GKIndian ConstitutionSpardha Times

ಭಾರತೀಯ ಕೌನ್ಸಿಲ್ ಕಾಯ್ದೆ- 1909 (ಮಿಂಟೋ-ಮಾರ್ಲೆ ಸುಧಾರಣೆ)

Share With Friends

ಸಾಮಾನ್ಯವಾಗಿ ಮಾರ್ಲೆ- ಮಿಂಟೋ ಸುಧಾರಣೆಗಳು ಎಂದು ಕರೆಯಲಾಗುತ್ತದೆ.ಯುನೈಟೆಡ್ ಕಿಂಗ್ಡಮ್ ನ ಬ್ರಿಟಿಷ್ ಸಂಸತ್ತಿನಲ್ಲಿ ಜಾರಿಯಾದ ಈ ಅಧಿನಿಯಮ ಭಾರತದ ಬ್ರಿಟಿಷ್ ಸರ್ಕಾರದಲ್ಲಿ ಹಂತ ಹಂತವಾಗಿ ಭಾರತೀಯರ ಸಹಭಾಗಿತ್ವವವನ್ನು ಹೆಚ್ಚಿಸುವ ಅಂಶಗಳನ್ನು ಒಳಗೊಂಡಿದ್ದಿತು. ಮಿಂಟೋ-ಮಾರ್ಲೆ ಸುಧಾರಣೆಯ ಮೂಲಕ ಭಾರತೀಯ ಪರಿಷತ್ ಅಧಿನಿಯಮ 1861 ಹಾಗು ಭಾರತೀಯ ಪರಿಷತ್ ಅಧಿನಿಯಮ 1892 ತಿದ್ದುಪಡಿಯೂ ಆದಂತಾಯಿತು

# ಕಾಯ್ದೆಯ ಪ್ರಮುಖ ಲಕ್ಷಣಗಳು
• ಪ್ರತ್ಯೇಕ ಮತದಾರರ ಹಕ್ಕನ್ನು ಮುಸ್ಲಿಮರಿಗೆ ನೀಡಲಾಯಿತು.
• ಕೇಂದ್ರದಲ್ಲಿ ಶಾಸಕಾಂಗ ಪರಿಷತ್ತಿನ ನಾಮನಿರ್ದೇಶಿತ ಮತ್ತು ಚುನಾಯಿತ ಸದಸ್ಯರ ಗರಿಷ್ಠ ಸಂಖ್ಯೆಯನ್ನು 16 ರಿಂದ 60 ಕ್ಕೆ ಹೆಚ್ಚಿಸಲಾಯಿತು. ಆದರೆ ಪರಿಷತ್ತಿನಲ್ಲಿ ಪದನಿಮಿತ್ತ ಸದಸ್ಯರು ಇರಲಿಲ್ಲ. ಆದ್ದರಿಂದ ಶಾಸಕಾಂಗ ಮಂಡಳಿಗಳಲ್ಲಿ ಹೆಚ್ಚಿನ ಭಾರತೀಯರು ಭಾಗವಹಿಸಲು ಅನುವು ಮಾಡಿಕೊಡಲಾಯಿತು.

• ಕೇಂದ್ರದಲ್ಲಿ ಅಧಿಕೃತ ಸದಸ್ಯರು ಬಹುಮತವನ್ನು ರಚಿಸತಕ್ಕದ್ದು, ಆದರೆ ಪ್ರಾಂತ್ಯಗಳಲ್ಲಿ ಅಧಿಕೃತೇತರ ಸದಸ್ಯರು ಬಹುಮತ ಹೊಂದಿರುತ್ತಾರೆ.

• ಇಬ್ಬರು ಭಾರತೀಯರನ್ನು ಸೆಕ್ರೆಟರೀ ಆಫ್ ಸ್ಟೇಟ್ ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಯಿತು.

• ಒಬ್ಬ ಭಾರತೀಯ ಸದಸ್ಯನನ್ನು ತನ್ನ ಕಾರ್ಯಕಾರಿ ಮಂಡಳಿಗೆ ನಾಮನಿರ್ದೆಶನ ಮಾಡಲು ಗವರ್ನರ್ ಜನರಲ್‍ಗೆ ಅಧಿಕಾರ ನೀಡಲಾಯಿತು.

• ಶಾಸಕಾಂಗ ಪರಿಷತ್ತಿಗೆ ಸದಸ್ಯರಿಗೆ ಬಜೆಟ್ ಕುರಿತ ಚರ್ಚಿಸಲು, ತಿದ್ದುಪಡಿಗಳನ್ನು ಸೂಚಿಸಲು ಮತ್ತು ಕೆಲವು ವಿಷಯಗಳನ್ನು ಹೊರತುಪಡಿಸಿ ಅವುಗಳ ಮೇಲೆ ಮತ ಚಲಾಯಿಸಲು ಅನುಮತಿ ನೀಡಲಾಯಿತು.ಶಾಸಕಾಂಗ ಪ್ರಕ್ರಿಯೆಯಲ್ಲಿ ಪೂರಕ ಪ್ರಶ್ನೆಗಳನ್ನು ಕೇಳಲು ಸದಸ್ಯರಿಗೆ ಅನುಮತಿ ನೀಡಲಾಯಿತು.

• ಸರ್ಕಾರಿ ಸದಸ್ಯರು ಬಹು ಸಂಖ್ಯೆಯಲ್ಲಿದ್ದರೂ ಸಂಸ್ಥಾನಗಳಲ್ಲಿ ಸರ್ಕಾರೇತರ ಸದಸ್ಯರು ಬಹುಸಂಖ್ಯೆಯಲ್ಲಿ ಇರಬಹುದಾಗಿತ್ತು.

• ವಿಧಾನ ಪರಿಷತ್ ನ ಸದಸ್ಯರಿಗೆ ಅಯ-ವ್ಯಯ ಕುರಿತು ಚರ್ಚಿಸುವ, ಸಲಹೆಗಳನ್ನು ನೀಡುವ ಹಾಗು ತಿದ್ದುಪಡಿಗಳಿಗೆ ಆಗ್ರಹಿಸುವ ಹಕ್ಕನ್ನು ಕೊಡಲಾಗಿತ್ತು. ಬ್ರಿಟಿಷ್ ಸಂಸತ್ತು ಕೆಲವು ವಿಚಾರಗಳನ್ನು ಮತ ವ್ಯಾಪ್ತಿಯಿಂದ ಹೊರಗಿಟ್ಟು ಇನ್ನುಳಿದವುಗಳಿಗೆ ಮತದ ಮುಖಾಂತರ ವಿಧಾನ ಪರಿಷತ್ ಸದಸ್ಯರು ಒಪ್ಪಿಗೆ ಸೂಚಿಸಲು ಅಧಿಕಾರವನ್ನು ಕೊಡಮಾಡಲಾಗಿತ್ತು.

• ಭಾರತದ ರಾಜ್ಯ ಕಾರ್ಯದರ್ಶಿಗಳಿಗೆ ಮದ್ರಾಸ್ ಹಾಗು ಬಾಂಬೆ ಪ್ರಾಂತಗಳ ಕಾರ್ಯನಿರ್ವಾಹಕ ಪರಿಷತ್ ಗಳ ಸಂಖ್ಯೆಯನ್ನು 2 ರಿಂದ 4 ಕ್ಕೆ ಏರಿಸುವ ಅಧಿಕಾರ ಕೊಡಲಾಯಿತು.

• ಭಾರತೀಯ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಗಳ ಪರಿಷತ್ ಗೆ ಇಬ್ಬರು ಭಾರತೀಯರನ್ನು ನಾಮ ನಿರ್ದೇಶನ ಮಾಡಲಾಯಿತು.  ಭಾರತದ ಗವರ್ನರ್ ಜೆನರಲ್ ಅವರಿಗೆ ತಮ್ಮ ಕಾರ್ಯನಿರ್ವಾಹಕ ಪರಿಷತ್ ಗೆ ಒಬ್ಬ ಭಾರತೀಯನನ್ನು ನೇಮಿಸಿಕೊಳ್ಳಲು ಅಧಿಕಾರ ಕೊಡಲಾಯಿತು.

error: Content Copyright protected !!