‘ಹೃದಯ’ಕ್ಕೆ ಸಂಬಂಧಿಸಿದಂತೆ ನೆನಪಿನಲ್ಲಿಡಬೇಕಾದ ಅಂಶಗಳು
➤ ಹೃದಯ ರಕ್ತವನ್ನು ಪಂಪು ಮಾಡುವ ಅಂಗವಾಗಿದೆ.
➤ ಹೃದಯವನ್ನು ಆವರಿಸಿರುವ ಪೊರೆ –ಹೃದಯಾವರಣ ((ಪೆರಿಕಾರ್ಡಿಯಂ)
➤ಮಾನವನ ಹೃದಯದ ಗಾತ್ರ- ಅವರವರ ಮುಷ್ಠಿಯಷ್ಟಿರುತ್ತದೆ
➤ ಆರೋಗ್ಯವಂತ ಮಾನವನ ಹೃದಯ ಬಡಿತವು ನಿಮಿಷಕ್ಕೆ– 72 ಬಾರಿ
➤ಎಳೆ ಮಗುವಿನ ಹೃದಯ ಬಡಿತವು ನಿಮಿಷಕ್ಕೆ ಸುಮಾರು- 120 ಬಾರಿ
➤ ಎರಡು ಕೋಣೆಗಳ ಹೃದಯವನ್ನು ಹೊಂದಿರುವ ಜೀವಿಗಳು- ಮೀನುಗಳು
➤ ಮೂರು ಕೋಣೆಗಳ ಹೃದಯವನ್ನು ಹೊಂದಿರುವ ಜೀವಿಗಳು- ಉಭಯವಾಸಿಗಳು ಮತ್ತು ಸರಿಸೃಪಗಳು
➤ ನಾಲ್ಕು ಕೋಣೆಗಳ ಹೃದಯವನ್ನು ಹೊಂದಿರುವ ಜೀವಿಗಳು – ಸ್ತನಿಗಳು ಮತ್ತು ಪಕ್ಷಿಗಳು
➤ ಮಾನವನ ಹೃದಯದಲ್ಲಿರುವ ಕೋಣೆಗಳ ಸಂಖ್ಯೆ- 4
➤ ಹೃದಯದ ನಾಲ್ಕು ಕೋಣೆಗಳು- ಎಡಹೃತ್ಕರ್ಣ, ಬಲಹೃತ್ಕರ್ಣ, ಎಡ ಹೃತ್ಕುಕ್ಷಿ, ಬಲ ಹೃತ್ಕುಕ್ಷಿ
➤ ಆಮ್ಲಜನಕ ರಹಿತ ರಕ್ತವನ್ನು ಸ್ವೀಕರಿಸುವ ಕೋಣೆ –ಬಲಹೃತ್ಕರ್ಣ
➤ ಆಮ್ಲಜನಕ ರಹಿತ ರಕ್ತವನ್ನು ಪಂಪುಮಾಡುವ ಹೃದಯದ ಕೋಣೆ –ಬಲ ಹೃತ್ಕುಕ್ಷಿ
➤ಆಮ್ಲಜನಕ ಸಹಿತ ರಕ್ತವನ್ನು ಪಂಪುಮಾಡುವ ಹೃದಯದ ಕೋಣೆ- ಎಡಹೃತ್ಕುಕ್ಷಿ,
➤ಆಮ್ಲಜನಕ ಸಹಿತ ರಕ್ತವನ್ನು ಸ್ವೀಕರಿಸುವ ಹೃದಯದ ಕೋಣೆ- – ಎಡಹೃತ್ಕರ್ಣ
➤ಹೃದಯದ ಬಲಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿ ನಡುವಿನ ಕವಾಟ- ತ್ರಿದಳ ಕವಾಟ
➤ಹೃದಯದ ಎಡಹೃತ್ಕರ್ಣ ಮತ್ತು ಎಡಹೃತ್ಕುಕ್ಷಿ ನಡುವಿನ ಕವಾಟ – ದ್ವಿದಳ ಕವಾಟ
➤ ಹೃದಯದ ಎಡ ಹೃತ್ಕರ್ಣದಿಂದ ಆಮ್ಲಜನಕ ಸಹಿತ ರಕ್ತವನ್ನು ದೇಹದ ವಿವಿಧ ಭಾಗಗಳಿಗೆ ತೆಗೆದುಕೊಂಡು ಹೋಗುವ ರಕ್ತನಾಳ- ಮಹಾ ಅಪಧಮನಿ
➤ ಹೃದಯದ ಬಲ ಹೃತ್ಕುಕ್ಷಿಯಿಂದ ಆಮ್ಲಜನಕ ರಹಿತ ರಕ್ತವನ್ನು ಶ್ವಾಸಕೋಶಗಳಿಗೆ ತೆಗೆದುಕೊಂಡು ಹೊರಡುವ ರಕ್ತನಾಳ – ಪುಪ್ಪಸಕ ಅಪಧಮನಿ
➤ದೇಹದ ಎಲ್ಲಾ ಭಾಗಗಳಿಂದ ಹೃದಯಕ್ಕೆ ರಕ್ತವನ್ನು ತರುವ ರಕ್ತನಾಳ- ಊದ್ರ್ವ ಮತ್ತು ಅಧೋ ಅಭಿಧಮನಿಗಳು
➤ಶ್ವಾಸಕೋಶಗಳಿಂದ ಆಮ್ಲಜನಕ ಸಹಿತ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ- ಪುಪ್ಪಸಕ( ಪಲ್ಮನರಿ) ಅಭಿಧಮನಿ
➤ ಹೃದಯದ ಸ್ನಾಯುಗಳಿಗೆ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ- ಕರೋನರಿ ಅಪಧಮನಿ
➤ಹೃದಯದ ಸ್ನಾಯುಗಳಿಂದ ರಕ್ತವನ್ನು ತರುವ ರಕ್ತನಾಳ- ಕರೋನರಿ ಅಭಿಧಮನಿ
➤ ದೇಹದ ಮೇಲಿನ ಭಾಗಗಳಾದ ಶಿರೋಭಾಗ, ಭುಜಗಳು ಮುಂತಾದ ಭಾಗಗಳಿಂದ ಆಮ್ಲಜನಕ ರಹಿತ ರಕ್ತವನ್ನು ಹೃದಯದ ಬಲ ಹೃತ್ಕರ್ಣಕ್ಕೆ ತರುವ ರಕ್ತನಾಳ- ಉಚ್ಚ ಮಲಿನ ರಕ್ತನಾಳ
➤ದೇಹದ ಕೆಳಗಿನ ಭಾಗಗಳಾದ ಸೊಂಟ, ಕಾಲುಗಳು ಮುಂತಾದ ಭಾಗಗಳಿಂದ ಆಮ್ಲಜನಕ ರಹಿತ ರಕ್ತವನ್ನು ಹೃದಯದ ಬಲ ಹೃತ್ಕುರ್ಣಕ್ಕೆ ತರುವ ರಕ್ತನಾಳ- ನೀಚ ಮಲಿನ ರಕ್ತನಾಳ
➤ ರಕ್ತವು ಹೃದಯದಿಂದ ಅಪಧಮನಿ ಎಂಬ ರಕ್ತನಾಳಗಳಿಗೆ ಸಂಚರಿಸಿ, ನಂತರ ಲೋಮನಾಳಗಳೆಂಬ ಸಣ್ಣ ರಕ್ತನಾಳಗಳಿಗೆ ಹರಿದು ಕೊನೆಯಲ್ಲಿ ಅಭಿಧಮನಿಗೆ ಸಂಚರಿಸಿ ಹೃದಯಕ್ಕೆ ಮರಳುತ್ತದೆ.
➤ ಹೃದಯದ ಸ್ನಾಯುಗಳ ಸಂಕೋಚನ ಕ್ರಿಯೆ- ಸಿಸ್ಟೋಲ್
➤ ಹೃದಯದ ಸ್ನಾಯುಗಳ ವಿಕಸನ ಕ್ರಿಯೆ– ಡಯಾಸ್ಟೋಲ್
➤ ಕವಾಟಗಳಿಲ್ಲದ ರಕ್ತನಾಳಗಳು-ಅಪಧಮನಿಗಳು
➤ ಕವಾಟಗಳಿರುವ ರಕ್ತನಾಳಗಳು- ಅಭಿಧಮನಿಗಳು
➤ ಅಭಿಧಮನಿಗಳ ಕವಾಟಗಳ ಕಾರ್ಯ- ರಕ್ತ ಹಿಂದಕ್ಕೆ ಹರಿಯುವದನ್ನು ತಡೆಯುತ್ತದೆ.
➤ ಹೃದಯ ಬಡಿತವನ್ನು ಕಂಡುಹಿಡಿಯಲು ಬಳಸುವ ಉಪಕರಣ- ಸ್ಟೇತೋಸ್ಕೋಪ್
➤ ಸ್ಟೇತೋಸ್ಕೋಪ್ ಕಂಡುಹಿಡಿದ ವಿಜ್ಞಾನಿ- ರೇನ್ ಲೆನೆಕ್
➤ ಹೃದಯ ಬಡಿತ ಹೆಚ್ಚಾಗುವ ಸ್ಥಿತಿ – ಟ್ಯಾಕಿಕ್ ಕಾರ್ಡಿಯಾ
➤ ಹೃದಯ ಬಡಿತ ಕಡಿಮೆಯಾಗುವ ಸ್ಥಿತಿ- ಬ್ರ್ಯಾಡಿ ಕಾರ್ಡಿಯಾ
➤ ಹೃದಯದ ಸಂಕೋಚನ ಮತ್ತು ವಿಕಸನ ಕ್ರಿಯೆಯ ವಿದ್ಯುತ್ ತರಂಗಗಳನ್ನು ಅಳೆಯುವ ಸಾಧನ – ಇ.ಸಿ.ಜಿ (ಎಲೆಕ್ಟ್ರೊಕಾರ್ಡಿಯೊಗ್ರ್ಯಾಮ್)
➤ ಇ.ಸಿ.ಜಿ ಯನ್ನು ಕಂಡುಹಿಡಿದವರು- ಇಸ್ತೋವನಿ
➤ ಹೃದಯದ ಸ್ನಾಯುಗಳಿಗೆ ಅಸಮರ್ಪಕ ರಕ್ತ ಸರಬರಾಜು ಆಗುವುದರಿಂದ ಉಂಟಾಗು ತೊಂದರೆ-ಹೃದಯಾಘಾತ
➤ ಹೃದಯ ರಕ್ತವನ್ನು ಸರಬರಾಜು ಮಾಡುವ ಕರೋನರಿ ಅಪಧಮನಿಗಳಲ್ಲಿ ಕೊಲೆಸ್ಟಾರಲ್ ಶೇಖರಣೆಯಾದಾಗ ಅವುಗಳನ್ನು ಬದಲಿಸುವ ಶಸ್ತ್ರಚಿಕಿತ್ಸೆ- ಬೈಪಾಸ್ ಶಸ್ತ್ರಚಿಕಿತ್ಸೆ
➤ಹೃದಯ ಬಡಿತವನ್ನು ಪ್ರಚೋದಿಸುವ ಮತ್ತು ನಿಯಂತ್ರಿಸುವ ರಚನೆ- ಸೈನೋ ಅಟ್ರಿಯಲ್ ನೋಡ್ ( ಪೇಸ್ಮೇಕರ್)