ಭಾರತದ ಹೆಮ್ಮೆ ಐಎನ್ಎಸ್ ವಿಕ್ರಾಂತ್ ಬಗ್ಗೆ ನಿಮಗೆಷ್ಟು ಗೊತ್ತು..?
ಭಾರತದ ಮೊದಲ ದೇಶೀಯ ಅತ್ಯಂತ ದೊಡ್ಡ, ಸಂಕೀರ್ಣ ಯುದ್ಧನೌಕೆ ವಿಮಾನವಾಹಕ (Indigenous Aircraft Carrier – IAC) ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗವನ್ನು ಪ್ರಾರಂಭಿಸಿದೆ. ಭಾರತದ ನೌಕಾಪಡೆಗೆ ಐಎನ್ಎಸ್ ವಿಕ್ರಾಂತ್ 2022 ಕ್ಕೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ. ಇದರ ಭಾಗವಾಗಿ ಕೊಚ್ಚಿಯ ಸಮುದ್ರದಲ್ಲಿ ಅಭ್ಯಾಸದಲ್ಲಿ ತೊಡಗಿದೆ.
ಈ ಸಾಧನೆಯೊಂದಿಗೆ ವಿಮಾನ ವಾಹಕ ಯುದ್ಧನೌಕೆಯ ವಿನ್ಯಾಸ ಮತ್ತು ವಿವಿಧ ಸಂಕೀರ್ಣ ತಂತ್ರಜ್ಞಾನಗಳನ್ನು ಸಂಯೋಜಿಸಿ ಯುದ್ಧನೌಕೆಯನ್ನು ಕಾರ್ಯಾಚರಣೆ ಸ್ಥಿತಿಯ ಮಟ್ಟಕ್ಕೆ ನಿರ್ಮಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಿದೆ.
1971ರ ಯುದ್ಧದಲ್ಲಿ ಜಯ ಸಾಧಿಸಿದ 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿಯೇ ಪ್ರಾಯೋಗಿಕ ಯಾನಕ್ಕೆ ತೆರಳಿದೆ. ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತ ಯೋಜನೆಯ ಅನ್ವಯ ನಿರ್ಮಾಣ ಮಾಡಲಾಗಿದೆ. ದೇಶದ ಮೊದಲ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ನೆನಪಲ್ಲಿ ಅದೇ ಹೆಸರನ್ನು ಹೊಸ ಐಎನ್ಎಸ್ ವಿಕ್ರಾಂತ್ ಗೂ ಇರಿಸಲಾಗಿದೆ.
ಹಡಗಿನ ವಿನ್ಯಾಸದ ಕೆಲಸವು 1999 ರಲ್ಲಿ ಆರಂಭವಾಗಿದ್ದು, ಫೆಬ್ರವರಿ 2009 ರಲ್ಲಿ ಕೀಲನ್ನು ಹಾಕಲಾಯಿತು. ವಾಹಕವನ್ನು ಅದರ ಒಣ ಹಡಗಿನಿಂದ ಡಿಸೆಂಬರ್ 29, 2011 ರಂದು ತೇಲಿಸಲಾಗಿದ್ದು , ಆಗಸ್ಟ್ 12, 2013 ರಂದು ಲಾಂಚ್ ಮಾಡಲಾಗಿದೆ. ಇದರ ಮೂಲ ಪ್ರಯೋಗಗಳು ಡಿಸೆಂಬರ್ 2020 ರಲ್ಲಿ ಪೂರ್ಣಗೊಂಡಿದೆ. ಹಡಗಿನ ಉದ್ದ 262 ಮೀ ಇದ್ದು, ಅದರ ಕಿರಣವು 62 ಮೀ ಇದೆ. ಅಲ್ಲದೆ ಇದು 25.6 ಮೀ ಆಳವನ್ನು ಹೊಂದಿದೆ. ಸುಮಾ 20 ಸಾವಿರ ಕೋಟಿ ರೂ. ಇದರ ನಿರ್ಮಾಣ ವೆಚ್ಚ.
ವಿಕ್ರಾಂತ್ ವಿಮಾನವಾಹಕ ನೌಕೆಯು 262 ಮೀಟರ್ ಉದ್ದ, ಗರಿಷ್ಠ 62 ಮೀಟರ್ ಅಗಲ ಮತ್ತು ಸೂಪರ್ ಸ್ಟ್ರಕ್ಷರ್ ಸೇರಿದಂತೆ 59 ಮೀಟರ್ ಎತ್ತರವಿದೆ. ಇದರಲ್ಲಿ 14 ಡೆಕ್ ಗಳಿದ್ದು, ಸುಮಾರು 1,700 ಸಿಬ್ಬಂದಿಗಳಿಗೆ ವಿನ್ಯಾಸಗೊಳಿಸಿದ್ದು, ಮಹಿಳಾ ಅಧಿಕಾರಿಗಳ ಕ್ಯಾಬಿನ್ ಸೇರಿದಂತೆ 2,300ಕ್ಕೂ ಹೆಚ್ಚು ಕಂಪಾರ್ಟ್ ಮೆಂಟ್ ಗಳನ್ನು ಹೊಂದಿದೆ.
# ಪ್ರಾಮುಖ್ಯತೆ ಏನು? :
ದೇಶದ ನೌಕಾಪಡೆಗೆ ಹೆಚ್ಚಿನ ಯುದ್ಧ ಶಕ್ತಿ ತುಂಬಲಿದೆ. ದಕ್ಷಿಣ ಚೀನ ಸಮುದ್ರ, ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನ ದುಸ್ಸಾಹಸ ತಡೆಯಲು.
# ವಿಶೇಷ ಏನು? :
• 816 ನೌಕೆಯ ಉದ್ದ
• 203 ನೌಕೆಯ ಅಗಲ
• 45 ಸಾವಿರ ಟನ್ ತೂಕ1,700 ಯೋಧರು, ನಾವಿಕರ ಸಾಮರ್ಥ್ಯ
• 52 ಕಿಮೀ ಪ್ರತೀ ಗಂಟೆಗೆ ಗರಿಷ್ಠ ವೇಗ
• 14 ಡೆಕ್ಗಳು 2,300
• ಕಂಪಾರ್ಟ್ಮೆಂಟ್ಗಳು
•
# ಏನೇನು ಇರಲಿದೆ..? :
ಈ ಭಾರತೀಯ ವಿಮಾನವಾಹಕ ನೌಕೆ ದೇಶದ ನೌಕಾ ಪಡೆಗೆ ಭಾರೀ ಬಲ ತಂದುಕೊಡಲಿದೆ. ಇದರಲ್ಲಿ ಮಿಗ್ -29ಕೆ ಯುದ್ಧ ವಿಮಾನ, ಕಮಾವ್-31 ವಾಯು ಮುನ್ನೆಚ್ಚರಿಕಾ ಹೆಲಿಕಾಪ್ಟರ್ಗಳು ಇದರಲ್ಲಿ ಕಾರ್ಯಾಚರಿಸಬಹುದಾಗಿದೆ. ಹಾಗೆಯೇ ಶೀಘ್ರವೇ ಸೇರ್ಪಡೆಯಾಗಲಿರುವ ಎಂಎಚ್-60 ಆರ್ ಬಹುದ್ದೇಶಿತ ಹೆಲಿಕಾಪ್ಟರ್ ಮತ್ತು ಸ್ವದೇಶಿಯಾಗಿ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್ಗಳು ಕೂಡಾಕಾರ್ಯಾಚರಿಸಬಹುದಾಗಿದೆ.
# ನಿರ್ಮಾಣ ಆರಂಭ :
ಈ ಯುದ್ಧನೌಕೆಗೆ 1999 ರಲ್ಲಿ ವಿನ್ಯಾಸ ಪ್ರಾರಂಭಿಸಲಾಗಿತ್ತು. 2009 ರ ಫೆಬ್ರವರಿಯಲ್ಲಿ ನಿರ್ಮಾಣ ಪ್ರಾರಂಭವಾಗಿತ್ತು. 2013 ರ ಆಗಸ್ಟ್ 12 ರಂದು ಯುದ್ಧನೌಕೆಯನ್ನು ಉದ್ಘಾಟಿಸಲಾಗಿತ್ತು. ಬೇಸಿನ್ ಟ್ರಯಲ್ ನ್ನು ಡಿಸೆಂಬರ್ 2020 ರಲ್ಲಿ ಪೂರ್ಣಗೊಳಿಸಲಾಗಿದ್ದು, ಪ್ರಾದೇಶಿಕವಾಗಿ ಭಾರತದ ಕಡಲತೀರದ ಹಿತಾಸಕ್ತಿಗಳನ್ನು ಕಾಪಾಡಲು ಈ ಯುದ್ಧನೌಕೆ ಸಹಕಾರಿಯಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ 23,000 ಕೋಟಿ ರೂಪಾಯಿ ವೆಚ್ಚದಲ್ಲಿ ವಿಕ್ರಾಂತ್ ನ್ನು ನಿರ್ಮಾಣ ಮಾಡಲಾಗಿದೆ.
# ಐ.ಎನ್.ಎಸ್ ವಿಕ್ರಾಂತ್ (ಆರ್11)
ಮೊದಲು ಹೆಚ್.ಎಮ್.ಎಸ್ ಹರ್ಕ್ಯುಲಸ್ (ಆರ್೪೯) ಎಂದು ಕರೆಯಲ್ಪಡುತ್ತಿದ್ದ ಐ.ಎನ್.ಎಸ್ ವಿಕ್ರಾಂತ್ ನೌಕೆಯು ಬ್ರಿಟಿಷ್ ನೌಕಾಸೇನೆಯ ಮೆಜೆಸ್ಟಿಕ್ ವರ್ಗದ ನೌಕೆಯಾಗಿತ್ತು. ಪ್ರಸ್ತುತ ಇದು ಭಾರತೀಯ ನೌಕಾಸೇನೆಯ ವಿಮಾನಧಾರಕ ನೌಕೆಯಾಗಿದೆ. ಐಎನ್ಎಸ್ ವಿಕ್ರಾಂತ್ ಹೆಸರಿನ ಯುದ್ಧನೌಕೆ ಈ ಮೊದಲೂ ಭಾರತೀಯ ನೌಕಾಪಡೆಯ ಸೇವೆಯಲ್ಲಿತ್ತು. 50 ವರ್ಷಗಳ ಹಿಂದೆ, ಅಂದರೆ 1971ರ ಯುದ್ಧದಲ್ಲಿ ಐಎನ್ಎಸ್ ವಿಕ್ರಾಂತ್ ಮಹತ್ವದ ಪಾತ್ರ ನಿರ್ವಹಿಸಿತ್ತು.
# ಸದ್ಯ ಇರುವ ಯುದ್ಧ ವಿಮಾನ ವಾಹಕ ನೌಕೆ – ಐಎನ್ಎಸ್ ವಿಕ್ರಮಾದಿತ