‘ಮಹಾಭಿಯೋಗ’ ಎಂದರೇನು..?
ಅನುಚ್ಛೇದ 124 ರ ಉಪಖಂಡ(4) ರಲ್ಲಿ ಮುಖ್ಯನ್ಯಾಯಮೂರ್ತಿ ಹಾಗೂ ಇತರೆ ನ್ಯಾಯಮೂರ್ತಿಗಳ ಪದಚ್ಯುತಿ ಅಥವಾ ‘ಮಹಾಭಿಯೋಗದ’ ಬಗ್ಗೆ ಹೇಳಲಾಗಿದೆ. ಮುಖ್ಯನ್ಯಾಯಮೂರ್ತಿ ಹಾಗೂ ಇತರೆ ನ್ಯಾಯ ಮೂರ್ತಿಗಳು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ದುರ್ವರ್ತನೆ ಮಾಡಿದರೇ , ಭ್ರಷ್ಟಾಚಾರದಲ್ಲಿ ಭಾಗಿಯಾದರೆ, ಕರ್ತವ್ಯ ನಿರ್ವಹಣೆಯಲ್ಲಿ ಅಸಮರ್ಥರಾಗಿದ್ದಾರೆಂದು ದೋಷಾರೋಪ ಬಂದರೆ ಮಹಾಭಿಯೋಗಕ್ಕೆ ಯಾವುದೇ ಸದನದ ಸದಸ್ಯರು ಕೋರಿಕೆ ಸಲ್ಲಿಸಬಹುದು.
ಯಾವುದೇ ಸದನ ದೋಷಾರೋಪಣೆ ಮಾಡಿದಾಕ್ಷಣ ಪದಚ್ಯುತಿ ಮಾಡಲಾಗುವುದಿಲ್ಲ.ರಾಷ್ಟ್ರಪತಿಗಳ ಪದಚ್ಯುತಿಗೆ ಅನುಸರಿಸುವ ನಿಯಮಗಳನ್ನು ಅನುಸರಿಸಿ ಪದಚ್ಯುತಿಗೊಳಿಸಬೇಕು. ಯಾವುದೇ ಸದನ ಆರೋಪ ಮಾಡಿ ಒಟ್ಟು ಸದಸ್ಯರ1/4 ಭಾಗ ಸಹಿ ಹಾಕಿದ ಪತ್ರದೊಂದಿಗೆ ಸಭಾಧ್ಯಕ್ಷರು ಮನವಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿ ಪರಿಶೀಲನೆ ನಡೆಸಿದ ತರುವಾಯ ತನಿಖಾ ಸಮಿತಿ ನೇಮಕಗೊಳಿಸಬೇಕು.
ನ್ಯಾಯ ಮೂರ್ತಿಗೆ ನಿರ್ಣಯ ಮಂಡಿಸುವುದಕ್ಕೆ ಕನಿಷ್ಟ 14 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು.ಅಗತ್ಯವಾಗಿದೆ ಎಂದು ಕಂಡುಬಂದರೆ ದೋಷಾರೋಪ ಹೊಂದಿದ ನ್ಯಾಯಮೂರ್ತಿ ಹಾಜರಾಗಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಲು ಅಥವಾ ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಅವಕಾಶವಿದೆ.
ತನಿಖೆಯಲ್ಲಿ ಭ್ರಷ್ಟಾಛಾರದಲ್ಲಿ ಭಾಗಿಯಾಗಿದ್ದು ಅಥವಾ ಕಾರ್ಯ ಸಮರ್ಥತೆ ಮಾಡಿರುವುದು ಕಂಡು ಬಂದಲ್ಲಿ ಸದನದ 2/3 ನೇ ಭಾಗ ಸದಸ್ಯರು ಬಹುಮತದ ಮೇಲೆ ನಿರ್ಣಯ ಕೈಗೊಂಡು ಮತ್ತೊಂದು ಸದನಕ್ಕೆ ಕಳಿಹಿಸಲಾಗುತ್ತದೆ. ಮತ್ತೊಂದು ಸದನದಲ್ಲಿ 2/3 ಎಷ್ಟು ಬಹುಮತ ಪಡೆದರೆ ರಾಷ್ಟ್ರಪತಿಗಳು ಆದೇಶದ ಮೂಲಕ ಆರೋಪಿತ ನ್ಯಾಯಮೂರ್ತಿಯನ್ನು ತೆಗೆದು ಹಾಕಬಹುದು.