ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆ (ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು)
• ಕನ್ನಡ ಭಾಷೆಯ ಪ್ರಪ್ರಥಮ ಕೃತಿ – ಕವಿರಾಜಮಾರ್ಗ
• ಕನ್ನಡ ಭಾಷೆಯ ಮೊಟ್ಟ ಮೊದಲ ಲಿಖಿತ ದಾಖಲೆ – ಹಲ್ಮಿಡಿ ಶಾಸನ
• ಕನ್ನಡ ಭಾಷೆಯ ಪ್ರಪ್ರಥಮ ಗದ್ಯ ಕೃತಿ- ವಡ್ಡಾರಾಧನೆ
• ಕನ್ನಡ ಭಾಷೆಗಿರುವ ಪ್ರಾಚೀನತೆ – ಸುಮಾರು 3000 ಸಾವಿರ ವರ್ಷಗಳು
• ಕನ್ನಡ ಭಾಷೆಯು ಯಾವ ಭಾಷಾ ವರ್ಗಕ್ಕೆ ಸೇರುತ್ತದೆ– ದ್ರಾವಿಡ
• ಕನ್ನಡ ಭಾಷೆಯ ಆದಿಕವಿ- ಪಂಪ
• ಕನ್ನಡ ಸಾಹಿತ್ಯದ ರತ್ನತ್ರಯರೆಂದರೆ– ಪಂಪ, ಪೊನ್ನ, ರನ್ನ
• ಕವಿರಾಜಮಾರ್ಗದ ಕರ್ತೃ – ಶ್ರೀವಿಜಯ
• ಪಂಪ ರಚಿಸಿರುವ ಕಾವ್ಯಗಳು- ವಿಕ್ರಮಾರ್ಜುನ ವಿಜಯ, ಆದಿಪುರಾಣ
• ಪೊನ್ನನು ರಚಿಸಿದ ಕೃತಿಗಳು – ಶಾಂತಿ ಪುರಾಣ, ಜಿನಾಕ್ಷರ ಮಾಲೆ, ಭುವನೈಕ್ಯ ರಾಮಾಭ್ಯುದಯ
• ಕನ್ನಡ ಸಾಹಿತ್ಯದಲ್ಲಿ ದೊರಕಿರುವ ಪ್ರಪ್ರಥಮ ನಾಟ್ಯ ಪ್ರಧಾನ ಕಾವ್ಯ– ಗದಾಯುದ್ಧ
• ಪಂಪನ ಆಶ್ರಯದಾತ – ಚಾಲುಕ್ಯ ಅರಿಕೇಸರಿ
• ಪೊನ್ನನ ಆಶ್ರಯದಾತ– ರಾಷ್ಟ್ರಕೂಟ 3 ನೇ ಕೃಷ್ಣ
• ರನ್ನನು ಯಾರ ಆಸ್ಥಾನದಲ್ಲಿದ್ದನು- ಚಾಲುಕ್ಯ ತೈಲಪ
• ಸಾಹಸಭೀಮ ವಿಜಯ ಕ್ಕಿರುವ ಮತ್ತೊಂದು ಹೆಸರು – ಗದಾಯುದ್ಧ
• ಹಳೆಗನ್ನಡ ಯುಗವನ್ನು —– ಯುಗವೆಂತಲೂ ಕರೆಯಬಹುದು – ಚಂಪೂ
• ಪ್ರಪ್ರಥಮ ವಚನಕಾರನೆಂದು ಗುರ್ತಿಸಲ್ಪಡುವವರು – ದೇವರ ದಾಸಿಮಯ್ಯ
• ‘ರಗಳೆ’ ಎಂಬುದು – ಛಂದಸ್ಸು
• ಸರ್ವಜ್ಞ ರಚಿಸಿದ್ದು – ತ್ರಿಪದಿ
• ಪಂಚತಂತ್ರದ ಕರ್ತೃ – ದುರ್ಗಸಿಂಹ
• ಕವಿರಾಜಮಾರ್ಗವು – ಅಲಂಕಾ ರ ಕೃತಿ
• ಮಲ್ಲಿನಾಥ ಪುರಾಣದ ಕರ್ತೃ – ನಾಗಚಂದ್ರ
• ಸಾಹಸಭೀಮ ವಿಜಯ ಕ್ಕಿರುವ ಮತ್ತೊಂದು ಹೆಸರು – ಗದಾಯುದ್ಧ
• ಬಸವಣ್ಣ ಯಾರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು – ಕಲಚೂರಿಬಿಜ್ಜಳ
• ಅಭಿನವ ಪಂಪ ನೆಂದು ಖ್ಯಾತಿವೆತ್ತವನು – ನಾಗಚಂದ್ರ
• ‘ ಛಂದೋಂಬುದಿ’ ಕರ್ತೃ– ನಾಗವರ್ಮ 1
• ‘ರಾಮಚಂದ್ರ ಚರಿತ ಪುರಾಣದ ಕರ್ತೃ – ನಾಗಚಂದ್ರ
• ಬಸವಣ್ಣನವರ ಅಂಕಿತ ನಾಮ– ಕೂಡಲಸಂಗಮದೇವ
• ರಾಘವಾಂಕನ ಗುರುವಾಗಿದ್ದವರು – ಹರಿಹರ
• ರಗಳೆಯ ಕವಿ ಎಂದು ಪ್ರಸಿದ್ಧನಾದವನು – ಹರಿಹರ
• ಹರಿಹರ ರಚಿಸಿದ ಚಂಪೂ ಕಾವ್ಯ– ಗಿರಿಜಾ ಕಲ್ಯಾಣ
• ‘ಚಂಪೂ’ ಎಂದರೆ – ಗದ್ಯ ಪದ್ಯ ಮಿಶ್ರಿತ ಕಾವ್ಯ
• ‘ಷಟ್ಪದಿ ಬ್ರಹ್ಮ’ ಎಂದು ಖ್ಯಾತನಾದವನು – ರಾಘವಾಂಕ
• ರಾಘವಾಂಕನ ಪ್ರಥಮ ಕೃತಿ – ಹರಿಶ್ಚಂದ್ರ ಕಾವ್ಯ
• ಪಂಪನು ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಅಪಾರವಾಗಿ ಮೆಚ್ಚಿಕೊಂಡು ಹೊಗಳಿದ ಪಾತ್ರ – ಕರ್ಣ
• ಬಸವಣ್ಣನವರ ಮುಖ್ಯ ಗುರಿ – ಸಾಮಾಜಿಕ ಆಂದೋಲನ
• ಕುಮಾರವ್ಯಾಸ ಎಂಬುದು ಯಾರ ಕಾವ್ಯನಾಮ – ನಾರಾಣಪ್ಪ
• ಜನ್ನನು ರಚಿಸಿದ ಕೃತಿಗಳು – ಯಶೋಧರ ಚರಿತೆ, ಅನಂತನಾಥ ಪುರಾಣ, ಸ್ಮರತಂತ್ರ
• ‘ ಸರಸ ಸಾಹಿತ್ಯದ ವರದೇವತೆ’ ಎಂದು ಹೊಗಳಿಸಿಕೊಂಡ ಕವಿಯತ್ರಿ– ಸಂಚಿಹೊನ್ನಮ್ಮ
• ‘ ಯೋಗಭೋಗ ಸಮನ್ವಯ ಕವಿ’ ಎಂದು ಖ್ಯಾತಿವೆತ್ತವನು – ರತ್ನಾಖರವರ್ಣಿ
• ರಾಮನಾಥ ಚರಿತ್ತಕ್ಕಿರುವ ಮತ್ತೊಂದು ಹೆಸರು – ಕುಮಾರ ರಾಮನ ಸಾಂಗತ್ಯ
• ಜನ್ನನ ಗುರು– ನಾಗವರ್ಮ-2
• ಸಾಂಗತ್ಯ ಎಂಬುದು – 4 ಸಾಲಿನ ಪದ್ಯ
• ರಾಘವಾಂಕನನ್ನು ‘ ಷಟ್ಪದಿ ಬ್ರಹ್ಮ’ ಎಂದು ಕರೆಯಲು ಕಾರಣ – ಇಡೀ ಕಾವ್ಯವನ್ನು ಷಟ್ಪದಿಯಲ್ಲಿ ಬರೆದು ಭದ್ರ ಬುನಾದಿ ಹಾಕಿದ್ದರಿಂದ
• ಯಶೋಧರ ಚರಿತವು —-ದರಲ್ಲಿದೆ – ಕಂದವೃತ್ತ
• ಜೈಮಿನಿ ಭಾರತವವು – ಸಂಸ್ಕøತ ವ್ಯಾಸ ಭಾರತ ಕೃತಿಯನ್ನಾಧರಿಸಿದೆ
• ಉಪಮಾಲೋಲ ಎಂದು ಖ್ಯಾತನಾಧವನು – ಲಕ್ಷ್ಮೀಶ
• ಜೈಮಿನಿ ಭಾರತ ಕೃತಿಯ ಕಥಾನಾಯಕ – ಕೃಷ್ಣ
• ಕನಕದಾಸರ ಅಂಕಿತನಾಮ– ಕಾಗಿನೆಲೆಯಾದಿಕೇಶವ
• ದಾಸ ಸಾಹಿತ್ಯದ ಅಶ್ವಿನೀ ದೇವತೆಗಳೆಂದರೆ – ಕನಕದಾಸರು, ಪುರಂದರದಾಸರು
• ‘ ಕೃಷ್ಣಚರಿತೆ’ ಎಂಬುದು – ಮೊಹನ ತರಂಗಿಣಿಯ ಮತ್ತೊಂದು ಹೆಸರು