GK

ಜವಹಾರ್ ನವೋದಯ ವಿದ್ಯಾಲಯ

Share With Friends

ಈ ವಿಶ್ವವಿದ್ಯಾಲಯವನ್ನು 1985ರಲ್ಲಿ ಸ್ಥಾಪಿಸಲಾಯಿತು.
➤6- 12 ನೇ ತರಗತಿಯವರೆಗೆ ಪ್ರತಿಭಾವಂತ ಮಕ್ಕಳಿಗೆ ನೀಡುವ ಶಿಕ್ಷಣವಾಗಿದೆ.
➤ಇದೊಂದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಶಿಕ್ಷಣವನ್ನು ಒದಗಿಸುವ ಶಾಲೆಯಾಗಿದೆ.
 ರಾಜೀವ್‍ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಿ.ವಿ. ನರಸಿಂಹರಾವ್‍ರವರು ಮಾನವ ಸಂಪನ್ಮೂಲ ಸಚಿವರಾಗಿದ್ದರು, ಅವರ ಕನಸಿನ ಕೂಸಾಗಿ ಈ ಶಾಲೆಗಳು ಆರಂಭಿಸಲಾಗಿತ್ತು.

➤ ಆರಂಭದಲ್ಲಿ ಈ ಶಾಲೆಗಳನ್ನು ನವೋದಯ ಶಾಲೆಗಳೆಂದು ತೆರೆಯಲಾಗಿತ್ತು. ನಂತರ ಭಾರತದ ಮೊಟ್ಟ ಮೊದಲ ಪ್ರಧಾನಿ ಜವಾಹಾರಲಾಲ್ ನೆಹರುರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ “ಜವಾಹಾರ್ ನವೋದಯ ವಿದ್ಯಾಲಯ” ಎಂದು ಪುನರ್ ನಾಮಕರಣ ಮಾಡಲಾಯಿತು.

➤ಜವಾಹರ್ ನವೋದಯ ವಿದ್ಯಾಲಯ ಶಾಲೆಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5 ನೇ ತರಗತಿ ಓದುತ್ತಿರಬೇಕು. ವಿದ್ಯಾರ್ಥಿಯು 9- 13 ರ ವಯೋಮಿತಿಯಲ್ಲಿರಬೇಕು.
ಈ ಶಾಲೆಗಳ ಸೇರ್ಪಡೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸುವುದಿಲ್ಲ.
➤ ಈ ಶಾಲೆಗಳಲ್ಲಿ ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲಾಗುತ್ತದೆ.

➤ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳನ್ನು ಮಾಡಲಾಗುತ್ತದೆ.
➤ಈ ಶಾಲೆಗಳಲ್ಲಿ ತ್ರಿಭಾಷೆಯಲ್ಲಿ ಶಿಕ್ಷಣ ನೀಡಿ ಸಾಮಥ್ರ್ಯವನ್ನು ಬೆಳೆಸಲಾಗುತ್ತದೆ.
➤ಜವಾಹರ್ ನವೋದಯ ವಿದ್ಯಾಲಯವು ಸಿ.ಬಿ.ಎಸ್.ಇ ಯಿಂದ ಮಾನ್ಯತೆ ಪಡೆದಿದೆ.

 

error: Content Copyright protected !!