Thursday, November 21, 2024
Latest:
Current AffairsSpardha TimesTechnology

ಭಾರತದ ಮೊದಲ ಮರುಬಳಕೆ ಹೈಬ್ರಿಡ್ ರಾಕೆಟ್ ‘RHUMI-1’ ಯಶಸ್ವಿ ಉಡಾವಣೆ

Share With Friends

ಭಾರತವು ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ (Hybrid Rocket ‘RHUMI-1) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಚೆನ್ನೈನ ತಿರುವಿದಂಧೈನಿಂದ ರಾಕೆಟ್‌ ಉಡಾವಣೆ ಮಾಡಲಾಯಿತು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಧನೆಗೆ ಇದು ಮತ್ತೊಂದು ಗರಿಯಾಗಿದೆ. ಈ ಉಪಗ್ರಹಗಳು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಸಂಶೋಧನಾ ಉದ್ದೇಶಗಳಿಗಾಗಿ ಡೇಟಾ ಮತ್ತು ಮಾಹಿತಿಯನ್ನು ಸಂಗ್ರಹಿಸುತ್ತವೆ.

*RHUMI-1 ರಾಕೆಟ್ ದಕ್ಷತೆಯನ್ನು ಸುಧಾರಿಸಲು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ದ್ರವ ಮತ್ತು ಘನ ಇಂಧನ ಪ್ರೊಪೆಲ್ಲಂಟ್ ಸಿಸ್ಟಮ್‌ಗಳು ಅನುಕೂಲಕರವಾಗಿವೆ.

*ISRO ಉಪಗ್ರಹ ಕೇಂದ್ರದ (ISAC) ಮಾಜಿ ನಿರ್ದೇಶಕ ಡಾ. ಮೈಲ್ಸ್ವಾಮಿ ಅಣ್ಣಾದೊರೈ ಅವರ ಮಾರ್ಗದರ್ಶನದಲ್ಲಿ ಸ್ಪೇಸ್‌ ಝೋನ್ ಸಂಸ್ಥಾಪಕ ಆನಂದ್ ಮೇಗಲಿಂಗಂ ಅವರು RHUMI ಮಿಷನ್ ಅನ್ನು ಮುನ್ನಡೆಸಿದ್ದಾರೆ.

( ಕ್ರಿಕೆಟ್‌ಗೆ ವಿದಾಯ ಹೇಳಿದ ಶಿಖರ್ ಧವನ್ )

*ಸ್ಪೇಸ್ ಝೋನ್ ಇಂಡಿಯಾ ಎಂಬುದು ಚೆನ್ನೈನಲ್ಲಿರುವ ಏರೋ-ಟೆಕ್ನಾಲಜಿ ಕಂಪನಿಯಾಗಿದ್ದು, ಬಾಹ್ಯಾಕಾಶ ಉದ್ಯಮದಲ್ಲಿ ಕಡಿಮೆ-ವೆಚ್ಚದ, ದೀರ್ಘಾವಧಿಯ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

*ಮಾರ್ಟಿನ್ ಗ್ರೂಪ್‌ನೊಂದಿಗೆ ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಸ್ಪೇಸ್ ಝೋನ್ ಇಂಡಿಯಾ ಅಭಿವೃದ್ಧಿಪಡಿಸಿದ ಮೂರು ಕ್ಯೂಬ್ ಉಪಗ್ರಹಗಳು ಮತ್ತು 50 PICO ಉಪಗ್ರಹಗಳನ್ನು ಹೊತ್ತ ರಾಕೆಟ್ ಅನ್ನು ಮೊಬೈಲ್ ಲಾಂಚರ್ ಬಳಸಿ ಉಪಕಕ್ಷೆಯ ಪಥಕ್ಕೆ ಉಡಾವಣೆ ಮಾಡಲಾಯಿತು.

*ರಾಕೆಟ್ ಮೂರು ಕ್ಯೂಬ್ ಉಪಗ್ರಹಗಳು ಮತ್ತು ಐವತ್ತು PICO ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ತೆಗೆದುಕೊಂಡು ಹೋಗುತ್ತದೆ. ರಾಕೆಟ್‌ನ ಅದ್ಭುತವಾಗಿ ವಿನ್ಯಾಸ ಮಾಡಲಾಗಿದೆ ಹಾಗೂ ಮರುಬಳಕೆ ಮಾಡಲಾಗಿದೆ.

ರಾಕೆಟ್ ವೈಶಿಷ್ಟ್ಯಗಳು:
1.ಹೊಂದಾಣಿಕೆ ಮಾಡಿಕೊಂಡು ಉಡಾಯಣಾ ಮಾಡಲಾಗಿದೆ: ಮಾರ್ಟಿನ್ ಗ್ರೂಪ್‌ ತಿಳಿಸಿರುವ ಪ್ರಕಾರ, ರಾಕೆಟ್ ಉಡಾವಣಾ ಕೋನ ರೂಪವನ್ನು ಹೊಂದಿದ್ದು, ಇದನ್ನು 0ಯಿಂದ 120 ಡಿಗ್ರಿಗಳವರೆಗೆ ನಿಖರವಾಗಿ ಸರಿಹೊಂದಿಸಬಹುದು. ಇದು ತನ್ನ ಪಥದ ಮೇಲೆ ನಿಖರವಾದ ನಿಯಂತ್ರಣವನ್ನು ಹೊಂದಿರುತ್ತದೆ.
2.ಶೈಕ್ಷಣಿಕ ಪರಿಣಾಮ: ಭಾರತದಾದ್ಯಂತ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಾಕೆಟ್ ಮತ್ತು ಉಪಗ್ರಹ ತಂತ್ರಜ್ಞಾನದ ಉಚಿತ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
3.CO2-ಆಧಾರಿತ ಪ್ಯಾರಾಚೂಟ್ ವ್ಯವಸ್ಥೆ: ಒಂದು ನವೀನತೆ, ಕಡಿಮೆ ವೆಚ್ಚ, ಪರಿಸರ ಸ್ನೇಹಿ ಹಾಗೂ ರಾಕೆಟ್ ಘಟಕಗಳಲ್ಲಿ ಸುರಕ್ಷಿತ ಮರುಜೋಡಾನೆಯನ್ನು ಕೂಡ ಖಚಿತಪಡಿಸುತ್ತದೆ.
4.ಬಾಹ್ಯಾಕಾಶ ಪರಿಶೋಧನೆ ಮೀರಿ ಕಾರ್ಯಚರಣೆ : ಬಾಹ್ಯಾಕಾಶ ಪರಿಶೋಧನೆಯನ್ನು ಮೀರಿ ಕೃಷಿ, ಪರಿಸರ ಮೇಲ್ವಿಚಾರಣೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಿಗೆ ವಿಸ್ತರಿಸುತ್ತವೆ.

Leave a Reply

Your email address will not be published. Required fields are marked *

error: Content Copyright protected !!