ಎರಡನೇ ಮಹಾಯುದ್ಧದ ನಂತರದ ಪ್ರಮುಖ ಬೆಳವಣಿಗೆಗಳು
1. ಎರಡನೇ ಮಹಾಯುದ್ಧದ ನಂತರ ವಿಶ್ವದ ಭೂಪಟ ಹೇಗೆ ಸಂಪೂರ್ಣವಾಗಿ ಬದಲಾಯಿತು.?
• ಯೂರೋಪ್ ದೇಶಗಳ ವಸಾಹತು ಸಾಮ್ರಾಜ್ಯಗಳು ಎರಡನೇ ಮಹಾಯುದ್ಧದ ನಂತರ ಸಂಪೂರ್ಣವಾಗಿ ಕರಗಿಹೋದವು.
• ಏಷ್ಯ , ಆಫ್ರಿಕಾದ ಹಲವಾರು ದೇಶಗಳು ಸ್ವತಂತ್ರಗೊಂಡವು.
2. ಅಮೆರಿಕದ ಬಣಕ್ಕೆ ಸಮರ್ಥನೆ ನೀಡುತ್ತಿದ್ದ ಪ್ರಮುಖ ದೇಶಗಳಾವುವು?
• ಇಂಗ್ಲೆಂಡ್, ಫ್ರಾನ್ಸ್, ಟರ್ಕಿ, ಇರಾನ್, ಪಶ್ಚಿಮ ಜರ್ಮನಿ, ಪಾಕಿಸ್ತಾನ
3. ಸೋವಿಯತ್ ರಷ್ಯದ ಬಣಕ್ಕೆ ಸೇರಿದ ಪ್ರಮುಖ ದೇಶಗಳಾವುವು?
• ಚೀನಾ, ಪೂರ್ವ ಜರ್ಮನಿ, ಪೋಲಂಡ್, ಹಂಗೇರಿ, ಜೆಕೋಸ್ಲೊವಾಕಿಯ, ರುಮೇನಿಯಾ ಮತ್ತು ಆಸ್ಟ್ರಿಯಾ
4. ಯಾವಾಗ ಮತ್ತು ಯಾರ ನಾಯಕತ್ವದಲ್ಲಿ ಚೀನಾ ಒಂದು ಕಮ್ಯುನಿಸ್ಟ್ ರಾಷ್ಟ್ರವಾಯಿತು?
• 1949 ರಲ್ಲಿ ಚೀನಾ ದೇಶವು ಮಾವೋ- ತ್ಸೆ- ತುಂಗ್ ರ ನೇತೃತ್ವದಲ್ಲಿ ಒಂದು ಕಮ್ಯುನಿಸ್ಟ್ ರಾಷ್ಟ್ರವಾಯಿತು.
5. ಎರಡನೇ ಮಹಾಯುದ್ಧದ ನಂತರ ಜಗತ್ತು ಎಷ್ಟು ಬಣಗಳಾಗಿ ವಿಭಜಿಸಲ್ಪಟ್ಟಿತು? ಈ ಬಣಗಳ ಮುಂದಾಳುಗಳಾರು?
• ಎರಡು ಬಣಗಳಾಗಿ ವಿಭಜಿಸಲ್ಪಟ್ಟಿತು. ಪ್ರಜಾತಾಂತ್ರಿಕ ಸ್ವತಂತ್ರ ಬಣ ಹಾಗು ಕಮ್ಯುನಿಸ್ಟ್ ಬಣ.
• ಅಮೆರಿಕ ಮತ್ತು ಸೋವಿಯತ್ ರಷ್ಯ ಅನುಕ್ರಮವಾಗಿ ಈ ಬಣಗಳ ಮುಂದಾಳತ್ವ ವಹಿಸಿದರು.
6. ಎರಡು ಶಕ್ತಿಬಣಗಳ ನಡುವೆ ಶೀತಲಯುದ್ಧ ಪ್ರಾರಂಭವಾಗಲು ಕಾರಣವೇನು?
• ಎರಡನೇ ವಿಶ್ವಯುದ್ಧದ ನಂತರ ಯು.ಎಸ್.ಎ ಮತ್ತು ಸೋವಿಯತ್ ರಷ್ಯಾಗಳ ಮುಂದಾಳತ್ವದಲ್ಲಿ ಜಗತ್ತು ಎರಡು ಬಣಗಳಾಗಿ ಹಂಚಿಕೆಯಾಯಿತು. 1949 ರಲ್ಲಿ ಸೋವಿಯತ್ ರಷ್ಯಾವು ಅಣುಬಾಂಬ್ ಪರೀಕ್ಷೆ ನಡೆಸುವುದರೊಂದಿಗೆ ಈ ಎರಡು ಬಣಗಳಲ್ಲಿ ಶೀತಲಯುದ್ಧ ಆರಂಭವಾಯಿತು.
7. ಕೊರಿಯಾದಲ್ಲಿ ಅಂತರ್ಯುದ್ಧ ಹೇಗೆ ಕೊನೆಯಾಯಿತು?
• 1950 ರ ದಶಕದಲ್ಲಿ ಕೊರಿಯಾದಲ್ಲಿ ಅಂತರ್ಯುದ್ಧ ನಡೆದಾಗ ಉತ್ತರ ಕೊರಿಯಾಕ್ಕೆ ಚೀನ ಮತ್ತು ದಕ್ಷಿಣ ಕೊರಿಯಾಕ್ಕೆ ಅಮೆರಿಕ ಬೆಂಬಲ ನೀಡಿದವು. ಹೀಗಾಗಿ ಕೊರಿಯ ಎರಡು ದೇಶಗಳಾಗಿ ವಿಭಜನೆ ಹೊಂದಿತು.
8. ಶೀತಲಯುದ್ಧದ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ನಾಲ್ಕು ರಕ್ಷಣಾ ಕೂಟಗಳನ್ನು ಹೆಸರಿಸಿ.
• ಉತ್ತರ ಅಟ್ಲಾಂಟಿಕ್ ರಕ್ಷನಾ ಕೂಟ( ನ್ಯಾಟೋ)
• ಆಗ್ನೇಯ ಏಷ್ಯ ರಾಷ್ಟ್ರಗಳ ಕುಟ( ಸೀಟೋ)
• ಕೇಂದ್ರಿಯ ರಾಷ್ಟ್ರಗಳ ಒಕ್ಕೂಟ( ಸೇಂಟೊ)
• ವಾರ್ಸಾ ಒಕ್ಕೂಟ
ಮೊದಲ ಮೂರು ಕೂಟಗಳಲ್ಲಿ ಅಮೇರಿಕ ಪ್ರಮುಖ ಶಕ್ತ್ತಿಯಾಗಿತ್ತು. ಕೊನೆಯದರಲ್ಲಿ ಸೋವಿಯತ್ ರಷ್ಯಾ ನೇತೃತ್ವ ವಹಿಸಿತ್ತು.
9. ಸೋವಿಯತ್ ಒಕ್ಕೂಟ ಹೇಗೆ ಒಡೆದು ಹೋಯಿತು?
• 1985 ರಲ್ಲಿ ಸೋವಿಯತ್ ಒಕ್ಕೂಟದಲ್ಲಿ ಗೋರ್ಬಚೇವ್ ಅಧ್ಯಕ್ಷರಾದ ನಂತರ ಅಲ್ಲಿನ ಕಮ್ಯುನಿಸ್ಟ್ ವ್ಯವಸ್ಥೆ ನಿಧಾನವಾಗಿ ಬದಲಾಗಿ ಪ್ರಜಾತಂತ್ರ ರೂಪುಗೊಂಡಿತು. ಇದಾದೊಡನೆ ಹಲವಾರು ಗಣರಾಜ್ಯಗಳು ಸ್ವಾತಂತ್ರ್ಯದ ಬೇಡಿಕೆಯನ್ನು ಮುಂದಿಟ್ಟವು. ಸೋವಿಯತ್ ಒಕ್ಕೂಟದಲ್ಲಿದ್ದ ಎಂಟು ಗಣರಾಜ್ಯಗಳು 1991 ರಲ್ಲಿ ಸ್ವಾಥಂತ್ರ್ಯದ ಘೋಷಣೆ ಮಾಡಿದವು. ಆಮೇಲೆ ಸ್ವತಂತ್ರ ಗಣತಂತ್ರಗಳ ಒಂದು ಒಕ್ಕೂಟ ರಷ್ಯದ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು.
10. ಎರಡನೆಯ ಮಹಾಯುದ್ಧದ ಬಳಿಕ ಸ್ವತಂತ್ರಗೊಂಡ ಏಷ್ಯದ ಐದು ರಾಷ್ಟ್ರಗಳು ಯಾವುವು.?
• ಭಾರತ, ಶ್ರೀಲಂಕಾ, ಬರ್ಮಾ(ಮ್ಯಾನ್ಮರ್), ಇಂಡೋನೇಷ್ಯ ಮತ್ತು ಬಾಂಗ್ಲಾದೇಶ
11. ಬರ್ಮಾ ದೇಶದ ಈಗಿನ ಹೆಸರೇನು?
• ಮ್ಯಾನ್ಮಾರ್
12. ಮಲಯಾ ಯಾರ ವಸಾಹತು ಆಗಿತ್ತು?
• ಮಲಯಾವು ಬ್ರಿಟಿಷರ ವಸಾಹತು ಆಗಿತ್ತು.
13. ಮಲಯಾವು ಯಾವಾಗ ಸ್ವತಂತ್ರವಾಯಿತು?
• 1957 ರಲ್ಲಿ ಮಲಯಾವು ಸ್ವತಂತ್ರವಾಯಿತು.
14. ಮಲೇಶಿಯಾ ದೇಶವು ಯಾವಾಗ ರೂಪುಗೊಂಡಿತು?
• ಮಲೇಶಿಯಾವು 1963 ರಲ್ಲಿ ರಚನೆಗೊಂಡಿತು.
15. ಯಾವೆಲ್ಲ ಪ್ರದೇಶಗಳು ಸೇರಿ ಮಲೇಶಿಯಾ ಒಕ್ಕೂಟ ರಚಿಸಲ್ಪಟ್ಟಿತು?
• ಸಾಭಾ, ಸಾರ್ವಾಕ್ , ಸಿಂಗಾಪುರ್ ಮತ್ತು ಬ್ರೂನೈಗಳು ಸೇರಿ ಮಲೇಶಿಯಾ ಒಕ್ಕೂಟ ರಚನೆಯಾಯಿತು.
16. ಮಲೇಶಿಯಾದಿಂದ ಹೊರಬಂದು ಪ್ರತ್ಯೇಕ ಸ್ವತಂತ್ರ ಗಣತಂತ್ರಗಳಾದ ಪ್ರದೇಶಗಳಾವುವು?
• ಸಿಂಗಾಪುರ್ ಮತ್ತು ಬ್ರೂನೈಗಳು ಮಲೇಶಿಯಾದಿಂದ ಹೊರಬಮದು ಪ್ರತ್ಯೇಕ ಸ್ವತಂತ್ರ ಗಣತಂತ್ರಗಳಾದವು.
17. ಸಿಂಹಳದ ಇಂದಿನ ಹೆಸರೇನು?
• ಸಿಂಹಳದ ಇಂದಿನ ಹೆಸರು – ಶ್ರೀಲಂಕಾ
18. ಶ್ರೀಲಂಕಾ ಯಾವಾಗ ಸ್ವತಂತ್ರವಾಯಿತು?
• 1948 ರಲ್ಲಿ ಸ್ವತಂತ್ರವಾಯಿತು.
19. ಲಿಬಿಯಾ ಯಾವ ದೇಶದ ವಸಾಹತು ಆಗಿತ್ತು?
• ಲಿಬಿಯ ಇಟಲಿಯ ವಸಾಹತು ಆಗಿತ್ತು.
20. ಲಿಬಿಯಾ ಯಾವಾಗ ಸ್ವತಂತ್ರವಾಯಿತು?
• 1952 ರಲ್ಲಿ ಸ್ವತಂತ್ರವಾಯಿತು.
21. ಎರಡನೇ ಮಹಾಯುದ್ಧದ ನಂತರ ಸ್ವತಂತ್ರಗೊಂಡ ಐದು ಆಫ್ರಿಕಾದ ದೇಶಗಳನ್ನು ಹೆಸರಿಸಿರಿ.
• ಕೀನ್ಯಾ, ಟಾಮಜೇನಿಯಾ, ಘಾನಾ , ನೈಜೀರಿಯಾ, ಮತ್ತು ಮೊರೊಕ್ಕೊ
22. ಕೀನ್ಯಾದ ಸ್ವಾತಂತ್ರ್ಯ ಹೋರಾಟದ ನಾಯಕ ಯಾರು?
• ಕೀನ್ಯಾ ದೇಶದ ಸ್ವಾತಂತ್ರ್ಯ ಹೋರಾಟಗಾರ ನಾಯಕ- ಜೋಮೋ ಕೆನ್ಯಾಟಾ
23. ಕೀನ್ಯಾ ಹೇಗೆ ಸ್ವತಂತ್ರ ಗಣರಾಜ್ಯವಾಯಿತು?
• ಕೀನ್ಯಾ ದೇಶವು ಜೋಮೋ ಕೆನ್ಯಾಟಾ ಎಂಬ ನಾಯಕರ ನೇತೃತ್ವದಲ್ಲಿ ಚಳುವಳಿ ನಡೆಸಿತು. ಮೌಮೌ ಎಂಬ ಚಳುವಳಿಗಾರರ ನಾಲ್ಕು ವರ್ಷಗಳ ಬಂಡಾಯದ ನಂತರ 1963 ರಲ್ಲಿ ಕೀನ್ಯಾ ಸ್ವತಂತ್ರ ಗಣರಾಜ್ಯವಾಯಿತು.
24. ಟಾಂಗನೀಕವು ಯಾರ ನೇತೃತ್ವದಲ್ಲಿ ಸ್ವಾಥಂತ್ರ್ಯದ ಹೋರಾಟ ನಡೆಸಿತು.?
• ಟಾಂಗನೀಕವು ‘ನೈರೇರೆ’ ಅವರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಹೋರಾಟ ನಡೆಸಿತು.
25. ಟಾಂಗನೀಕವು ಯಾವಾಗ ಮತ್ತು ಹೇಗೆ ಅಸ್ತಿತ್ವಕ್ಕೆ ಬಂದಿತು?
• ಟಾಂಗನೀಕವು 1964 ರಲ್ಲಿ ಜಂಜಿಬಾರ ದ್ವೀಪದೊಂದಿಗೆ ಸೇರಿ ಒಕ್ಕೂಟ ರಚಿಸಿತು. ಇದರ ಹೆಸರನ್ನು ‘ ಟಾಂಜಿನಿಯ’ ಎಂದು ಬದಲಾಯಿಸಲಾಯಿತು.
26. ಘಾನಾದ ಹಿಂದಿನ ಹೆಸರೇನು?
• ಘಾನಾದ ಹಿಂದಿನ ಹೆಸರು ‘ಗೋಲ್ಡ್ಕೋಸ್ಟ್’.
27. ಫ್ರೆಂಚರ ಆಳ್ವಿಕೆಗೆ ಒಳಪಟ್ಟಿದ್ದ ಆಫ್ರಕಾದ ದೇಶಗಳಾವುವು?
• ಅಲ್ಜೀರಿಯಾ, ಟ್ಯುನಿಸಿಯಾ, ಮೊರಾಕ್ಕೊ ಮತ್ತು ಗಿನಿಯಾಗಳು ಫ್ರೆಂಚರ ಆಳ್ವಿಕೆಗೆ ಒಳಪಟ್ಟಿದ್ದ ಆಫ್ರಿಕಾದ ದೇಶಗಳು.
28. ಆಫ್ರಿಕಾದ ಪೋರ್ಚುಗೀಸರ ವಸಾಹತುಗಳು ಯಾವುವು?
• ಅಂಗೋಲಾ ಮತ್ತು ಮೊಜಾಂಬಿಕ್ ಆಫ್ರಿಕಾದ ಪೋರ್ಚುಗೀಸ್ ವಸಾಹತುಗಳು.
29. ಆಫ್ರಿಕಾ ಖಂಡದಲ್ಲಿ ವಸಾಹತುಗಳನ್ನು ಹೊಂದಿದ್ದ ಯೂರೋಪಿನ ದೇಶಗಳಾವುವು?
• ಇಂಗ್ಲೆಂಡ್, ಫ್ರಾಣ್ಸ್, ಜರ್ಮನಿ, ಸ್ಪೇನ್, ಪೋರ್ಚುಗಲ್, ಇಟಲಿ ಇವು ಯೂರೋಪಿನಲ್ಲಿ ತಮ್ಮ ವಸಾಹತುವನ್ನು ಹೊಂದಿದವು.
30. ಉಗಾಂಡಾ ಯಾವಾಗ ಮತ್ತು ಯಾರ ನೇತೃತ್ವದಲ್ಲಿ ಸ್ವತಂತ್ರವಾಯಿತು?
• ಉಗಾಂಡಾ 1963 ರಲ್ಲಿ ‘ಓಬೋಟೆ’ ಅವರ ನೇತೃತ್ವದಲ್ಲಿ ಸ್ವತಂತ್ರವಾಯಿತು.
31. ಈಜಿಪ್ಟ್ ಯಾವ ದೇಶದ ವಶದಲ್ಲಿತ್ತು?
• ಈಜಿಪ್ಟ್ ಬ್ರಿಟಿಷರ ವಶದಲ್ಲಿತ್ತು.
32. ಈಜಿಪ್ಟ್ ಯಾವಾಗ ಸ್ವತಂತ್ರವಾಯಿತು?
• 1933 ರಲ್ಲಿ ಈಜಿಪ್ಟ್ ಸ್ವತಂತ್ರವಾಯಿತು.
33. ಈಜಿಪ್ಟ್ ಯಾವಾಗ ಒಂದು ಗಣತಂತ್ರವಾಯಿತು?
• 1953 ರಲ್ಲಿ ಈಜಿಪ್ಟ್ ಒಂದು ಗಣತಂತ್ರವಾಯಿತು.
34. ಈಜಿಪ್ಟ್ನ ಮೊದಲ ಅಧ್ಯಕ್ಷ ಯಾರು?
• ಅಬ್ದುಲ್ ನಾಸೆರ್ ಈಜಿಪ್ಟ್ನ ಮೊದಲ ಅಧ್ಯಕ್ಷರಾಗಿದ್ದರು.
35. ಆಫ್ರಿಕಾದ ದೇಶಗಳು ಸೇರಿಕೊಂಡು ರಚಿಸಿದ ಸಂಘಟನೆ ಯಾವುದು?
• ಆರ್ಗನೈಜೇಶನ್ ಆಫ್ ಆಫ್ರಿಕನ್ ಯುನಿಟಿ(ಒ. ಎ. ಯು)
36. ಯಹೂದಿಗಳಿಗೆ ಹೊಸ ತಾಯಿನಾಡನ್ನು ಕಟ್ಟಲು ಯಾರು ಸಹಾಯ ಮಾಡಿದರು?
• ಅಮೆರಿಕ ಮತ್ತು ಇಂಗ್ಲೆಂಡ್ ಜಗತ್ತಿನಾದ್ಯಂತ ಚದುರಿದ್ದ ಯಹೂದಿಗಳಿಗೆ ಇಸ್ರೇಲ್ನಲ್ಲಿ ಹೊಸ ತಾಯಿನಾಡನ್ನು ಕಟ್ಟಲು ಸಹಾಯ ಮಾಡಿದರು.
37. ಸೂಯೆಜ್ ಕಾಲುವೆ ಯಾವಾಗ ರಾಷ್ಟ್ರೀಕರಿಸಲ್ಪಟ್ಟಿತು?
• 1956 ರಲ್ಲಿ ಸೂಯೆಜ್ ಕಾಲುವೆ ರಾಷ್ಟ್ರೀಕರಣವಾಯಿತು.
38. ಯಾವಾಗ ಮತ್ತು ಯಾರ ನಡುವೆ ‘ಕ್ಯಾಂಪ್ ಡೇವಿಡ್ ಒಪ್ಪಂದ’ ನಡೆಯಿತು?
• ಈಜಿಪ್ಟ್ ಮತ್ತು ಇಸ್ರೇಲ್ಗಳ ನಡುವೆ 1978 ರಲ್ಲಿ ಕ್ಯಾಂಪ್ ಡೇವಿಡ್ ಒಪ್ಪಂದ ನಡೆಯಿತು. ಇದರ ಪ್ರಕಾರ ಇಸ್ರೇಲ್ ಸಿನಾಯ್ ಪರ್ಯಾಯ ದ್ವೀಪ ಪ್ರದೇಶವನ್ನು ತೆರವು ಮಾಡಿತು.
39. ಪಿ.ಎಲ್. ಎ ಇದರ ಪೂರ್ಣರೂಪ ಯಾವುದು? ಅದರ ನಾಯಕ ಯಾರು?
• ಪ್ಯಾಲೆಸ್ತೀನ್ ಲಿಬರೇಶನ್ ಆರ್ಮಿ. ‘ಯಾಸರ್ ಅರಾಫತ್’ ಅದರ ನಾಯಕರು.
40. ಯಾವ ದೇಶವನ್ನು ‘ ಭೂಕಂಪಗಳ ದೇಶ’ ಎಂದು ಕರೆಯುತ್ತಾರೆ?
• ಜಪಾನ್ ದೇಶವನ್ನು ಭೂಕಂಪಗಳ ದೇಶ’ ಎಂದು ಕರೆಯುತ್ತಾರೆ.