KannadaSpardha Times

ಕನ್ನಡ ವ್ಯಾಕರಣ : ಪ್ರಾಸ

Share With Friends

➤  ಪದ್ಯದ ಪಾದದ ಆದಿಯ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದನ್ನು “ಪ್ರಾಸ” ಎನ್ನುತ್ತೇವೆ.
➤  ಪ್ರಾಸ ಎಂಬ ಪದ ಸಂಸ್ಕøತ ಭಾಷೆಯಿಂದ ಬಂದಿದೆ. ಆದರೆ ಸಂಸ್ಕøತದಲ್ಲಿ ಪ್ರಾಸದ ಬಳಕೆ ಇಲ್ಲ. ಪ್ರಾಕೃತದಲ್ಲಿ ಅಂತ್ಯ ಪ್ರಾಸವಿದೆ. ‘ಪ್ರ’ ಪ್ರಕರ್ಷವಾದ ‘ಆಸ’ ಪ್ರಾಸ ಎಂದು ಅರ್ಥೈಸಲಾಗಿದೆ.
➤  ಪ್ರಾಸಗಳಲ್ಲಿ ಅನೇಕ ಬಗೆಗಳನ್ನು ಗುರುತಿಸಲಾಗಿದೆ. ಕವಿರಾಜ ಮಾರ್ಗಕಾರ “ಅತಿಶಯಮ್ ಕನ್ನಡಕ್ಕೆ ಸತತ ಪ್ರಾಸಂಗಳ್” ಎಂದು ಹೇಳಿ ಶಾಂತಪ್ರಾಸ, ವರ್ಗಪ್ರಾಸ, ಸಮೀಪಪ್ರಾಸ, ಅನುಗತ ಪ್ರಾಸ, ಅನಗತ ಪ್ರಾಸ,ಅಂತರ್ಗತಪ್ರಾಸ ಎಂಬ ಆರು ಬಗೆಯನ್ನು ಹೇಳಲಾಗಿದೆ.
➤  ನಾಗವರ್ಮ ತನ್ನ ಛಂಧೋಬುಧಿಯಲ್ಲಿ
“ನಿಜದಿಂ ಒಂದೊಡೆ ಸಿಂಗಂ
ಗಜದೀರ್ಘಂ, ಬಿಂದು ವೃಷಭ, ವ್ಯಂಜನ ಶರಭಂ
ಅಜನು ವಿಸರ್ಗಂ, ಹಯನು
ಬುಝಮುಖಿ ದೊಡ್ಡಕ್ಕರಂಗಳಿವು ಷಟ್ ಪ್ರಾಸಂ//
ಎಂಬ ಆರು ಪ್ರಾಸಗಳನ್ನು ಹೇಳಿದ್ದಾನೆ.

➤ ಪ್ರಾಸಗಳಲ್ಲಿ ಅನೇಕ ಬಗೆಗಳನ್ನು ಗುರುತಿಸಲಾಗಿದೆ. ಸಾಮಾನ್ಯವಾಗಿ ಆದಿ ಪ್ರಾಸ, ಅಂತ್ಯ ಪ್ರಾಸ, ಮಧ್ಯಪ್ರಾಸಗಳಿವೆ.
1. ಆದಿ ಪ್ರಾಸ : ಪದ್ಯದ ಆದಿಯಲ್ಲಿ ಪ್ರಾಸಕ್ಷರವು ಬಂದರೆ ಅದನ್ನು ಆದಿ ಪ್ರಾಸ ಎನ್ನುವರು. ಇದನ್ನು ಬಂಡ ಪ್ರಾಸ ಎಂತಲೂ ಕರೆಯುತ್ತಾರೆ. ಇದು ಕನ್ನಡದ ವೈಶಿಷ್ಟವಾಗಿದೆ. ಹಳೆಗನ್ನಡ ಬಹುತೇಕ ಕಾವ್ಯಗಳಲ್ಲಿ ಆದಿ ಪ್ರಾಸ ಬಳಕೆಗೊಂಡಿದೆ.
“ಪು ರ ದ ಪುಣ್ಯಂ ಪುರುಷ ರೂಪಿಂದೆ ಪೊಗುತಿದೆ.
ಪ ರಿ ಜನರ ಭಾಗ್ಯ ಅಡವಿಗೆ’
2. ಮಧ್ಯಪ್ರಾಸ : ಪದ್ಯದ ಮಧ್ಯಭಾಗದಲ್ಲಿ ಒಂದೇ ರೀತಿಯ ವ್ಯಂಜನಗಳಿದ್ದರೆ ಅದಕ್ಕೆ ಮಧ್ಯಪ್ರಾಸ ಎನ್ನುವರು. ಮಧ್ಯಪ್ರಾಸ ತ್ರಿಪದಿಯಲ್ಲಿ ಬಳಕೆ ಹೆಚ್ಚು.
3. ಅಂತ್ಯಪ್ರಾಸ : ಪ್ರತಿಯೊಂದು ಪಾದದ ಅಂತ್ಯಕ್ಷರ ನಿಯಮಿತವಾಗಿ ಪುನಾರಾವರ್ತನೆಯಾಗುವುದನ್ನು ಅಂತ್ಯಪ್ರಾಸ ಎನ್ನುವರು.
“ ತುಂಬಿ ವಿಂಡಿಯಂತೆ ಪಾಡಿ
ಜಕ್ಕ ವಕ್ಕಿಯಂತೆ ಕೂಡಿ”
•  ಆದಿ ಪ್ರಾಸದಲ್ಲಿ ಆರು ಬಗೆಯ ಪ್ರಾಸಗಳನ್ನು ಹೇಳಲಾಗಿದೆ.
1.ಸಿಂಹಪ್ರಾಸ : ಪ್ರತಿಪಾದದ ಒಂದೆರಡು ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವು ಬಂದು ಅದರ ಹಿಂದಿನ ಸ್ವರವು ಹೃಸ್ವವಾಗಿದ್ದರೆ ಅದು ಸಿಂಹ ಪ್ರಾಸ.
ಉದಾ: ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಶಾಸ್ತ್ರಗಳಿಂದ ಕಲ್ತು
ಕೆಲವಂ ಮಾಳ್ವ…………..

2. ಗಜಪ್ರಾಸ : ಪ್ರತಿಪಾದದ ಒಂದೆರಡು ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವು ಬಂದು ಅದರ ಹಿಂದಿನ ಸ್ವರ ದೀರ್ಘವಾಗಿದ್ದರೆ ಅದು ಗಜ ಪ್ರಾಸ.
ಈಶನ ಕರುಣೆಯ
ನಾಶಿಸು ವಿನಯದಿ
ಸಾನ ಹಾಗೆಯೇ ನೀ ಮನವೇ

3.ವೃಷಭ ಪ್ರಾಸ : ಒಂದೇ ವಿಧವಾದ ವ್ಯಂಜನದ ಹಿಂದೆ ಅನುಸ್ವರ ಬಂದರೆ ಅದು ವೃಷಭಪ್ರಾಸ.
ಕಂಸವಧಂಗೆಯ್ದು ಮುರ
ದ್ವಂಸಿಗೆ ಪೂಜಾರ್ಥಮೆದಂಊ ಮಾರುತ ಕೊಟ್ಟೆಂ //

4.ಅಜಪ್ರಾಸ : ಒಂದೇ ವಿಧವಾದ ವ್ಯಂಜನದ ಹಿಂದೆ ವಿಸರ್ಗ ಬಂದರೆ ಅದೇ ಅಜಪ್ರಾಸ.
ಉದಾ: ಆ: ಪ್ರಥಮ ನನುವೆದಿಂತಯ
ಶ: ಪ್ರಾರ್ಥನೆಯಿಂದೆ ಗೆಯ್ಯುದುಚಿತಮ ನಿನಗಂ//

5.ಶರಭಪ್ರಾಸ : ಪ್ರತಿಪಾದದ ಮೊದಲೆರಡು ಸ್ವರಗಳ ನಡುವೆ ಒಂದೇ ವಿಧಾವಾದ ವಿಝಾತೀಯ ಸಂಯುಕ್ತ ವ್ಯಂಜನಗಳು ಬಂದು ಅವುಗಳ ಹಿಂದೆ ಅನುಸ್ವರ, ವಿಸರ್ಗಗಳಾಗಲಿ ಇಲ್ಲದಿದ್ದರೆ ಅದೇ ಶರಭ ಪ್ರಾಸವಾಗುತ್ತದೆ.
ಉದಾ: ಅಕ್ಷಣದೊಳ್ ಪರಸ್ಪರ
ಕ್ಷೇಕ್ಷಣರಾತ್ಮ ಶಕ್ತಿಗೆ ಶರೀರ
ಮೂರು ವ್ಯಂಜನಗಳ ಸಂಯೋಗಕ್ಕೆ ಉದಾ:
ಇನ್ನಂಬೊಲ್ ವಿಭವಯುತಂ
ಚನ್ನಂ ಬೊಲ್ ಕಾಂತಿವಂತ

6. ಹಯಪ್ರಾಸ : ಪ್ರತಿಪಾದದ ಮೊದಲೆರಡು ಸ್ವರಗಳ ನಡುವೆ ಒಂದೇ ವಿಧವಾದ ಸಜಾತಿಯ ಸಂಯುಕ್ತ ವ್ಯಂಜನ ಬಂದರೆ ಹಯಪ್ರಾಸ ಎನಿಸಿಕೊಳ್ಳುತ್ತದೆ.
ಉದಾ:‘ ನಿನ್ನನೆ ನಚ್ಚಿದಂ ಕುರುದುಹೀಪತಿ ನಿನ್ನ ಶರಾಳಿಗಳ್ಗೆ ಮು
ನ್ನಡುಗುತ್ತು ಮಿರ್ಪು ದರಿಸಾಧನೆ ಸಂಪದಮಂತೆ ಶಸ್ತ್ರಸಂ//

#  ಪ್ರಾಸದ ಅನುಕೂಲಗಳು
➤ ಸರ್ವಜ್ಞ ಪ್ರಾಸದ ಮಹತ್ವವನ್ನು ಕುರಿತು – ‘ಸಾಸಿವೆ ಎಣ್ಣೆಯ ಹದಮಾಡಿ ಕಣ್ಣಿಗೆ ,ಪೋಸಿ ಕೊಂಡಂತೆ ಸರ್ವಜ್ಞ//. ಎಂದಿದ್ದಾನೆ.
➤ ಶ್ರೀವಿಜಯನು- ‘ಪೂರ್ವಾಚಾರ್ಯರು ದೇಶಿಮನಿಸಿ, ಕಂಡ ಪ್ರಾಸಮನ್ , ಅತಿಶಮವಿವೆಂದರ್……. ಕನ್ನಡಕ್ಕೆ ಸತತ ಪ್ರಾಸಂ” ಎಂದು ಪ್ರಾಸದ ಮಹತ್ವ ಹೇಳಿದ್ದಾರೆ.
➤ ದ.ರಾ.ಬೇಂದ್ರೆಯವರು ಕಾವ್ಯದೇವಿಯ ನಾಟ್ಯರಂಗದ ವಿಲಾಸದ ಗುರುತುಗಳನ್ನು ತಿಳಿಯಲು ಪ್ರಾಸವೇ ಗುರುತು” ಎಂದಿದ್ದಾರೆ.

 

Leave a Reply

Your email address will not be published. Required fields are marked *

error: Content Copyright protected !!