KannadaLatest Updates

Paired Phrases : ವಿವಿಧ ಬಗೆಯ ‘ಜೋಡಿನುಡಿ’ಗಳ ಸಂಗ್ರಹ

Share With Friends

Paired Phrases : ದ್ವಿರುಕ್ತಿಯಂತೆಯೇ ಬೇರೊಂದು ಬಗೆಯ ಶಬ್ದಗಳನ್ನು ಭಾಷೆಯಲ್ಲಿ ಪ್ರಯೋಗಿಸಲಾಗುತ್ತದೆ.ಅವುಗಳನ್ನು “ಜೋಡಿನುಡಿಗಳೆಂದು” ಕರೆಯುತ್ತಾರೆ. ಅರ್ಥವಿರುವ ಪದದೊಂದಿಗೆ ಸಮಾನಾರ್ಥಕ, ವಿರುದ್ಧಾರ್ಥ ಪದಗಳನ್ನು ಜೋಡಿಸಿ ಬಳಸುವುದುಂಟು. ಇವುಗಳನ್ನೇ “ಜೋಡುನುಡಿ” ಎಂದು ಕರೆಯಲಾಗುತ್ತದೆ. ಪ್ರಾಸಕ್ಕಾಗಿ ಭಾಷೆಯ ಸೊಗಸನ್ನು ಹೆಚ್ಚಿಸಲು ಇವನ್ನು ಬಳಸಿದಂತೆ ತೋರುತ್ತದೆ. ಅರ್ಥದ ತಿಳಿವಳಿಕೆಯ ದೃಷ್ಠಿಯಿಂದ ಸಮಾನಾರ್ಥಕ ಜೋಡುನುಡಿ, ಪೂರಕಾರ್ಥಕ ಜೋಡುನುಡಿ,ವಿರುದ್ದಾರ್ಥಕ ಜೋಡುನುಡಿ ಮತ್ತು ಅಸ್ಪಷ್ಟವಾದ ಜೋಡು ನುಡಿಗಳೆಂದು ವಿಭಜಿಸಬಹುದು.

ಸಮಾನಾರ್ಥಕ ಜೋಡುನುಡಿ
•ಅವಳಿಜವಳಿ
•ಅಂದಚಂದ
•ಎಡರುತೊಡರು
•ಉಡುಗೆತೊಡಗು
•ಕಪ್ಪಕಾಣಿಕೆ
•ಗೆಡ್ಡೆಗೆಣಸು
•ತಳಬುಡ

ಪೂರಕಾರ್ಥಕ ಜೋಡುನುಡಿ
•ಅಕ್ಕಪಕ್ಕ
•ಅಚ್ಚುಮೆಚ್ಚು
•ಆಚಾರವಿಚಾರ
•ಆಸ್ತಿಅಂತಸ್ತು
•ಓದುಬರಹ
•ಕನಸುಮನಸು
•ಕಾಡುಮೇಡು

ವಿರುದ್ಧಾರ್ಥಕ ಜೋಡುನುಡಿ
•ಕಾಡುನಾಡು
•ಆದಿ ಅಂತ್ಯ
•ಕನಸುಮನಸು
•ನೋವುನಲಿವು
•ಬೇವುಬೆಲ್ಲ
•ಪಂಡಿತಪಾಮರ
•ಬೆಳಗುಬೈಗು

ವಿಶಿಷ್ಟ ಜೋಡುನುಡಿ
•ಅರೆಬರೆ
•ಅಡ್ರಾಬಡ್ರಾ
•ಅಡ್ಡಾದಿಡ್ಡಿ
•ಕೂಲಿನಾಲಿ
•ಹುಳುಹುಪ್ಪಟೆ

Current Affairs Today Current Affairs