ScienceSpardha Times

ಜಡಾನಿಲಗಳು

Share With Friends

• ಜಡಾನಿಲಗಳು ಹಲವಾರು ವಸ್ತುಗಳೊಡನೆ ರಾಸಾಯನಿಕ ಪ್ರತಿಕ್ರಿಯೆ ನೀಡದಂತಹ ಅನಿಲವಾಗಿದೆ. ಯಾವುದೇ ಧಾತುವು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಲು ವೇಲೆನ್ಸಿ ಎಲೆಕ್ಟ್ರಾನ್‍ಗಳ ಅವಶ್ಯಕತೆಯಿದೆ. ಯಾವುದೇ ಧಾತುವು ಇಲೆಕ್ಟ್ರಾನ್‍ಗಳನ್ನು ಸ್ವೀಕರಿಸಬೇಕಾದರೆ ಅದರ ಕೊನೆಯ ಕಕ್ಷೆಯಲ್ಲಿ ಖಾಲಿ ಜಾಗವಿರಬೇಕು. ಅಥವಾ ಯಾವುದೇ ಧಾತು ಇಲೆಕ್ಟ್ರಾನ್‍ಗಳನ್ನು ಕೊಡಬೇಕಾದರೂ ಸಹ ಅದರ ಕೊನೆಯ ಕಕ್ಷೆಯಲ್ಲಿ ಪೂರ್ತಿ ತುಂಬದ ಎಲೆಕ್ಟ್ರಾನ್‍ಗಳು ಇರಬೇಕು. ಆದರೆ ಜಡಾನಿಲಗಳಲ್ಲಿ ಅದರ ಕೊನೆಯ ಕಕ್ಷೆಯು ಪೂರ್ತಿ ತುಂಬಿರುತ್ತದೆ. ಆದ್ದರಿಂದ ಅದು ಎಲೆಕ್ಟ್ರಾನ್‍ಗಳನ್ನು ಸ್ವೀಕರಿಸಲು ಖಾಲಿ ಜಾಗವಾಗಲೀ, ಎಲೆಕ್ಟ್ರಾನಗಳನ್ನು ಕೊಡಲು ವೇಲೆನ್ಸಿ (ಸ್ವತಂತ್ರ್) ಎಲೆಕ್ಟ್ರಾನ್‍ಗಳಾಗಲಿ ಇರುವುದಿಲ್ಲ. ಆದ್ದರಿಂದ ಇವು ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದ್ದರಿಂದ ಇವುಗಳನ್ನು ಜಡಾನಿಲಗಳು ಎನ್ನುವರು.

• 18 ನೇ ಗುಂಪಿನ ಧಾತುಗಳು
ಇವು ಆವರ್ತ ಕೋಷ್ಠಕದ ಕೊನೆಯ ಗುಂಪು. ಈ ಗುಂಪಿನ ಧಾತುಗಳನ್ನು ‘ಜಡಾನಿಲಗಳು’ ಅಥವಾ ‘ರಾಜಾನಿಲಗಳು’ ಎನ್ನುವರು.

• ಜಡಾನಿಲಗಳು ಸಾಮಾನ್ಯವಾಗಿ ಅದರ ಕೊನೆಯ ಕಕ್ಷೆಯಲ್ಲಿ ಪೂರ್ತಿ ತುಂಬಿದ್ದು, 8 ಎಲೆಕ್ಟ್ರಾನಗಳನ್ನು ಹೊಂದಿದೆ. ಆದ್ದರಿಂದ ಇದನ್ನು ‘ ಅಷ್ಟಕ ಜೋಡಣೆ’ ಎನ್ನುವರು.

• ಜಡಾನಿಲಗಳನ್ನು ‘ಪ್ರತಿಷ್ಠಿತ ಅನಿಲ,’ ‘ನೊಬೆಲ್ ಅನಿಲಗಳು’ ಎಂದು ಕೂಡ ಕರೆಯುತ್ತಾರೆ.

• ಗಾಳಿಯಲ್ಲಿ ಜಡಾನಿಲಗಳು ಅವುಗಳ ಗಾತ್ರಾನುಸಾರವಾಗಿ ಶೇಕಡಾಂಶ ಬಹಳ ಕಡಿಮೆ ಇರುವುದರಿಂದ ಅವುಗಳನ್ನು ‘ವಿರಳಾನಿಲಗಳು’ ಎನ್ನುವರು.
ಉದಾ: ಹೀಲಿಯಂ , ನಿಯಾನ್ , ಆರ್ಗಾನ್ , ಕ್ರಿಪ್ಟಾನ್, ಕ್ಸೆನಾನ್ , ರೇಡಾನ್

• ಹೀಲಿಯಂನ ಉಪಯೋಗಗಳು:
1. ಇದನ್ನು ವಾಯುಗುಣವೀಕ್ಷಕ ಬಲೂನ್‍ಗಳಲ್ಲಿ ಬಳಸುವರು.
2. 4.2 ಕೆ ಕಡಿಮೆ ತಾಪವನ್ನು ಪಡೆಯಲು ದ್ರವ ಹೀಲಿಯಂ ಉಪಯೋಗಿಸುವರು.
3. ಇದನ್ನು ಕೃತಕ ಉಸಿರಾಟಕ್ಕೆ ಬಳಸುವರು. ಸಮುದ್ರ ತಳದಲ್ಲಿ ಸಂಶೋಧನೆ ಮಾಡುವ ಮುಳುಗುಗಾರರಿಗೆ ಕೃತಕ ಉಸಿರಾಟಕ್ಕೆ ಮೊದಲು ಗಾಳಿಯನ್ನು ಬಳಸಲಾಗುತ್ತಿತ್ತು. ಆದರೆ ಅಲ್ಲಿನ ಅಧಿಕ ಒತ್ತಡದಲ್ಲಿ ಗಾಳಿಯಲ್ಲಿರುವ ನೈಟ್ರೋಜನ್ ಮುಳುಗುಗಾರರ ರಕ್ತದಲ್ಲಿ ವಿಲೀನಗೊಂಡಿರುತ್ತದೆ. ಅವರು ಮೇಲೆ ಬಂದ ಮೇಲೆ, ನೈಟ್ರೋಜನ್ ದೇಹದಿಂದ ಹೊರಕ್ಕೆ ಹೋಗುವವರೆಗೆ ದೇಹದಲ್ಲಿ ನೋವಿನ ಬಾಧೆ ಕಾಡುತ್ತದೆ. ಆದ್ದರಿಂದ ಈಗ ಕೃತಕ ಉಸಿರಾಟಕ್ಕೆ ಗಾಳಿಯ ಬದಲು ಹೀಲಿಯಂ ಮತ್ತು ಆಕ್ಸಿಜನಗಳ ಮಿಶ್ರಣವನ್ನು ಬಳಸುವರು.
4. ಇದನ್ನು ರೇಡಿಯೋ ಕೊಳವೆಗಳಲ್ಲಿ , ಸಿಗ್ನಲ್ ದೀಪಗಳಲ್ಲಿ ಅನಿಲಗಳಿಂದ ತಣಿಯುವ ನ್ಯೂಕ್ಲಿಯರ್ ರಿಯಾಕ್ಟರ್‍ಗಳಲ್ಲಿ ಉಪಯೋಗಿಸುವರು.

• ನಿಯಾನಿನ ಉಪಯೋಗಗಳು:
1. ನಿಯಾನ್ ಸಿಗ್ನಲ್ ದೀಪಗಳ ಉತ್ಪಾದನೆಯಲ್ಲಿ ಬಳಸುವರು.
2. ನಿಯಾನ್ ಮಿನುಗು ದೀಪಗಳನ್ನು ಜಾಹೀರಾತು ಫಲಕಗಳಲ್ಲಿ ಬಳಸುವರು.
3. ಇದನ್ನು ವೋಲ್ಟೇಜ್ ಸ್ವೆಬಿಲೈಸರ್‍ಗಳಲ್ಲಿ ಉಪಯೋಗಿಸುವರು.

• ಆರ್ಗಾನ್ ಉಪಯೋಗಗಳು:
1. ಲೋಹದ ಬೆಸುಗೆಗೆ ಬೇಕಾದ ಜಡ ವಾತಾವರಣದ ಸೃಷ್ಟಿಗೆ.
2. ಟಂಗಸ್ಟನ್ ತಂತಿಯ ಬಾಳಿಕೆ ಹೆಚ್ಚಿಸಲು ವಿದ್ಯುತ್ ಬಲ್ಬುಗಳಲ್ಲಿ ತುಂಬಲು.
3. ನಿಯಾನ್ ದೀಪಗಳ ತಯಾಋಇಕೆಯಲ್ಲಿ ಉಪಯೋಗಿಸುವರು.

• ಕ್ರಿಪ್ಟಾನ್ ಅನಿಲದ ಉಪಯೋಗಗಳು:
1. ವಿದ್ಯುತ್ ದೀಪಗಳನ್ನು ತುಂಬಲು
2. ಗಣಿ ಕಾರ್ಮಿಕರ ಟೊಪ್ಪಿಯಲ್ಲಿರುವ ದೀಪದ ಉತ್ಪಾದನೆಯಲ್ಲಿ ಬಳಸಬಹುದು.

• ಕ್ಸೆನಾನ ಅನಿಲದ ಉಪಯೋಗಗಳು
1. ವಿದ್ಯುತ್ ದೀಪಗಳಲ್ಲಿ
2. ಸಂಶೋಧನಾಲಯಗಳಲ್ಲಿ ಕಿರಣಗಳನ್ನು ಪತ್ತೆ ಹಚ್ಚಲು ಉಪಯೋಗಿಸಬಹುದು.

• ರೇಡಾನ್ ಅನಿಲದ ಉಪಯೋಗಗಳು:
1. 18 ನೇ ಗುಂಪಿನ ಧಾತುಗಳಲ್ಲಿ ರೇಡಾನ್ ಮಾತ್ರ ಏಕೈಕ ವಿಕಿರಣಶೀಲ ಧಾತುವಾಗಿದೆ.
2. ಇದನ್ನು ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಬಳಸುತ್ತಾರೆ.
3. ವಿಕಿರಣ ಸಂಶೋಧನೆಯಲ್ಲಿ ಬಳಸುವರು.

• ಗಾಳಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಜಡಾನಿಲಗಳಿವೆ. ಅವುಗಳನ್ನು ಬೇರ್ಪಡಿಸುವ ವಿಧಾನ :
1.        ರಾಯಮಸೇ     ಮತ್ತು ರಾಯಲಿ ವಿಧಾನ
2. ದೀವಾರ್ ವಿಧಾನ: ದೀವಾರ್ ವಿಧಾನದಲ್ಲಿ ಗಾಳಿಯಿಂದ ಬೇರ್ಪಡಿಸುವ ಬದಲು ಇದ್ದಿಲಿನಿಂದ ಬೇರ್ಪಡಿಸುತ್ತಾರೆ

error: Content Copyright protected !!