲ. ಹಾಗಾಗಿ ಬ್ರಿಟಿಷರ ಮೇಲೆ ಮತ್ತೆ ದ್ವೇಷ ಬೆಳೆಯಿತು. ನಂತರ ಕ್ರಿ.ಶ. 1780 ರಲ್ಲಿ ಎರಡನೇ ಆಂಗ್ಲೋ- ಮೈಸೂರು ಯುದ್ದ ಪ್ರಾರಂಭವಾಯಿತು.
# 1781 ರಲ್ಲಿ ‘ಸೋಲಿಗನೂರು’ ಎಂಬಲ್ಲಿ ಬ್ರಿಟಿಷರ ಸೇನಾನಿ ‘ಸರ್ ಐರ್ ಕೂಟನು’ ಹೈದರಾಲಿಯನ್ನು ಸೋಲಿಸಿದನು. ಹೈದರನು ಈ ಯುದ್ಧದಲ್ಲಿ ಮಡಿದನು.
# ಹೈದರಾಲಿಯ ನಂತರ ಅಧಿಕಾರ ವಹಿಸಿಕೊಂಡ ಅವನ ಮಗ ‘ಟಿಪ್ಪು ಸುಲ್ತಾನ’ ಯುದ್ಧವನ್ನು ಮುಂದುವರೆಸಿ ಮಂಗಳೂರನ್ನು ಗೆದ್ದುಕೊಂಡನು. 1784 ರಲ್ಲಿ ಟಿಪ್ಪು ಮತ್ತು ಬ್ರಿಟಿಷರ ನಡುವೆ “ಮಂಗಳೂರು ಒಪ್ಪಂದ” ವಾಗಿ ಎರಡನೇ ಆಂಗ್ಲೋ- ಮೈಸೂರು ಯುದ್ದವು ಕೊನೆಗೊಂಡಿತು.
# ಟಿಪ್ಪು ಸುಲ್ತಾನನು “ ಮೈಸೂರಿನ ಹುಲಿ” ಎಂದು ಖ್ಯಾತಿ ಪಡೆದಿದ್ದಾನೆ.
# ಇವನು ಕ್ರಿ.ಶ.1753 ರಲ್ಲಿ ನವೆಂಬರ್ 20 ರಂದು ದೇವನಹಳ್ಳಿಯಲ್ಲಿ ಜನಿಸಿದನು.
# ಕ್ರಿ.ಶ.1786 ರಲ್ಲಿ ಮರಾಠರೊಂದಿಗೆ ನಡೆದ ಯುದ್ಧವನ್ನು ಯಶಸ್ವಿಯಾಗಿ ಎದುರಿಸಿದನು.
# ಆ ನಂತರ ಟಿಪ್ಪುವು ಬ್ರಿಟಿಷರ ಮಿತ್ರ ರಾಜ್ಯವಾದ ತಿರುವಾಂಕೂರಿನ ಮೇಲೆ ದಾಳಿ ಮಾಡಿದುದು ಮೂರನೇ ಆಂಗ್ಲೋ- ಮೈಸೂರು ಯುದ್ಧಕ್ಕೆ ನಾಂದಿಯಾಯಿತು.
# 1791 ರಲ್ಲಿ ಬ್ರಿಟಿಷ್ ಗವರ್ನರ್ ಲಾರ್ಡ್ ಕಾರ್ನವಾಲಿಸ್ನು ಮರಾಠ ಹಾಗೂ ಹೈದರಾಬಾದಿನ ನಿಜಾಮರೊಡನೆ ಟಿಪ್ಪುವನ್ನು ಸೋಲಿಸಲು ಶ್ರೀರಂಗಪಟ್ಟಣದವರೆಗೆ ಬಂದು, ಟಿಪ್ಪುವಿನಿಂದ ಸೋಲುಂಡನು.
# 1792 ರಲ್ಲಿ ‘ಲಾರ್ಡ್ ಕಾರ್ನವಾಲಿಸನು’ ದೊಡ್ಡ ಸೈನ್ಯದೊಂದಿಗೆ ಟಿಪ್ಪುವನ್ನು ಸೋಲಿಸಲು ಬಂದನು. ಇಷ್ಟು ದೊಡ್ಡ ಸೈನ್ಯವನ್ನು ಸೋಲಿಸಲು ಟಿಪ್ಪುವಿಗೆ ಸಾಧ್ಯವಾಗದೆ “ಶ್ರೀರಂಗಪಟ್ಟಣ ಒಪ್ಪಂದಕ್ಕೆ” ಸಹಿ ಹಾಕಿದನು.
# ಶ್ರೀರಂಗಪಟ್ಟಣದ ಒಪ್ಪಂದದ ಪ್ರಕಾರ ಟಿಪ್ಪು ಶತ್ರುಗಳಿಗೆ ತನ್ನ ಅರ್ಧ ರಾಜ್ಯವನ್ನು ಹಾಗೂ ಯುದ್ಧದ ಖರ್ಚಿಗೆ ಹಣವನ್ನು ನೀಡಬೇಕಾಯಿತು. ಅಲ್ಲದೆ ಹಣ ಪಾವತಿಯಾಗುವವರೆಗೂ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಯಿತು.
# ಬ್ರಿಟಿಷರ ವಿರುದ್ಧ ಸದಾ ಹಗೆ ಕಾರುತ್ತ ಅವರನ್ನು ಹೇಗಾದರೂ ಮಾಡಿ ಭಾರತದಿಂದ ಓಡಿಸಬೇಕೇಂದು ಟಿಪ್ಪು ಕೆಲವು ವಿದೇಶಿಯರ ನೆರವು ಕೋರಿದನಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ.
# ಕ್ರಿ.ಶ. 1798 ರಲ್ಲಿ ಭಾರತದ ಗವರ್ನರ್ ಜನರಲ್ ಆಗಿ ನೇಮಕಗೊಂಡ ‘ಲಾರ್ಡ್ ವೆಲ್ಲೆಸ್ಲಿಯ’ ಸಹಾಯಕ ಸೈನ್ಯ ಪದ್ದತಿಯನ್ನು ಸೇಲು ಟಿಪ್ಪು ನಿರಾಕರಿಸಿದನು. ಇದು ವೆಲ್ಲೆಸ್ಲಿಯನ್ನು ಕೆರಳಿಸಿತು. ಟಿಪ್ಪುವನ್ನು ಸೋಲಿಸಲು ಅವನು ಹ್ಯಾರಿಸ್ನ ನಾಯಕತ್ವದಲ್ಲಿ ಪ್ರಬಲ ಸೈನ್ಯವನ್ನು ಕಳುಹಿಸಿದನು. ಇದೇ ನಾಲ್ಕನೇ ಆಂಗ್ಲೋ -ಮೈಸೂರು ಯುದ್ಧ.
# ವೀರಾವೇಶದಿಂದ ಹೋರಾಡಿದ ಟಿಪ್ಪು ಕ್ರಿ.ಶ. 1799 ರ ಮೇ 4 ರಂದು ಶತ್ರುಗಳಿಂದ ಈ ಯುದ್ಧದಲ್ಲಿ ಹತನಾದನು.